ಮಹಿಳೆಯ ಮೂಗಿನಲ್ಲಿತ್ತು ಭರ್ತಿ 150 ನೊಣ, ವೈದ್ಯರಿಗೇ ಶಾಕ್ !

Published : Aug 27, 2022, 08:36 AM ISTUpdated : Aug 27, 2022, 08:39 AM IST
ಮಹಿಳೆಯ ಮೂಗಿನಲ್ಲಿತ್ತು ಭರ್ತಿ 150 ನೊಣ, ವೈದ್ಯರಿಗೇ ಶಾಕ್ !

ಸಾರಾಂಶ

ಮೂಗಿನೊಳಗೆ ಸಣ್ಣಗೆ ಏನೋ ಧೂಳು, ಕಸ ಹೋದ್ರೂ ಸಾಕು ನಮ್ಗೆ ಸಹಿಸೋಕಾಗಲ್ಲ. ಆದ್ರೆ ಇಲ್ಲೊಬ್ಬ ಮಹಿಳೆಯ ಮೂಗಿನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 150 ನೊಣ ಬೆಚ್ಚಗೆ ಮಲಗಿತ್ತು. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರೇ ಇದನ್ನು ನೋಡಿ ದಂಗಾಗಿದ್ದಾರೆ. 

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಗೃಹಿಣಿಯ ಮೂಗಿನಲ್ಲಿ 150 ಲಾರ್ವಾಗಳು ಸೇರಿಕೊಂಡಿದ್ದವು. ಮೂಗಿನೊಳಗೆ ಸೇರಿಕೊಂಡಿರುವ ನೊಣಗಳಿಂದ ಮಹಿಳೆ ಬಹುತೇಕ ಕೋಮಾ ಸ್ಥಿತಿಗೆ ಜಾರಿದ್ದರು ಎನ್ನಲಾಗುತ್ತಿದ್ದು, ವೈದ್ಯರು ಸಾಕಷ್ಟು ಕಠಿಣ ಪರಿಶ್ರಮದಿಂದ ಆಕೆಯನ್ನ ರಕ್ಷಿಸಿದ್ದಾರೆ. ಹೈದರಾಬಾದ್​ನ ಸೆಂಚುರಿ ಆಸ್ಪತ್ರೆಯ ವೈದ್ಯರು ಗೃಹಿಣಿಯಾಗಿರುವ 50 ವರ್ಷದ ರೋಗಿಯನ್ನು ಶಸ್ತ್ರಚಿಕಿತ್ಸೆ ಮೂಲಕ ರಕ್ಷಿಸಿದ್ದಾರೆ.  ಸ್ಕಲ್ ಬೇಸ್ ಸರ್ಜನ್ ಡಾ.ಜಾನಕಿರಾಮ್ ನೇತೃತ್ವದ ತಜ್ಞರ ತಂಡವು ಮಹಿಳೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದು ಈ ಪ್ರಕರಣವನ್ನು ಅಪರೂಪದದಲ್ಲಿ ಅಪರೂಪ ಎಂದೇ ಹೇಳಲಾಗಿದೆ.

ಆರು ತಿಂಗಳ ಹಿಂದೆ ಕಪ್ಪು ಶಿಲೀಂಧ್ರ ಸೋಂಕು ತಗುಲಿತ್ತು
50 ವರ್ಷದ ಮಹಿಳೆಗೆ (Woman) ಆರು ತಿಂಗಳ ಹಿಂದೆ ಮ್ಯೂಕೋರ್ಮೈಕೋಸಿಸ್ ಸೋಂಕು ತಗುಲಿತ್ತು. ಇದನ್ನ ಕಪ್ಪು ಶಿಲೀಂಧ್ರ ಎಂದು ಸಹ ಕರೆಯಲಾಗುತ್ತದೆ. ಸೋಂಕು ಮೆದುಳಿನ ಭಾಗಕ್ಕೆ ಹರಡಿದ್ದರಿಂದ ಬಲಗಣ್ಣನ್ನು ತೆಗೆದುಹಾಕಬೇಕಾಯಿತು. ಕೊರೊನಾ ಸೋಂಕಿನಿಂದಾಗಿ ಮೂತ್ರಪಿಂಡದ ಕಾರ್ಯವೂ ನಿಧಾನಗೊಂಡಿತ್ತು. ನಂತರದ ದಿನಗಳಲ್ಲಿ ಆಕೆಗೆ ಆರೋಗ್ಯ ಸಮಸ್ಯೆ (Health problem) ಕಾಣಿಸಿಕೊಂಡಿದೆ. ಮಧುಮೇಹ (Diabetes)ದಿಂದ ಆರೋಗ್ಯ ಹದಗೆಟ್ಟಿದೆ. ದೇಹದ ಭಾಗಗಳಲ್ಲಿ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಕುಟುಂಬ ಸದಸ್ಯರು ಭಯಭೀತರಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಂತಿಮವಾಗಿ ಅವರನ್ನು ಹೈದರಾಬಾದ್‌ನ ಸೆಂಚುರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಗೆ ದಾಖಲಾದಾಗ ಅವರು ಅರೆ ಕೋಮಾ ಹಂತದಲ್ಲಿದ್ದರು. 

