ಗರ್ಭಿಣಿಯಾದ್ಮೇಲೆ ವಾಂತಿ, ಸುಸ್ತು ಸೇರಿ ಅನೇಕ ಸಮಸ್ಯೆಗಳು ಕಾಡುತ್ತವೆ. ಅವನ್ನೆಲ್ಲ ಮೆಟ್ಟಿ ನಿಂತು ಕೆಲಸ ಮಾಡೋದು ಸವಾಲು. ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ ಕೆಲಸಕ್ಕೆ ಹೋಗ್ತಾರೆ. ಆದ್ರೆ ಗರ್ಭಿಣಿ ಎಂಬ ವಿಷ್ಯ ಮುಚ್ಚಿಟ್ಟು ಕೆಲಸ ಮಾಡುವಾಗ ಮತ್ತೊಂದಿಷ್ಟು ಸವಾಲು ಎನ್ನುತ್ತಾರೆ ಆಲಿಯಾ
ಬಾಲಿವುಡ್ ಬೆಡಗಿಯರ ಮೇಲೆ ಸದಾ ಒಂದು ಕಣ್ಣಿರುತ್ತೆ. ಅವರ ಪ್ರಸಿದ್ಧಿ ಹೆಚ್ಚಾಗ್ತಿದ್ದಂತೆ ಕೇಳುವ ಪ್ರಶ್ನೆ ಮದುವೆ ಯಾವಾಗ ಎಂದು. ಮದುವೆಯಾದ್ಮೇಲೆ ಮಕ್ಕಳು ಯಾವಾಗಾ ಅಂತ. ಸಾಮಾನ್ಯ ಜನರು, ಸ್ಟಾರ್ಸ್ ಜೀವನವನ್ನು ಇಣುಕಿ ನೋಡಲು ಇಷ್ಟಪಡ್ತಾರೆ. ಅವರು ಮದುವೆಯಲ್ಲಿ ಧರಿಸಿದ್ದ ಬಟ್ಟೆಯಿಂದ ಹಿಡಿದು ಹೆರಿಗೆ ವೇಳೆ ಧರಿಸಿದ್ದ ಬಟ್ಟೆಯವರೆಗೆ ಎಲ್ಲ ಮಾಹಿತಿ ಬೇಕಾಗುತ್ತದೆ. ಈಗಿನ ದಿನಗಳಲ್ಲಿ ಸ್ಟಾರ್ಸ್ ತಮ್ಮ ಜೀವನವನ್ನು ಜನರ ಮುಂದೆ ತೆರೆದಿಡ್ತಿದ್ದಾರೆ. ಎಷ್ಟೂ ಜನ ನಟಿಯರು, ಗರ್ಭಿಣಿಯಾದಾಗ ಫೋಟೋ ಶೂಟ್ ಮಾಡಿಸಿಕೊಂಡು ಮಿಂಚುತ್ತಿದ್ದಾರೆ. ಆದ್ರೆ ಈ ಪಟ್ಟಿಯಲ್ಲಿ ಆಲಿಯಾ ಭಟ್ ಸೇರೋದಿಲ್ಲ. ಯಾಕೆಂದ್ರೆ ಮದುವೆಯಾದ ಕೆಲವೇ ದಿನಗಳಲ್ಲಿ ಗರ್ಭಧರಿಸಿದ್ದ ಆಲಿಯಾ, ಗರ್ಭಿಣಿ ಅನ್ನೋದು ಅನೇಕರಿಗೆ ತಿಳಿದೇ ಇರಲಿಲ್ಲ. ಕೊನೆಯ ವಾರಗಳಲ್ಲಿ ಆಲಿಯಾ ಗರ್ಭಿಣಿ ಎಂಬುದು ಗೊತ್ತಾಗಿತ್ತೇ ವಿನಃ ಆರಂಭದಲ್ಲಿ ಆಲಿಯಾ ಗುಟ್ಟು ಬಿಟ್ಟಿರಲಿಲ್ಲ.
