ಟೀ ಕಪ್ ಕಪ್ಪು ಕಪ್ಪಾಗಿದ್ಯಾ? ಹೀಗೇ ಮೆಂಟೇನ್ ಮಾಡ್ಬೇಕು ನೋಡಿ

By Suvarna NewsFirst Published Jan 19, 2023, 4:19 PM IST
Highlights

ಟೀ ಅಥವಾ ಕಾಫಿಯನ್ನು ಗ್ಲಾಸಿನ ಕಪ್ ನಲ್ಲಿ ಕುಡಿದ್ರೆ ಅದೇನೋ ಖುಷಿ. ಒಳಗೆ ಎಷ್ಟೇ ಬಿಸಿ ಟೀ ಇದ್ರೂ ಹೊರಗೆ ಅದು ಗೊತ್ತಾಗದ ಕಾರಣ ಅದನ್ನು ಹಿಡಿದುಕೊಳ್ಳೋದು ಸುಲಭ. ಆದ್ರೆ ಬಿಸಿ ಪದಾರ್ಥ ಹಾಕಿದ ತಕ್ಷಣ ಈ ಗ್ಲಾಸ್ ಬಿರುಕು ಬಿಡುತ್ತಲ್ಲ ಅನ್ನೋರು ಏನು ಮಾಡ್ಬೇಕು ಗೊತ್ತಾ?
 

ಗಾಜಿನ ಪಾತ್ರೆಗಳು ಅಡಿಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಾಗೆಯೇ ಅದೊಂದು ರೀತಿಯ ಐಷಾರಾಮದ ಸಂಕೇತವೆಂದ್ರೂ ತಪ್ಪಾಗಲಾರದು. ಪ್ರತಿ ದಿನ ನಾವು ಸ್ಟೀಲ್ ಲೋಟದಲ್ಲಿ ನೀರು, ಟೀ, ಸೇವನೆ ಮಾಡ್ತಿದ್ರೂ, ಮನೆಗೆ ಅತಿಥಿಗಳು ಬಂದಾಗ ಸುಂದರ ಗಾಜಿನ ಗ್ಲಾಸ್ ಹೊರಗೆ ಬರುತ್ತದೆ. ಇನ್ನು ಕೆಲವರಿಗೆ ಗಾಜಿನ ಗ್ಲಾಸ್ ನಲ್ಲಿ ಟೀ ಕುಡಿದ್ರೆ ಸಮಾಧಾನ. 

ಇವೆಲ್ಲ ಕಾರಣಕ್ಕೆ ಮನೆ (House) ಯಲ್ಲಿ ಒಂದಿಷ್ಟು ಗಾಜಿ (Glass) ನ ಪಾತ್ರೆ (Vessel) ಗಳನ್ನು ನಾವು ನೋಡಬಹುದು. ಚಳಿಗಾಲ (Winter) ದಲ್ಲಿ ಎಷ್ಟು ಬಿಸಿ ಟೀ ಕುಡಿದ್ರೂ ನೆಮ್ಮದಿ ಸಿಗೋದಿಲ್ಲ. ಅರೆ ಕ್ಷಣಕ್ಕೆ ಟೀ ತಣ್ಣಗಾಯ್ತು ಎನ್ನುತ್ತೇವೆ. ಬಿಸಿ ಬಿಸಿ ಟೀ ಕುಡಿಯಲು ಬಯಸುವವರು ಟೀಯನ್ನು ಗಾಜಿನ ಕಪ್ ಗೆ ಹಾಕ್ತಾರೆ. ಹೊರಗೆ ತಣ್ಣಗಿದ್ರೂ ಒಳಗಿರುವ ಟೀ ಬಿಸಿಯಾಗಿರುತ್ತದೆ. ಹಾಗಂತ ನೀವು ತುಂಬಾ ಬಿಸಿ ಟೀ ಅಥವಾ ಕಾಫಿಯನ್ನು ಗ್ಲಾಸ್ ಕಪ್ ಗೆ ಹಾಕಿದ್ರೆ ಅದು ಫಟ್ ಅಂತ ಒಡೆಯುತ್ತೆ. ಇಲ್ಲವೆ ಬಿರುಕು ಬಿಡುತ್ತೆ. ಇದ್ಯಾಕೆ ಹೀಗೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ನಾವಿಂದು ಗ್ಲಾಸಿನ ಪಾತ್ರೆ ಬೇಗ ಹಾಳಾಗಲು ಕಾರಣವೇನು ಹಾಗೆ ಅದನ್ನು ರಕ್ಷಿಸೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೆವೆ.

