ಅಜ್ಜೀ ಅಜ್ಜಿ ಮೋಕೆದ ಅಜ್ಜಿ- ಅಜ್ಜಿಯನ್ನು ಬಾಚಿತಬ್ಬಿ ಭಾವುಕರಾದ ಮಿಸ್ ಇಂಡಿಯಾ ಸಿನಿ ಶೆಟ್ಟಿ

Published : Jul 19, 2022, 07:48 PM IST
ಅಜ್ಜೀ ಅಜ್ಜಿ ಮೋಕೆದ ಅಜ್ಜಿ- ಅಜ್ಜಿಯನ್ನು ಬಾಚಿತಬ್ಬಿ ಭಾವುಕರಾದ ಮಿಸ್ ಇಂಡಿಯಾ ಸಿನಿ ಶೆಟ್ಟಿ

ಸಾರಾಂಶ

ಮಿಸ್‌ ಇಂಡಿಯಾ ವರ್ಲ್ಡ್-2022’ ಕಿರೀಟ ಮುಡಿಗೇರಿಸಿಕೊಂಡಿರುವ ಕನ್ನಡತಿ ಸಿನಿ ಶೆಟ್ಟಿ ತವರೂರು ಉಡುಪಿಗೆ ಆಗಮಿಸಿದ್ದು, ಅವರಿಗೆ ಗ್ರ್ಯಾಂಡ್ ವೆಲ್‌ಕಮ್ ಮಾಡಲಾಗಿದೆ. ಈ ವೇಳೆ  ಅಜ್ಜಿಯನ್ನು ಬಾಚಿತಬ್ಬಿ ಭಾವುಕರಾದರು.

ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ, (ಜುಲೈ19): ತನ್ನ ಪ್ರೀತಿಯ 'ದೊಡ್ಡ' ನನ್ನು ಬಾಚಿ ಬಿಗಿದಪುತ್ತಾ, ಅಜ್ಜಿ ಎನ್ನ ಮೋಕೆದ ಅಜ್ಜಿ ಎಂದು ಪ್ರೀತಿಯ ಸುರಿಮಳೆಗೈದದ್ದು ಬೇರಾರು ಅಲ್ಲ; ಮಿಸ್ ಇಂಡಿಯಾ ಖ್ಯಾತಿಗೆ ಪಾತ್ರರಾದ ಸಿನಿ ಶೆಟ್ಟಿ. ದೇಶದಲ್ಲೇ ಸುಂದರಿ ಎಂಬ ಕಿರೀಟ ಹೊತ್ತ ಬಳಿಕ ಇದೇ ಮೊದಲ ಬಾರಿಗೆ ಸಿನಿ ಶೆಟ್ಟಿ ತನ್ನ ತವರು ಉಡುಪಿಗೆ ಆಗಮಿಸಿದ್ದಾರೆ. 

ಮೊಮ್ಮಗಳನ್ನು ಕಾಣುಲು  ಓಡೋಡಿ ಬಂದ ಅಜ್ಜಿಯ ಬಳಿ, ನನಗೇನು ಮಾಡಿದ್ದೀಯಾ ಎಂದು ಕೇಳಿದರು. ನಾನು ನಿನ್ನನ್ನು ಆಸೆ ಮಾಡುತ್ತೇನೆ ಎಂದು ಅಜ್ಜಿ ಮೊಮ್ಮಗಳನ್ನು ಅಪ್ಪಿಕೊಂಡರು. ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಆವರಣ. 

ಅದ್ಧೂರಿ ಸ್ವಾಗತ, ತೆರೆದ ವಾಹನದಲ್ಲಿ ಮೆರವಣಿಗೆ

ನಿನ್ನೆ(ಸೋಮವಾರ) ಮಂಗಳೂರಿಗೆ ಬಂದಿದ್ದ ಸಿನಿ ಶೆಟ್ಟಿ ಕಟೀಲು ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು‌. ಇಂದು(ಮಂಗಳವಾರ) ತವರೂರು ಉಡುಪಿಗೆ ಆಗಮಿಸಿದಾಗ ಜೋಡು ಕಟ್ಟೆಯಲ್ಲಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ತೆರೆದ ವಾಹನದಲ್ಲಿ ನಗರದ ಪ್ರಮುಖ ಮಾರ್ಗಗಳ ಮೂಲಕ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

'ಮಿಸ್ ಇಂಡಿಯಾ ವರ್ಲ್ಡ್' ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ ಸಿನಿ ಶೆಟ್ಟಿಯ ಸುಂದರ ಫೋಟೋಗಳು

 ಬಂಟ ಸಮುದಾಯದ ಗಣ್ಯರೆಲ್ಲರೂ ಈ ಸ್ವಾಗತದ ವೇಳೆ ಹಾಜರಿದ್ದರು. ಚಂಡೆಯ ನಾದ ಮತ್ತು ಯಕ್ಷಗಾನ ವೇಷದ ಅದ್ದೂರಿತನದ ನಡುವೆ, ಸಾರ್ವಜನಿಕರಿಗೆ ಕೈಬೀಸುತ್ತಾ ಸಿನಿ ಶೆಟ್ಟಿ ಮೆರವಣಿಗೆ ಸಾಗಿ ಬಂತು.

