ಹಿಂದೆ ಪ್ಲಾಸ್ಟಿಕ್ ಇಲ್ಲದೆ ಅಡಿಗೆ ಮನೆ ಇರಲಿಲ್ಲ. ಪರಿಸರ ರಕ್ಷಣೆ ಕಾರಣಕ್ಕೆ ಜನರು ಈಗ ಮರದ ವಸ್ತುಗಳನ್ನು ಬಳಸ್ತಾರೆ. ಅದ್ರಲ್ಲಿ ವುಡನ್ ಸ್ಪೂನ್ ಕೂಡ ಒಂದು. ಇದರ ಬಳಕೆಯಿಂದ ಅನಾನುಕೂಲಕ್ಕಿಂತ ಅನುಕೂಲ ಹೆಚ್ಚಿದೆ.
ಅಡುಗೆ ಮನೆಯಲ್ಲಿ ವಿವಿಧ ರೀತಿಯ ಪಾತ್ರೆಗಳನ್ನು ಬಳಕೆ ಮಾಡುತ್ತೇವೆ. ನಾವು ಬಳಸುವ ಪಾತ್ರೆಗಳಲ್ಲಿ ಕೆಲವು ಉಕ್ಕಿನ ಮಾತ್ರೆ ಮತ್ತೆ ಕೆಲವು ಕಬ್ಬಿಣ ಮತ್ತು ಕೆಲವು ಮರದ ಪಾತ್ರೆ ಸೇರಿದಂತೆ ಅನೇಕ ವಿಧಗಳನ್ನು ಕಾಣಬಹುದು. ತುಂಬಾ ಸುಂದರವಾಗಿ ಕಾಣುತ್ತದೆ ಎನ್ನುವ ಕಾರಣಕ್ಕೆ ಅಥವಾ ಬಳಕೆಗೆ ಯೋಗ್ಯವಾಗಿದೆ ಎಂಬ ಕಾರಣಕ್ಕೆ ಇಲ್ಲವೆ ಆರೋಗ್ಯ ವೃದ್ಧಿಸುತ್ತದೆ ಎಂಬ ಸಲಹೆ ಮೇರೆಗೆ ನಾವು ಬಗೆ ಬಗೆಯ ಲೋಹದ ಪಾತ್ರೆಗಳನ್ನು ಬಳಸ್ತೇವೆ. ಮನೆಯಲ್ಲಿ ಮರದ ಪಾತ್ರೆಗಳನ್ನು ಅನೇಕ ವರ್ಷಗಳಿಂದ ಬಳಕೆ ಮಾಡ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮರದ ಪಾತ್ರೆಗಳ ಬಳಕೆ ಹೆಚ್ಚಾಗ್ತಿದೆ. ನಾವಿಂದು ಮರದ ಚಮಚ ಬಳಸೋದು ಎಷ್ಟು ಸರಿ ಎಂಬುದನ್ನು ಹೇಳ್ತೆವೆ.
ಮರದ (Wood ) ಚಮಚ (Spoon) ಬಳಸೋದು ಏಕೆ?:
undefined
ಪಾತ್ರೆ (Vessel) ಗಳಿಗೆ ಗೀರು : ಸ್ಟೀಲ್ ಚಮಚ ಅಥವಾ ಬೇರೆ ಯಾವುದೇ ಚಮಚ ಬಳಸಿದಾಗ ಪಾತ್ರೆಗಳು ಗೀರಾಗುತ್ತವೆ. ಸುಂದರ ಪಾತ್ರೆಗಳು ಚಿತ್ತಾರಗೊಳ್ಳುತ್ತವೆ. ಇದ್ರಿಂದ ಆ ಪಾತ್ರೆಯ ಅಂದ ಹಾಳಾಗುತ್ತದೆ.
ನಾನ್ ಸ್ಟಿಕ್ ಪಾತ್ರೆಗೆ ಅನುಕೂಲ : ಸ್ಟೀಲ್ ಸೇರಿದಂತೆ ಇನ್ನು ಕೆಲ ಲೋಹದ ಚಮಚಗಳನ್ನು ನಾನ್ ಸ್ಟಿಕ್ ಪಾತ್ರೆಗೆ ಬಳಸಿದ್ರೆ ಅದು ಮೇಲಿರುವ ಲೇಪವನ್ನು ಕೀಳುತ್ತದೆ. ಅಲ್ಲಲ್ಲಿ ಕಿತ್ತಿರುವ, ಬಣ್ಣ ಬದಲಾಗಿರುವ ನಾನ್ ಸ್ಟಿಕ್ ಪಾತ್ರೆ ಆರೋಗ್ಯಕ್ಕೆ ಹಾನಿಕರ. ಹಾಗಾಗಿಯೇ ನಾನ್ ಸ್ಟಿಕ್ ಪಾತ್ರೆಗೆ ಸ್ಟೀಲ್ ಚಮಚ ಬಳಸದಂತೆ ಸಲಹೆ ನೀಡಲಾಗುತ್ತದೆ. ಹಾಗಾಗಿಯೇ ಬಹುತೇಕ ಜನರು ಮರದ ಚಮಚ ಬಳಸಲು ಶುರು ಮಾಡಿದ್ದಾರೆ.
