Kitchen Tricks : ಹಸಿವಾದಾಗ ಫಟಾಫಟ್ ಅಡುಗೆಯಾಗ್ಬೇಕೆಂದ್ರೆ ಇಲ್ಲಿದೆ ಉಪಾಯ

By Suvarna News  |  First Published Feb 26, 2022, 3:51 PM IST

ಅಡುಗೆ ಮಾಡುವುದು ಒಂದು ಕಲೆ. ಕೆಲವರು 10 ನಿಮಿಷದಲ್ಲಿ ನಾಲ್ಕೈದು ವೆರೈಟಿ ಅಡುಗೆ ಮಾಡಿರ್ತಾರೆ. ಮತ್ತೆ ಕೆಲವರು ಗಂಟೆಗಟ್ಟಲೆ ಅಡುಗೆ ಮನೆಯಲ್ಲಿ ಕಳೆದ್ರೂ 2 ವೆರೈಟಿ ಸಿದ್ಧವಾಗಿರುವುದಿಲ್ಲ. ಬೇಗ ಬೇಗ ಅಡುಗೆ ಮಾಡ್ಬೇಕೆಂದ್ರೆ ಕೆಲವೊಂದು ಟಿಪ್ಸ್ ಪಾಲಿಸಬೇಕು.


ಹಸಿವು (Hunger) ತಾಳ್ಮೆಯನ್ನು ಕಸಿದುಕೊಳ್ಳುತ್ತದೆ. ಹಸಿವನ್ನು ತಡೆಯುವುದು ಬಹಳ ಕಷ್ಟ. ದೊಡ್ಡವರಾಗಿರಲಿ ಇಲ್ಲ ಚಿಕ್ಕ ಮಕ್ಕಳಾಗಿರಲಿ ಹಸಿವಾದಾಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಅನೇಕ ಬಾರಿ ಹೊಟ್ಟೆ (Stomach) ಚುರ್ ಗುಡುತ್ತಿರುತ್ತದೆ. ಆದ್ರೆ ಅಡುಗೆ ಸಿದ್ಧವಾಗಿರುವುದಿಲ್ಲ. ಒಂದು ಕಡೆ ಮಕ್ಕಳು ಹಸಿವು ಎನ್ನುತ್ತಿದ್ದರೆ ಇನ್ನೊಂದು ಕಡೆ ದೊಡ್ಡವರು ಅತ್ತಿಂದಿತ್ತ ಓಡಾಡುತ್ತಿರುತ್ತಾರೆ. ಫಟಾ ಫಟ್ ಅಂತ ಅಡುಗೆ ಮಾಡುವುದು ಹೇಗೆ ಎಂಬ ಟೆನ್ಷನ್ ಮಹಿಳೆಯರನ್ನು ಕಾಡುತ್ತದೆ. ಟೆನ್ಷನ್ (Tension)ನಲ್ಲಿ ಮಾಡುವ ಕೆಲಸ ಸರಿಯಾಗದೆ ಯಡವಟ್ಟಾಗುತ್ತದೆ. ಇದ್ರಿಂದ ಅಡುಗೆ ಸಿದ್ಧವಾಗುವುದು ಮತ್ತಷ್ಟು ವಿಳಂಬವಾಗುತ್ತದೆ. ಸಮಯವನ್ನು ಉಳಿಸಲು ಮತ್ತು ಅಡುಗೆಯನ್ನು ಸುಲಭವಾಗಿ ಮಾಡಲು ಇಲ್ಲಿವೆ ಟಿಪ್ಸ್..

