ಗರ್ಭಪಾತವು ಮಹಿಳೆಯರಲ್ಲಿ ನಿದ್ರಾಹೀನತೆ, ತಿನ್ನುವ ಅಸ್ವಸ್ಥತೆಗಳು ಅಥವಾ ಆತ್ಮಹತ್ಯೆಯ ಆಲೋಚನೆಗಳನ್ನು ಪ್ರಚೋದಿಸಬಹುದು ಎಂದು ನಿಮಗೆ ತಿಳಿದಿದೆಯೇ ? ಹಾಗಿದ್ರೆ ಇಂಥಾ ಸಮಸ್ಯೆಗಳಿಂದ ಹೊರಬರಲು ಏನು ಮಾಡಬೇಕು ?
ಗರ್ಭಪಾತವು ಮಹಿಳೆಯ ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದು. ಇದು ಮಹಿಳೆಯ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ, ಆಕೆಯ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಗರ್ಭಪಾತವು ಭ್ರೂಣವನ್ನು ತೆಗೆದುಹಾಕುವ ಮೂಲಕ ಗರ್ಭಾವಸ್ಥೆಯನ್ನು ಅಂತ್ಯಗೊಳಿಸುವ ಒಂದು ವಿಧಾನವಾಗಿದೆ. ಗರ್ಭಪಾತವನ್ನು ಆರಿಸಿಕೊಳ್ಳುವ ಮಹಿಳೆಯರು ತೀವ್ರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಮಹಿಳೆಯರು ಒತ್ತಡ, ಆತಂಕ, ಖಿನ್ನತೆ, ಕೋಪ, ಒಂಟಿತನವನ್ನು ಅನುಭವಿಸಬಹುದು. ಹಾಗೆಯೇ ಗರ್ಭಪಾತವು ನಿದ್ರಾಹೀನತೆ ಅಥವಾ ಇತರ ನಿದ್ರೆಯ ಅಸ್ವಸ್ಥತೆಗಳು, ತಿನ್ನುವ ಅಸ್ವಸ್ಥತೆಗಳು ಅಥವಾ ಆತ್ಮಹತ್ಯೆಯ ಆಲೋಚನೆಗಳನ್ನು ಸಹ ಪ್ರಚೋದಿಸಬಹುದು ಎಂದು ನಿಮಗೆ ತಿಳಿದಿದೆಯೇ ?
ಗರ್ಭಪಾತದ (Abortion) ನಂತರ ಸ್ತ್ರೀಯರಿಗೆ ಭಾವನಾತ್ಮಕ ತೊಂದರೆಗಳು ಎದುರಾಗುತ್ತದೆ. ಗರ್ಭಪಾತವು ತಪ್ಪಿತಸ್ಥ ಭಾವನೆಗಳನ್ನು ಸಹ ಉಂಟು ಮಾಡಬಹುದು. ಹಾಗಿದ್ರೆ ಗರ್ಭಪಾತದ ನಂತರ ಕಾಣಿಸಿಕೊಳ್ಳುವ ಒತ್ತಡ, ಖಿನ್ನತೆ (Anxiety)ಯನ್ನು ಹೋಗಲಾಡಿಸುವುದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ.
undefined
Abortion ಮಾತ್ರೆ ಸೇವಿಸಿ ನೋವುಂಡ ಹುಡುಗಿ ಹೇಳೋದನ್ನ ಒಮ್ಮೆ ಕೇಳಿಸಿ ಕೊಳ್ಳಿ
ಗರ್ಭಪಾತದ ನಂತರ ಖಿನ್ನತೆಯ ಭಾವನೆಯನ್ನು ಎದುರಿಸುವುದು ಹೇಗೆ ?
1. ಪ್ರೀತಿ ಪಾತ್ರರೊಂದಿಗೆ ಮಾತನಾಡಿ: ಯಾವುದೇ ಸಮಸ್ಯೆಯಿಂದ ಹೊರಬರಲು ಪ್ರೀತಿ ಪಾತ್ರರೊಂದಿಗೆ ಮಾತನಾಡುವುದು ತುಂಬಾ ಮುಖ್ಯ. ಮನಸ್ಸಿನಿಂದ ಯಾವುದೇ ನಕಾರಾತ್ಮಕ ಭಾವನೆಗಳನ್ನು ತೊಡೆದುಹಾಕಲು ಸ್ನೇಹಿತರು, ಕುಟುಂಬ ಸದಸ್ಯರು, ಸಹೋದ್ಯೋಗಿಗಳೊಂದಿಗೆ ಮಾತನಾಡುವ ಅಭ್ಯಾಸ ರೂಢಿಸಿಕೊಳ್ಳಿ. ಒತ್ತಡವನ್ನು (Pressure) ನಿವಾರಿಸಲು ನಿಮಗೆ ಸಹಾಯ ಮಾಡುವ ಸ್ನೇಹಿತ ಅಥವಾ ಕುಟುಂಬದ ಸದಸ್ಯರಲ್ಲಿ ಸಮಸ್ಯೆಯನ್ನು ಹೇಳುವುದು ಉತ್ತಮ.