ಸಲಿಂಗಕಾಮಿ ವ್ಯಕ್ತಿಗೆ ಮಂಕಿಪಾಕ್ಸ್, ಕೋವಿಡ್ -19 ಮತ್ತು ಎಚ್ಐವಿ ಎಲ್ಲ ಒಟ್ಟಿಗೆ ಬಂದಿದೆಯಂತೆ..!

ಶಸ್ತ್ರಚಿಕಿತ್ಸೆ ನಡೆಸಿ ನೊಣಗಳ ಲಾರ್ವಾ ಹೊರತೆಗೆದ ವೈದ್ಯರು
ಮಹಿಳೆ ಅಸ್ವಸ್ಥರಾಗಿರುವುದನ್ನು ಗಮನಿಸಿ ವೈದ್ಯರು ವಿವಿಧ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು. ಪರೀಕ್ಷಾ ವರದಿಯಲ್ಲಿ ಆಕೆಯ ಮೆದುಳಿನ ಬಳಿ ನೊಣಗಳು ಕಂಡುಬಂದವು. ಮೆದುಳಿನ ಕೆಳಭಾಗದಲ್ಲಿ ಸುಮಾರು 150 ನೊಣಗಳು ಇರುವುದನ್ನು ವೈದ್ಯರು ಪತ್ತೆ ಹಚ್ಚಿದರು. ಸೆಂಚುರಿ ಆಸ್ಪತ್ರೆಯ ತಲೆಬುರುಡೆ ಶಸ್ತ್ರಚಿಕಿತ್ಸಕ ಮತ್ತು ಹಿರಿಯ ಇಎನ್ಟಿ ಸಲಹೆಗಾರ ಡಾ.ನಾರಾಯಣನ್ ಜಾನಕಿರಾಮ್ ಅವರ ತಂಡ ಶಸ್ತ್ರಚಿಕಿತ್ಸೆ (Operation) ನಡೆಸಿ ನೊಣಗಳ ಲಾರ್ವಾಗಳನ್ನ ತೆಗೆದುಹಾಕಿದರು. ಸಾಮಾನ್ಯ ವೈದ್ಯರು ಮತ್ತು ಮೂತ್ರಪಿಂಡಶಾಸ್ತ್ರಜ್ಞರ ತಂಡವು ಆಕೆಯ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿತ್ತು. ಇತ್ತ ನಾವು ಏಕಕಾಲದಲ್ಲಿ ಹುಳುಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೆವು ಎಂದು ಡಾ.ಜಾನಕಿರಾಮ್ ಹೇಳಿದರು

ಲಾರ್ವಾಗಳಿಂದ ಮೆದುಳಿಗೂ ಹಾನಿಯಾಗುವ ಸಾಧ್ಯತೆಯಿತ್ತು
ಮಹಿಳೆಯ ಮೆದುಳಿಗೆ ಹತ್ತಿರವಿರುವ ಮುಖದ ಮೂಳೆಗಳು ಸಂಪೂರ್ಣವಾಗಿ ಸೋಂಕಿಗೆ ಒಳಗಾಗಿದ್ದವು. ನೊಣಗಳು ಮೂಗಿಗೆ ನುಗ್ಗಿ ಮೊಟ್ಟೆಯಿಟ್ಟಿದ್ದವು. ಮೊಟ್ಟೆಗಳು ಒಡೆದು ಲಾರ್ವಾಗಳಾಗಿ ಮಾರ್ಪಟ್ಟಿದ್ದವು. ಇದನ್ನು ಮ್ಯಾಗೊಟ್ ಎಂದೂ ಕರೆಯುತ್ತಾರೆ. ಇಂತಹ ಲಾರ್ವಾಗಳು ಮೆದುಳಿಗೆ ಪ್ರವೇಶಿಸಿ ಹಾನಿಯನ್ನು ಉಂಟುಮಾಡಬಹುದು ಎಂದು ವೈದ್ಯರು ವಿವರಿಸಿದರು.

