ಸುಧಾಮೂರ್ತಿ ಸೊಸೆ ಬಗ್ಗೆ ಹೇಳೋ ಮಾತು ಏನ್‌ ಗೊತ್ತಾ?

By Suvarna News  |  First Published Mar 3, 2020, 3:31 PM IST

ಸೊಸೆಯಾದವಳು ಗಂಡನ ಮನೆಗೆ ಅಡ್ಜೆಸ್ಟ್ ಆಗ್ಬೇಕಿಲ್ಲ, ಮನೆಯವರು ಅವಳಿಗೆ ಅಡ್ಜೆಸ್ಟ್ ಆಗಬೇಕು! ಅಂತಾರೆ ಸರಳತೆಗೆ ಮತ್ತೊಂದು ಹೆಸರಾದ ಇನ್ಫೋಸಿಸ್‌ನ ಸುಧಾಮೂರ್ತಿ.


ಇನ್‌ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರು ನಮ್ಮ ಹೆಮ್ಮೆಯ ಕನ್ನಡತಿ. ಎಂಥಾ ಪರಿಸ್ಥಿತಿಯಲ್ಲೂ ಅಂಜದೇ ಅಳುಕದೇ ಮುನ್ನುಗ್ಗಿದ ಧೀರೆ. ಅವರು ಓದುತ್ತಿದ್ದ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಮಾಡಲು ಹೆಣ್ಮಕ್ಕಳಿಗೆ ಆಸ್ಪದವೇ ಇರಲಿಲ್ಲ. ಅಂಥಾ ಪರಿಸ್ಥಿತಿ. ಆದರೆ ಇವರಿಗೆ ಆ ಸಬ್ಜೆಕ್ಟ್ ಮೇಲೆ ಬಹಳ ಆಸಕ್ತಿ. ಚೆನ್ನಾಗಿ ಮಾರ್ಕ್ಸ್ ಇದ್ದ ಕಾರಣ ಅವರು ತಾನು ಇಂಜಿನಿಯರಿಂಗ್ ಮಾಡೇ ಮಾಡ್ತೀನಿ ಅಂದಾಗ ಬೇಡ ಅಂತ ಹೇಗೆ ಹೇಳ್ತಾರೆ. ಒಂದಿಷ್ಟು ನಿಬಂಧನೆಗಳ ಜೊತೆಗೆ ಇವರಿಗೆ ಸೀಟ್ ಸಿಗುತ್ತೆ. ಇಡೀ ಇಂಜಿನಿಯರಿಂಗ್ ಕ್ಲಾಸ್ ನಲ್ಲಿ ಎಲ್ಲರೂ ಹುಡುಗರು, ಇವರೊಬ್ಬರೇ ಹುಡುಗಿ. ತಲೆ ಎತ್ತೋದು ಅಪರಾಧ ಅನ್ನೋ ಸ್ಥಿತಿ. ಅಂಥಾ ಕಷ್ಟಗಳನ್ನೇ ಫೇಸ್ ಮಾಡಿ ಕಾಲೇಜ್ ಗೆ ಟಾಪರ್ ಆದವರು ಸುಧಾಮೂರ್ತಿ. ಇವರು ಪತಿ ನಾರಾಯಣ ಮೂರ್ತಿ ಅವರ ಜೊತೆಗೆ ಇನ್ ಫೋಸಿಸ್ ಕಟ್ಟಿ ಬೆಳೆಸಿದ ಕಥೆ ಎಲ್ಲರಿಗೂ ತಿಳಿದಿರೋದೇ.