ತಲೆನೋವು ಬಂದಾಗ ನೋವಿನ ಮಾತ್ರೆ ಬಿಟ್ಟು ಈ ಟೀ ಕುಡಿರಿ

ಗಾಜಿನ ಕಪ್ ಒಡೆಯೋದು ಏಕೆ? : ಶೀತ ವಾತಾವರಣದ ಮನುಷ್ಯರ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಪಾತ್ರೆಗಳ ಮೇಲೂ ಬೀಳುತ್ತದೆ. ಲೋಹ ಶಾಖದ ಉತ್ತಮ ವಾಹಕವಾಗಿದೆ. ಆದರೆ ಗಾಜು ಕೆಟ್ಟ ವಾಹಕವಾಗಿದೆ. ನೀವು ಅದರಲ್ಲಿ ತುಂಬಾ ಬಿಸಿಯಾದ ವಸ್ತುವನ್ನು ಹಾಕಿದಾಗ, ಅದರ ಒಳಪದರವು ಬಿಸಿಯಾಗುತ್ತದೆ. ಹೊರಗಿನ ಪದರವು ತಂಪಾಗಿರುತ್ತದೆ. ಅದಕ್ಕಾಗಿಯೇ ಗಾಜು ಬಿರುಕುಬಿಡುತ್ತದೆ. 

ಗ್ಲಾಸ್ ಒಡೆಯದಂತೆ ರಕ್ಷಿಸೋದು ಹೇಗೆ? : 

ಸ್ಟೀಲ್ ಚಮಚ ಇಡಿ : ನೀವು ಗಾಜಿನ ಪಾತ್ರೆಗೆ ಬಿಸಿ ಆಹಾರ ಅಥವಾ ಟೀ ಹಾಕ್ತಿರಿ ಎಂದಾದ್ರೆ ನೇರವಾಗಿ ಹಾಕಬೇಡಿ. ಮೊದಲು ಪಾತ್ರೆಯೊಳಗೆ ಒಂದು ಸ್ಟೀಲ್ ಚಮಚವನ್ನು ಇಡಿ. ನಂತ್ರ ಬಿಸಿ ಆಹಾರವನ್ನು ಹಾಕಿ. ಆ ಮೇಲೆ ಚಮಚ ತೆಗೆಯಿರಿ. ಹೀಗೆ ಮಾಡಿದ್ರೆ ನಿಮ್ಮ ಗಾಜಿನ ಪಾತ್ರೆ ಬಿರುಕು ಬಿಡೋದಿಲ್ಲ.

ಗಾಜಿನ ಪಾತ್ರೆ ಪ್ರತ್ಯೇಕವಾಗಿರಲಿ : ನಿಮ್ಮ ಅಡುಗೆ ಮನೆಯಲ್ಲಿ ಗಾಜಿನ ಪಾತ್ರೆಗಳಿಗೆ ಪ್ರತ್ಯೇಕ ಜಾಗ ಮಾಡಿ. ಉಳಿದ ಲೋಹದ ಪಾತ್ರೆಯ ಜೊತೆ ಗಾಜಿನ ಪಾತ್ರೆಯನ್ನು ಇಡಬಾರದು. ಉಕ್ಕಿನ ಪಾತ್ರೆ ಜೊತೆ ಗ್ಲಾಸ್ ಇಟ್ಟರೆ ಅದು ಒಡೆಯುವ ಸಾಧ್ಯತೆ ಹೆಚ್ಚಿರುತ್ತದೆ. 

