
ಭಾರತೀಯರು ಕಸದಿಂದ ರಸ ತಯಾರಿಸುವುದರಲ್ಲಿ ಭಾರಿ ಪರಿಣಿತರು. ಇದಕ್ಕೆ ಅನೇಕ ಉದಾಹರಣೆಗಳಿವೆ. ತಮ್ಮ ದಿನೋಪಯೋಗಕ್ಕಾಗಿ ಅನೇಕ ಸಣ್ಣ ಪುಟ್ಟ ತಂತ್ರಜ್ಞಾನಗಳನ್ನು ಭಾರತೀಯರು ಕಂಡು ಹಿಡಿದಿದ್ದನ್ನು ನಾವು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಜನ ಸಾಮಾನ್ಯ ಭಾರತೀಯರು ಕಂಡು ಹಿಡಿದ ಅನೇಕ ಜುಗಾಡ್ ಐಡಿಯಾಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇರುವುದನ್ನು ನೀವು ನೋಡಿರಬಹುದು. ಐರನ್ ಬಾಕ್ಸ್‌ನಲ್ಲಿ ಚಪಾತಿ ಮಾಡಿದ್ದನ್ನು ಮೀನು ಹಿಡಿಯಲು ಹೊಸ ಟ್ರಿಕ್ಸ್ ಮಾಡಿದ್ದ ಸೇರಿದಂತೆ ಅನೇಕ ವಿಡಿಯೋಗಳು ವೈರಲ್ ಆಗಿವೆ.
ಭಾರತದಲ್ಲಿ, ಸೃಜನಾತ್ಮಕ ವಸ್ತುಗಳಿಗೆ ಕೊರತೆಯಿಲ್ಲ. ಸಮಸ್ಯೆಗಳು ಬಂದಾಗ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರವಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ತಾಯಿ ಅದನ್ನು ಮಾಡಿದಾಗ ಅದು ಹೆಚ್ಚು ವಿಶೇಷವಾಗುತ್ತದೆ. ಅವಶ್ಯಕತೆಯು ಎಲ್ಲಾ ಆವಿಷ್ಕಾರಗಳ ತಾಯಿ ಎಂದು ಹೇಳಲಾಗುತ್ತದೆ. ಆದರೆ, ತಾಯಿಯು ತನ್ನ ಮಗುವಿನ ಸೌಕರ್ಯಕ್ಕಾಗಿ ಆವಿಷ್ಕರಿಸಿದಾಗ, ಸೃಷ್ಟಿಯು ಹೆಚ್ಚು ಸುಂದರವಾಗಿರುತ್ತದೆ. ಇದಕ್ಕೆ ಒಂದು ಉದಾಹರಣೆ ಇತ್ತೀಚೆಗೆ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕಂಡುಬಂದಿದೆ. ಸೈಕಲ್‌ನಲ್ಲಿ ಮಗುವನ್ನು ಕೊಂಡೊಯ್ಯಲು ತಾಯಿ ಮಾಡಿರುವ ಜುಗಾಡ್ ಎಲ್ಲರ ಮೆಚ್ಚುಗೆ ಪಾತ್ರವಾಗುತ್ತಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ತಾಯಿಯು (Mother) ಸೈಕ್ಲಿಂಗ್ ಮಾಡುವುದನ್ನು ನೋಡಬಹುದು. ಇದರಲ್ಲಿ ಎಲ್ಲರ ಗಮನ ಸೆಳೆದದ್ದು ತಾಯಿ ಮಗುವಿಗಾಗಿ ಸಿದ್ಧಪಡಿಸಿದ ವಿಶೇಷ ಆಸನದ (Seat) ವ್ಯವಸ್ಥೆ. ತಾಯಿಯು ತನ್ನ ಮಗುವಿಗೆ ಆರಾಮವಾಗಿ ತನ್ನೊಂದಿಗೆ ಸವಾರಿ ಮಾಡಲು ತಾತ್ಕಾಲಿಕ ವಿಶೇಷ ಕುರ್ಚಿಯನ್ನು (Chair) ಸೇರಿಸಿದ್ದಾಳೆ. ಸೈಕಲ್ ಹಿಂಬದಿಯಲ್ಲಿ ಮಕ್ಕಳ ಪುಟ್ಟ ಪ್ಲಾಸ್ಟಿಕ್ ಕುರ್ಚಿಯನ್ನು ಸೇರಿಸಿರುವುದನ್ನು ನೋಡಬಹುದಾಗಿದೆ. ವೀಡಿಯೊ ತೆಗೆದಿರುವ ಸ್ಥಳವು ಇನ್ನೂ ಸ್ಪಷ್ಟವಾಗಿಲ್ಲ. 'ತಾಯಿ ತನ್ನ ಮಗುವಿಗಾಗಿ ಏನನ್ನೂ ಮಾಡಲು ಸಿದ್ಧಳಾಗಿರುತ್ತಾಳೆ' ಎಂದು ಹರ್ಷ ಗೋಯೆಂಕಾ ವೀಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
World Record: ನಿಂಬೆ ಹಣ್ಣುಗಳನ್ನು ಬಳಸಿ ಬ್ಯಾಟರಿಯನ್ನೇ ತಯಾರಿಸಿದ್ರು.,!