ಬಹಳ ಸಂವೇದನಶೀಲ ವ್ಯಕ್ತಿತ್ವದವರಾದ ಸುಧಾಮೂರ್ತಿ ತಮ್ಮ ಸೊಸೆಯ ಜೊತೆಗೆ ಹೇಗಿರುತ್ತಾರೆ. ಅವರ ಮಗ ರೋಹನ್ ಮೂರ್ತಿ. ಮೊದಲಿಗೆ ಲಕ್ಷ್ಮೀ ವೇಣು ಎಂಬ ಬ್ಯುಸಿನೆಸ್ ಹಿನ್ನೆಲೆಯ ಹುಡುಗಿಯನ್ನು ವರಿಸಿದ್ರು. ಐದು ವರ್ಷಗಳ ಹಿಂದೆ ಸಂಬಂಧ ಮುರಿದುಬಿದ್ದು, ಡಿವೋರ್ಸ್ ಮಾಡಿಕೊಂಡರು. ಆ ಬಳಿಕ ಕಳೆದ ವರ್ಷ ಅರ್ಪಣಾ ಕೃಷ್ಣನ್ ಎಂಬಾಕೆಯ ಜೊತೆಗೆ ಎರಡನೇ ಮದುವೆಯಾಯ್ತು. ಕೋಟ್ಯಾಧೀಶರಾಗಿದ್ದರೂ ಇವರ ಮದುವೆ ಬಹಳ ಸಿಂಪಲ್ ಆಗಿತ್ತು. ಹೊಸ ಸೊಸೆಯನ್ನು ಆದರದಿಂದ ಮನೆಗೆ ಬರಮಾಡಿಕೊಂಡದ್ದಲ್ಲದೇ, ಬೆಸ್ಟ್ ಅತ್ತೆಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ ಸುಧಾಮೂರ್ತಿ. ಸೊಸೆ ಬಗ್ಗೆ ಅವರು ಹೇಳುವ ಮಾತುಗಳು ಎಲ್ಲ ಅತ್ತೆಯಂದಿರಿಗೂ ಮಾದರಿ. ಸೊಸೆಯನ್ನು ಹೇಗೆ ನೋಡಿಕೊಳ್ಳಬೇಕು ಅಂತ ಅವರು ಮೂರು ಪಾಯಿಂಟ್ ಗಳಲ್ಲಿ ಹೇಳಿದ್ದಾರೆ. ಅದನ್ನು ಅವರ ಮಾತಲ್ಲೇ ಕೇಳಿ.

Tap to resize

Latest Videos

 ಹುಟ್ಟೂರಿನಲ್ಲಿ ಚೀಲಾ ಹಿಡಿದು ವಾರದ ಸಂತೆ ಮಾಡಿದ ಸರಳ ಸಜ್ಜನಿಕೆಯ ಸುಧಾಮೂರ್ತಿ

- ಯಾವ ಸೊಸೆಯೂ ಕೆಟ್ಟವಳಲ್ಲ.

ಸೊಸೆ ಅಂತಲ್ಲ ಯಾರೂ ಕೆಟ್ಟವರಲ್ಲ. ಕೆಲವೊಂದು ಪರಿಸ್ಥಿತಿಗಳು ಅವರನ್ನು ಕೆಟ್ಟವರನ್ನಾಗಿ ಮಾಡಿ ಬಿಡುತ್ತೆ ಅಷ್ಟೇ. ಹೆಣ್ಣುಮಕ್ಕಳಿಗೆ ಹುಟ್ಟಿನಿಂದ ಸಾಯೋವರೆಗೂ ಒಂದಲ್ಲ ಒಂದು ಕಷ್ಟ, ಸಂದಿಗ್ಧಗಳು ಬರುತ್ತಲೇ ಇರುತ್ತದೆ. ಕೆಲವೊಂದು ಸಮಯದಲ್ಲಿ ಅವರ ವರ್ತನೆ ಭಿನ್ನವಾಗಿರಬಹುದು. ಹಾಗಂದ ಮಾತ್ರಕ್ಕೆ ಅವರು ಕೆಟ್ಟವರು ಅಂತಲ್ಲ. ಅತ್ತೆ ಅಂದರೆ ಅಧಿಕಾರ ಚಲಾಯಿಸಬೇಕು. ಆಕೆ ದರ್ಪದಿಂದ ಇರಬೇಕು ಅನ್ನೋ ಹಳೆಯ ಚಾಳಿಗಳನ್ನೆಲ್ಲ ಬಿಟ್ಟುಬಿಡಿ. ಅವಳೂ ನಿಮ್ಮ ಹಾಗೆ ಒಬ್ಬ ಹೆಣ್ಣು. ಅಕ್ಕರೆಯಿಂದ ನೋಡಿಕೊಳ್ಳಿ. ನಿಮ್ಮ ಮನಸ್ಸೂ ಚೆನ್ನಾಗಿರುತ್ತೆ, ಅವಳೂ ಖುಷಿಯಾಗಿರುತ್ತಾಳೆ. ನನ್ನ ಸೊಸೆಯ ಮೇಲೆ ಖಂಡಿತಾ ಅಧಿಕಾರ ಚಲಾಯಿಸುವುದಿಲ್ಲ. ಪ್ರೀತಿಯಿಂದ ಅವಳೊಂದಿಗೆ ಇರುತ್ತೇನೆ.