ಗರ್ಭಿಣಿ (Pregnant) ಯಾದಾಗಿನ ಅನುಭವವೇನು, ಯಾವುದು ಖುಷಿ ನೀಡಿತ್ತು, ಯಾವುದು ಕಷ್ಟವಾಗಿತ್ತು ಎಂಬುದನ್ನು ಆಲಿಯಾ ಈವರೆಗೂ ಹೇಳಿರಲಿಲ್ಲ. ಹೆರಿಗೆ ನಂತ್ರ ಮಗುವಿನ ಜೊತೆ ತಾಯ್ತನ ಎಂಜಾಯ್ ಮಾಡ್ತಿರುವ ಆಲಿಯಾ (Aaliya) ಈಗ ಗರ್ಭಿಣಿಯಾದಾಗಿನ ಸಮಯವನ್ನು ಮೆಲುಕು ಹಾಕಿದ್ದಾರೆ. ಗರ್ಭಿಣಿಯಾಗಿದ್ದಾಗ್ಲೂ ಆಲಿಯಾ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಅನೇಕ ಚಿತ್ರಗಳ ಪ್ರಮೋಷನ್ (Promotion) ನಲ್ಲಿ ಕೂಡ ಪಾಲ್ಗೊಂಡಿದ್ದರು. ಕೆಲ ಸಿನಿಮಾಕ್ಕೆ ಸಹಿ ಹಾಕಿದ್ದ ಆಲಿಯಾ, ಹಾಲಿವುಡ್ (Hollywood) ಗೆ ಹಾರಿದ್ದಾಳೆ.
Postpartum Mood Swings : ಹೆರಿಗೆ ನಂತರ ಮಹಿಳೆ ಅನುಭವಿಸುವ ಮಾನಸಿಕ ಸಮಸ್ಯೆ
ಆಲಿಯಾಗೆ ಇದು ಸಮಸ್ಯೆಯಾಗಿತ್ತು : ಆಲಿಯಾ 12 ವಾರಗಳ ಕಾಲ ತಾನು ಗರ್ಭಿಣಿ ಎಂಬ ಸಂಗತಿಯನ್ನು ಹೇಳಿರಲಿಲ್ಲ. ಹೇಳ್ಬಾರದು ಎಂದು ಆಕೆಗೆ ಹೇಳಿದ್ದರಂತೆ. ಮಗು (child) ಹಾಗೂ ತನ್ನ ಆರೈಕೆ ಮಾಡಿಕೊಳ್ಳುವುದು ಕಷ್ಟವಾಗಿತ್ತು ಎನ್ನುತ್ತಾಳೆ ಆಲಿಯಾ.
ಕೆಲಸ ಮಾಡೋದು ಕಷ್ಟವಾಗಿತ್ತು : ಗರ್ಭಾವಸ್ಥೆಯಲ್ಲಿ ಕೆಲವು ದೈಹಿಕ ಮಿತಿಗಳನ್ನು ನೋಡಿಕೊಳ್ಳಬೇಕಾಗಿತ್ತು. ಗರ್ಭಾವಸ್ಥೆಯಲ್ಲಿ ಯಾವುದೇ ಸಮಯದಲ್ಲಿ ಏನಾದರೂ ಸಂಭವಿಸುವ ಸಾಧ್ಯತೆಯಿರುತ್ತದೆ ಹಾಗಾಗಿ ನಾನು ಹೆಚ್ಚು ಎಚ್ಚರಿಕೆ ಜೊತೆ ಕೆಲಸ ಮಾಡಬೇಕಾಗಿತ್ತು ಎನ್ನುತ್ತಾಳೆ ಆಲಿಯಾ. ಕೆಲಸದ ಜೊತೆ ಮಗು ಹಾಗೂ ನನ್ನ ಆರೋಗ್ಯದ ಬಗ್ಗೆ ಗಮನ ಹರಿಸುವುದು ಸವಾಲಾಗಿತ್ತು ಎನ್ನುತ್ತಾಳೆ ಆಲಿಯಾ.
