
ಪ್ರತಿ ತಿಂಗಳು ಮುಟ್ಟಿನ ಸಮಯ ಬಂತು ಅಂದ್ರೆ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸ್ತಾರೆ. ಎಲ್ಲ ಮಹಿಳೆಯರ ಮುಟ್ಟಿನ ಸಮಸ್ಯೆ ಒಂದೇ ರೀತಿ ಇರೋದಿಲ್ಲ. ಕೆಲವರು ಹೆಚ್ಚು ನೋವು ಅನುಭವಿಸಿದ್ರೆ ಮತ್ತೆ ಕೆಲವರು ಹೆಚ್ಚು ಬ್ಲೀಡಿಂಗ್ ಗೆ ಒಳಗಾಗ್ತಾರೆ. ಮುಟ್ಟು (Periods) ಕೇವಲ ಕೈ ಕಾಲು, ಹೊಟ್ಟೆ (Stomach) ನೋವು, ರಕ್ತಸ್ರಾವ (Bleeding) ಸೇರಿದಂತೆ ಬರೀ ದೈಹಿಕ ಸಮಸ್ಯೆಯನ್ನು ಮಾತ್ರವಲ್ಲದೆ ಮಹಿಳೆಯರ ಮಾನಸಿಕ ಸ್ಥಿತಿ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮುಟ್ಟಿನ ಸಮಯದಲ್ಲಿ ಮೂಡ್ ಬದಲಾಗೋದು ಸಾಮಾನ್ಯ. ಹಾರ್ಮೋನ್ ಬದಲಾವಣೆಯಿಂದಾಗಿ ಒಂದು ವಾರದ ಮೊದಲೇ ಬಹುತೇಕ ಮಹಿಳೆಯರ ಮೂಡ್ (Mood) ನಲ್ಲಿ ಏರುಪೇರಾಗ್ತಿರುತ್ತದೆ.
ಮುಟ್ಟಿನ ಸಮಯದಲ್ಲಿ ಕೆಲ ಮಹಿಳೆಯರು ಅತಿಯಾಗಿ ಕೆಲಸ ಮಾಡಿದ್ರೆ ಇನ್ನು ಕೆಲವರು ಸೋಮಾರಿಯಾಗ್ತಾರೆ. ಕೆಲವರು ಹಾಡು ಹೇಳಲು ಇಷ್ಟಪಟ್ಟರೆ ಮತ್ತೊಂದಿಷ್ಟು ಮಂದಿ ಮಿತಿ ಮೀರಿ ಮಾತನಾಡ್ತಾರೆ. ಕಾರಣವಿಲ್ಲದೆ ಕೆಲವರಿಗೆ ಅಳು ಬರುವ ಸಮಯ ಇದು. ಆದ್ರೆ ಮುಟ್ಟಿನ ಸಂದರ್ಭದಲ್ಲಿ ನೂರಕ್ಕೆ 99ರಷ್ಟು ಮಹಿಳೆಯರಿಗೆ ಕಾಣಿಸಿಕೊಳ್ಳುವ ಒಂದು ಸಮಸ್ಯೆ ಅಂದ್ರೆ ಕೋಪ. ಪಿರಿಯಡ್ಸ್ ಸಮಯದಲ್ಲಿ ಕೋಪ ಡಬಲ್ ಆಗಿರುತ್ತದೆ. ಸಣ್ಣಪುಟ್ಟ ವಿಷ್ಯಕ್ಕೂ ಕಿರಿಕಿರಿಯಾಗುತ್ತದೆ. ಕೋಪ ಮಿತಿ ಮೀರುತ್ತದೆ. ಇದ್ರಿಂದ ಮನೆಯಲ್ಲಿ ಅನಾವಶ್ಯಕ ಗಲಾಟೆ ಆಗುತ್ತದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರ ಕೋಪ ಹೆಚ್ಚು ಎಂದು ಅನೇಕ ಸಂಶೋಧನೆಗಳಲ್ಲೂ ಹೇಳಲಾಗಿದೆ.
ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಕೋಪ ಬರಲು ಕಾರಣವೇನು? : ಮುಟ್ಟಿನ ಸಮಯದಲ್ಲಿ ಕೋಪ ಹೆಚ್ಚಾಗಿ ಬರಲು ಮುಖ್ಯ ಕಾರಣ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ. ಇದನ್ನು ಹೊಂದಿರುವ ಮಹಿಳೆಯರಿಗೆ ಕೋಪ ಹೆಚ್ಚು ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ಸಂಶೋಧನೆಯಲ್ಲಿ ಹೇಳಲಾಗಿದೆ.