ಕಡಿಮೆ ಸಮಯದಲ್ಲಿ ಅಚ್ಚುಕಟ್ಟಾಗಿ ಅಡುಗೆ ಮಾಡೋದು ಹೇಗೆ? 
ಆಹಾರವನ್ನು ಮುಚ್ಚಿಡಿ : ಆಲೂಗಡ್ಡೆ ಅಥವಾ ಯಾವುದೇ ಬೇಳೆ, ತರಕಾರಿಯನ್ನು ನೀವು ಬೇಯಿಸುತ್ತಿದ್ದರೆ ಅದನ್ನು ಮುಚ್ಚಿ ಬೇಯಿಸಿ. ಇದ್ರಿಂದ ತರಕಾರಿ ಬೇಗ ಬೇಯುತ್ತದೆ. ಇದ್ರಿಂದ ಸಮಯ ಉಳಿಯುತ್ತದೆ. ಮುಚ್ಚಿಡುವುದರಿಂದ ತರಕಾರಿಗಳಲ್ಲಿರುವ ಪೋಷಕಾಂಶಗಳು ಹಾಗೇ ಇರುತ್ತವೆ. ಆರೋಗ್ಯಕರ ಆಹಾರ ನಿಮ್ಮ ಹೊಟ್ಟೆ ಸೇರುತ್ತದೆ.   

Tap to resize

Latest Videos

FASHION TIPS : ನಿಮ್ಮ ವಾರ್ಡ್ರೋಬ್ ನಲ್ಲೂ ಇರಲಿ ವೆರೈಟಿ ಬಳೆಗಳು

ಎಲ್ಲ ಮಸಾಲೆಗಳನ್ನು ಮುಂಚಿತವಾಗಿಯೇ ತೆಗೆದಿಡಿ : ಅಡುಗೆ ಮಾಡುವಾಗ ಮಸಾಲೆಗಳನ್ನು ಹುಡುಕುವುದಕ್ಕಿಂತ ಮುಂಚಿತವಾಗಿ ಎಲ್ಲ ಮಸಾಲೆಗಳನ್ನು ಒಂದೇ ಸ್ಥಳದಲ್ಲಿ ಇಡುವುದು ಉತ್ತಮ. ಇದರಿಂದ ಅಡುಗೆ ಮಾಡುವಾಗ ಒಂದೊಂದೇ ಮಸಾಲೆ ಹುಡುಕುವ ಪ್ರಮೇಯ ಇರುವುದಿಲ್ಲ. ಒಂದು ಮಸಾಲೆ ಹಾಕಿ ಇನ್ನೊಂದು ಮಸಾಲೆ ಹುಡುಕುವ ವೇಳೆ ಒಲೆಯ ಮೇಲಿರುವ ಪದಾರ್ಥ ಕರಕಲಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಆಹಾರವನ್ನು ಸುಲಭವಾಗಿ ತಯಾರಿಸಲು ಮತ್ತು ರುಚಿ ಹೆಚ್ಚಿಸಲು ಮೊದಲೇ ಸಿದ್ಧತೆ ಮಾಡಿಕೊಳ್ಳಿ. 

ಅಕ್ಕಿ ಮತ್ತು ಬೇಳೆಯನ್ನು ನೆನೆಹಾಕಿ : ಅನ್ನ ತಯಾರಿಸುವ ಮೊದಲು ಅಥವಾ ಬೇಳೆಗೆ ಸಂಬಂಧಿಸಿದ ಯಾವುದೇ ಅಡುಗೆ ಮಾಡುವ ಮೊದಲು ಅದನ್ನು ನೆನೆ ಹಾಕಿ. ಸ್ವಲ್ಪಹೊತ್ತು ಬೇಳೆಯನ್ನು ನೆನೆಹಾಕಿ ನಂತರ ಬೇಯಿಸಿದ್ರೆ ಅದು ಬೇಗ ಬೇಯುತ್ತದೆ. ಅನೇಕ ಬಾರಿ ಬೇಳೆ ಸರಿಯಾಗಿ ಕರಗದೆ ಹೋದ್ರೆ ರುಚಿ ಚೆನ್ನಾಗಿರುವುದಿಲ್ಲ.   

ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ : ತರಕಾರಿಗಳನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿದ್ರೆ ಬೇಯಲು ಸಮಯ ತೆಗೆದುಕೊಳ್ಳುತ್ತದೆ. ಸಣ್ಣ ತುಂಡುಗಳಾಗಿ ಕತ್ತರಿಸಿದರೆ ವೇಗವಾಗಿ ಬೇಯುತ್ತದೆ. ಇದರಿಂದ ನಿಮ್ಮ ಸಮಯವೂ ಉಳಿತಾಯವಾಗುತ್ತದೆ.  

