ಮಹಿಳೆ ಭವಿಷ್ಯ ಭದ್ರವಾಗ್ಬೇಕೆಂದ್ರೆ ಆಕೆ ಗಳಿಕೆ ಜೊತೆ ಹೂಡಿಕೆ ಕೂಡ ಮಾಡ್ಲೇಬೇಕು. ಉಳಿತಾಯಕ್ಕಿಂತಲೂ ಹೂಡಿಕೆ ಮುಖ್ಯ ಎನ್ನುತ್ತಾರೆ ತಜ್ಞರು. ಹೂಡಿಕೆ ಬಗ್ಗೆ ಇರುವ ಗೊಂದಲ ಬಗೆಹರಿಸಿಕೊಂಡು ಈ ಕ್ಷೇತ್ರಕ್ಕೆ ಕಾಲಿಡೋದು ಒಳ್ಳೆಯದು.
ಹೂಡಿಕೆ ವಿಷ್ಯಕ್ಕೆ ಬಂದ್ರೆ ಮಹಿಳೆಯರು ಯಾವಾಗ್ಲೂ ಹಿಂದೆ. ಮಹಿಳೆಯರು ಹಣ ಉಳಿಸುವ ಬಗ್ಗೆ ಹೆಚ್ಚಾಗಿ ಚಿಂತಿಸೋದಿಲ್ಲ. ಹಣಕಾಸು ಯೋಜನೆ ಬಗ್ಗೆ ಸರಿಯಾಗಿ ತಿಳಿಯುವ ಪ್ರಯತ್ನಕ್ಕೂ ಹೋಗೋದಿಲ್ಲ. ಹೂಡಿಕೆ ಮಾಡುವುದು ಪುರುಷರ ಕೆಲಸ ಎಂದುಕೊಳ್ಳುವ ಬಹುತೇಕ ಮಹಿಳೆಯರು, ಸಣ್ಣಪುಟ್ಟ ಹಣವನ್ನು ಡಬ್ಬದಲ್ಲಿಡ್ತಾರೆ ಇಲ್ಲವೆ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಇಡ್ತಾರೆಯೇ ಹೊರತು ಅದನ್ನು ಹೂಡಿಕೆ ಮಾಡುವ ಬಗ್ಗೆ ಚಿಂತಿಸೋದಿಲ್ಲ. ಹೂಡಿಕೆ (Investment) ಬಗ್ಗೆ ಜನರಲ್ಲಿ ಭಯವಿರೋದು ಸಾಮಾನ್ಯ. ಎಲ್ಲ ಹೂಡಿಕೆಗಳು ಸುರಕ್ಷಿತವೂ ಅಲ್ಲ. ಯಾವ ಸ್ಥಳದಲ್ಲಿ ಹೂಡಿಕೆ ಮಾಡುವುದು ಸರಿ ಎಂದು ನೀವು ತಿಳಿದಿರಬೇಕು. ಹೂಡಿಕೆ ಮಾಡೋದು ಮಹಿಳೆಯರಿಗೂ ಮುಖ್ಯ. ತುರ್ತು ಸಮಯದಲ್ಲಿ ಈ ಹೂಡಿಕೆ ನೆರವಿಗೆ ಬರುತ್ತದೆ. ಎಲ್ಲಿ ಹೂಡಿಕೆ ಮಾಡ್ಬೇಕು ಹಾಗೆ ಯಾವಾಗ ಹೂಡಿಕೆ ಮಾಡಬೇಕು ಎಂಬುದು ಸೇರಿದಂತೆ ಕೆಲ ಪ್ರಶ್ನೆಗೆ ತಜ್ಞರು (Experts) ಸಲಹೆ ನೀಡಿದ್ದಾರೆ. ಮಹಿಳೆಯರ ಹೂಡಿಕೆ ಬಗ್ಗೆ ಅವರು ಏನು ಹೇಳ್ತಾರೆ ಎಂಬುದು ಇಲ್ಲಿದೆ.
ಮಹಿಳೆ (Woman) ಯರು ತಮ್ಮ ಹೂಡಿಕೆಯ ಪ್ರಯಾಣವನ್ನು ಯಾವಾಗ ಪ್ರಾರಂಭಿಸಬೇಕು? : ಅನೇಕ ಬಾರಿ ಮಹಿಳೆಯರು ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹೆದರುತ್ತಾರೆ. ಆದಾಗ್ಯೂ, ಸಂಶೋಧನೆ ಮತ್ತು ತಜ್ಞರ ಸಲಹೆಯೊಂದಿಗೆ ನೀವು ಸುಲಭವಾಗಿ ಹೂಡಿಕೆ ಶುರು ಮಾಡಬಹುದು. ಇದನ್ನು ಸ್ಮಾರ್ಟ್ ಮನಿ ನಿರ್ಧಾರ ಎಂದು ಕರೆಯಲಾಗುತ್ತದೆ. ಆರಂಭಿಕ ಹಂತಗಳಲ್ಲಿ ನೀವು ಹೇಗೆ ಹೂಡಿಕೆ ಮಾಡಲು ಬಯಸುತ್ತೀರಿ ಎಂಬುದನ್ನು ಸಹ ನೀವು ನಿರ್ಧರಿಸಬೇಕು.
