ಮುಟ್ಟಿನ ನಂತ್ರ ಕಾಡುವ ಯೋನಿ ತುರಿಕೆಗೆ ಇಲ್ಲಿದೆ ಮನೆ ಮದ್ದು

By Suvarna NewsFirst Published Aug 30, 2022, 1:21 PM IST
Highlights

ಮಹಿಳೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾಳೆ. ಸೋಂಕು ಕೂಡ ಮಹಿಳೆಗೆ ಕಾಡುವ ಸಾಮಾನ್ಯ ಸಮಸ್ಯೆ. ಯೋನಿಯಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾ ಕಾಣಿಸಿಕೊಳ್ಳುತ್ತದೆ. ಯೋನಿ ತುರಿಕೆ ಕೂಡ ಬ್ಯಾಕ್ಟೀರಿಯಾ ಸಮಸ್ಯೆಯಿಂದ ಕಾಡುತ್ತದೆ. ಇದು ಕಿರಿಕಿರಿ ಜೊತೆ ಮುಜುಗರಕ್ಕೂ ಕಾರಣವಾಗುತ್ತದೆ. 

ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ವಿಪರೀತ ರಕ್ತಸ್ರಾವ, ಕಿಬ್ಬೊಟ್ಟೆ ಮತ್ತು ಕಾಲು ನೋವು ಜೊತೆಗೆ ಯೋನಿಯಲ್ಲಿ ಉರಿ ಹಾಗೂ ತುರಿಕೆ. ಮುಟ್ಟಿನ ಮೂರು ದಿನಗಳು ಕಳೆದ ನಂತ್ರ ಉಳಿದ ಸಮಸ್ಯೆಗಳು ಕಡಿಮೆಯಾಗುತ್ತವೆ. ಆದ್ರೆ ಯೋನಿಯ ಉರಿ ಮಾತ್ರ ಅನೇಕ ದಿನಗಳ ಕಾಲ ಕಾಡುತ್ತದೆ. ಇದ್ರಿಂದ ಮಹಿಳೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾಳೆ. ಎಲ್ಲರ ಮುಂದೆ ಮುಜುಗರಕ್ಕೊಳಗಾಗ್ತಾಳೆ. ಯೋನಿ ತುರಿಕೆಯಿಂದ ಮುಕ್ತಿ ಪಡೆಯಲು ಸಾಕಷ್ಟು ಪ್ರಯತ್ನ ನಡೆದಿರುತ್ತದೆ. ಆದ್ರೆ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಅಂಥ ಸಂದರ್ಭದಲ್ಲಿ ನೀವು ಮನೆ ಮದ್ದನ್ನು ಬಳಸಬಹುದು. ಕೆಲ ಮನೆ ಮದ್ದು ಯೋನಿ ತುರಿಕೆಯನ್ನು ಕಡಿಮೆ ಮಾಡುತ್ತವೆ. ಇಂದು ನಾವು ಮುಟ್ಟಿನ ನಂತ್ರ ಕಾಡುವ ಯೋನಿ ತುರಿಕೆಗೆ ಮನೆ ಮದ್ದುಗಳು ಯಾವುವು ಎಂಬುದನ್ನು ಹೇಳ್ತೇವೆ.

ಯೋನಿ (Vagina) ತುರಿಕೆಗೆ ಮನೆ ಮದ್ದು (Home Remedy) :

ಯೋನಿಯ ಸ್ವಚ್ಛತೆ : ಮುಟ್ಟಿನ ನಂತ್ರ ಯೋನಿಯಲ್ಲಿ ತುರಿಕೆ (Itching) ಕಾಣಿಸಿಕೊಳ್ಳಬಾರದು ಅಂದ್ರೆ ಮುಟ್ಟಿನ ಸಂದರ್ಭದಲ್ಲಿ ಖಾಸಗಿ ಅಂಗದ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡ್ಬೇಕು. ಮುಟ್ಟಿನ ಸಮಯದಲ್ಲಾಗು ಬ್ಲೀಡಿಂಗ್ ನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಇರುತ್ತದೆ. ಇದು ಶಿಲೀಂಧ್ರಗಳ ಸೋಂಕಿನ ಅಪಾಯವನ್ನುಂಟು ಮಾಡುತ್ತದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ  ಯೋನಿಯನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಬೇಕು. ಜೊತೆಗೆ ಆಗಾಗ ಪ್ಯಾಡ್ ಬದಲಿಸುವುದನ್ನು ಮರೆಯಬಾರದು.