ನಟ್ಟಿಗರು ತಾಯಿ ಮಾಡಿದ ಹೆಚ್ಚುವರಿ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಬಳಕೆದಾರರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ, 'ಎಲ್ಲಾ ನಾವೀನ್ಯತೆಗಳ ತಾಯಿಯು ತಾಯಿಯಿಂದ ಪ್ರಾರಂಭವಾಗುತ್ತದೆ ಮತ್ತು ಮಗುವನ್ನು ಸಂತೋಷವಾಗಿರಿಸಲು ಅವರ ನವೀನ ಪ್ರಯತ್ನಗಳು ಅವಿರತವಾಗಿರುತ್ತವೆ' ಎಂದಿದ್ದಾರೆ. 'ಮಗುವಿನ ಸುರಕ್ಷತೆಯ (Safe) ಪ್ರಜ್ಞೆಯು ದೊಡ್ಡ ಚಪ್ಪಾಳೆಗೆ ಅರ್ಹವಾಗಿದೆ' ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು. 'ತಾಯಿಯು ಯಾವಾಗಲೂ ಎರಡು ಬಾರಿ ಯೋಚಿಸಬೇಕು, ಒಮ್ಮೆ ತನಗಾಗಿ ಒಮ್ಮೆ ತನ್ನ ಮಗುವಿಗೆ" ಎಂದು ಮತ್ತೊಬ್ಬರು ಸೇರಿಸಿದರು. ಸೈಬರ್ ಸರ್ಫರ್‌ಗಳಲ್ಲಿ ಒಬ್ಬರು, 'ನೋಡಲು ಎಂತಹ ಸುಂದರ ದೃಶ್ಯ. ತಾಯಿ ತನ್ನ ಪುಟ್ಟ ರಾಜಕುಮಾರನಿಗೆ ಸಿಂಹಾಸನವನ್ನು ರಚಿಸಿದ್ದಾಳೆ' ಎಂದು ಬರೆದುಕೊಂಡಿದ್ದಾರೆ.
ವೀಡಿಯೊವನ್ನು ಅಪ್‌ಲೋಡ್ ಮಾಡಿದ ನಂತರ ಇಲ್ಲಿಯವರೆಗೆ, ವೀಡಿಯೊ 1.4 ಮಿಲಿಯನ್ ವೀಕ್ಷಣೆಗಳು, 5,636 ಇಷ್ಟಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಮಹಿಳೆಯ ಸೃಜನಶೀಲತೆಯಿಂದ ಇಂಟರ್ನೆಟ್ ಹೆಚ್ಚು ಪ್ರಭಾವಿತವಾಗಿದೆ.
