ಮದುವೆ ಎಂಬುದು ನಂಬಿಕೆ ಮೇಲೆ ನಿಂತಿದೆ. ಪ್ರೀತಿಸುವ ಪತಿ ಮೋಸ ಮಾಡುವುದಿಲ್ಲ ಎಂಬ ಭರವಸೆಯಲ್ಲಿ ಪತ್ನಿಯಿರ್ತಾಳೆ. ಆದ್ರೆ ಆಕೆಗೆ ದ್ರೋಗ ಬಗೆದ ಪತಿಯನ್ನು ಕ್ಷಮಿಸುವುದು ಸುಲಭವಲ್ಲ. ಪತಿಯ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಂಡು, ಆತನ ಜೊತೆ ಜೀವನ ನಡೆಸಲು ಇನ್ನಿಲ್ಲದ ತಾಳ್ಮೆ ಬೇಕು.
ಹಿಂದೂ ಧರ್ಮ (Hinduism)ದಲ್ಲಿ ಮದುವೆ (Marriage)ಗೆ ಮಹತ್ವದ ಸ್ಥಾನವಿದೆ. ಸಪ್ತಪದಿ ತುಳಿಯುವ ಜೋಡಿ ನೂರಾರು ವರ್ಷ ಜೊತೆಗಿರ್ತೇವೆಂದು ಪ್ರಮಾಣ ಮಾಡ್ತಾರೆ. ವಿವಾಹದಲ್ಲಿ ಆಣೆ ಮಾಡಿದ್ದು ಆ ನಂತ್ರ ಅನೇಕರಿಗೆ ಮರೆತು ಹೋಗುತ್ತದೆ. ಸಂಬಂಧದಲ್ಲಿ ರುಚಿ ಕಡಿಮೆಯಾಗ್ತಿದ್ದಂತೆ ಸಂಗಾತಿಗೆ ಮೋಸ ಮಾಡಲು ಶುರು ಮಾಡುವವರು ಅನೇಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚು ವರದಿಯಾಗ್ತಿವೆ. ಮದುವೆಯಾದ್ಮೇಲೆ ಎಲ್ಲವನ್ನೂ ಸಹಿಸಿಕೊಳ್ಳಬೇಕೆಂಬ ನಿಯಮವೇನಿಲ್ಲ. ದಾಂಪತ್ಯದಲ್ಲಿ ಸುಖವಿಲ್ಲ,ನೆಮ್ಮದಿಯಿಲ್ಲ,ಇನ್ನು ಒಂದಾಗಿ ಬಾಳುವುದ್ರಲ್ಲಿ ಅರ್ಥವಿಲ್ಲ ಎನ್ನುವವರು ವಿಚ್ಛೇದನದ ನಿರ್ಧಾರ ಕೈಗೊಳ್ಳುತ್ತಾರೆ. ಆದ್ರೆ ಕೆಲ ಮಹಿಳೆಯರು ಮುಂದಿನ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ,ವಿಚ್ಛೇದನಕ್ಕೆ ಹಿಂದೇಟು ಹಾಕ್ತಾರೆ. ಇನ್ನು ಕೆಲ ಮಹಿಳೆಯರು ಪತಿಯನ್ನು ಅತಿಯಾಗಿ ಪ್ರೀತಿ ಮಾಡ್ತಿದ್ದು, ಆತನ ಎಲ್ಲ ಕೆಟ್ಟ ಕೆಲಸವನ್ನು ಕ್ಷಮಿಸುತ್ತ ಬರ್ತಾರೆ. ಇಂಥ ಮಹಿಳೆಯೊಬ್ಬಳ ಕಥೆಯನ್ನು ಆಕೆ ಪತಿ ಹೇಳಿದ್ದಾನೆ.
ಮಹಿಳೆ ಸಹನಾಮೂರ್ತಿ ಎನ್ನುತ್ತಾರೆ ನಿಜ. ಆದ್ರೆ ಈ ಮಹಿಳೆಯದ್ದು ಅತಿಯಾದ ಸಹನೆ ಎನ್ನಬಹುದು. ಯಾವುದೇ ಮಹಿಳೆ ಆಸ್ತಿ,ಬಂಗಾರ,ಬಟ್ಟೆಯನ್ನು ಹಂಚಿಕೊಳ್ಳುತ್ತಾಳೆಯೇ ಹೊರತು ಪತಿಯನ್ನು ಹಂಚಿಕೊಳ್ಳಲು ಇಚ್ಛಿಸುವುದಿಲ್ಲ. ಪತಿ ಬೇರೆಯವರ ಜೊತೆ ಸಂಬಂಧ ಬೆಳೆಸಿದ ವಿಷ್ಯ ಗೊತ್ತಾದ್ರೆ ತಕ್ಷಣ ಆತನಿಂದ ದೂರಸರಿಯುವ ನಿರ್ಧಾರ ಮಾಡ್ತಾಳೆ. ಆದ್ರೆ ಈ ಮಹಿಳೆ ಪತಿ ಸಂಬಂಧ ಬೆಳೆಸುವ ಜೊತೆಗೆ ಭಯಾನಕ ರೋಗ ಹೊತ್ತು ತಂದ್ರೂ ಸುಮ್ಮನಿದ್ದಾಳೆ.
