Inspiration Story ಕಾಶ್ಮೀರದಲ್ಲಿ ಕೆಫೆ ಆರಂಭಿಸಿ ಯಶಸ್ವಿಯಾದ ಮಹಿಳೆ

By Suvarna News  |  First Published Mar 6, 2023, 1:36 PM IST

ಕಾಶ್ಮೀರ ಹೆಸರು ಕೇಳ್ತಿದ್ದಂತೆ ಮನಸ್ಸಿನಲ್ಲೊಂದು ಭಯ ಮೂಡುತ್ತದೆ. ಯಾಕೆಂದ್ರೆ ದೇಶದ ಉಳಿದ ಭಾಗಕ್ಕಿಂತ ಹೆಚ್ಚು ಗುಂಡಿನ ಸದ್ದು ಮೊಳಗುವ ಜಾಗವದು. ಆದ್ರೆ ಇಂಥ ಪ್ರದೇಶದಲ್ಲಿ ಒಂದು ಉದ್ಯೋಗ ಶುರು ಮಾಡಿ ಗುರಿ ಮುಟ್ಟುವುದು ಸಾಮಾನ್ಯ ಕೆಲಸವಲ್ಲ. ಅದ್ರಲ್ಲೂ ಮಹಿಳೆಯೊಬ್ಬಳ ಸಾಧನೆ ಮೆಚ್ಚುವಂತಹದ್ದು.
 


ಇಂದಿನ ಸಮಯದಲ್ಲಿ ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಮಹಿಳೆಯರು ತಮ್ಮ ಕೆಲಸವನ್ನು ಸಂಪೂರ್ಣ ಸಮರ್ಪಣಾ ಮನೋಭಾವದಿಂದ ಮಾಡ್ತಿದ್ದಾರೆ. ಕಠಿಣ ಪರಿಶ್ರಮದ ಜೊತೆಗೆ ಕೆಲಸದ ಮೇಲೆ ಅವರಿಗಿರುವ ಆಸಕ್ತಿ ಅವರನ್ನು ಎಲ್ಲಾ ಕ್ಷೇತ್ರಗಳಲ್ಲಿ  ಮುನ್ನಡೆಯುವಂತೆ ಮಾಡಿದೆ. ಮನೆ ಕೆಲಸದ ಜೊತೆಗೆ ಮಿಲಿಟರಿಯವರೆಗೆ ಎಲ್ಲ ಕಡೆ ಹೆಣ್ಣು ಸಾಧಿಸಿ ತೋರಿಸಿದ್ದಾಳೆ. ಬರೀ ಅಕ್ಷರಸ್ಥ ಮಹಿಳೆ ಮಾತ್ರವಲ್ಲ ಅನೇಕ ಅನಕ್ಷರಸ್ಥ ಮಹಿಳೆಯರು ಕೂಡ ಸ್ವಂತ ಉದ್ಯೋಗ ಶುರು ಮಾಡಿ ಯಶಸ್ವಿಯಾಗಿದ್ದಾರೆ. ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. 

ಹಳ್ಳಿಯಾಗ್ಲಿ, ದೆಹಲಿಯಾಗಿ ದುಡಿಯೋಕೆ ಜಾಗ ಸಿಕ್ಕಿದ್ರೆ ಸಾಕು ಎನ್ನುವ ಮನೋಭಾವ ಮಹಿಳೆ (Country)ಯರದ್ದು. ಕಾಶ್ಮೀರ (Kashmir) ದಂತಹ ಪ್ರದೇಶದಲ್ಲಿ ಒಬ್ಬ ಹೆಣ್ಣು ಮಗಳು ಮನೆಯಿಂದ ಹೊರಗೆ ಬರೋದೇ ಕಷ್ಟ. ಅಂಥ ಸ್ಥಿತಿಯಲ್ಲೂ ಎಲ್ಲವನ್ನು, ಎಲ್ಲರನ್ನು ಮೆಟ್ಟಿನಿಂತು ಕಾಶ್ಮೀರದಲ್ಲೊಂದು ಕೆಫೆ (Cafe) ಶುರು ಮಾಡಿದ್ದಾಳೆ ಈ ಯುವತಿ. ನಾವಿಂದು ಕಾಶ್ಮೀರದಲ್ಲಿ ಕೆಫೆ ಆರಂಭಿಸಿದ ಮೆಹ್ವಿಶ್ ಮೆಹನಾಜ್ ಜರ್ಗರ್ (Mehwish Mehnaz Zargar) ಕಥೆಯನ್ನು ನಿಮಗೆ ತಿಳಿಸ್ತೇವೆ.

