
ಇವರು ಸುಮ್ಮನೆ ಮೇಲ್ನೋಟಕ್ಕೆ ನೋಡಿದರೆ ಅಪ್ಪಟ ಗೃಹಿಣಿ. ಮಾತುಗಳನ್ನು ಕೇಳಿದರೆ ಮೌಲ್ಯವಂತ ಮಹಿಳೆ. ಇವರು ಲೇಖಕಿಯೂ ಹೌದು. ಹಣಕಾಸಿನ ವಿಚಾರಕ್ಕೆ ಬಂದರೆ ದೈತ್ಯ ಸಾಫ್ಟ್ ವೇರ್ ಸಂಸ್ಥೆಯನ್ನು ಕಟ್ಟಿ ನಿಲ್ಲಿಸುವಲ್ಲಿ ಇವರ ಪಾತ್ರ ಅನನ್ಯ. ಇದೀಗ, ಸೇವಾ ಕಾರ್ಯಗಳನ್ನು ನಡೆಸುವ ಇನ್ಫೋಸಿಸ್ ಫೌಂಡೇಷನ್ ನ ಅಧ್ಯಕ್ಷೆ. ಇವರ್ಯಾರೆಂದು ಎಲ್ಲರಿಗೂ ಇಷ್ಟೊತ್ತಿಗೆ ತಿಳಿದಿರುತ್ತದೆ. ಇವರು ನಮ್ಮ ಸುಧಾ ಮೂರ್ತಿ. ಇವರನ್ನು “ನಮ್ಮವʼರೆಂದು ಕರೆಯಲು ನಮಗೆ ಹೆಮ್ಮೆ ಇರಬೇಕು. ಏಕೆಂದರೆ, ಇವರು ಅಪ್ಪಟ ಕನ್ನಡಿಗರು. ಅಷ್ಟೇ ಅಲ್ಲ, ಬಿಲ್ ಗೇಟ್ಸ್ ನಂತಹ ದಿಗ್ಗಜರಿಂದ ಹಿಡಿದು ಹಳ್ಳಿಗಾಡಿನ ಸಾಮಾನ್ಯ ರೈತರನ್ನು ಒಂದೇ ಆತ್ಮೀಯತೆಯಲ್ಲಿ ಕಟ್ಟಿಹಾಕುವ ಮನೋಭಾವ. ೨೦೦೬ರಲ್ಲಿ ಸುಧಾ ಮೂರ್ತಿ ಅವರಿಗೆ ಪದ್ಮಶ್ರೀ ಪುರಸ್ಕಾರ ಸಂದಿದೆ. ಸಾಮಾಜಿಕ ಕಾರ್ಯಗಳಲ್ಲಿ ಇನ್ಫೋಸಿಸ್ ಫೌಂಡೇಷನ್ ಎತ್ತಿದ ಕೈ. ಅದರ ಹಿಂದೆ ಇವರದ್ದೇ ಆಲೋಚನೆ ಕೆಲಸ ಮಾಡುತ್ತಿದೆ. ಸುಧಾ ಮೂರ್ತಿಯವರು ಎಲ್ಲರಿಗೂ ಸ್ಫೂರ್ತಿಯಾಗಬಲ್ಲಂಥವರು. ಇದಕ್ಕೆ ಹಲವಾರು ಕಾರಣಗಳಿವೆ. ಸುಧಾ ಮೂರ್ತಿ ಅವರಿಂದ ಕೆಲವು ಗುಣಗಳನ್ನು ಅಳವಡಿಸಿಕೊಂಡರೆ ನಾವೂ ವ್ಯಕ್ತಿಯಾಗಿ ಮೇಲಕ್ಕೇರಬಹುದು. ಅವರಷ್ಟು ಕಾಸು ಸಂಪಾದಿಸಲು ಸಾಧ್ಯವಾಗದಿದ್ದರೂ ಇದ್ದರೂ ಖಂಡಿತವಾಗಿ ಮೌಲ್ಯವಂತ ಪ್ರಜೆಯಾಗಬಹುದು. ಜೀವನದಲ್ಲಿ ನೆಮ್ಮದಿ ಕಾಣಬಹುದು.
