Cleaning Tips : ಸೊಂಟ ನೋವಿದ್ರೆ ಡೋಂಟ್ ವರಿ.. ಇಲ್ಲಿದೆ ಸೂಪರ್ ಸ್ಪಿನ್ ಮಾಪ್

By Suvarna NewsFirst Published Apr 7, 2022, 8:40 PM IST
Highlights

ಪ್ರತಿ ದಿನ ಮನೆ (Home) ಸ್ವಚ್ಛಗೊಳಿಸೋದು ಸುಲಭದ ಕೆಲಸವಲ್ಲ. ಬೆಳಗ್ಗೆ ಎದ್ದ ತಕ್ಷಣ ಮಹಿಳೆಯರು ಕೈನಲ್ಲಿ ಪೊರಕೆ ಹಿಡಿದು ಬಕೆಟ್ (Bucket)ನಲ್ಲಿ ನೀರು ತುಂಬಿಸ್ತಾರೆ. ದೊಡ್ಡ ಮನೆಯನ್ನು ಬಗ್ಗಿ ಒರೆಸಲು ಸಾಧ್ಯವೇ ಇಲ್ಲ ಎನ್ನುವವರು ಹಳೆ ಮಾಪ್ ಬಿಟ್ಟು ಹೊಸ ಮಾಪ್ (Mop) ಟ್ರೈ ಮಾಡಿ.
 

ಮನೆ (Home) ಕ್ಲೀನಿಂಗ್ (Cleaning). ಬಹುತೇಕ ಮಹಿಳೆ (Woman) ಯರ ತಲೆನೋವಿನ ಕೆಲಸ. ಪ್ರತಿ ದಿನದ ಕೆಲಸ (Work) ಗಳಲ್ಲಿ ಇದೂ ಒಂದು. ಮನೆ ಸುಂದರವಾಗಿ ಕಾಣ್ಬೇಕು, ಬ್ಯಾಕ್ಟೀರಿಯಾ (Bacteria) ಇರಬಾರದು ಅಂದ್ರೆ ಪ್ರತಿ ದಿನ ಸ್ವಚ್ಛಗೊಳಿಸುವುದು ಅನಿವಾರ್ಯ. ಮೊದಲು ಬಗ್ಗಿ ಮನೆಯನ್ನು ಕ್ಲೀನ್ ಮಾಡ್ತಿದ್ದರು ಮಹಿಳೆಯರು. ಬಗ್ಗಿ ಮನೆಯನ್ನೆಲ್ಲ ಸ್ವಚ್ಛಗೊಳಿಸುವುದು ಸವಾಲಿನ ಕೆಲಸ. ಬೆನ್ನು ನೋವು ಹಾಗೂ ಕಾಲು ನೋವಿರುವ ಮಹಿಳೆಯರಿಗೆ ಇದನ್ನು ಮಾಡುವುದು ಕಷ್ಟ. ಈಗ ಕಾಲ ಬದಲಾಗಿದೆ. ಅನುಕೂಲಗಳು ಹೆಚ್ಚಾಗಿವೆ. ಕೆಲವರ ಮನೆಯಲ್ಲಿ ಮನೆ ಸ್ವಚ್ಛಗೊಳಿಸಲು ಕೆಲಸದವರಿದ್ದರೆ ಮತ್ತೆ ಕೆಲ ಮನೆಯಲ್ಲಿ ಮಾಪ್ ಬಳಸ್ತಾರೆ.