Tap to resize

Latest Videos

ಕಣ್ಣೆದುರಿಗೇ ಮಕ್ಕಳು ಕಿಡ್ನಾಪ್ ಆದ್ರೆ? ಅಮ್ಮನ ನೋವು, ಹೋರಾಟ ಹೇಳೋ ಮೂವಿ MRS CHATTERJEE VS NORWAY

ಮೆಹ್ವಿಶ್ ಮೆಹನಾಜ್ ಜರ್ಗರ್ ಯಾರು? : ಕಾಶ್ಮೀರದಲ್ಲಿ ಕೆಫೆ ಶುರು ಮಾಡಿ, ಸಾಧಿಸಿ ತೋರಿಸಿದ ಮಹಿಳೆ ಮೆಹ್ವಿಶ್. ಮೆಹ್ವಿಶ್ ಮೆಹ್ನಾಜ್ ಜರ್ಗರ್ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಶ್ರೀನಗರದಲ್ಲಿ ಅವರ ಸ್ವಂತ ಕೆಫೆ ಆರಂಭವಾಗಿದೆ. ಈ ಕೆಫೆಗೆ ಮೆಹ್ವಿಶ್ ಮೆಹ್ನಾಜ್, ಮಿ ಆಂಡ್ ಯು ಎಂದು ಹೆಸರಿಟ್ಟಿದ್ದಾರೆ.  ಮೆಹ್ವಿಶ್ ಮೆಹ್ನಾಜ್ ತಮ್ಮ 25ನೇ ವಯಸ್ಸಿನಲ್ಲಿಯೇ ಈ ಕೆಫೆಯನ್ನು ಶುರು ಮಾಡಿದ್ದಾರೆ. ಈಗ ಈ ಕೆಫೆ ಗ್ರಾಹಕರನ್ನು ಸೆಳೆಯುತ್ತಿದೆ. 

ಶ್ರೀನಗರದಲ್ಲಿ ಮೊದಲ ಮಹಿಳಾ ಕೆಫೆ ಇದು : ಮೊದಲೇ ಹೇಳಿದಂತೆ ಭಯೋತ್ಪಾದನೆ, ಪ್ರತ್ಯೇಕತಾವಾದದಂತಹ ಸಮಸ್ಯೆಗಳ ಪ್ರಾಬಲ್ಯವಿರುವ ಪ್ರದೇಶ ಕಾಶ್ಮೀರ. ಇಲ್ಲಿ ಮಹಿಳೆಯರು ಒಂಟಿಯಾಗಿ ಹೊರಗೆ ಬೀಳಲು ಹೆದರುತ್ತಾರೆ. ಆದ್ರೆ ಈಗಿನ ದಿನಗಳಲ್ಲಿ ಕಾಶ್ಮೀರದ ಸ್ಥಿತಿ ಸುಧಾರಿಸಿದೆಯಾದ್ರೂ ಮಹಿಳೆಗೆ ಇಲ್ಲೊಂದು ಕೆಫೆ ಶುರು ಮಾಡೋದು ಸುಲಭವಲ್ಲ. ಆದ್ರೆ ಮೆಹ್ವಿಶ್ ಮೆಹನಾಜ್ ತನ್ನದೇ ಆದ ಕೆಫೆಯನ್ನು ಇಲ್ಲಿ ತೆರೆದಿದ್ದಾರೆ. ಇದು ಶ್ರೀನಗರದಲ್ಲಿ ಮೊದಲ ಮಹಿಳಾ ಕೆಫೆಯಾಗಿದೆ. ಮೆಹ್ವಿಶ್ ಯಾವುದೇ ಭಯವಿಲ್ಲದೆ ಈ ಕೆಫೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. 