ಹಣ್ಣು ಕೊಯ್ಯಲು ವ್ಯಕ್ತಿಯೊರ್ವ ನಿರ್ಮಿಸಿದ ಸೃಜನಶೀಲ ಆವಿಷ್ಕಾರ
ಹಣ್ಣು ಕೊಯ್ಯಲು ವ್ಯಕ್ತಿಯೊರ್ವ ನಿರ್ಮಿಸಿದ ಸೃಜನಶೀಲ ಆವಿಷ್ಕಾರವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉದ್ಯಮಿ ಆನಂದ್ ಮಹೀಂದ್ರಾ ಈತನ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಚಟುವಟಿಕೆಯಿಂದ ಇರುವ ಮಹೀಂದ್ರಾ ಸಂಸ್ಥಾಪಕ ಆನಂದ್ ಮಹೀಂದ್ರಾ ಅವರು ಇಂತಹ ಆವಿಷ್ಕಾರದ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪೋಸ್ಟ್ ಮಾಡುತ್ತಿದ್ದಾರೆ. ಅದೇ ರೀತಿ ಈಗ ಹಣ್ಣು ಕೊಯ್ಯಲು ವ್ಯಕ್ತಿಯೊಬ್ಬ ಮಾಡಿದ ತಂತ್ರಜ್ಞಾನವನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಹೆಣ್ಮಕ್ಳೇ ಸ್ಟ್ರಾಂಗ್ ಗುರೂ..! ಮಹಿಳಾ ಸಂಶೋಧಕಿಯರು ಏನೆಲ್ಲಾ ಕಂಡು ಹಿಡಿದಿದ್ದಾರೆ ನೋಡಿ..!
ಈ ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೋರ್ವ ಎತ್ತರದ ಮರದಿಂದ ಹಣ್ಣನ್ನು ಕೊಯ್ಯಲು ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾನೆ. ಒಂದು ಕೋಕಾ ಕೊಲ ಬಾಟಲಿಯನ್ನು ಅದರ ಕೆಳಭಾಗದಲ್ಲಿ ಹೂವಿನ ಎಸಳಿನಂತೆ ನಾಲ್ಕು ಭಾಗ ಮಾಡುತ್ತಾನೆ. ಅದರೊಳಗೆ ಬಟ್ಟೆ ಒಣ ಹಾಕಲು ಬಳಸುವ ಹಗ್ಗದಂತಿರುವ ಹಗ್ಗವನ್ನು ಹೆಣೆಯುವ ಆತ ಆ ಬಾಟಲಿಯ ಮುಚ್ಚಳದ ಭಾಗಕ್ಕೆ ಉದ್ದವಾದ ಪ್ಲಾಸ್ಟಿಕ್ ಪೈಪ್‌ಗಳನ್ನು ಕಟ್ಟುತ್ತಾನೆ. ಪೈಪಿನೊಳಗೆಯೋ ಆತ ಈ ಹಗ್ಗವನ್ನು ಹರಿ ಬಿಟ್ಟು ತುಂಬ ಗಟ್ಟಿಯಾಗಿ ಕಟ್ಟುತ್ತಾನೆ. ಈ ಪೈಪ್‌ನೊಳಗಿರುವ ಹಗ್ಗವನ್ನು ಎಳೆದರೆ ಮೇಲಿರುವ ಬಾಟಲಿ ಹೂವಿನಂತೆ ತೆರೆದುಕೊಳ್ಳುತ್ತದೆ.
ಹೀಗಾಗಿ ಹಣ್ಣು ಕೊಯ್ಯಲು ಮರದ ಬಳಿ ಇದನ್ನು ಸಾಗಿಸುವ ಈತ ಮರದಲ್ಲಿರುವ ಹಣ್ಣಿನ ಸಮೀಪ ಬಂದು ಕೆಳಭಾಗದಿಂದ ಹಗ್ಗವನ್ನು ಎಳೆಯುತ್ತಾನೆ. ಇದರಿಂದ ಹಣ್ಣುಗಳು ಯಾವುದೇ ಗಾಯಗಳಾಗದೇ ಬಾಟಲಿಯೊಳಗೆ ಬೀಳುತ್ತದೆ. ಈ ಮೂಲಕ ನೆಲಕ್ಕೆ ಬೀಳದೇ ಯಾವುದೇ ಗಾಯವಾಗದೇ ಹಣ್ಣು ನಮ್ಮ ಕೈಗೆಟುಕುತ್ತದೆ. ಒಟ್ನಲ್ಲಿ ಭಾರತದಲ್ಲಿ ಜುಗಾಡ್ ಆವಿಷ್ಕಾರಗಳು ಎಲ್ಲರ ಹುಬ್ಬೇರುವಂತೆ ಮಾಡೋದಂತೂ ನಿಜ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.