• ನಿಮ್ಮತನ (Youself) ಉಳಿಸಿಕೊಳ್ಳಿ
ಸುಧಾ ಮೂರ್ತಿ (Sudha Murthy) ಅವರು ನಮ್ಮ ದೇಶದ ಆಗರ್ಭ ಶ್ರೀಮಂತೆ (Rish Woman). ಅಪಾರ ಗೌರವವನ್ನೂ ಗಳಿಸಿದ್ದಾರೆ. ಕಾರಣ ಅವರು ಶ್ರೀಮಂತೆ ಎನ್ನುವುದಕ್ಕಲ್ಲ. ತಮ್ಮ ಸರಳತೆ(Simple)ಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಸಹಜ-ಸರಳ ನಡೆನುಡಿಯಿಂದ (Behaviour) ತಮ್ಮತನ ಮೆರೆಯುವ ಅವರು ಎಲ್ಲರನ್ನೂ ಗೆಲ್ಲುತ್ತಾರೆ. ತಮಗೆ ಬೇಕಾದ ಔಷಾರಾಮಿಗಳನ್ನು ಅನುಭವಿಸಲು ಅವಕಾಶ ಇದ್ದಾಗ್ಯೂ ಸರಳವಾಗಿರಲು ಇಷ್ಟಪಡುತ್ತಾರೆ. ನಮ್ಮತನ ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎನ್ನುವುದಕ್ಕೆ ಸುಧಾ ಮೂರ್ತಿ ಅವರು ಪರಿಪೂರ್ಣ ಉದಾಹರಣೆ ಎನ್ನಬಹುದು. ನೀವೇನು ಅಲ್ಲವೋ ಅದನ್ನು ರೂಢಿಸಿಕೊಳ್ಳುವುದು ಬೇಡ. ನೀವೇನು ಇದ್ದೀರೋ ಅದನ್ನೇ ಜೀವನದಲ್ಲಿ ಅಳವಡಿಸಿಕೊಳ್ಳಿ ಎನ್ನುವುದು ಅವರ ಕಿವಿಮಾತು. ಇದನ್ನೇ ಅವರೂ ಸ್ವತಃ ಪಾಲಿಸುತ್ತಾರೆ. “ಇತರರಿಗಾಗಿ ಬದುಕುವುದು ಸಲ್ಲದು, ನಮಗಾಗಿ ನಾವು ನಾವು ಮೌಲ್ಯಗಳನ್ನು ರೂಢಿಸಿಕೊಳ್ಳಬೇಕುʼ ಎನ್ನುವುದು ಇವರ ಧ್ಯೇಯ.
ತಿರುಪತಿ ದೇವಸ್ಥಾನಕ್ಕೆ ಚಿನ್ನದ ರಥ ನೀಡಿದ ಸುಧಾ ಮೂರ್ತಿ
• ಶಬ್ದಾಡಂಬರವಿಲ್ಲದ ಸರಳತೆ, ನೇರ ನಡೆ ನುಡಿ (Strait Forward)
ಸುಧಾ ಮೂರ್ತಿ ಅವರು ಮಾತನಾಡುವಾಗ ತಮಗೆ ಏನನ್ನಿಸುತ್ತದೆಯೋ ಅದನ್ನು ತುಂಬ ಸರಳವಾಗಿ ಹೇಳುತ್ತಾರೆ. ಶಬ್ದಾಡಂಬರ ಅವರಲ್ಲಿಲ್ಲ. ಹಾಗೆಯೇ, ನೇರ ನಡೆನುಡಿ ಹೊಂದಿದ್ದಾರೆ. ಹಿಂದೊಮ್ಮೆ ಟೆಲ್ಕೋ (TELCO) ಕಂಪನಿಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಮಹಿಳೆಯರಿಗೆ (Women) ಅವಕಾಶ ಇಲ್ಲದಿರುವಾಗ ಈ ಕುರಿತು ನೇರವಾಗಿ ಜೆಆರ್ ಡಿ ಟಾಟಾ (JRD Tata) ಅವರ ಬಳಿ ಲಿಂಗಾಧಾರಿತ ತಾರತಮ್ಯದ ಕುರಿತು ನೇರವಾಗಿ ಅಸಮಾಧಾನ ಹೊರಹಾಕಿದ್ದರು.