ಮಾರುಕಟ್ಟೆಯಲ್ಲಿ ಬೇರೆ ಬೇರೆ ವಿಧದ ಮಾಪ್ ಲಭ್ಯವಿದೆ. ಆದ್ರೆ ಎಲ್ಲವೂ ಸರಿ ಹೊಂದುವುದಿಲ್ಲ. ಕೆಲ ಮಾಪ್ ಗಳ ಚೂರು ಮನೆಯನ್ನೆಲ್ಲ ಮತ್ತಷ್ಟು ಕಸ ಮಾಡಿದ್ರೆ ಕೆಲವೊಂದು ನಾಲ್ಕು ದಿನ ಬಾಳಿಕೆ ಬರುವುದಿಲ್ಲ. ಈ ಎಲ್ಲದರ ಮಧ್ಯೆ ಮಾಪ್ ಬಟ್ಟೆಯನ್ನು ನೀರಿನಲ್ಲಿ ಅದ್ದಿ, ಕೈನಲ್ಲಿ ಹಿಂಡುವುದು ಕೂಡ ಕೊಳಕು ಎನ್ನುವವರಿದ್ದಾರೆ. ಅಂಥವರು ಕೆಲ ಗುಣಮಟ್ಟದ ಹಾಗೂ ಸ್ಪಿನ್ ಮಾಪ್ ಬಳಸಬಹುದು. ಸ್ಪಿನ್ ಮಾಪ್ ದೊಡ್ಡ ಹ್ಯಾಂಡಲ್‌ನೊಂದಿಗೆ ಬರುತ್ತದೆ. 360 ಡಿಗ್ರಿಗಳವರೆಗೆ ತಿರುಗುತ್ತದೆ. ನೀವೂ ಸ್ಪಿನ್ ಮಾಪ್ ಖರೀದಿ ಪ್ಲಾನ್ ನಲ್ಲಿದ್ದರೆ ಇದನ್ನೋದಿ. ನಾವಿಂದು ಕೆಲವು ಅತ್ಯುತ್ತಮ ಸ್ಪಿನ್ ಮಾಪ್ ಬೆಲೆಗಳು ಮತ್ತು ಅವುಗಳ ವೈಶಿಷ್ಟ್ಯಗಳ ಬಗ್ಗೆ  ಹೇಳ್ತೇವೆ.

ಅತ್ಯುತ್ತಮ ಸ್ಪಿನ್ ಮಾಪ್ : 

ಪ್ರೆಸ್ಟೋ ಸ್ಪಿನ್ ಮಾಪ್ (Presto Spin Mop) : ಪ್ಲಾಸ್ಟಿಕ್ ಬುಟ್ಟಿಯೊಂದಿಗೆ ಓವಲ್ ಬಕೆಟ್ : ಪ್ರೆಸ್ಟೋ ಸ್ಪಿನ್ ಮಾಪ್ ಬಳಸಲು ಸುಲಭ ಮತ್ತು ಉತ್ತಮ ಗುಣಮಟ್ಟದ ಬಕೆಟ್ ಇದಾಗಿದೆ. ಈ 360 ಡಿಗ್ರಿ ತಿರುಗುವ ಮಾಪ್, ನೆಲ ಸ್ವಚ್ಛಗೊಳಿಸಲು ಒಳ್ಳೆಯ ಆಯ್ಕೆ ಎನ್ನಬಹುದು.  ನೆಲದ ಮೇಲೆ ಬಿದ್ದಿರುವ ಧೂಳು ಹಾಗೂ ದ್ರವವನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಸ್ಪಿನ್ ಇಷ್ಟವಿಲ್ಲ ಎನ್ನುವವರು ಹ್ಯಾಂಡ್ ವಾಶ್ ಕೂಡ ಮಾಡ್ಬಹುದು. ಇದರ ಬೆಲೆ ಸಾವಿರ ರೂಪಾಯಿವರೆಗಿದೆ.