Women Health : ಸಾವಿಗೆ ದಾರಿ ಮಾಡ್ಕೊಡಬಹುದು ಗರ್ಭನಿರೋಧಕ ಮಾತ್ರೆ..
ನಿಮ್ಮ ಪ್ಲಾನ್ ಹೀಗಿರಲಿ : ಮಹಿಳೆಯ ಕೈನಲ್ಲಿ ಹಣವಿರೋದು ಕಷ್ಟ. ಕಡಿಮೆ ಸಂಬಳ ಅವರ ಖರ್ಚಿಗೆ ಹೋಗುತ್ತೆ. ಇದೇ ಕಾರಣಕ್ಕೆ ಮಹಿಳೆಯರು ಹಣ ಹೂಡಿಕೆ ಮಾಡಲು ಹಿಂದೇಟು ಹಾಕ್ತಾರೆ. ಆದ್ರೆ ಇದೇ ಕಾರಣಕ್ಕೆ ಮಹಿಳೆಯಾದವಳು ಹಣ ಹೂಡಿಕೆ ಮಾಡ್ಬೇಕು ಎನ್ನುತ್ತಾರೆ ತಜ್ಞರು. ಮೊದಲು ನಿಮ್ಮ ಖರ್ಚನ್ನು ಟ್ರ್ಯಾಕ್ ಮಾಡ್ಬೇಕು. ಎರಡನೇಯದು ನಿಮ್ಮ ಸಂಬಳದಲ್ಲಿ ಶೇಕಡಾ 10ನ್ನು ನೀವು ಹೂಡಿಕೆ ಮಾಡ್ಬೇಕು. ಆ ಹಣ ನಿಮ್ಮ ಕೈಗೆ ಬಂದೇ ಇಲ್ಲ ಎಂದುಕೊಂಡು ನೀವು ಹಣವನ್ನು ಉಳಿತಾಯ ಮಾಡಲು ಶುರು ಮಾಡ್ಬೇಕು ಎನ್ನುತ್ತಾರೆ ತಜ್ಞರು. ಪ್ರತಿ ಕೆಲಸಕ್ಕೂ ನೀವು ಬಜೆಟ್ ತಯಾರಿಸಬೇಕು. ನಂತ್ರ ಅದ್ರಂತೆ ಖರ್ಚು ಮಾಡ್ಬೇಕು. ತಿಂಗಳ ಆರಂಭದಲ್ಲಿ ಬಜೆಟ್ ಸಿದ್ಧವಾದ್ರೆ ಕೆಲಸ ಸುಲಭ.
ನಿಮ್ಮ 20ನೇ ವಯಸ್ಸಿನಲ್ಲಿರಲಿ ಈ ಆರ್ಥಿಕ ಗುರಿ : ನಿಮಗೆ ಉದ್ಯೋಗ ಸಿಕ್ಕು, ಗಳಿಕೆ ಶುರು ಮಾಡ್ತಿದ್ದಂತೆ ನೀವು ಹಣ ಹೂಡಿಕೆ ಪ್ಲಾನ್ ಮಾಡೋದು ಯೋಗ್ಯ. ಸಣ್ಣ ವಯಸ್ಸಿನಲ್ಲಿಯೇ ಹೂಡಿಕೆ ಮಾಡಿದ್ರೆ ಅದ್ರಿಂದ ಬರುವ ಲಾಭ ಹೆಚ್ಚು. ಆರ್ಥಿಕ ಭದ್ರತೆಯನ್ನು ಬಯಸಿದರೆ ಯಾವಾಗಲೂ ನಿಮ್ಮಲ್ಲಿರುವ ಹಣದಲ್ಲಿ ಶೇಕಡಾ 10ರಷ್ಟನ್ನು ಉಳಿಸುವ ಬಗ್ಗೆ ಯೋಚಿಸಬೇಕು. ಖರ್ಚಿಗೆ ಕಡಿವಾಣ ಹಾಕಿ ಸಾಲ ಮಾಡುವ ಕೆಲಸಕ್ಕೆ ಹೋಗ್ಬಾರದು. ಬಂದ ಸಂಬಳ ಖರ್ಚು ಮಾಡಿ, ಪೋಷಕರಿಂದ ಹಣ ಪಡೆಯುತ್ತಿದ್ದರೆ ಅದು ಕೂಡ ಸಾಲ. ಪಡೆಯುವ ಪಾಕೆಟ್ ಮನಿ, ಸಂಬಳ, ಸ್ಟೈಫಂಡ್ ಇತ್ಯಾದಿಗಳನ್ನು ಬಳಸಿಯೇ ನೀವು ಉಳಿತಾಯ ಮಾಡಬಹುದು.