ಪತ್ನಿಯ ಅತಿ ಪ್ರೀತಿ : ಸಾಮಾಜಿಕ ಜಾಲತಾಣದಲ್ಲಿ ಆಕೆ ಪತಿ ಈ ವಿಷ್ಯವನ್ನು ಹಂಚಿಕೊಂಡಿದ್ದಾನೆ. ಹದಿಹರೆಯದಿಂದಲ್ಲಿಯೇ ವ್ಯಕ್ತಿ ದ್ವಿಲಿಂಗಿಯಾಗಿದ್ದನಂತೆ. ಅನೇಕ ಜನರ ಜೊತೆ ಆತ ಲೈಂಗಿಕ ಸಂಬಂಧ (Sexual Relationship) ಬೆಳೆಸಿದ್ದನಂತೆ. ಈಗ ಮದುವೆಯಾಗಿ 33 ವರ್ಷ ಕಳೆದಿದೆ. 30 ವರ್ಷದ ಮಗಳು ಹಾಗೂ 28 ವರ್ಷದ ಮಗನ ತಂದೆ ಆತ. ಮದುವೆ ನಂತ್ರವೂ ಈತ ಅನೇಕರ ಜೊತೆ ಶಾರೀರಿಕ ಸಂಬಂಧ (Physical Contact) ಬೆಳೆಸಿದ್ದನಂತೆ. ಮಗಳು ದೊಡ್ಡವಳಾಗ್ತಿದ್ದಂತೆ ಪ್ರತ್ಯೇಕ ವಾಸ ಶುರು ಮಾಡಿದ್ದಳಂತೆ. ಮಗ ಕುಡಿತದ ಚಟಕ್ಕೆ ಬಲಿಯಾಗಿದ್ದಾನಂತೆ. ಸದಾ ಕುಡಿಯುವ ಮಗ ನಮ್ಮ ಜೊತೆಗಿದ್ದಾನೆ ಎನ್ನುವ ವ್ಯಕ್ತಿ, ಮಗಳನ್ನು ಕಳೆದುಕೊಂಡಿದ್ದಾನೆ. ಮಗಳ ಸಾವಿನ ನಂತ್ರ ಈತ ಕುಸಿದು ಹೋಗಿದ್ದಾನಂತೆ. ಆಕೆಯನ್ನು ಮರೆಯಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾನಂತೆ. ಮಗಳನ್ನು ಕಳೆದುಕೊಂಡ ನೋವು ಮರೆಯಲು ಮತ್ತೊಂದಿಷ್ಟು ಮಂದಿ ಜೊತೆ ಈಗ ಶಾರೀರಿಕ ಸಂಬಂಧ ಬೆಳೆಸಿದ್ದನಂತೆ. ಅಸುರಕ್ಷಿತ ಶಾರೀರಿಕ ಸಂಬಂಧ ವ್ಯಕ್ತಿಯನ್ನು ಅಪಾಯಕ್ಕೆ ದೂಡಿದೆಯಂತೆ.
Health Tips: ನಿಮ್ಮ ಕಾಸ್ಮೆಟಿಕ್‌ಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ
HIC ಪೀಡಿತ ಪತಿ : ಕಳೆದ ಎರಡು ವರ್ಷದ ಹಿಂದೆ ಈತನಿಗೆ HIV ಇರುವುದು ಗೊತ್ತಾಗಿದೆ. ದುಡುಕಿ ನಾನು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪ ಪಡ್ತಿದ್ದೇನೆಂದು ಎಂದು ವ್ಯಕ್ತಿ ಹೇಳಿದ್ದಾನೆ. HIV ಇದ್ದರೂ ನಾನು ಪತ್ನಿ ಜೊತೆ ವಾಸವಾಗಿದ್ದೇನೆ. ಪತ್ನಿಗೆ ನನ್ನ ಅಕ್ರಮ ಸಂಬಂಧ,ಈ ಖಾಯಿಲೆ ಬಗ್ಗೆ ಸಂಪೂರ್ಣ ತಿಳಿದಿದೆ. ಆದ್ರೂ ಆಕೆ ನನ್ನನ್ನು ಕ್ಷಮಿಸಿದ್ದಾಳೆ. ನನ್ನ ಜೊತೆ ಜೀವನ ನಡೆಸುತ್ತಿದ್ದಾಳೆ ಎನ್ನುತ್ತಾನೆ ಪತಿ. ಆಕೆಯ ಈ ಕ್ಷಮೆ ನನ್ನನ್ನು ಚುಚ್ಚುತ್ತಿದೆ. ಕ್ಷಮಿಸಲಾರದ ತಪ್ಪನ್ನು ನಾನು ಮಾಡಿದ್ದೇನೆಂದು ಆತ ಹೇಳಿದ್ದಾನೆ.
Breakup Tips: ಗೌರವಪೂರ್ಣ ಬ್ರೇಕಪ್ ನಿಮ್ಮದಾಗಲು ಹೀಗ್ಮಾಡಿ
ತಜ್ಞರ ಸಲಹೆ : ತಜ್ಞರು ಇದಕ್ಕೆ ಸಲಹೆ ಕೂಡ ನೀಡಿದ್ದಾರೆ. ಮಗಳ ಸಾವು ಎಲ್ಲರನ್ನೂ ದುಃಖಕ್ಕೆ ನೂಕುತ್ತದೆ. ಹಾಗಂತ ಮೈಮರೆಯುವುದು ತಪ್ಪು. ನೋವನ್ನು ಕುಟುಂಬಸ್ಥರ ಮುಂದೆ ಹೇಳಿಕೊಂಡಿದ್ದರೆ ಅಥವಾ ಕೌನ್ಸಲಿರ್ ಮೊರೆ ಹೋಗಿದ್ದರೆ ಇಷ್ಟಾಗುತ್ತಿರಲಿಲ್ಲ. ಈಗ್ಲೂ ಅವಕಾಶವಿದೆ, ಮೊದಲು ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ ಎಂದು ತಜ್ಞರು ಹೇಳಿದ್ದಾರೆ.