
ಮಹಿಳೆಯರು ಮೊದಲ ಬಾರಿ ಗರ್ಭಿಣಿಯಾದಾಗ ಹೆದರುತ್ತಾರೆ. ಮನಸ್ಸಿನಲ್ಲಿ ವಿಚಿತ್ರ ಆಲೋಚನೆಗಳು ಬರುತ್ತವೆ. ಎಷ್ಟು ನೋವಾಗುತ್ತದೋ? ಮಗು ಆರೋಗ್ಯಕರವಾಗಿರುತ್ತದೋ, ಇಲ್ಲವೋ, ತೂಕ ಹೆಚ್ಚಾಗುತ್ತದೆ...ಅಬ್ಬಾ ಒಂದಾ, ಎರಡಾ? ಆದರೆ ಎರಡನೇ ಬಾರಿ ತಾಯಿಯಾಗುವಾಗ...?
ಇಲ್ಲಿದೆ ಎರಡನೇ ಗರ್ಭಾವಸ್ಥೆ ಬಗ್ಗೆ ಆಸಕ್ತಿಕರ ವಿಷಯಗಳು...
ಏನೆಲ್ಲಾ ಆಗುತ್ತದೆ ಅನ್ನೋದು ಗೊತ್ತಿರುತ್ತೆ. ತಾಯಿ ತನ್ನ ಗರ್ಭದಲ್ಲಿರುವ ಮಗುವಿನ ಚಲನವಲನವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಮೊದಲನೇ ಬಾರಿ ಆದಾಗ ಆ್ಯಸಿಡಿಟಿ ಎಂದುಕೊಳ್ಳುತ್ತಾರೆ, ಆದರೆ ಎರಡನೇ ಬಾರಿ ಅದನ್ನೂ ಎಂಜಾಯ್ ಮಾಡುತ್ತಾಳೆ.
ಸುಸ್ತು: ಮೊದಲ ಬಾರಿ ಗರ್ಭಿಣಿಯಾದಾಗ ಶರೀರದಲ್ಲಿ ಪ್ರೊಸ್ಟೋಜನ್ ಹೆಚ್ಚುತ್ತದೆ. ಇದರಿಂದ ಸುಸ್ತಿರುತ್ತದೆ. ಪ್ರೊಸ್ಟೋಜನ್ ಪವರ್ ಗರ್ಭಿಣಿಯಾದ ತಿಂಗಳ ನಂತರ ಕಾಣಿಸಿಕೊಳ್ಳುತ್ತದೆ. ಆದುದರಿಂದ ತಿಂಗಳ ನಂತರ ಸುಸ್ತು ಹೆಚ್ಚುತ್ತದೆ.
ಬೇಬಿ ಬಂಪ್: ಮೊದಲ ಬಾರಿಯಲ್ಲಿ ಏನೋ ಒಂದು ಸೆಳೆತ ಇರುತ್ತದೆ. ಆದರೆ ಎರಡನೇ ಪ್ರೆಗ್ನೆನ್ಸಿಯಲ್ಲಿ ಆ ಸೆಳೆತ ಇರೋದಿಲ್ಲ. ಸಮಯಕ್ಕೆ ಮೊದಲು ಹೊಟ್ಟೆ ಬಂದಿರುತ್ತದೆ.
ತೂಕ ಹೆಚ್ಚುವುದು: ಸಮಯಕ್ಕೂ ಮೊದಲೇ ದೇಹದ ತೂಕ ಹೆಚ್ಚುವುದು ಎರಡನೇ ಗರ್ಭಧಾರಣೆಯ ಲಕ್ಷಣ. ಏಕೆಂದರೆ ಮಹಿಳೆಯರ ಶರೀರದ ಮಾಂಸಖಂಡದಲ್ಲಿ ಮೊದಲೇ ಪ್ರೆಗ್ನೆನ್ಸಿ ಸಮಯದಲ್ಲಿ ಸೆಳೆತ ಬಂದು ಬಿಡುತ್ತದೆ. ಇದರಿಂದ ತೂಕವೂ ಹೆಚ್ಚುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.