ಚಪಾತಿ ಸ್ಪಂಜಿನಂತೆ ಮೆದುವಾಗ್ಬೇಕು ಅಂದ್ರೆ ಇಂಥಾ ಮಣೆ ಯೂಸ್ ಮಾಡಿ

ನೇರವಾಗಿ ಐಸ್ ಕ್ಯೂಬ್ ಹಾಕ್ಬೇಡಿ : ಜ್ಯೂಸ್  ಕಪ್ ಗೆ ನಾವು ಮೊದಲು ಐಸ್ ಕ್ಯೂಬ್ ಹಾಕಿ ನಂತ್ರ ಜ್ಯೂಸ್ ಹಾಕಿ ಸರ್ವ್ ಮಾಡ್ತೇವೆ. ಹಾಗೆ ಮಾಡಿದ್ರೆ ಗ್ಲಾಸ್ ಬಿರುಕು ಬಿಡುವ ಸಾಧ್ಯತೆಯಿರುತ್ತದೆ. ನೀವು ಮೊದಲು ಗ್ಲಾಸ್ ಗೆ ಜ್ಯೂಸ್ ಹಾಕಿ ನಂತ್ರ ಐಸ್ ಕ್ಯೂಬ್ ಹಾಕಿದ್ರೆ ಗ್ಲಾಸ್ ಒಡೆಯೋದನ್ನು ತಪ್ಪಿಸಬಹುದು.  

ಬಿಸಿ ನೀರಿನಲ್ಲಿ ಕುದಿಸಿ : ಗಾಜಿನ ಪಾತ್ರೆಗಳು ಒಡೆಯಬಾರದು ಅಂದರೆ ಗ್ಲಾಸುಗಳನ್ನು ನೀರಿನಲ್ಲಿ ಕುದಿಸಬೇಕು. ನೀರಿನ ಪಾತ್ರೆಗೆ ಗ್ಲಾಸ್ ಹಾಕಿ ನೀರನ್ನು ಹತ್ತು ನಿಮಿಷ ಕುದಿಸಬಹುದು. ಹೀಗೆ ಮಾಡಿದ್ರೆ ಗ್ಲಾಸ್ ಒಡೆಯುವುದಿಲ್ಲ. ಆದ್ರೆ ಎಲ್ಲ ಗ್ಲಾಸ್ ಗಳು ಇದಕ್ಕೆ ಸೂಕ್ತವಲ್ಲ. ಕೆಲವೊಂದು ಕಪ್ ಹೀಗೆ ಮಾಡಿದ್ರೆ ಒಡೆಯುವ ಸಾಧ್ಯತೆಯಿರುತ್ತದೆ. ಗಾಜಿನ ಸೂಕ್ಷ್ಮತೆ ಮೇಲೆ ನೀವು ಈ ಕೆಲಸ ಮಾಡಬೇಕಾಗುತ್ತದೆ.

ಗಾಜಿನ ಪಾತ್ರೆಯನ್ನು ಹೀಗೂ ರಕ್ಷಿಸಿಕೊಳ್ಳಿ : ಗಾಜಿನ ಪಾತ್ರೆಯನ್ನು ಬಳಸ್ಲೇಬೇಕು ಎನ್ನುವವರು ಬಿಸಿ ಪದಾರ್ಥವನ್ನು ಹಾಕುವ ಬದಲು ಅದು ತಣ್ಣಗಾದ್ಮೇಲೆ ಹಾಕಿ. ಆಗ ನಿಮ್ಮ ಪಾತ್ರೆ ಬಿರುಕುಬಿಡೋದಿಲ್ಲ.
 

click me!