ಎಸ್ಕ್ವೈರ್ 360 ಡಿಗ್ರಿ ಬಕೆಟ್ ಸ್ಪಿನ್ ಮಾಪ್ ಸ್ಟಿಕ್ (Esquire 360° Bucket Spin Mop) : ಎಸ್ಕ್ವೇರ್ ಕೂಡ ಸ್ಪಿನ್ ಮಾಪ್ ಸ್ಟಿಕ್ ಆಗಿದ್ದು, ಅದು 360 ಡಿಗ್ರಿಯಲ್ಲಿ ತಿರುಗುತ್ತದೆ. ನಿಮಗೆ ಇದರ ಜೊತೆ ಎರಡು ಪ್ಲೇಟ್‌ ಸಿಗುತ್ತದೆ. ನಿಮಗೆ ಬೇಕೆನ್ನಿಸಿದಾಗ ಇದನ್ನು ಬದಲಿಸಿಕೊಳ್ಳಬಹುದು. ಯಾವುದೇ ಪ್ಲಾಸ್ಟಿಕ್ ಬಕೆಟ್‌ನಲ್ಲಿ ನೀವು ಇದನ್ನು ಬಳಸಬಹುದು. ಇದು ಉದ್ದನೆಯ ಕೋಲಿನೊಂದಿಗೆ ಬರುವ ಫ್ಲೋರ್ ಮಾಪ್ ಆಗಿದೆ. ಆರಾಮವಾಗಿ ನಿಂತುಕೊಂಡೇ ನೀವು ಮನೆಯ ಎಲ್ಲ ಮೂಲೆ ಮೂಲೆಗಳನ್ನು ಸ್ವಚ್ಛಗೊಳಿಸಬಹುದು. ಇದು 399 ರೂಪಾಯಿಗೆ ಅಮೆಜಾನ್ ನಲ್ಲಿ ಸಿಗುತ್ತದೆ. 

GLASS SKIN: ಮೇಕಪ್ ಮಾಡದೇನೆ ಬ್ಯೂಟಿಫುಲ್‌ ಆಗಿ ಕಾಣ್ಬೋದು

ಲಾರಿಯೊಕ್ಸ್ ಫ್ಲೋರ್ ಕ್ಲೀನಿಂಗ್ ಸ್ಪಿನ್ ಮಾಪ್ (Lariox Floor Cleaning Spin Mop) : ಇದು ಮೈಕ್ರೊಫೈಬರ್ ರೀಫಿಲ್‌ನೊಂದಿಗೆ ಬರುವ ಫ್ಲೋರ್ ಕ್ಲೀನಿಂಗ್ ಸ್ಪಿನ್ ಮಾಪ್. ಪೀಠೋಪಕರಣಗಳ ಒಳಭಾಗವನ್ನು ಸ್ವಚ್ಛಗೊಳಿಸಲು ನೀವು ಇದನ್ನು ಬಳಸಬಹುದು. ಇದ್ರ ಬೆಲೆ ಕೂಡ ತುಂಬಾ ಕಡಿಮೆಯಿದ್ದು, 328 ರೂಪಾಯಿಯಿಂದ ಶುರುವಾಗುತ್ತದೆ.

ಅಬ್ಬಾ ಎಷ್ಟೊಂದು ಕೂದಲು ! ಸತತ 3 ವರ್ಷಗಳ ಕಾಲ ಗಿನ್ನಿಸ್ ದಾಖಲೆ

ಗಾಲಾ ಟರ್ಬೊ ಸ್ಪಿನ್ ಮಾಪ್ (Gala Turbo Spin Mop) : ಟರ್ಬೊ ಕ್ಲೀನ್ ಫೈಬರ್‌ನೊಂದಿಗೆ ಬರುವ ಈ ಐಷಾರಾಮಿ ಮಾಪ್ ನೆಲದ ಮೇಲಿನ ಶೇಕಡಾ 99ರಷ್ಟು ಬ್ಯಾಕ್ಟೀರಿಯಾವನ್ನು ಸ್ವಚ್ಛಗೊಳಿಸುತ್ತದೆ. ಮನೆ ಸ್ವಚ್ಛತೆ ಕೆಲಸವನ್ನು ಇದು ಸುಲಭಗೊಳಿಸುತ್ತದೆ. ಆರಾಮವಾಗಿ ನೀವು ಮನೆಯ ಧೂಳನ್ನು ತೆಗೆಯಬಹುದು. ಮಾಪ್ ಮೂಲಕ ಅಥವಾ ಕೈನಿಂದ ನೀವು ಇದನ್ನು ತೊಳೆಯಬಹುದು. ಗಾಲಾ ಟರ್ಬೊ ಸ್ಪಿನ್ ಮಾಪ್ ಸ್ವಲ್ಪ ದುಬಾರಿ. ಅಮೆಜಾನ್ ನಲ್ಲಿ ಇದ್ರ ಬೆಎ 1,599 ರೂಪಾಯಿ. 

click me!