ಹೆಣ್ಣು ಹಾಸಿಗೆಯಲ್ಲಿ ವಿಜೃಂಭಿಸಲು ಈ ಆಹಾರ ಸಹಕಾರಿ!

By Suvarna NewsFirst Published Jun 21, 2021, 10:07 AM IST
Highlights

ಗಂಡಸರ ಪುರುಷತ್ವ ಕೆರಳಿಸುವ ಆಹಾರಗಳ ಬಗ್ಗೆ ನೀವು ಓದಿಯೇ ಇರುತ್ತೀರಿ. ಆದರೆ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಪ್ರಚೋದಿಸುವ ಫುಡ್‌ಗಳು ಯಾವುವು? ತಿಳಿಯೋಣ ಬನ್ನಿ.

ಕೆಲವು ನ್ಯಾಚುರಲ್ ಆಹಾರಗಳನ್ನು ಸೇವಿಸಿದಾಗ ಪುರುಷರಲ್ಲೂ ಸ್ತ್ರೀಯರಲ್ಲೂ ಸಹಜವಾಗಿಯೇ ಕಾಮಾಸಕ್ತಿ ಕೆರಳುತ್ತದೆ. ಗಂಡಸರ ಕಾಮಾಸಕ್ತಿಯನ್ನು ಉದ್ದೀಪಿಸುವ ಆಹಾರಗಳು ಸಾಮಾನ್ಯವಾಗಿ ಎಲ್ಲೆಡೆ ಗೊತ್ತೇ ಇದೆ- ಈರುಳ್ಳಿ, ಖರ್ಜೂರ, ಕುಂಬಳಕಾಯಿ, ಜೇನು, ಜಿನ್‌ಸೆಂಗ್ ಬೇರು, ನುಗ್ಗೆಕಾಯಿ, ಶಾಂಪೇನ್, ಬೆಳ್ಳುಳ್ಳಿ, ಸೇಬು, ಅವೊಕಾಡೊ, ಬಾಳೆಹಣ್ಣು, ದಾಳಿಂಬೆ, ವಾಲ್‌ನಟ್‌, ಕಲ್ಲಂಗಡಿ, ಸ್ಟ್ರಾಬೆರ್ರಿ, ಕಾಫಿಗಳು ಪುರುಷರಲ್ಲಿ ರತ್ಯಾಸಕ್ತಿಯನ್ನು ಪ್ರಚೋದಿಸುತ್ತವೆ.
ಹಾಗಿದ್ದರೆ ಸ್ತ್ರೀಯರಲ್ಲಿ ಈ ಆಸಕ್ತಿಯನ್ನು ಉದ್ದೀಪಿಸುವ ಆಹಾರಗಳು ಯಾವುವು?

ಕೋಕೋ
ಇದರ ಅಂಶ ಚಾಕಲೇಟ್‌ನಲ್ಲೂ ಇರುವುದರಿಂದ ಚಾಕಲೇಟ್ ಸುಲಭ ಕಾಮಾಸಕ್ತಿವರ್ಧಕ ಎನ್ನಬಹುದು. ಕೋಕೋದಲ್ಲಿ ನಿಮ್ಮ ಲಿಬಿಡೋ ಹೆಚ್ಚಿಸುವ ಆರ್ಜಿನೈನ್‌ಗಳು ಮತ್ತು ಮಿಥೈಲ್‌ಕ್ಸಾಂತೈನ್ಸ್ ಇರುತ್ತವೆ. ಆನಂದಾಮೈಡ್ ಎಂದು ಕರೆಯಲ್ಪಡುವ ಆನಂದ ಪ್ರಚೋದಕ ಪೋಷಕಾಂಶಗಳು ಇದರಲ್ಲಿವೆ. ಮ್ಯಾಗ್ನೀಶಿಯಂ, ಪೊಟಾಶಿಯಂಗಳೂ ಇವೆ. ಫೀನೈಲೆಥಲಮೈನ್ ಎಂಬ ರಾಸಾಯನಿಕ ಸೆಕ್ಸ್ ವೇಳೆ ನಿಮ್ ಮಮೆದುಳಿನಲ್ಲಿ ಬಿಡುಗಡೆಯಾಗುತ್ತದೆ; ಅದನ್ನೂ ಈ ಕೋಕೋ ಹೊಂದಿರುತ್ತದೆ. 