• ಕಲಿಕೆ (Learning) ನಿರಂತರ
ಸುಧಾ ಮೂರ್ತಿ ಅವರು ಜೀವನದಲ್ಲಿ ಒಂದು ಹಂತಕ್ಕೇರಿದ ಬಳಿಕವೂ ತಮ್ಮ ಕಲಿಕೆಯನ್ನು ನಿಲ್ಲಿಸಲಿಲ್ಲ. ಬಗೆಬಗೆಯ ಓದನ್ನು ಕಡಿಮೆ ಮಾಡಲಿಲ್ಲ. ದಿನವೂ ಹೊಸ ಸಂಗತಿ, ವಿಷಯಗಳನ್ನು ಅರಿಯಲು ಹಿಂದೇಟು ಹಾಕಲಿಲ್ಲ. ಅವರೇ ಒಮ್ಮೆ ಸಂದರ್ಶನದಲ್ಲಿ ಹೇಳಿರುವಂತೆ, “ಯಾವತ್ತು ನೀವು ಕಲಿಯುವುದನ್ನು ನಿಲ್ಲಿಸುವಿರೋ ಅಂದೇ ನಿಮಗೆ ವಯಸ್ಸಾಗುತ್ತದೆʼ ಎಂದು. ಹೀಗಾಗಿಯೇ ಇಂದಿಗೂ ಯುವಜನತೆಯನ್ನೂ ನಾಚಿಸುವಷ್ಟು ಉತ್ಸಾಹ (Enthusiasm) ಅವರದ್ದು.
ಸುಧಾ ಮೂರ್ತಿ ಪೋಷಕರಿಗೆ ಹೇಳುವ ಕಿವಿ ಮಾತು
• ಹಣದ ಹೊರತಾಗಿ ಯೋಚಿಸಿ (Think Beyond Money)
ಸುಧಾ ಮೂರ್ತಿ ಅವರು ಹಣವೊಂದನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಎಂದಿಗೂ ಕೆಲಸ ಮಾಡಿಲ್ಲ. ಒಮ್ಮೆ ಸಂದರ್ಶನದಲ್ಲಿ ಅವರು “ಹಣ ಗಳಿಸುವ ಮೂಲಕ ಅತ್ಯದ್ಭುತ ಸಾಧನೆ ಮಾಡಬಹುದು ಎನ್ನುವ ಭಾವನೆಯನ್ನು ಪಾಲಕರು ಮಕ್ಕಳಲ್ಲಿ ತುಂಬಬೇಡಿ. ಹಣವೇ ಜೀವನದಲ್ಲಿ ಅತ್ಯಂತ ಮೌಲ್ಯವುಳ್ಳದ್ದು ಎಂದು ಹೇಳಬೇಡಿʼ ಎಂದು ಹೇಳಿದ್ದರು. ಸಾಮಾಜಿಕ ಸ್ಥಾನಮಾನ (Social Status) ಗಳಿಸಲು ಹಣವೊಂದರಿಂದಲೇ ಸಾಧ್ಯ ಎನ್ನುವ ಭಾವನೆಯಿಂದ ದೂರವಿರುವಂತೆ ತಿಳಿಸಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.