ಆರಂಭದಲ್ಲಿ ಧೈರ್ಯಗೆಟ್ಟಿದ್ದ ನಟಿ (Actress) : ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಸುಸ್ತು ಹಾಗೂ ವಾಕರಿಕೆ ಬರ್ತಿತ್ತಂತೆ. ಆದ್ರೆ ಇದನ್ನು ಯಾರಿಗೂ ತೋರಿಸುವಂತಿರಲಿಲ್ಲವಂತೆ. 12 ವಾರಗಳ ಕಾಲ ವಿಷ್ಯ ಮುಚ್ಚಿಡಬೇಕಾದ ಕಾರಣ ನಾನು ಧೈರ್ಯಗೆಟ್ಟಿದ್ದೆ ಎನ್ನುತ್ತಾಳೆ ಆಲಿಯಾ.
ಹೀಗೆ ರೆಸ್ಟ್ (Rest) ಮಾಡ್ತಿದ್ದ ಆಲಿಯಾ : ಶೂಟಿಂಗ್ ವೇಳೆ ಸ್ವಲ್ಪ ಬಿಡುವು ಸಿಕ್ಕರೂ ಅವರು ವಿಶ್ರಾಂತಿ ಪಡೆಯುತ್ತಿದ್ದರಂತೆ. ವ್ಯಾನ್ ಗೆ ಹೋಗಿ ಸಣ್ಣ ನಿದ್ರೆ ಮಾಡಿ ಬರ್ತಿದ್ದರಂತೆ. ಇದೇ ವೇಳೆ ಹಾಲಿವುಡ್ ಚಿತ್ರಕ್ಕೂ ಸಹಿ ಹಾಕಿದ್ದ ಕಾರಣ ಅದಕ್ಕೂ ಬದ್ಧವಾಗಿರಬೇಕಿತ್ತು ಎನ್ನುತ್ತಾಳೆ ನಟಿ.
ಸ್ತನಗಳ ಸುತ್ತಲೂ ಕಂಡು ಬರುವ ಸಣ್ಣ ಸಣ್ಣ ಮೊಡವೆಗಳು ಸಾಮಾನ್ಯವೇ?
ತನ್ನ ಆರೋಗ್ಯದ ಬಗ್ಗೆ ಸಂಪೂರ್ಣ ಗಮನ : ಆಲಿಯಾ ಗರ್ಭಾವಸ್ಥೆಯಲ್ಲಿರುವಾಗ ಅವಳ ಸಮಸ್ಯೆಗಳನ್ನು ಅವಳ ತಂಡ ಅರಿತುಕೊಂಡಿತ್ತಂತೆ. ಅವಳಿಗೆ ತಂಡದಿಂದ ಸಂಪೂರ್ಣ ಸಹಕಾರ ಸಿಕ್ಕಿತ್ತಂತೆ. ಆ ಸಮಯದಲ್ಲಿ ನನ್ನ ದೇಹ ಏನೆಲ್ಲ ಮಾಡಬಹುದು ಎಂಬುದನ್ನು ನಾನು ಅರಿತುಕೊಂಡೆ. ನನ್ನ ದೇಹದ ಬಗ್ಗೆ ನನ್ನ ಗೌರವ ಹೆಚ್ಚಾಗಿದೆ ಎನ್ನುತ್ತಾಳೆ ಆಲಿಯಾ. ತಾಯಿಯಾದ್ಮೇಲೂ ನಾನು ನನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಿದ್ದೇನೆ ಎನ್ನುತ್ತಾಳೆ ಆಲಿಯಾ. ಮಗುವಿನ ಆರೈಕೆ ವೇಳೆ ನನ್ನ ಆರೋಗ್ಯ ಕಡೆಗಣಿಸಲು ನಾನು ಬಯಸುವುದಿಲ್ಲ. ಮಗುವಿನ ಜೊತೆ ನನ್ನ ಆರೋಗ್ಯವನ್ನೂ ನಾನು ನೋಡಿಕೊಳ್ತಿದ್ದೇನೆ ಎನ್ನುತ್ತಾಳೆ ಬೆಡಗಿ.