
ತ್ವಚೆಯ ಆರೈಕೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ವಿಟಮಿನ್ ಸಿಯನ್ನು ಖಂಡಿತವಾಗಿಯೂ ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಅತ್ಯುತ್ತಮ ತ್ವಚೆ ಉತ್ಪನ್ನಗಳಲ್ಲಿ ಒಂದೆಂದು ಹೆಸರಿಸಲಾಗಿರುವ ಈ ಸಿರಮ್ ನಯವಾದ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ. ಆಹಾರದಲ್ಲಿ ವಿಟಮಿನ್ ಸಿ ಪ್ರಮಾಣವನ್ನು ಅದೆಷ್ಟೇ ಹೆಚ್ಚಿಸಿದರೂ ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವಿಟಮಿನ್ ಸಿ ಸಿರಮ್‌ನ ನೇರ ಬಳಕೆಯಿಂದ ಮಾತ್ರ ತ್ವಚೆಯ ಮೇಲೆ ನೀವು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಜನರು ತಮ್ಮ ತ್ವಚೆಯ ರಕ್ಷಣೆಯನ್ನು ಮಾಡಲು ಅತ್ಯುತ್ತಮ ಪದಾರ್ಥಗಳನ್ನು ಬಳಸಲು ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ನಮ್ಮ ಜ್ಞಾನದ ಕೊರತೆಯು ನಮ್ಮ ಚರ್ಮಕ್ಕೆ (Skin) ಹಾನಿಯಾಗಲು ಕಾರಣವಾಗಬಹುದು ಎಂದು ನಾವು ತಿಳಿದಿರುವುದಿಲ್ಲ. ವಿಟಮಿನ್ ಸಿ ನಮ್ಮ ತ್ವಚೆಗೆ ಬಳಸುವಾಗ ಪ್ರತಿ ಬಾರಿಯೂ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ಇದನ್ನು ಕೆಲವೊಂದು ಉತ್ಪನ್ನಗಳ (Product) ಜೊತೆ ಮಿಕ್ಸ್ ಮಾಡುವುದು ಹಾನಿಕಾರಿಯಾಗಿ (Problem) ಪರಿಣಮಿಸಬಹುದು. ವಿಟಮಿನ್ ಸಿ ಸಿರಮ್‌ನ ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲಿದೆ.
ಪರ್ಫ್ಯೂಮ್ ಹಚ್ಕೊಳ್ಳೋಕೆ ಇಷ್ಟವಿಲ್ವಾ ? ಈ ಸುಗಂಧಭರಿತ ಎಣ್ಣೆ ಹಚ್ಕೊಳ್ಳಿ ಸಾಕು
ವಿಟಮಿನ್ ಸಿ ಸಿರಮ್‌ನೊಂದಿಗೆ ಯಾವ ಉತ್ಪನ್ನ ಬಳಸಬಾರದು
1. ವಿಟಮಿನ್ ಸಿ ಸಿರಮ್‌ನೊಂದಿಗೆ ಸನ್‌ಸ್ಕ್ರೀನ್ ಬಳಸುವುದನ್ನು ತಪ್ಪಿಸಿ: ವಿಟಮಿನ್ ಸಿಯೊಂದಿಗೆ ಮಿಶ್ರಣ ಮಾಡಬಾರದ ಮೊದಲ ವಿಷಯವೆಂದರೆ ಸನ್‌ಸ್ಕ್ರೀನ್. ವಿಶೇಷವಾಗಿ ರಾಸಾಯನಿಕ ಸನ್‌ಸ್ಕ್ರೀನ್ ಏಜೆಂಟ್‌ಗಳು, ವಿಟಮಿನ್ ಸಿಯೊಂದಿಗೆ ಸೇರಿಸುವುದು ಒಳ್ಳೆಯದಲ್ಲ. ಇವು ಆಕ್ಸಿಡೇಟಿವ್ ಆಗಿರುವ ಸಂಯುಕ್ತಗಳನ್ನು ರಚಿಸಿ ಚರ್ಮಕ್ಕೆ ಹಾನಿಯನ್ನುಂಟು ಮಾಡಬಹುದು. ಹೆಚ್ಚು ಆಕ್ಸಿಡೇಟಿವ್ ತ್ವಚೆಗೆ ಹೆಚ್ಚು ಹಾನಿಯುಂಟು ಮಾಡುತ್ತದೆ.