ನಗರದ ಅಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಬಂಟರ ಸಂಘದಿಂದ, ಅದ್ದೂರಿ ಸನ್ಮಾನ ಏರ್ಪಾಟಾಗಿತ್ತು. ಸಭಾಭವನದ ಆವರಣದಲ್ಲಿರುವ ಸಿದ್ಧಿವಿನಾಯಕ ಗುಡಿಗೆ, ತಂದೆ ತಾಯಿ ಜೊತೆಗೆ ತೆರಳಿದ ಸಿನಿ ಶೆಟ್ಟಿ, ಅಜ್ಜಿಯನ್ನು ತಾನೇ ಕೈಯಾರೆ ಕರೆದುಕೊಂಡು ಹೋದರು. ದೇವರಿಗೆ ಕೈ ಮುಗಿದು ಪೂಜೆ ಸಲ್ಲಿಸಿದ ಬಳಿಕ, ಹೊರಬಂದು ಅಜ್ಜಿ ನನಗೆ ಏನು ಮಾಡಿದ್ದೀಯಾ? ಎಂದು ಕೇಳಿದರು.

ನನ್ನ ಬಾಲ್ಯದಿಂದಲೂ ಅಜ್ಜಿ ನನಗೆ ಬೆಂಬಲವಾಗಿದ್ದರು:ನಾನು ಎಲ್ಲೇ ಹೋದರು ಯಾವುದೇ ಉಡುಗೆ ತೊಟ್ಟರೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು.ಅವರು ನನ್ನ ಜೊತೆ ಯಾವಾಗಲೂ ಇರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನನ್ನ ಅಜ್ಜಿ ನನಗೆ ತುಂಬಾ ಪ್ರೇರೇಪಣೆ ನೀಡುತ್ತಾರೆ.ಇವತ್ತು ಎಲ್ಲರೂ ನನ್ನನ್ನು ಗುರುತಿಸಿರುವ ಬಗ್ಗೆ ತುಂಬಾ ಖುಷಿಯಾಗಿದೆ.ಊರಿನಲ್ಲಿ ನನಗೆ ಸಿಕ್ಕಿರುವ ಸ್ವಾಗತಕ್ಕೆ ನನಗೆ ಸಂತೋಷವಾಗಿದೆ.ಎಲ್ಲರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಿದ್ದೇನೆ.ಎಲ್ಲರಿಗೂ ಧನ್ಯವಾದಗಳು  ಎಂದು ಹೇಳಿದರು.

‘ಮಿಸ್‌ ವರ್ಲ್ಡ್‌’ ನನ್ನ ಗುರಿ: ಮಿಸ್‌ ಇಂಡಿಯಾ ಸಿನಿ ಶೆಟ್ಟಿ

ಈಗಾಗಲೇ ನಾನು ಎರಡು ಮೂರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ.ಅನೇಕ ಸಾಮಾಜಿಕ ಕಾರ್ಯ ಮಾಡುವ ಉತ್ಸಾಹವಿದೆ.ಮಿಸ್ ಇಂಡಿಯಾ ಪುಟದಲ್ಲಿ ಈ ಬಗ್ಗೆ ಅಧಿಕೃತವಾಗಿ ಹೇಳುತ್ತೇನೆ ಎಂದರು.

ಅಜ್ಜಿಯ ಜೊತೆ ಅರ್ಧ ಗಂಟೆ ಮಾತನಾಡಬೇಕು

ಕಟೀಲು ದೇವಿಯ ದರ್ಶನ ಮಾಡಿ ಬಂದಿದ್ದೇನೆ. ಇವತ್ತು ಮತ್ತಷ್ಟು ದೇವಾಲಯಗಳ ಭೇಟಿ ಮಾಡುತ್ತೇನೆ. ಅದೇನೇ ಮಾಡಿದರೂ ಅಜ್ಜಿಯ ಮನೆಗೆ ಹೋಗಿ ಅರ್ಧ ಗಂಟೆ ಅವರ ಜೊತೆ ಕುಳಿತು ಮಾತನಾಡಬೇಕು ಎಂದು ಮನದಾಸೆ ವ್ಯಕ್ತಪಡಿಸಿದರು. ಬಳಿಕ ಸಭಾಭವನದಲ್ಲಿ ಬಂಟ ಸಮುದಾಯದ ವತಿಯಿಂದ ಅದ್ದೂರಿಯಾಗಿ ಸಿನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸ್ಯಾಂಡಲ್ ವುಡ್ನ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಶುಭ ಹಾರೈಸಿದರು. 

ಕರ್ನಾಟಕ ಕರಾವಳಿ ಸೌಂದರ್ಯ ಜಗತ್ತಿಗೆ ಅಪಾರ ಕೊಡುಗೆಗಳನ್ನು ಕೊಟ್ಟಿದೆ. ಐಶ್ವರ್ಯ ರೈ ಯಿಂದ ಆರಂಭಗೊಂಡು,  ಸಿನಿ ಶೆಟ್ಟಿಯವರೆಗೆ ಅನೇಕ ಮಂದಿ ಸೌಂದರ್ಯ ಸ್ಪರ್ಧೆಗಳಲ್ಲಿ ಗೆದ್ದು ಕರಾವಳಿಯ ಕೀರ್ತಿ ಹೆಚ್ಚಿಸಿದ್ದಾರೆ.‌ 

ಪ್ರಾರಂಭದಿಂದಲೂ  ಭಾಗದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ಇರುವುದರಿಂದ, ಈ ರೀತಿಯಲ್ಲಿ ಕರ್ನಾಟಕ ಕರಾವಳಿಯ ಯುವತಿಯರು ಮತ್ತೊಬ್ಬರನ್ನು ಪ್ರೇರೇಪಿಸುವ ರೀತಿಯ ಸಾಧನೆ ಮಾಡುತ್ತಿದ್ದಾರೆ, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ಶ್ರೀನಿಧಿ ಮತ್ತು ಈಗ ಸಿನಿ ಶೆಟ್ಟಿ ಸಾಧನೆ ಮಾಡಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!