
ಆ ಮನೆಯಲ್ಲಿ ಭೂತವಿದ್ಯಂತೆ ಎನ್ನುವ ಗಾಳಿ ಸುದ್ದಿ ಹಬ್ಬಿದ್ರೂ ಜನರು ಅಲ್ಲಿಗೆ ಹೋಗೋದಿರಲಿ ಆ ಕಡೆ ತಲೆ ಹಾಕಿ ಕೂಡ ಮಲಗೋದಿಲ್ಲ. ಆ ಜಾಗವನ್ನು ವಿಚಿತ್ರವಾಗಿ ನೋಡ್ತಾರೆ. ಅಲ್ಲಿ ಭೂತ ನೋಡಿದ್ದೇನೆ, ನನಗೆ ಭೂತ ಕಾಣುತ್ತೆ, ಭೂತದ ಜೊತೆ ನಾನಿರ್ತೇನೆ ಅಂದ್ರೆ, ಈತನಿಗೆ ಹುಚ್ಚು ಹಿಡಿದಿದೆ ಅಂತಾ ಹುಚ್ಚಾಸ್ಪತ್ರೆಗೆ ಸೇರಿಸ್ತಾರೆ. ಜಗತ್ತಿನಲ್ಲಿ ಭೂತವನ್ನು ನಂಬುವ ಜನರೂ ಇದ್ದಾರೆ. ಭಾರತದಲ್ಲಿ ಮೂಡನಂಬಿಕೆ ಹೆಚ್ಚಿದೆ, ಜನರು ಭೂತ, ಆತ್ಮಗಳ ಬಗ್ಗೆ ಹೇಳ್ತಾರೆ ಅಂತಾ ಜಗತ್ತು ಮಾತನಾಡುತ್ತೆ. ಆದ್ರೆ ಭಾರತ ಮಾತ್ರವಲ್ಲ ವಿಶ್ವದ ಅನೇಕ ದೇಶಗಳು ಈ ಭೂತ, ಆತ್ಮಗಳನ್ನು ನಂಬುತ್ತವೆ. ದೊಡ್ಡಣ್ಣ ಅಮೆರಿಕಾ ಇದ್ರಲ್ಲೇನು ಕಡಿಮೆ ಇಲ್ಲ. ಯುವತಿಯೊಬ್ಬಳು ಈ ಭೂತದಿಂದಲೇ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ.
ಆಕೆ ಪ್ರಕಾರ, ಯುವತಿ ಭೂತ (Ghost) ಗಳಿರುವ ಮನೆಯಲ್ಲೇ ಬೆಳೆದು ದೊಡ್ಡವಳಾಗಿದ್ದಾಳಂತೆ. ಹಾಗಾಗಿ ಆಕೆಗೆ ಭೂತವೆಂದ್ರೆ ಭಯ (Fear) ವಿಲ್ಲ. ಕೆಲವೊಂದು ಭಯಾನಕ ದೃಶ್ಯಗಳನ್ನು ಆಕೆ ನೋಡಿದ್ದಾಳೆ. ಭೂತಗಳ ಜೊತೆ ಭೂತದ ಮನೆಯಲ್ಲಿ ವಾಸವಾಗಿದ್ದರಿಂದ ನನಗೆ ನಷ್ಟವಿಲ್ಲ ಬದಲಿಗೆ ಲಾಭವೇ ಆಗಿದೆ ಎನ್ನುತ್ತಾಳೆ ಆಕೆ. ಆಕೆ ಭೂತಗಳಿಂದಾಗಿಯೇ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ. ಆ ಯುವತಿ ಯಾರು, ಭೂತದ ಜೊತೆ ನಂಟೇನು ಎಂಬ ಮಾಹಿತಿ ಇಲ್ಲಿದೆ.
7 ದೇಶದ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಶ್ರೀಲಂಕಾ, ಭಾರತೀಯರಿಗೂ ಇದೆಯೇ ಸೌಲಭ್ಯ?
