ಕರ್ನಾಟಕದ ಶಿಲ್ಪಾ, ರಶ್ಮಿ, ಸುಪ್ರೀತಾ, ಕಾವ್ಯಾಗೆ ಮಿಸೆಸ್ ಇಂಡಿಯಾ ಕಿರೀಟ

Published : Oct 07, 2021, 04:35 PM ISTUpdated : Oct 07, 2021, 04:39 PM IST
ಕರ್ನಾಟಕದ ಶಿಲ್ಪಾ, ರಶ್ಮಿ, ಸುಪ್ರೀತಾ, ಕಾವ್ಯಾಗೆ ಮಿಸೆಸ್ ಇಂಡಿಯಾ ಕಿರೀಟ

ಸಾರಾಂಶ

* ಶಿಲ್ಪಾ, ರಶ್ಮಿ, ಸುಪ್ರೀತಾ, ಕಾವ್ಯಾಗೆ ಮಿಸೆಸ್ ಇಂಡಿಯಾ ಕಿರೀಟ * ಅರ್ಹತೆ ಹಾಗೂ ಆತ್ಮವಿಶ್ವಾಸವೇ  ಸ್ಪರ್ಧೆಯ ಮಾನದಂಡ * ಜೈಪುರದಲ್ಲಿ ನಡೆದ ಸ್ಪರ್ಧೆಗೆ ಬೆಂಗಳೂರಿನ ತಂಡ

ಜೈಪುರ/ ಬೆಂಗಳೂರು(ಅ. 07)  ಜೈಪುರದಲ್ಲಿ ನಡೆದ ಮಿಸೆಸ್ ಇಂಡಿಯಾ ಐ ಆಮ್ ಪವರ್ ಫುಲ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಶಿಲ್ಪಾ ಸುಧಾಕರ್, ರಶ್ಮಿ ರಂಗಪ್ಪ, ಸುಪ್ರೀತಾ ಹಾಗೂ ಕಾವ್ಯ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 

ಮಿಸೆಸ್ ಇಂಡಿಯಾ ಐ ಆಮ್ ಪವರ್ ಫುಲ್ ಯೂನಿವರ್ಸ್ ವಿಭಾಗದ ಕಿರೀಟವನ್ನು ಶಿಲ್ಪಾ ಗೆದ್ದುಕೊಂಡರೆ, ಐ ಆಮ್ ಪವರ್ ಫುಲ್ ವಲ್ರ್ಡ್ ವಿಭಾಗದಲ್ಲಿ ರಶ್ಮಿ, ಏಷ್ಯಾ ವಿಭಾಗದಲ್ಲಿ ಸುಪ್ರೀತಾ, ಕರ್ವಿ ವಲ್ರ್ಡ್ ವಿಭಾಗದಲ್ಲಿ ಕಾವ್ಯ ಕಿರೀಟ ಜಯಿಸಿದರು. ನಿರ್ಮಲಾ, ಹೇಮಾ, ಸ್ನೇಹ, ಸಿಂಧು ರನ್ನರ್ ಅಪ್ ಆದರು.

ನಂದಿನಿ ನಾಗರಾಜ್ ಹಾಗೂ ಜಸ್ಪ್ರೀತ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ 10 ರೂಪದರ್ಶಿಯರ ತಂಡ ಜೈಪುರಕ್ಕೆ ತೆರಳಿತ್ತು. ಒಟ್ಟು 40 ಸ್ಪರ್ಧಿಗಳು ಭಾಗವಹಿಸಿದ್ದರು.

ಮಾರ್ಜಾಲ  ನಡಿಗೆಯಲ್ಲಿ ಮೌಂಟ್ ಕಾರ್ಮೆಲ್ ಬೆಡಗಿಯರು

ವಿಂಟೇಜ್, ಗೌನ್, ಎಥ್‍ನಿಕ್, ಟ್ಯಾಲೆಂಟ್ ಸುತ್ತುಗಳಲ್ಲಿ ರೂಪದರ್ಶಿಯರು ಹೆಜ್ಜೆ ಹಾಕಿದರು. ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದಿದ್ದ ರೂಪದರ್ಶಿಯರು ಹೆಜ್ಜೆ ಹಾಕಿದರು. ತೆಳ್ಳಗೆ, ಬೆಳ್ಳಗೆ ಇರುವವರು, ಎತ್ತರ, ದಪ್ಪ, ವಯಸ್ಸನ್ನು ನೋಡಿ ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿಲ್ಲ. ಬದಲಾಗಿ ಅವರಿಗೆ ಇರುವ ಅರ್ಹತೆ ಹಾಗೂ ಆತ್ಮವಿಶ್ವಾಸವೇ ನಮ್ಮ ಸ್ಪರ್ಧೆಯ ಮಾನದಂಡವಾಗಿತ್ತು' ಎಂದು ಆಯೋಜಕಿ ನಂದಿನಿ ನಾಗರಾಜ್ ಹೇಳಿದರು.

ಬೆಂಗಳೂರಿನ ತಂಡ ಜೈಪುರದಲ್ಲಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಈ ತಂಡ ಮುಂದಿನ ವರ್ಷ ಸಿಂಗಪುರದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?