ಪಿಸಿಒಎಸ್ ಸಮಸ್ಯೆಯೇ? ಇಲ್ಲಿದೆ ನೋಡಿ ಪರಿಹಾರ

ಔಷಧಿಯಾಗಿ ತೆಂಗಿನ ಎಣ್ಣೆ : ಯೀಸ್ಟ್ ಸೋಂಕಿನ ವಿರುದ್ಧ ಹೋರಾಡಲು ತೆಂಗಿನ ಎಣ್ಣೆ ಹೆಚ್ಚು ಪ್ರಯೋಜನಕಾರಿ ಎಂದು ಕೆಲ ಸಂಶೋಧನೆಗಳು ಹೇಳಿವೆ. ಯೋನಿಯಲ್ಲಿ ತುರಿಕೆ ಕಾಣಿಸಿಕೊಳ್ತಿದ್ದರೆ ನೀವು ತೆಂಗಿನ ಎಣ್ಣೆ ಬಳಸಬಹುದು. ತೆಂಗಿನ ಎಣ್ಣೆ ಯೋನಿ ಸುತ್ತಲಿನ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಯೋನಿ ಶುಷ್ಕವಾಗಿ ಅನೇಕ ಬಾರಿ ತುರಿಕೆ ಕಾಣಿಸಿಕೊಳ್ಳುತ್ತದೆ. ಯೋನಿಯ ಸುತ್ತ ತೆಂಗಿನ ಎಣ್ಣೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡ್ತಾ ಬಂದ್ರೆ ತುರಿಕೆ ಕಡಿಮೆಯಾಗುತ್ತದೆ.

ಎಸೆನ್ಸಿಯಲ್ ಆಯಿಲ್ (ಸಾರಭೂತ ತೈಲ) : ಎಸೆನ್ಸಿಯಲ್ ಆಯಿಲ್ ಹಾನಿಕಾರಕ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣ ಇದರಲ್ಲಿದೆ. ತುರಿಕೆ, ಅಲರ್ಜಿ ಕಡಿಮೆ ಮಾಡಲು ಯೋನಿ ಸುತ್ತ ಸಾರಭೂತ ತೈಲವನ್ನು ಹಚ್ಚಬೇಕು.  2-3 ಹನಿ ಸಾರಭೂತ ತೈಲದಿಂದ ಯೋನಿ ಹೊರ ಭಾಗಕ್ಕೆ ಮಸಾಜ್ ಮಾಡಬೇಕು.  

ಅಡಿಗೆ ಸೋಡಾ ಕೂಡ ಪರಿಣಾಮಕಾರಿ : ಯೋನಿ ತುರಿಕೆಯಿದ್ರೆ ನೀವು ಅಡುಗೆ ಸೋಡಾ ಬಳಸಬಹುದು. ಇದು ಆ್ಯಂಟಿ ಫಂಗಲ್ ಗುಣ ಹೊಂದಿದೆ. ಮುಕ್ಕಾಲು ಟೀ ಚಮಚ ಅಡಿಗೆ ಸೋಡಾವನ್ನು ಅರ್ಧ ಕಪ್ ನೀರಿನಲ್ಲಿ ಕರಗಿಸಿ ಮತ್ತು ಯೋನಿ ಸುತ್ತ ಸ್ವಚ್ಛಗೊಳಿಸಿ. ಯೋನಿ ಒಳಗೆ ನೀರು ಹೋಗದಂತೆ ನೋಡಿಕೊಳ್ಳಿ. 

ಭಾವಿ ಅತ್ತೆ-ಮಾವನ ಭೇಟಿ: ಮಾತನಾಡುವಾಗ ಇರಲಿ ನಾಲಿಗೆ ಮೇಲೆ ಹಿಡಿತ!

ಆಪಲ್ ವಿನೆಗರ್ ಬಳಸಿ ನೋಡಿ : ಯೋನಿ ತುರಿಕೆಗೆ ಆಪಲ್ ವಿನೆಗರ್ ಪರಿಹಾರವಾಗಬಲ್ಲದು. ನೀವು ಅಡುಗೆ ಸೋಡಾದಂತೆಯೇ ಆಪಲ್ ಸೈಡರ್ ವಿನೆಗರ್ ಬಳಸಬಹುದು. ತುರಿಕೆ ಕಡಿಮೆ ಮಾಡುವ ಜೊತೆಗೆ ಯೋನಿ ಉರಿಗೆ ಕೂಡ ಇದು ಪರಿಣಾಮಕಾರಿ. ಇದರಲ್ಲೂ ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣವಿದೆ. ಬ್ಯಾಕ್ಟೀರಿಯಾವನ್ನು ಇದು ತಡೆಯುತ್ತದೆ. 1 ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಅರ್ಧ ಕಪ್ ನೀರಿನಲ್ಲಿ ಬೆರೆಸಿ ಮತ್ತು ಯೋನಿಯ ಸುತ್ತ ಸ್ವಚ್ಛಗೊಳಿಸಿ. ಯೋನಿ ಒಳಗೆ ಹೋಗದಂತೆ ನೋಡಿಕೊಳ್ಳಬೇಕು.

ಮುಟ್ಟು ಮುಗಿದ ನಾಲ್ಕೈದು ದಿನವಾದ್ರೂ ತುರಿಕೆ ಮುಂದುವರೆದಿದೆ ಎಂದಾದ್ರೆ ಅಥವಾ ಮನೆ ಮದ್ದಿನ ನಂತ್ರವೂ ಪರಿಹಾರ ಸಿಕ್ಕಿಲ್ಲವೆಂದಾದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು 

click me!