ಅತಿಯಾದ ಶಾಖ : ಸಾಮಾನ್ಯವಾಗಿ ಮರದ ಚಮಚವನ್ನು ಕ್ಲೀನ್ ಮಾಡುವುದು ಸುಲಭ. ಅವುಗಳನ್ನು ಯಾವುದೇ ರೀತಿಯ ಅಡುಗೆ ಸಾಮಾನುಗಳೊಂದಿಗೆ ಬಳಸಬಹುದು. ಮರದ ಪಾತ್ರೆಗಳು ಅತಿಯಾದ ಶಾಖದಿಂದ ಕರಗುವುದಿಲ್ಲ. ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳಂತೆ ಬೇಗನೆ ಬಿಸಿಯಾಗುವುದಿಲ್ಲ.
ಮರದ ಚಮಚ ಬಳಕೆಯಿಂದಾಗುವ ಅನಾನುಕೂಲಗಳು : ಮರದ ಚಮಚ ಬಳಸಿದ್ರೆ ಏನೆಲ್ಲ ಅನಾನುಕೂಲತೆಯಿದೆ ಎಂದು ಪ್ರಶ್ನೆ ಕೇಳಿದ್ರೆ ಅದಕ್ಕೆ ಉತ್ತರ ಬಹಳಷ್ಟಿಲ್ಲ. ನೀವು ಮರದ ಚಮಚ ಖರೀದಿ ಮಾಡುವಾಗ ಅದ್ರಿಂದ ನಷ್ಟವೇನಿದೆ ಎಂಬುದನ್ನು ಆಲೋಚನೆ ಮಾಡಬೇಕಾಗಿಲ್ಲ. ನೀವು ಹುಡುಕಿದ್ರೆ ಸಿಗೋದು ಒಂದೇ ಒಂದು ನಷ್ಟ. ಅಂದೆಂದ್ರೆ ಬಣ್ಣ ಮಾಸುವುದು. ಆದರೆ ಇದು ದೊಡ್ಡ ಸಮಸ್ಯೆ ಅಲ್ಲ. ಏಕೆಂದರೆ ಅನೇಕ ಪರಿಹಾರವಿದೆ. ಆ ಉಪಾಯದ ಮೂಲಕ ನೀವು ಮರದ ಚಮಚದಲ್ಲಿ ಕಾಣಿಸುವ ಕಲೆಗಳನ್ನು ಸ್ವಚ್ಛಗೊಳಿಸಬಹುದು. ಇಲ್ಲದಿದ್ದರೆ ಮರದ ಚಮಚ ಯಾವುದೇ ಅನಾನುಕೂಲಗಳನ್ನು ಹೊಂದಿಲ್ಲ.
ಮಹಿಳೆಯನ್ನು 14 ಸೆಕೆಂಡ್‌ಗಿಂತ ಹೆಚ್ಚು ಗುರಾಯಿಸಿದರೆ ಜೈಲೇ ಗತಿ...!
ಮರದ ಚಮಚವನ್ನು ಬಳಸುವುದು ಸರಿಯೇ? : ಮೊದಲೇ ಹೇಳಿದಂತೆ ನೀವು ನಿಶ್ಚಿಂತೆಯಾಗಿ ಮರದ ಚಮಚ ಬಳಸಬಹುದು. ಪ್ಲಾಸ್ಟಿಕ್ ವಿರುದ್ಧದ ಅಭಿಯಾನದಲ್ಲಿ ಜನರು ಮರದ ಪಾತ್ರೆ, ಚಮಚಕ್ಕೂ ಆದ್ಯತೆ ನೀಡ್ತಿದ್ದಾರೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಮರದ ಚಮಚ ಬಳಕೆ ಮಾಡುವುದು ಬಹಳ ಒಳ್ಳೆಯದು.
Working Woman ಆರೋಗ್ಯ ಚೆನ್ನಾಗಿರಲು ನವಾಸನ ಮಾಡಿದ್ರೆ ಒಳ್ಳೇದು
ಮರದ ಚಮಚ ಕ್ಲೀನ್ ಮಾಡುವ ವಿಧಾನ : ಅನೇಕ ದಿನಗಳಿಂದ ನಾವು ಮರದಿಂದ ಮಾಡಿದ ಒಂದೇ ಚಮಚವನ್ನು ಬಳಸಲುತ್ತಿದ್ದರೆ ಅದು ಕಪ್ಪಾಗುತ್ತದೆ. ಹಾಗಂತ ಕ್ವಾಲಿಟಿ ಕಳೆದುಕೊಂಡಿರುವುದಿಲ್ಲ. ಅದು ಮೊದಲಿನಂತೆ ಆಗಬೇಕು ಎನ್ನುವವರು ಸುಲಭ ವಿಧಾನ ಬಳಸಿ ಅದಕ್ಕೆ ಹೊಳಪು ನೀಡಬಹುದು. ನಿಮ್ಮ ಮರದ ಚಮಚಗಳು ಕೊಳಕಾಗಿದ್ದರೆ, ಅವುಗಳನ್ನು ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಮತ್ತು ನಂತರ ಅವುಗಳನ್ನು ಸಂಪೂರ್ಣವಾಗಿ ಒಣಗಲು ಬಿಡಬೇಕು. ನೀರಿನಾಂಶವಿರುವ ಮರದ ಪಾತ್ರೆಗಳು ಬಣ್ಣ ಕಳೆದುಕೊಳ್ಳುತ್ತದೆ. ಮರದ ಪಾತ್ರೆಯಲ್ಲಿ ಬ್ಯಾಕ್ಟೀರಿಯಾಗಳಿದ್ದರೆ, ಮರದ ಚಮಚವನ್ನು ನೀವು ಕೊಳಕಾದ ನೀರಿನಲ್ಲಿ ತೊಳೆದ್ರ ಅದ್ರ ಬಣ್ಣ ಮತ್ತಷ್ಟು ಹಾಳಾಗುತ್ತದೆ.