ಮನೆಯ ಮೂಲೆ ಮೂಲೆ ಸ್ವಚ್ಛತೆಗೆ ಮಹಿಳೆಯರು ಆದ್ಯತೆ ನೀಡ್ತಾರೆ. ಧೂಳು ಕಂಡಾಗೆಲ್ಲ ಪೊರಕೆ ಹಿಡಿಯುವವರಿದ್ದಾರೆ. ಆದ್ರೆ ಬಾತ್ ರೂಮ್ ಕ್ಲೀನಿಂಗ್ ಎಂದಾಗ ಮೂಗು ಮುರಿಯುತ್ತಾರೆ. ಬಾತ್ ರೂಮ್ ಕ್ಲೀನಿಂಗ್ ಬೇಗ ಆಗ್ಬೇಕೆಂದ್ರೆ ಈ ಟಿಪ್ಸ್ ಫಾಲೋ ಮಾಡಿ.
ಬಾತ್ ರೂಮ್ ನೋಡಿದ್ರೆ ಸಾಕು ಅವರು ಎಷ್ಟು ಕ್ಲೀನ್ ಎಂಬುದು ಗೊತ್ತಾಗುತ್ತೆ. ನಿಜ, ಸಂಬಂಧಿಕರ ಮನೆಗೆ ಹೋದಾಗ ನೀವು ಬೇರೆ ಯಾವುದೇ ಸ್ಥಳ ನೋಡಿ ಅವರು ಎಷ್ಟು ಸ್ವಚ್ಛ ಎಂದು ಅಳೆಯಬೇಕಾಗಿಲ್ಲ. ಕೇವಲ ಅವರ ಮನೆ ಬಾತ್ ರೂಮ್ ನೋಡಿದ್ರೆ ಸಾಕು. ಕ್ಲೀನಿಂಗ್ ಗೆ ಮಹತ್ವ ನೀಡುವ ಜನರು ಬಾತ್ ರೂಮ್ ಕೂಡ ಸ್ವಚ್ಛವಾಗಿಡುತ್ತಾರೆ. ಮತ್ತೆ ಕೆಲವರಿಗೆ ಬಾತ್ ರೂಮ್ ಹೊಳೆಯುಂತೆ ಇರಬೇಕು ಎಂಬ ಆಸೆಯಿರುತ್ತದೆ. ಅದಕ್ಕಾಗಿ ದಿನಕ್ಕೆ ಒಮ್ಮೆಯಾದ್ರೂ ಬಾತ್ ರೂಮ್ ಉಜ್ಜುತ್ತಾರೆ. ಉಜ್ಜಿ ಉಜ್ಜಿ ಕೈ ನೋವು ಬರುತ್ತದೆಯೇ ಹೊರತು ಬಾತ್ ರೂಮಿನಲ್ಲಿರುವ ಕೆಂಪು, ಹಳದಿ, ಕಪ್ಪು ಕಲೆಗಳು ಹೋಗೋದಿಲ್ಲ. ಇದು ನೋಡಲು ಹೇಸಿಗೆ ಎನ್ನಿಸುತ್ತದೆ. ಜೊತೆಗೆ ಅತಿಥಿಗಳ ಮುಂದೆ ಮುಜುಗರಕ್ಕೆ ಕಾರಣವಾಗುತ್ತದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಬಾತ್ ರೂಮ್ ಕ್ಲೀನರ್ ಗಳು ಲಭ್ಯವಿದೆ. ಇವುಗಳಿಗೆ ಹೆಚ್ಚಿನ ಪ್ರಮಾಣದ ಕೆಮಿಕಲ್ ಹಾಕಿರುವ ಕಾರಣ ಕೆಲವರಿಗೆ ಇದು ಅಲರ್ಜಿಯಾಗುತ್ತದೆ. ನೆಗಡಿ, ಕೆಮ್ಮಿನ ಸಮಸ್ಯೆಯ ಜೊತೆ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ ಕಾಣಿಸಿಕೊಳ್ಳುವುದಿದೆ. ಹಾಗೆಯೇ ಇವುಗಳಿಂದ ಬಾತ್ ರೂಮ್ ತಾತ್ಕಾಲಿಕವಾಗಿ ಸ್ವಚ್ಛವಾಗಿ ಕಂಡ್ರೂ ಬಿಳಿ ಬಿಳಿ ಕಲೆ ಉಳಿದಿರುತ್ತದೆ. ಬಾತ್ ರೂಮ್ ಸದಾ ಹೊಳೆಯುತ್ತಿರಬೇಕೆಂದ್ರೆ ಬ್ಲೀಚಿಂಗ್ ಪೌಡರ್ ಹಾಕಿ ಗಸ ಗಸ ತಿಕ್ಕಿದ್ರೆ ಸಾಲೋದಿಲ್ಲ. ಕೆಲವೊಂದು ಸ್ಮಾರ್ಟ್ ಉಪಾಯಗಳನ್ನು ಮಾಡ್ಬೇಕು. ಅಡುಗೆ ಮನೆಯಲ್ಲಿರುವ ವಸ್ತುವನ್ನು ನೀವು ಬಾತ್ ರೂಮ್ ಸ್ವಚ್ಛತೆಗೆ ಬಳಸಬಹುದು. ನಾವಿಂದು ಮಿರ ಮಿರ ಮಿಂಚುವ ಬಾತ್ ರೂಮ್ ಹೇಗೆ ಮಾಡೋದು ಅಂತಾ ಹೇಳ್ತೇವೆ.
ಬಾತ್ ರೂಮ್ (Bathroom) ಸ್ವಚ್ಛತೆ (Clean)ಗೆ ಇವುಗಳನ್ನು ಬಳಸಿ :
ಅಡುಗೆ ಸೋಡಾ (Baking Soda) ಬಳಸಿ : ಸಾಮಾನ್ಯವಾಗಿ ಬಾತ್ ರೂಮ್ ಕಲ್ಲುಗಳನ್ನು ಸ್ವಚ್ಛಗೊಳಿಸುವುದು ಸುಲಭ. ಆದ್ರೆ ಬಾತ್ ರೂಮಿನ ಗೋಡೆಗಳ ಕ್ಲೀನಿಂಗ್ ತಲೆನೋವಿನ ಕೆಲಸ. ಗೋಡೆಗಳ ಕೊಳಕು ಹೋಗ್ಬೇಕೆಂದ್ರೆ ನೀವು ಅಡಿಗೆ ಸೋಡಾವನ್ನು ಬಳಸಬಹುದು. ಹೌದು, ಅಡುಗೆಗೆ ಮಾತ್ರವಲ್ಲ, ಬಾತ್ ರೂಮ್ ಕ್ಲೀನಿಂಗ್ ಗೂ ಅಡುಗೆ ಸೋಡ ಪರಿಣಾಮಕಾರಿ, ನೀವು ಕೇವಲ ಒಂದು ಬಟ್ಟಲಿಗೆ ಅಡಿಗೆ ಸೋಡಾವನ್ನು ಹಾಕಿ ಮತ್ತು ಒದ್ದೆಯಾದ ಸ್ಪಂಜಿನಿಂದ ಅಡಿಗೆ ಸೋಡಾವನ್ನು ಬಾತ್ ರೂಮ್ ಟೈಲ್ಸ್ ಗೋಡೆಗಳಿಗೆ ಹಾಕಿ ನಿಧಾನವಾಗಿ ಉಜ್ಜಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ಗೋಡೆಗಳನ್ನು ಸ್ವಚ್ಛಗೊಳಿಸಿ. ಬಾತ್ ರೂಮಿನ ಬಣ್ಣ ಬದಲಾಗೋದನ್ನು ನೀವು ನೋಡ್ಬಹುದು. ಹಳದಿ ಗೋಡೆ ಬೆಳ್ಳಗಾಗಿರುತ್ತದೆ.