- ನಮ್ಮ ಕಾಲ ಮುಗೀತು, ಈ ಕಾಲದ ಮಕ್ಕಳನ್ನು ಬೆಳೆಯಲು ಬಿಡೋಣ

ಹೆಚ್ಚಿನ ಅತ್ತೆಯರು ಸೊಸೆಯ ಕೆಲಸಗಳಲ್ಲಿ ಮೂಗು ತೂರಿಸುತ್ತಾರೆ. ಮಗ ಸೊಸೆಗೆ ಅಧಿಕಾರ ಬಿಟ್ಟು ಕೊಡಲ್ಲ. ಏನೆಲ್ಲ ತರಲೆ ಮಾಡ್ತಾರೆ. ಅದು ಒಳ್ಳೆಯದಲ್ಲ ಅನಿಸುತ್ತದೆ. ನಮಗೆ ಇಷ್ಟು ಸಮಯ ಇತ್ತಲ್ಲಾ, ಅದರಲ್ಲಿ ನಾವು ನಮಗೆ ಬೇಕಾದ್ದು ಮಾಡಿದ್ದೀವಲ್ಲ. ಈಗ ಮಕ್ಕಳ ಸರದಿ, ಅವರಿಗೆ ಬೆಳೆಯಲು ಬಿಡೋಣ. ಅವರಿಷ್ಟದ ಹಾಗೆ ಅವರು ಬದುಕು ಕಟ್ಟಲಿ. ಬೆಳೆಸಲಿ.

ನಾವೇಕೆ ಮಕ್ಕಳಿಗೆ ಪುರಾಣದ ಕತೆ ಹೇಳಬೇಕು? 

- ನೀನು ಅಡ್ಜೆಸ್ಟ್ ಮಾಡ್ಕೊಳ್ಳೋದೆಲ್ಲ ಬೇಡ ಅಂತೀನಿ ಸೊಸೆಗೆ.

ನಾನು ಹಳೆಯ ಜನರೇಶನ್ ನವರು. ಅವರು ಈ ಕಾಲದವರು. ನಾವು ಈ ಕಾಲಕ್ಕೆ ಅಡ್ಜೆಸ್ಟ್ ಆಗ್ಬೇಕೇ ಹೊರತು ನಮ್ಮ ಕಾಲದಂತೆ ಅವರು ನಡೆದುಕೊಳ್ಳಬೇಕು ಅನ್ನೋದರಲ್ಲಿ ಅರ್ಥ ಇಲ್ಲ. ಅವಳ ಹೊಸತನ ನಮ್ಮ ಮನೆಯೊಳಗೆ ಬರಬೇಕು. ಅದರ ವಿನಃ ನಮ್ಮ ಹಳೆಯ ಕಟ್ಟಳೆಗಳನ್ನು ಆ ಎಳೆಯ ಹುಡುಗಿ ಮೇಲೆ ಹೇರೋದರಲ್ಲಿ ಅರ್ಥ ಇದೆಯಾ..

- ನಿರೀಕ್ಷೆಯ ಭಾರ ಇಲ್ಲ.

ನನ್ನ ಸೊಸೆಯ ಬಗ್ಗೆ ನಿರೀಕ್ಷೆಯ ಭಾರ ಹೊತ್ತುಕೊಳ್ಳಲ್ಲ. ಅವಳಿಷ್ಟ ಬಂದ ಹಾಗೆ ಅವಳಿದ್ದರೆ ಅದೇ ಖುಷಿ. ಆಮೇಲೆ ಅವರು ನನ್ನ ಬಗ್ಗೆ ಕೇರ್ ತಗೊಳ್ಬೇಕು ಅನ್ನೋದೆಲ್ಲ ನಂಗಿಲ್ಲ. ಅವರ ಪಾಡಿಗೆ ಅವರು ಖುಷಿಯಾಗಿದ್ರೆ ನಾನೂ ಸಂತೋಷವಾಗಿರುತ್ತೇನೆ. ಈ ಮೂಲಕ ನಾವೆಲ್ಲ ಲೈಫ್ ಅನ್ನು ನಮ್ಮ ನಮ್ಮ ರೀತಿಯಲ್ಲಿ ಎನ್ ಜಾಯ್ ಮಾಡಬಹುದು.

click me!