ಮೆಂತೆ
ಮೆಂತೆಸೊಪ್ಪನ್ನು ನಾವು ತರಕಾರಿಯಾಗಿ ಬಳಸುತ್ತೇವೆ. ಮೆಂತೆ ಸಿರಪ್ ಅನ್ನು ಯುರೋಪಿಯನ್ನರು ಹೇರಳವಾಗಿ ಬಳಸುತ್ತಾರೆ. ಇದರಲ್ಲಿರುವ ಫೈಟೋಈಸ್ಟ್ರೋಜೆನ್‌ಗಳು ಮಹಿಳೆಯರಲ್ಲಿ ಮೊಲೆಯ ಟಿಶ್ಯೂಗಳನ್ನು ಆರೋಗ್ಯಕರವಾಗಿ ಸುಪುಷ್ಟಗೊಳಿಸುತ್ತವೆ. ಎದೆಯೆ ಗಾತ್ರವನ್ನು ಹಿಗ್ಗಿಸುತ್ತದೆ ಎಂದೂ ಹೇಳುತ್ತಾರೆ. ಸೆಕ್ಸ್ ಆಸಕ್ತಿಯನ್ನಂತೂ ಉತ್ತೇಜಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. 

ಮಸಾಲೆಗಳು
ನೀವು ಪಲಾವ್ ಅಥವಾ ಬಿರಿಯಾನಿಗೆ ಬಳಸುವ ಹಲವು ಮಸಾಲೆಗಳು- ಲವಂಗ, ದಾಲ್ಚಿನ್ನಿ, ಮಸಾಲೆ ತೊಗಟೆ, ಏಲಕ್ಕಿ, ಶುಂಠಿ- ಇವೆಲ್ಲ ದೇಹದ ಶಾಖವನ್ನು ಹೆಚ್ಚಿಸುತ್ತವೆ. ಇವು ಕೆಳಹೊಟ್ಟೆಯ ಹಾಗೂ ಪೆಲ್ವಿಕ್‌ ಭಾಗದ ಸ್ನಾಯುಗಳನ್ನು ಬಲಿಷ್ಠಗೊಳಿಸುತ್ತವೆ. ಟೀಯೊಂದಿಗೆ ಕೂಡ ಇವುಗಳನ್ನು ಸೇರಿಸಿಕೊಂಡು ಸೇವಿಸಬಹುದು. ಭಾರತೀಯರ ಆಹಾರ ಪದಾರ್ಥಗಳಲ್ಲಿ ಇವು ಹಾಸು ಹೊಕ್ಕಾಗಿದ್ದವು ಎಂಬುದನ್ನು ಮರೆಯಬೇಡಿ.

ಶತಾವರಿ
ಇದನ್ನು ಹಲವು ಮಕ್ಕಳ ತಾಯಿ ಎಂದೂ ಕನ್ನಡದಲ್ಲಿ ಹೇಳುತ್ತಾರೆ. ಇದರ ಬೇರುಗಳು ನೂರಾರು ಸಂಖ್ಯೆಯಲ್ಲಿ ಹರಡಿಕೊಂಡಿರುತ್ತವೆ. ಎಷ್ಟೋ ಶತಮಾನಗಳಿಂದ ಭಾರತದಲ್ಲಿ ಇದನ್ನು ಸ್ತ್ರಯರ ಋತುಚಕ್ರದ ಏರುಪೇರುಗಳನ್ನು ಉಪಶಮನಗೊಳಿಸಲು ಬಳಸಲಾಗುತ್ತಿತ್ತು. ಸ್ತ್ರೀಯರ ಲೈಂಗಿಕ ಆರೋಗ್ಯವನ್ನು ಸುದೃಢಗೊಳಿಸಲು ಇದು ಉತ್ತಮವಾಗಿದೆ.  ಉತ್ತರ ಭಾರತದಲ್ಲಿ ಇದನ್ನು "ಸಾವಿರ ಗಂಡಂದಿರ ಸತಿ' ಎಂದೂ ಕರೆಯಲಾಗುತ್ತದೆ; ಇದನ್ನು ಸೇವಿಸಿದ ಹೆಣ್ಣು ಸಾವಿರ ಗಂಡಸರನ್ನು ನಿಭಾಯಿಸಬಲ್ಲಳು ಎಂಬ ಖ್ಯಾತಿ ಇದರದ್ದು.
 