ಮಾನಸಿಕ ಆರೋಗ್ಯಕ್ಕಲ್ಲ, ಯೋನಿ ಅನಾರೋಗ್ಯಕ್ಕೆ ಕಾರಣವಾಗುತ್ತೆ ವೈಫಲ್ಯದ ಸಂಭೋಗ
ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್‌ನ (Pre- Menstrual Syndrome) ಲಕ್ಷಣಗಳು : ಫ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ ಹೊಂದಿರುವ ಮಹಿಳೆಯರು ಮೂಡ್ ಸ್ವಿಂಗ್ ಗೆ ಒಳಗಾಗ್ತಾರೆ. ಅವರಿಗೆ ಹಸಿವು ಹೆಚ್ಚಾಗುತ್ತದೆ. ಆಯಾಸ ಕಾಡುತ್ತದೆ. ಕಿರಿಕಿರಿ ಕೂಡ ಕಾಣಿಸಿಕೊಳ್ಳುತ್ತದೆ. ಮುಟ್ಟಿನ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಯು ಮಹಿಳೆಯರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹಾರ್ಮೋನುಗಳ ಬದಲಾವಣೆಯಿಂದಾಗಿ ಮಹಿಳೆಯರು ಸಾಮಾನ್ಯಕ್ಕಿಂತ ಹೆಚ್ಚು ಕಿರಿಕಿರಿಯನ್ನು ಅನುಭವಿಸುತ್ತಾರೆ. ದೈನಂದಿನ ಜೀವನದಲ್ಲಿ ಬರುವ ಕೋಪವನ್ನು ಅನೇಕ ಮಹಿಳೆಯರು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದ್ರೆ ಮುಟ್ಟಿನ ಸಮಯದಲ್ಲಿ ಅವರಿಗೆ ಕೋಪ ನಿಯಂತ್ರಣ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ತಜ್ಞರು.
ಮುಟ್ಟಿನ ಸಮಯದಲ್ಲಿ ಕೋಪ ಕಡಿಮೆಯಾಗ್ಬೇಕೆಂದ್ರೆ ಹೀಗೆ ಮಾಡಿ : ಮುಟ್ಟಿನ ಸಮಯದಲ್ಲಿ ಕೋಪ ಬರ್ಲೇಬೇಕು ಎಂದೇನಿಲ್ಲ. ನೀವು ಕೆಲ ವಿಧಾನದ ಮೂಲಕ ನಿಮ್ಮ ಮುಟ್ಟಿನ ಸಮಯವನ್ನು ಸಂತೋಷಗೊಳಿಸಬಹುದು. ಸಂತೋಷದ ಹಾರ್ಮೋನ್ ಬಿಡುಗಡೆ ಮಾಡಬಹುದು. ಅದಕ್ಕೆ ನೀವು ಕೆಲ ಟಿಪ್ಸ್ ಫಾಲೋ ಮಾಡ್ಬೇಕಾಗುತ್ತದೆ.
ಯಾವ ರೀತಿಯ ಸ್ಯಾನಿಟರಿ ಪ್ಯಾಡ್ ಒಳ್ಳೇದು ನೋಡಿ
ಮುಟ್ಟಿನ ಸಮಯದಲ್ಲಿ ನೀವು ಜಂಕ್ ಫುಡ್ ಸೇವನೆ ಮಾಡಬಾರದು. ಅನೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ತಮ್ಮ ನೋವು ಮರೆಯಲು ಜಂಕ್ ಫುಡ್ ಸೇವನೆ ಮಾಡ್ತಾರೆ. ಇದರಿಂದ ಕೋಪ ಹೆಚ್ಚಾಗುತ್ತದೆ. ಮುಟ್ಟಿನ ಸಮಯದಲ್ಲಿ ನೀವು ದ್ರವ ಪದಾರ್ಥ ಸೇವನೆಯನ್ನು ಹೆಚ್ಚು ಮಾಡ್ಬೇಕಾಗುತ್ತದೆ. ನೀವು ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು. ನೀರು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಹೋದಾಗ ರಕ್ತದ ಹರಿವು ಸುಧಾರಿಸುತ್ತದೆ. ಇದ್ರಿಂದ ನಿಮ್ಮ ಹೊಟ್ಟೆ ನೋವು ಕಡಿಮೆಯಾಗುತ್ತದೆ. ನೋವು ಕಡಿಮೆಯಾಗ್ತಿದ್ದಂತೆ ಮನಸ್ಸು ಹಗುರವಾಗಿ, ಮುಖದ ಮೇಲೋಂದು ನಗು ಮೂಡುತ್ತದೆ. ಸ್ಯಾನಿಟರಿ ಪ್ಯಾಡ್ ಕಿರಿಕಿರಿ ಕೂಡ ನಿಮ್ಮ ಮೂಡ್ ಹಾಳು ಮಾಡುತ್ತದೆ. ಹಾಗಾಗಿ ನೀವು ಯಾವ ಪ್ಯಾಡ್ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯವಾಗುತ್ತದೆ. ಖಾಸಗಿ ಭಾಗವನ್ನು ಸ್ವಚ್ಛಗೊಳಿಸಲು ಬೆಚ್ಚಗಿನ ನೀರನ್ನು ಬಳಸಬೇಕು. ಮುಟ್ಟಿನ ದಿನಗಳನ್ನು ಹೊರತುಪಡಿಸಿ ಉಳಿದ ದಿನ ನೀವು ನಿಯಮಿತವಾಗಿ ಯೋಗ ಮಾಡಿದ್ರೆ ಮುಟ್ಟಿನ ದಿನಗಳಲ್ಲಿ ನೋವು ಕಡಿಮೆಯಿರುತ್ತದೆ. ಧ್ಯಾನ ಹಾಗೂ ಪ್ರಾಣಾಯಾಮಗಳು ನಿಮ್ಮ ಕೋಪವನ್ನು ಕಡಿಮೆ ಮಾಡಲು ನೆರವಾಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.