
ಶ್ರೀನಗರ(ಜೂ.22): ಜಮ್ಮು ಕಾಶ್ಮೀರ ಎಂದಾಗ ಮುಷ್ಕರ, ಕಲ್ಲು ತೂರಾಟ, ಹಿಂಸೆ ಎಂದಷ್ಟೇ ನೆನಪಾಗೋದು ಸಹಜ. ಆದರೆ ಅಲ್ಲಿನ ಪುಟ್ಟ ಗ್ರಾಮದಿಂದ ಬಂದ ಯುವತಿ ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ. ಬರೀ 23 ವರ್ಷಕ್ಕೆ ಯುದ್ಧ ವಿಮಾನ ಹತ್ತಿ ದೇಶ ಸೇವೆಗೆ ಸಜ್ಜಾಗಿದ್ದಾರೆ.
ಮವ್ಯ ಸುಡಾನ್ ಜಮ್ಮು ಕಾಶ್ಮೀರದಿಂದ ಐಎಎಫ್ ಕುಟುಂಬ ಸೇರಿದ ಮೊದಲ ಮಹಿಳಾ ಫೈಟರ್. ಏರ್‌ಫೋರ್ಸ್‌ನಲ್ಲಿ ಈಕೆ 12ನೇ ಮಹಿಳಾ ಫೈಟರ್ ಪೈಲಟ್. ಗಡಿ ನಿಯಂತ್ರಣ ರೇಖೆಯ ಸಮೀಪದ ಗ್ರಾಮ ಲಂಬೇರಿಯ ಯುವತಿ ರಾಜೌರಿ ಜಿಲ್ಲೆಯಾಕೆ.
ಕಷ್ಟದಲ್ಲಿರುವವರಿಗೆ 200 ಮನೆ ಕಟ್ಟಿಕೊಟ್ಟ ನಿವೃತ್ತ ಉಪನ್ಯಾಸಕಿ
ಗ್ರಾಜುಯೇಷನ್ ಪರೇಡ್ ಕಾರ್ಯಕ್ರಮದಲ್ಲಿ ಈಕೆಯನ್ನು ಫೈಟರ್ ಪೈಲಟ್ ಆಗಿ ನೇಮಿಸಲಾಗಿದೆ. ಏರ್‌ಫೋರ್ಸ್ ಮುಖ್ಯಸ್ಥ ಏರ್ ಮಾರ್ಷಲ್ ಆರ್‌ಕೆಎಸ್ ಬಧುರಿಯಾ ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಯುವತಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಬಂದಿದೆ.
ಭಾರತೀಯ ವಾಯುಸೇನೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ನೇಮಕಗೊಂಡಿರುವ ಜಮ್ಮುಕಾಶ್ಮೀರದ ಪುತ್ರಿ ಮಾವ್ಯಾ ಸುಡಾನ್ ಅವರಿಗೆ ಅಭಿನಂದನೆಗಳು. ನೀವು ಇತಿಹಾಸ ಸೃಷ್ಟಿಸುವುದನ್ನು ನೋಡುವುದು ಅಪಾರ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ. ಈ ಸಾಧನೆಯೊಂದಿಗೆ, ನಮ್ಮ ಲಕ್ಷಾಂತರ ಹೆಣ್ಣುಮಕ್ಕಳ ಕನಸುಗಳಿಗೆ ನೀವು ರೆಕ್ಕೆಗಳನ್ನು ನೀಡಿದ್ದೀರಿ ಎಂದು ಜಮ್ಮುಕಾಶ್ಮೀರದ ಎಲ್-ಜಿ ಆಫೀಸ್ ಟ್ವೀಟ್‌ನಲ್ಲಿ ತಿಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.