ಖರ್ಜೂರ
ಖರ್ಜೂರದಲ್ಲಿ ಹೆಣ್ಣು ಮಕ್ಕಳು ಸೇವಿಸಲೇಬೇಕಾದ ಹಲವಾರು ಪೋಷಕಾಂಶಗಳು, ವಿಟಮಿನ್‌ಗಳು, ನಾರಿನಂಶ, ಎಲ್ಲ ಇದೆ. ಅರೇಬಿಯದ ಸಾಂಪ್ರದಾಯಿಕ ಕಾಮೋತ್ತೇಜಕ ಪದಾರ್ಥಗಳಲ್ಲಿ ಖರ್ಜೂರದ ಹಣ್ಣನ್ನು ಹಾಲಿನಲ್ಲಿ ಅದ್ದಿ, ಲವಂಗದ ಜೊತೆಗೆ ಸೇವಿಸುವುದು ಅತಿ ಪರಿಣಾಮಕಾರಿ ಎನ್ನಲಾಗಿದೆ. ಅಡೆತಡೆಯಿಲ್ಲದ ರೊಮ್ಯಾನ್ಸ್‌ಗೆ ಬೇಕಾದ ಶಕ್ತಿಯನ್ನು ಇದು ನಿಮಗೆ ದಕ್ಕಿಸಿಕೊಡುತ್ತದೆ.

ಚಾಕೊಲೇಟು
ಕೋಕೋದಲ್ಲಿರುವ ಅಂಶಗಳೇ ಚಾಕೊಲೇಟ್‌ನಲ್ಲೂ ಇರುತ್ತವೆ. ಇದರಲ್ಲಿ ಸಕ್ಕರೆಯನ್ನೂ ಸಹ ಬೆರೆಸಿರುತ್ತಾರೆ. ಸಕ್ಕರೆ ದೀರ್ಘಕಾಲಿಕವಾಗಿ ಒಳ್ಳೆಯದಲ್ಲವಾದರೂ, ತಾತ್ಕಾಲಿಕವಾಗಿ ನಿಮ್ಮ ಎನರ್ಜಿ ಲೆವೆಲ್‌ ಅನ್ನು ಹೆಚ್ಚಿಸುತ್ತದೆ. ಹೀಗಾಗಿ ಸೆಕ್ಸ್‌ನಲ್ಲಿ ಹೆಚ್ಚಿನ ಪರ್‌ಫಾರ್ಮೆನ್ಸ್ ಸಾಧ್ಯವಾಗುತ್ತದೆ. 

ಕೇಸರಿ
ಕೇಸರಿಯನ್ನು ನೀವು ಅಲ್ಪವೇ ಅಲ್ಪ ಪ್ರಮಾಣದಲ್ಲಿ ಆರು ದಿನ ತೆಗೆದುಕೊಂಡರೆ ಸಾಕು, ಏಳನೇ ದಿನ ನೀವು ಹಾಸಿಗೆಯಲ್ಲಿ ನಿಮ್ಮ ಪುರುಷನಿಗೆ ಸಾಕಷ್ಟು ಸುಖ ನೀಡಬಲ್ಲಿರಿ. ಹಾಗೇ ನೀವೂ ಕೂಡ ಆ ಕ್ರಿಯೆಯನ್ನು ತುಂಬಾ ಎಂಜಾಯ್ ಮಾಡುತ್ತೀರಿ.
 

ಲೈಂಗಿಕ ಕ್ರಿಯೆಯಲ್ಲಿ ಹೆಣ್ಣು ನೋವು ಅನುಭವಿಸುವುದೇಕೆ? ...
ರೆಡ್ ವೈನ್‌
ರೆಡ್‌ ವೈನ್ ಅನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿರುವ ಆಲ್ಕೋಹಾಲ್ ಅಂಶ ಒಂದು ಹದಮಟ್ಟದಲ್ಲಿ ಏರಿ, ನಿಮ್ಮನ್ನು ಉತ್ತೇಜಿಸುತ್ತದೆ. ಆ ರಾತ್ರಿಯ ಸಂಭ್ರಮವೇ ಬೇರೆ. ಇದರಲ್ಲಿ ಇತರ ಆರೋಗ್ಯ ಉತ್ತೇಜಕ ಅಂಶಗಳೂ ಇವೆ.

ಸೇಬು, ಜೇನು, ಸ್ಟ್ರಾಬೆರ್ರಿಗಳು ಕೂಡ ನಿಮ್ಮ ಲಿಬಿಡೋ ಅನ್ನು ಬೂಸ್ಟ್ ಮಾಡುತ್ತವೆ. ಪುರುಷರಲ್ಲಿ ವರ್ಕ್ಔಟ್ ಆಗುವ ಹಲವು ಕಾಮೋತ್ತೇಜಕಗಳು ಸ್ತ್ರೀಯರಲ್ಲೂ ಪರಿಣಾಮ ಬೀರುವುದು ಕಂಡು ಬಂದಿದೆ. 
  

   

click me!