ಚೆನ್ನೈ; ಏರಿಕೆಯಾಗ್ತಿದೆ Breast Cancer ಮಹಿಳೆಯರ ಸಂಖ್ಯೆ
ನಿವೃತ್ತಿಯ ಯೋಜನೆ ಮತ್ತು ಮಹಿಳೆ : ನಿವೃತ್ತಿ ಯೋಜನೆ ಮಾಡುವ ಸಂದರ್ಭದಲ್ಲೂ ಮಹಿಳೆ ಅನೇಕ ಸವಾಲುಗಳನ್ನು ಎದುರಿಸುತ್ತಾಳೆ. ಅದು ಪುರುಷರಿಗೆ ಎದುರಾಗುವುದಿಲ್ಲ. ಕಾರಣ ಮೊದಲನೇಯದು ಲಿಂಗ ವೇತನದ ಅಂತರ. ಮಹಿಳೆಯರು ಪುರುಷರಿಗಿಂತ ಕಡಿಮೆ ಸಂಬಳ ಪಡೆಯುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರೊಂದಿಗೆ ಮಕ್ಕಳನ್ನು ಬೆಳೆಸುವ ಖರ್ಚು, ಸಂಸಾರ ನಡೆಸುವ ಹೊಣೆಗಾರಿಕೆ, ಉಳಿತಾಯದ ಕಷ್ಟ ಇತ್ಯಾದಿಗಳೆಲ್ಲ ಹೆಣ್ಣಿನ ಮೇಲೆ ಬೀಳುತ್ತವೆ. ಹಾಗಾಗಿ ಮಹಿಳೆಯರು ತಮ್ಮ ನಿವೃತ್ತಿಯನ್ನು ಸಮಯಕ್ಕೆ ಸರಿಯಾಗಿ ಯೋಜಿಸುವುದು ಮುಖ್ಯ. ನಿವೃತ್ತಿಗಾಗಿ ನೀವು ಉಳಿತಾಯವನ್ನು ಪ್ರಾರಂಭಿಸುತ್ತಿದ್ದರೆ, 40 ರ ನಂತರ ನಿವೃತ್ತಿ ಯೋಜನೆಯನ್ನು ಮಾಡಬೇಕಾಗಿಲ್ಲ. ಆದಷ್ಟು ಬೇಗ ಶುರು ಮಾಡಿದ್ರೆ ಒಳ್ಳೆಯದು.
ಉಳಿತಾಯಕ್ಕಿಂತ ಹೂಡಿಕೆ ಮುಖ್ಯ : ಹಣವನ್ನು ಯಾವಾಗಲೂ ಅತ್ಯಂತ ಸುರಕ್ಷಿತ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಆದರೆ ನಗದು ಮೌಲ್ಯ ಕಾಲಾನಂತರದಲ್ಲಿ ಸವಕಳಿಯಾಗುತ್ತದೆ. ಹಣದುಬ್ಬರದ ಹೆಚ್ಚಳದ ಜೊತೆಗೆ ನಿಮ್ಮ ಉಳಿತಾಯವೂ ಹೆಚ್ಚಾದರೆ ಮಾತ್ರ ನಿಮಗೆ ಲಾಭವಾಗುತ್ತದೆ. ಹಣವನ್ನು ಉಳಿಸುವ ಬದಲು, ಅವುಗಳನ್ನು ಹೂಡಿಕೆ ಮಾಡುವ ಬಗ್ಗೆ ಯೋಚಿಸಿದರೆ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಹೂಡಿಕೆಯ ಬಗ್ಗೆ ಮೊದಲು ತಜ್ಞರಿಂದ ಮಾಹಿತಿ ಪಡೆದು ನಂತರ ಮಾರುಕಟ್ಟೆಗೆ ಪ್ರವೇಶಿಸುವುದು ಬಹಳ ಮುಖ್ಯ. ಪೋಸ್ಟ್ ಆಫೀಸ್ ಯೋಜನೆಗಳು ಅಥವಾ ಎಫ್ ಡಿ (FD) ನಲ್ಲಿ ಹೂಡಿಕೆ ಮಾಡಬಹುದು.