2. ಫೆರಿಕ್ ಆಕ್ಸೈಡ್ ನ್ನು ವಿಟಮಿನ್ ಸಿಯೊಂದಿಗೆ ಬೆರೆಸಬಾರದು: ವಿಟಮಿನ್ ಸಿ ಸಿರಮ್‌ನೊಂದಿಗೆ ಫೆರಸ್ ಅಥವಾ ಫೆರಿಕ್ ಆಕ್ಸೈಡ್ ಅಂಶ ಹೊಂದಿರುವ ನಿಮ್ಮ ಬಿಬಿ ಕ್ರೀಮ್ ಪದಾರ್ಥಗಳಾಗಿವೆ. ಈ ಪದಾರ್ಥಗಳು ವಿಟಮಿನ್ ಸಿ ನೊಂದಿಗೆ ಸೇರಿಕೊಂಡು ನಿಮ್ಮ ಚರ್ಮಕ್ಕೆ ಸಮಸ್ಯಾತ್ಮಕವಾಗಿರುವ ಲವಣಗಳಾಗುತ್ತವೆ. ಆದ್ದರಿಂದ, ವಿಟಮಿನ್ ಸಿ ಸಿರಮ್ ಅನ್ನು ಸರಿಯಾದ ರೀತಿಯಲ್ಲಿ ಹೇಗೆ ಬಳಸುವುದು ಎಂದು ತಿಳಿದುಕೊಳ್ಳುವುದು ನಿಮಗೆ ಮುಖ್ಯವಾಗಿದೆ.
3. ವಿಟಮಿನ್ ಸಿ ಜೊತೆಗೆ ರೆಟಿನಾಲ್ ಬಳಸಬಾರದು: ವಿಟಮಿನ್ ಸಿಯನ್ನು ರೆಟಿನಾಲ್‌ನೊಂದಿಗೆ ಸಂಯೋಜಿಸುವುದರಿಂದ ನೀವು ದೂರವಿರಬೇಕು. ಯಾಕೆಂದರೆ ವಿಟಮಿನ್ ಸಿ ಸುಮಾರು 3ರ pH ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ರೆಟಿನಾಲ್ ಸುಮಾರು 5ರಿಂದ 5.5 ರ pH ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ಈ ಎರಡೂ ಪದಾರ್ಥಗಳು ಚರ್ಮದ ಮೇಲೆ ಆರಾಮವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
Fashion Tips : ಹೀಲ್ಸ್ ಧರಿಸಿದ್ರೆ ಪಾದದಲ್ಲಿ ಸೆಳೆತ ಕಾಣಿಸಿಕೊಳ್ಳುತ್ತಾ?
4. ಹೈಲುರಾನಿಕ್ ಆಮ್ಲ, ವಿಟಮಿನ್ ಸಿ ಜೊತೆ ಬಳಸಬಾರದು: ಹೈಲುರಾನಿಕ್ ಆಮ್ಲಕ್ಕೆ 5 ಮತ್ತು ಅದಕ್ಕಿಂತ ಹೆಚ್ಚಿನ pH ಅಗತ್ಯವಿರುತ್ತದೆ. ಹೀಗಾಗಿ ಇದನ್ನು ವಿಟಮಿನ್ ಸಿ ಜೊತೆ ಸಂಯೋಜಿಸಲು ಸಾಧ್ಯವಾಗುವುದಿಲ್ಲ. ಈ ಎರಡೂ ಪದಾರ್ಥಗಳು ಒಂದಕ್ಕೊಂದು ಪ್ರಯೋಜನಕಾರಿಯಾಗುವುದಿಲ್ಲ, ಆದ್ದರಿಂದ ಅವುಗಳನ್ನು ಸಂಯೋಜಿಸದಿರುವುದು ಉತ್ತಮ.
ವಿಟಮಿನ್ ಸಿ ಸೀರಮ್‌ನೊಂದಿಗೆ ಯಾವ ಉತ್ಪನ್ನಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ?
ವಿಟಮಿನ್ ಸಿ ಅನ್ನು ಸ್ಥಿರಗೊಳಿಸಲು ಫೆರುಲಿಕ್ ಆಮ್ಲ, ವಿಟಮಿನ್ ಇ, ಲ್ಯಾಕ್ಟಿಕ್ ಆಮ್ಲ ಅಥವಾ ಗ್ಲೈಕೋಲಿಕ್ ಆಮ್ಲದೊಂದಿಗೆ ಉತ್ತಮವಾಗಿ ಸಂಯೋಜಿಸಲಾಗಿದೆ. ಉತ್ತಮ ಫಲಿತಾಂಶಗಳಿಗಾಗಿ ನಿಮ್ಮ pH ಮಟ್ಟವು 3-3.5 ರಷ್ಟಿರಬೇಕು ಎಂಬುದನ್ನು ಯಾವಾಗಲೂ ನೆನಪಿಡಿ. ಈ ಸಂಯೋಜನೆಗಳು ಚರ್ಮದ ಸಮಸ್ಯೆಗಳಾದ ಮಂದತೆ ಅಥವಾ ಪಿಗ್ಮೆಂಟೇಶನ್‌ನಲ್ಲಿ ಅದ್ಭುತಗಳನ್ನು ಮಾಡಬಹುದು. ನಿಮ್ಮ ತ್ವಚೆಯ ಉತ್ತಮ ಆರೈಕೆಗಾಗಿ ಸೂಕ್ತವಾದ ರೀತಿಯಲ್ಲಿ ವಿಟಮಿನ್ ಸಿ ಬಳಸೋದನ್ನು ಮರೆಯದಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.