ಬೆಣ್ಣೆಯನ್ನು ತುರಿ ಮಾಡಿ: ಬೆಣ್ಣೆಯನ್ನು ಕರಗಿಸಲು, ಅದನ್ನು ಬಿಸಿ ಮಾಡುವ ಬದಲು ನುಣ್ಣಗೆ ತುರಿ ಮಾಡಿ. ಇದು ತ್ವರಿತವಾಗಿ ಕರಗುತ್ತದೆ ಮತ್ತು ನಿಮ್ಮ ಸಮಯವನ್ನು ಉಳಿಸುತ್ತದೆ.   

ಧಾನ್ಯಗಳನ್ನು ನೆನೆಸುವಾಗ ಅಡಿಗೆ ಸೋಡಾ ಸೇರಿಸಿ : ಯಾವುದೇ ಧಾನ್ಯಗಳನ್ನು ನೆನೆಸುವಾಗ, ಅದಕ್ಕೆ ಅಡಿಗೆ ಸೋಡಾವನ್ನು ಸೇರಿಸಿ, ಇದು ಬೇಯಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಸರಿಯಾಗಿ ಬೇಯುತ್ತವೆ.

ಕುಕ್ಕರ್ ಇದ್ದರೆ ಕೆಲಸ ಸುಲಭ : ಯಾವುದೇ ತರಕಾರಿ ಅಥವಾ ದಾಲ್ ಮಾಡಲು ಪ್ರೆಶರ್ ಕುಕ್ಕರ್ ಬಳಸಿ. ಪ್ರೆಶರ್ ಕುಕ್ಕರ್‌ನಲ್ಲಿ ತರಕಾರಿ, ಬೇಳೆ ತ್ವರಿತವಾಗಿ ಬೇಯುತ್ತದೆ. ಅನೇಕ ಬಾರಿ ಪಲ್ಯೆಯನ್ನು ಮಾಡಲು ಕೂಡ ನೀವು ಕುಕ್ಕರ್ ಬಳಸಬಹುದು. ಇದು ಸಮಯವನ್ನು ಉಳಿಸುವ ಜೊತೆಗೆ ಗ್ಯಾಸ್ ಕೂಡ ಉಳಿಸುತ್ತದೆ. ಅನೇಕರು ತರಕಾರಿ, ಬೇಳೆ, ಮಸಾಲೆಯನ್ನು ಹಾಕಿ ಕುಕ್ಕರ್ ಕೂಗಿಸಿ ಸಾಂಬಾರ್ ಮಾಡ್ತಾರೆ. ಇದು ರುಚಿ ಹೆಚ್ಚಿಸುವ ಜೊತೆಗೆ ಕಡಿಮೆ ಸಮಯದಲ್ಲಿ ಅಡುಗೆ ಸಿದ್ಧಪಡಿಸಲು ನೆರವಾಗುತ್ತದೆ.

Inspiring woman: ಇದು ಸೀರೆಯುಟ್ಟವಳ ಸಿಕ್ಸ್ ಪ್ಯಾಕ್ ಕಥೆ!

ರೈಸ್ ಬಾತ್ : ತುಂಬಾ ಹಸಿವಾಗಿದೆ, ತುಂಬಾ ಅಡುಗೆ ಮಾಡಲು ಸಮಯವಿಲ್ಲವೆಂದಾಗ ನೀವು ರೈಸ್ ಬಾತ್ ಆಯ್ಕೆ ಮಾಡಿಕೊಳ್ಳಬಹುದು. ತರಕಾರಿಗಳನ್ನು ಹಾಕಿ, ಒಗ್ಗರಣೆ ನೀಡಿ ಅದಕ್ಕೇ ಅಕ್ಕಿ ಹಾಕಿ ಕುಕ್ಕರ್ ಕೂಗಿಸಿದ್ರೆ ಕೆಲವೇ ನಿಮಿಷದಲ್ಲಿ ನಿಮ್ಮ ಅಡುಗೆ ಸಿದ್ಧವಾಗುತ್ತದೆ. 

click me!