ಕಣ್ಣುಗಳಲ್ಲಿ ಈ ಬದಲಾವಣೆ ಕಂಡ್ರೆ ಕಬ್ಬಿಣಾಂಶದ ಕೊರತೆ ಇದೆ ಎಂದರ್ಥ

ಇನ್ನು ಸೆಂಚುರಿ ಆಸ್ಪತ್ರೆಯ ಸಿಇಒ ಡಾ.ಹೇಮಂತ್ ಕೌಕುಂಟ್ಲಾ, ಫ್ಲೀ ಲಾರ್ವಾಗಳು ಮೂಲ ಮೆದುಳಿಗೆ ಹೇಗೆ ಹತ್ತಿರವಾದವು ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ, ಸೊಳ್ಳೆ ಅಥವಾ ನೊಣವನ್ನು ನಾವು ಅನುಭವಿಸುತ್ತೇವೆ. ತಕ್ಷಣವೇ ತೊಡೆದುಹಾಕಲು ಪ್ರಯತ್ನಿಸುತ್ತೇವೆ. ಆದರೆ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂಧ್ರ) (ಮ್ಯೂಕೋರ್ಮೈಕೋಸಿಸ್) ನಿಂದಾಗಿ ರೋಗಿಗೆ ಸ್ಪರ್ಷ ಜ್ಞಾನ ಸಂಪೂರ್ಣವಾಗಿ ಕಳೆದುಕೊಂಡಿದ್ದು, ಮನೆಯಲ್ಲಿ ಮಲಗಿದ್ದಾಗ, ನೊಣಗಳು ತಮ್ಮ ಮೂಗಿನಿಂದ ಒಳಕ್ಕೆ ಹೋದವು.

ಮೂಗಿನ ಒಳಗೆ ಮೊಟ್ಟೆಗಳನ್ನ ಇಡುತ್ತಿದ್ದಂತೆ ಅವು ಹೊರಬಂದು ಲಾರ್ವಾಗಳಾಗಿ ಮಾರ್ಪಟ್ಟವು. ಇವುಗಳನ್ನ ಮ್ಯಾಗ್ಗೋಟ್ಗಳು ಎಂದು ಕರೆಯಲಾಗುತ್ತದೆ. ಅವು ನಿಧಾನವಾಗಿ ಮೆದುಳನ್ನ ಪ್ರವೇಶಿಸಿ, ಮೆನಿಂಜೈಟಿಸ್‌ಗೆ ಕಾರಣವಾಗುತ್ತವೆ. ನಂತರ ಮೆದುಳು ಮತ್ತು ಬೆನ್ನು ಹುರಿಯ ಮೇಲಿನ ತೆಳುವಾದ ಪದರದಲ್ಲಿ ಕ್ರಮೇಣ ಊತ ಉಂಟಾಗುತ್ತದೆ. ಇದು ಉಲ್ಬಣಗೊಂಡರೆ, ಅವರು ಕೋಮಾಗೆ ಹೋಗುತ್ತಾರೆ ಎಂದು ವೈದ್ಯರು ವಿವರಿಸಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದ್ವೆ ಆಗದಿದ್ರೂ ಕನ್ಯೆ ಅಲ್ಲ, ಫುಲ್​ ತೃಪ್ತಳು: ಎಲ್ಲಾ ರಹಸ್ಯ ತೆರೆದಿಟ್ಟು ಸಂಚಲನ ಮೂಡಿಸಿದ ಬಾಲಿವುಡ್​ 'ಅಮ್ಮಾ'​
ಹಾವು-ಮುಂಗುಸಿಯಂತಿದ್ದ ನಯನತಾರಾ-ತ್ರಿಷಾ ಕೃಷ್ಣನ್ ಬೀಚ್‌ನಲ್ಲಿ ಸುತ್ತಾಟ.. ಈ ಶತ್ರುಗಳು ಸ್ನೇಹಿತರಾಗಿದ್ದು ಹೇಗೆ?