ನಾವು, ಅಮೆರಿಕ (America) ದ ವಾಷಿಂಗ್ಟನ್ ನಲ್ಲಿ ನೆಲೆಸಿರುವ ಅಮಂಡಾ ಪೌಲ್ಸನ್ ಜೀವನದ ಬಗ್ಗೆ ಹೇಳ್ತಿದ್ದೇವೆ. ಅವಳು ಭೂತಗಳಿರುವ ಮನೆಯಲ್ಲಿ ವಾಸವಾಗಿದ್ದಾಳೆ. ಅಮಂಡಾ ವೃತ್ತಿಯಲ್ಲಿ ಸಂಶೋಧಕಿ ಮತ್ತು ತನಿಖಾಧಿಕಾರಿ. ಅವಳು ಅತೀಂದ್ರಿಯ ಶಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಮಾಡ್ತಾಳೆ. ಅಮಂಡಾಗೆ ಏಳು ವರ್ಷವಿದ್ದಾಗ ಮೊದಲ ಬಾರಿ ಭೂತದ ಬಗ್ಗೆ ಅನುಭವವಾಗಿದೆ. ಆಕೆ ಆಗ ಮೊಂಟಾನಾದಲ್ಲಿ ದೆವ್ವದ ಮನೆಯಲ್ಲಿ ವಾಸವಾಗಿದ್ದಳು. ಆಕೆಯ ಗೊಂಬೆ, ರಾತ್ರಿ ಸಮಯದಲ್ಲಿ ತಾನಾಗಿಯೇ ಅಲುಗಾಡ್ತಿತ್ತಂತೆ. ಮನೆಯ ಭಯಾನಕ ನೆಲಮಾಳಿಗೆಯ ಬಗ್ಗೆ ದುಃಸ್ವಪ್ನಗಳು ಬೀಳ್ತಿದ್ದವಂತೆ. ಆ ಸಮಯದಲ್ಲಿ ನಾನು ಈ ಬಗ್ಗೆ ತುಂಬಾ ಹೆದರುತ್ತಿದ್ದೆ ಎನ್ನುವ ಅಮಂಡಾ, ೧೮ನೇ ವರ್ಷವಾಗ್ತಿರುವ ವೇಳೆ ಇದನ್ನು ಎಂಜಾಯ್ ಮಾಡಲು ಶುರು ಮಾಡಿದ್ದಳಂತೆ. ಭೂತಗಳನ್ನು ಹುಡುಕುವ ಕೆಲಸ ಮಾಡ್ತೇನೆ ಎಂದು ನಿರ್ಧರಿಸಿಕೊಂಡ ಅಮಂಡಾ, ಭೂತಗಳ ಬಗ್ಗೆ ಹೆಚ್ಚೆಚ್ಚು ಜ್ಞಾನ ಪಡೆಯುವ ಪ್ರಯತ್ನಕ್ಕೆ ಮುಂದಾದಳಂತೆ. ಭೂತಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದ ಅಮಂಡಾ ಸಿನಿಮಾಗಳನ್ನು ಕೂಡ ವೀಕ್ಷಣೆ ಮಾಡಲು ಶುರು ಮಾಡಿದ್ದಳು.
ಮನರಂಜನಾ ಉದ್ಯಮದಲ್ಲೂ ಅಂಬಾನಿಯದ್ದೇ ಸಾಮ್ರಾಜ್ಯ: ಡಿಸ್ನಿ ಹಾಟ್‌ಸ್ಟಾರ್ ಕೂಡ ರಿಲಯನ್ಸ್ ಪಾಲು!
ಅಮಂಡಾ ಮೊದಲ ಬಾರಿ ಹೈಸ್ಕೂಲಿನಲ್ಲಿರುವಾಗ ಓಯಿಜಾ ಬೋರ್ಡ್ ( Ouija Board) ಬಳಸಲು ಶುರು ಮಾಡಿದ್ಲು. ಕೈನಲ್ಲಿ ಮೊಬೈಲ್ ಇರಲಿಲ್ಲ. ಕರೆಂಟ್ ಇರಲಿಲ್ಲ. ಸ್ನೇಹಿತರ ಜೊತೆ ಇದನ್ನು ಬಳಕೆ ಮಾಡಿದ್ಲು. ಆ ವೇಳೆ ಬರೀ ಮೇಣದಬತ್ತಿ ಮಾತ್ರ ಉರಿತಾ ಇತ್ತು. ಆರಂಭ ಮಾಡ್ತಿದ್ದ ಹಾಗೆ ಇವರಿಗೆ ಉತ್ತರ ಸಿಕ್ಕಿತ್ತಂತೆ. ೧೮೦೦ ದಶಕದ ವ್ಯಕ್ತಿಯೊಬ್ಬರ ಆತ್ಮ ಬಂದಿತ್ತಂತೆ. ಅನೇಕರು ಇದನ್ನು ನಂಬುವುದಿಲ್ಲ ಎನ್ನುವ ಅಮಂಡಾ, ಆಸಕ್ತಿಯನ್ನೇ ಕೆಲಸ ಮಾಡಿಕೊಂಡಿದ್ದಾಳೆ. ಆದ್ರೆ ಅನೇಕರು ಅಮಂಡಾ ಕೆಲಸವನ್ನು ಟ್ರೋಲ್ ಮಾಡ್ತಾರೆ. ಆದ್ರೆ ನಾನು ಇದ್ಯಾವುದಕ್ಕೂ ನಿಲ್ಲೋದಿಲ್ಲ. ನನಗೆ ಭೂತಗಳನ್ನು ಹುಡುಕುವುದ್ರಲ್ಲಿ ಆಸಕ್ತಿ ಇದೆ. ನನಗೆ ಈ ಕೆಲಸ ಮಾಡಿದಾಗ ಖುಷಿ ಸಿಗುತ್ತದೆ. ಹಾಗಾಗಿಯೇ ನಾನು ಈ ಕೆಲಸ ಮಾಡ್ತಾನೆ. ಜನರಿಗೆ ಇದ್ರ ಮೇಲೆ ವಿಶ್ವಾಸ ಮೂಡಿದ್ರೆ ಅವರು ಕೂಡ ಸಂತುಷ್ಟಿಗೊಳ್ತಾರೆ. ಅವರಿಗೂ ಇಂಥ ಕೆಲಸ ಮಾಡೋದ್ರಿಂದ ಖುಷಿ ಸಿಗುತ್ತದೆ ಎನ್ನುತ್ತಾಳೆ ಅಮಂಡಾ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.