2. ಇತರರಿಂದ ನಿಮ್ಮನ್ನು ಪ್ರತ್ಯೇಕಿಸಬೇಡಿ: ಗುಂಪಿನಿಂದ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳುವುದು ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು ಮತ್ತು ನೀವು ನಿಮ್ಮನ್ನು ದೂಷಿಸಿಕೊಳ್ಳಲು ಕಾರಣವಾಗಬಹುದು. ನಿಮ್ಮ ಕುಟುಂಬ ಅಥವಾ ಸ್ನೇಹಿತರಿಂದ ದೂರವಿರುವುದನ್ನು ತಪ್ಪಿಸಿ. ನಿಮ್ಮ ಪ್ರೀತಿಪಾತ್ರರ ಜೊತೆ ಸಂಪರ್ಕದಲ್ಲಿರಲು ಪ್ರಯತ್ನಿಸಿ ಮತ್ತು ಏಕಾಂಗಿಯಾಗಿ ಹೆಚ್ಚು ಸಮಯ ಕಳೆಯಬೇಡಿ.
3. ಅಗತ್ಯವಿದ್ದರೆ ಸಮಾಲೋಚನೆಯನ್ನು ಆರಿಸಿಕೊಳ್ಳಿ: ನೀವು ಹೆಚ್ಚು ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ವೃತ್ತಿಪರರ ಸಹಾಯ ಪಡೆದುಕೊಳ್ಳುವುದು ಯಾವಾಗಲೂ ಒಳ್ಳೆಯದು. ಇದು ನಕಾರಾತ್ಮಕ ಭಾವನೆಗಳನ್ನು ನಿವಾರಿಸಲು ಮತ್ತು ಮನಸ್ಸು ನಿರಾಳವಾಗಿರಲು ನಿಮಗೆ ಸಹಾಯ ಮಾಡುತ್ತದೆ. ವೃತ್ತಿಪರರು ನಿಮಗೆ ಶಾಂತವಾಗಿರಲು ಮತ್ತು ಸಂಯೋಜಿಸಲು ಮತ್ತು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತಾರೆ.
ಅವಿವಾಹಿತ ಮಹಿಳೆಯರೂ ಗರ್ಭಪಾತ ಮಾಡಿಸಿಕೊಳ್ಳಬಹುದು; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
4. ಜನರು ನಿಮ್ಮ ಮೇಲೆ ಒತ್ತಡ ಹೇರಲು ಬಿಡಬೇಡಿ: ಜೀವನದಲ್ಲಿ ಸಮಸ್ಯೆಗಳಿದ್ದಾಗ ಅದು ನಿಮ್ಮ ಮನಸ್ಸಿನ ಮೇಲೆ ಒತ್ತಡ ಹೇರಲು ಬಿಡಬಾರದು. ಇದು ನಿಮ್ಮ ಮಾನಸಿಕ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಹೀಗಾಗಿ ಜನರ ಮಾತುಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟುಬಿಡಿ.
5. ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ: ನೀವು ಗರ್ಭಪಾತಕ್ಕೆ ಹೋಗಲು ನಿರ್ಧರಿಸಿದ್ದರೆ, ಉತ್ತಮ ಆಹಾರ (Food_ ಮತ್ತು ವ್ಯಾಯಾಮದ (Exercise) ಆಡಳಿತವನ್ನು ಅನುಸರಿಸಿ. ವಿಶ್ರಾಂತಿ ಪಡೆಯಲು ಮರೆಯಬೇಡಿ ಮತ್ತು ಒತ್ತಡದಿಂದ ಮುಕ್ತವಾಗಿರಲು ಪ್ರಯತ್ನಿಸಿ. ಆತಂಕ ಅಥವಾ ಖಿನ್ನತೆಯು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಅದರ ಬಗ್ಗೆ ಯಾರೊಂದಿಗಾದರೂ ಮಾತನಾಡಿ. ನೀವು ನಿರ್ಧಾರ ತೆಗೆದುಕೊಂಡಿದ್ದರೆ, ಅದರಲ್ಲಿ ದೃಢವಾಗಿರಿ.