ಆರಂಭದಲ್ಲಿ ಎದುರಾಗಿತ್ತು ಅನೇಕ ಸಮಸ್ಯೆ : ಸಂದರ್ಶನವೊಂದರಲ್ಲಿ  ಮಾತನಾಡಿದ ಮೆಹ್ವಿಶ್, ಆರಂಭದಲ್ಲಿ ಕೆಫೆಯನ್ನು ತೆರೆದಾಗ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದಿದ್ದಾರೆ. ಕೆಫೆಯನ್ನು ಮುಚ್ಚುವ ಪ್ರಯತ್ನ ನಡೆದಿತ್ತಂತೆ. ಮಹಿಳೆ ಹೇಗೆ ಕೆಫೆ ನಡೆಸ್ತಾಳೆ ನೋಡೋಣ ಎಂದು ಸವಾಲು ಹಾಕಿದ್ದರಂತೆ. ನಂತ್ರ ಜನರು ಸತ್ಯವನ್ನು ಸ್ವೀಕರಿಸಿದ್ರು. ಸ್ಥಳೀಯ ಜನರು ಈ ಕೆಫೆಗೆ ಬರಲು ಪ್ರಾರಂಭಿಸಿದರು. ನಂತರ ಈ ಕೆಫೆ ಚರ್ಚೆಗೆ ಬಂದಿತು ಎಂದಿದ್ದಾರೆ. 

International Women's Day: ಜಗತ್ತೇ ಗೌರವಿಸುವ ಭಾರತದ ಮಹಿಳಾ ಸಾಧಕಿಯರಿವರು

ಈ ಕೆಫೆ ಆರಂಭದ ಹಿಂದೆದೆ ಈ ಉದ್ದೇಶ : ಮೆಹ್ವಿಶ್ ಅವರ  ತಂದೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರಂತೆ. ತಂದೆ ಕಳೆದುಕೊಂಡ ಕುಟುಂಬ ಅನಾಥವಾಗಿತ್ತಂತೆ. ಆರ್ಥಿಕ ಸಮಸ್ಯೆ ಎದುರಾಗಿತ್ತಂತೆ. ಈ ಕಾರಣಕ್ಕಾಗಿ ಕುಟುಂಬದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಮೆಹ್ವಿಶ್ ದೃಢ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತಂತೆ. ಕುಟುಂಬಸ್ಥರಿಗೆ ನೆರವಾಗುವ ದೃಷ್ಟಿಯಿಂದ ಮೆಹ್ವಿಶ್ ಈ ಕೆಫೆಯನ್ನು ಪ್ರಾರಂಭಿಸಿದರಂತೆ. ಹಣಕಾಸಿನ ಸಮಸ್ಯೆಯಲ್ಲಿದ್ದ ಮೆಹ್ವಿಶ್ ಗೆ ಆಕೆ ಸಹೋದರ ನೆರವಾಗಿದ್ದನಂತೆ. ಹಣಕಾಸಿನ ನೆರವು ನೀಡಿದ್ದನಂತೆ.  

ಜನರಿಗೆ ಏಕೆ ಇಷ್ಟವಾಗುತ್ತೆ : ಕೆಫೆ  ಮೆಹ್ವಿಶ್ ಕೆಫೆಗೆ ಜನರು ಇಷ್ಟಪಟ್ಟು ಬರ್ತಾರಂತೆ. ಅದಕ್ಕೆ ಕಾರಣ ಈ ಕೆಫೆಯಲ್ಲಿ ಅನೇಕ ಸೌಲಭ್ಯಗಳಿವೆ. ಇನ್ನೊಂದು ಕಾರಣವೆಂದ್ರೆ ಇಲ್ಲಿನ ವಾತಾವರಣ ತುಂಬಾ ಶಾಂತವಾಗಿದೆ.  

click me!