ಮನೆ ಸೌಂದರ್ಯದ ಜೊತೆ ಮನಸ್ಸಿಗೂ ಕಿರಿ ಕಿರಿ ಮಾಡೋ ಬಲೆಗೆ ಹೇಳಿ ಗುಡ್ ಬೈ!
ಬಾತ್ ರೂಮ್ ಸ್ವಚ್ಛಗೊಳಿಸಲು ವಿನೆಗರ್ (Vinegar) : ನೀವು ವಿನೆಗರ್ ಬಳಸಿಯೂ ಬಾತ್ರೂಮ್ ಗೋಡೆಗಳನ್ನು ಸ್ವಚ್ಛಗೊಳಿಸಬಹುದು. ವಿನೆಗರ್ ಉತ್ತಮ ಕ್ಲೀನರ್ ಆಗಿದೆ. ಸ್ಪ್ರೇ ಬಾಟಲಿಯಲ್ಲಿ ವಿನೆಗರ್ ಹಾಕಿಕೊಳ್ಳಿ. ನಂತ್ರ ಗೋಡೆಗಳಿಗೆ ವಿನೆಗರ್ ಸ್ಪ್ರೇ ಮಾಡಿ. ಸ್ಪಂಜ್ ಅಥವಾ ಬ್ರೆಷ್ ನಿಂದ ಗೋಡೆಗಳನ್ನು ಉಜ್ಜಿ, ನಂತ್ರ ನೀರಿನಲ್ಲಿ ಸ್ವಚ್ಛಗೊಳಿಸಿ. ಗೋಡೆಗಳ ಬಣ್ಣ ಬದಲಾಗಿರುವುದನ್ನು ನೀವೇ ನೋಡ್ಬಹುದು.
ಅಬ್ಬಾ, ಇವೆಲ್ಲಿಂದ ದಾಂಗುಡಿ ಇಡುತ್ತೋ ಈ ಇರುವೆ, ಕಾಟ ತಪ್ಪಿಸೋದು ಹೇಗೆ?
ಸ್ನಾನ ಗೃಹ ಸ್ವಚ್ಛಗೊಳಿಸಲು ಉಪ್ಪು : ನೀವು ಉಪ್ಪನ್ನು ಬಳಸಿ ಕೂಡ ಸ್ನಾನ ಗೃಹವನ್ನು ಸ್ವಚ್ಛಗೊಳಿಸಬಹುದು. ಟೈಲ್ಸ್ ಮೇಲೆ ನೀವು ಉಪ್ಪನ್ನು ಹಚ್ಚಿಡಬೇಕು. ರಾತ್ರಿ ಉಪ್ಪು ಹಚ್ಚಿ ಬಿಡಬೇಕು. ಬೆಳಿಗ್ಗೆ ಅದನ್ನು ತೊಳೆದ್ರೆ ಬಾತ್ ರೂಮ್ ಸ್ವಚ್ಛವಾಗಿರುತ್ತದೆ. ಇವುಗಳನ್ನು ಬಳಸುವುದ್ರಿಂದ ಬಾತ್ ರೂಮಿನಲ್ಲಿರುವ ಸೂಕ್ಷ್ಮ ಕೀಟಾಣುಗಳು ಕೂಡ ನಾಶವಾಗುತ್ತದೆ. ಬಾತ್ರೂಮ್ ಟೈಲ್ಸ್ ಕೊಳಕು ಆಗಿದ್ದರೆ, ಅದನ್ನು ಉಪ್ಪಿನ ಸಹಾಯದಿಂದ ಸ್ವಚ್ಛಗೊಳಿಸಲಾಗುತ್ತದೆ. ಈ ಹೆಂಚುಗಳಿಗೆ ರಾತ್ರಿ ಉಪ್ಪನ್ನು ಹಚ್ಚಿ ಮತ್ತು ಬೆಳಿಗ್ಗೆ ತೊಳೆದ ನಂತರ ಸ್ವಚ್ಛವಾಗಿ ಬಿಡಿ.