ಸಾಮಾಜಿಕ ಜಾಲತಾಣದಲ್ಲಿ ಕೇವಲ ಮನರಂಜನೆ ವಿಷ್ಯಗಳು ಮಾತ್ರವಲ್ಲ ಕಲಿಯಬೇಕಾಗ ವಿಷ್ಯಗಳು ವೈರಲ್ ಆಗ್ತಿರುತ್ತವೆ. ಕೆಲವರು ಮಾಡ್ತಿರುವ ಮೆಚ್ಚುಗೆ ಕೆಲಸಗಳು ಗಮನ ಸೆಳೆಯುತ್ತವೆ. ಈಗ ಹುಡುಗಿಯೊಬ್ಬಳ ಸಮಾಜ ಸೇವೆಯ ವಿಡಿಯೋ ಹೆಚ್ಚು ಸುದ್ದಿ ಮಾಡ್ತಿದೆ.
ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಯಾವುದೋ ಒಂದು ಘಟನೆ ಅವರ ಜೀವನ ಬದಲಿಸುತ್ತದೆ. ಬ್ರೇಕ್ ಅಪ್ ನಂತ್ರ ಕೆಲವರು ಸಾಧನೆ ಮಾಡಿರ್ತಾರೆ. ಆಪ್ತರ ಸಾವಿನ ನಂತ್ರ ಸಮಾಜಸೇವೆಗೆ ನಿಲ್ಲುವವರಿದ್ದಾರೆ. ಜೀವನದಲ್ಲಿ ನಡೆದ ನೋವನ್ನು ಮರೆತು ಇನ್ನು ಕೆಲವರು ಮುಂದೆ ಹೋದ್ರೆ ಮತ್ತೆ ಕೆಲವರು ತಮಗಾದ ಘಟನೆ ಬೇರೆಯವರಿಗೆ ಆಗ್ಬಾರದು ಎಂಬ ಕಾರಣಕ್ಕೆ ಅಗತ್ಯ ಕ್ರಮಕೈಗೊಳ್ಳುತ್ತಾರೆ. ಜಾಗೃತಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಇಂಥ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಈಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳ ಕೆಲಸ ವೈರಲ್ ಆಗಿದೆ. ದಾರಿಯಲ್ಲಿ ಹೋಗುವ ಸೈಕಲ್ ಸವಾರರನ್ನು ನಿಲ್ಲಿಸುವ ಹುಡುಗಿ ಸೈಕಲ್ ಹಿಂದೆ ಲೈಟ್ ಹಾಕ್ತಾಳೆ. ಆ ಹುಡುಗಿ ಯಾರು ? ಹಾಗೆ ಆಕೆ ಯಾಕೆ ಹೀಗೆ ಮಾಡ್ತಿದ್ದಾಳೆ ಎಂಬುದನ್ನು ನಾವಿಂದು ಹೇಳ್ತೇವೆ.
ಸೈಕಲ್ (Bicycle) ಹಿಂದೆ ಲೈಟ್ (Light) ಹಾಕುವ ಹುಡುಗಿ ಯಾರು? : ಆಕೆ ಉತ್ತರ ಪ್ರದೇಶದ ಲಕ್ನೋ (Lucknow) ನಿವಾಸಿ. ಆಕೆ ವಯಸ್ಸು 23. ಆಕೆ ಹೆಸರು ಖುಷಿ (Khushi) ಪಾಂಡೆ. ರಾತ್ರಿ ಸೈಕಲ್ ಮೇಲೆ ಹೋಗುವವರನ್ನು ನಿಲ್ಲಿಸುವ ಖುಷಿ ನಂತ್ರ ಅವರ ಸೈಕಲ್ ಹಿಂದೆ ಲೈಟ್ ಹಾಕಿ ಕಳುಹಿಸುತ್ತಾಳೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ವಿಶ್ವದ ಅತಿ ದೊಡ್ಡ ತುಟಿ ಹೊಂದಿರುವ ಮಹಿಳೆಯೀಕೆ, 34ಕ್ಕೂ ಹೆಚ್ಚು ಇಂಜೆಕ್ಷನ್ ಹಾಕಿಸಿಕೊಂಡಿದ್ದಾಳಂತೆ!
ಘಟನೆ ಹಿಂದಿದೆ ಈ ಕಾರಣ : ಮೊದಲೇ ಹೇಳಿದಂತೆ ಹಳೆ ನೋವನ್ನು ಮರೆಯುವ ಮೂಲಕ ತನ್ನ ಜೀವನದಲ್ಲಾದ ಘಟನೆ ಬೇರೆಯವರಿಗೆ ಆಗ್ಬಾರದು ಎನ್ನುವ ಕಾರಣಕ್ಕೆ ಖುಷಿ ಈ ಕೆಲಸ ಮಾಡ್ತಿದ್ದಾಳೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಒಂದು ದಿನ ರಾತ್ರಿ ಖುಷಿಯ ಅಜ್ಜ ಕೈಲಾಶ್ ನಾಥ್ ತಿವಾರಿ ಅಪಘಾತಕ್ಕೆ ಒಳಗಾದ್ದರು. ಘಟನೆಯಲ್ಲಿ ಕೈಲಾಶ್ ನಾಥ್ ಸಾವನ್ನಪ್ಪಿದ್ದರು. ಕೈಲಾಶ್ ನಾಥ್ ಸೈಕಲ್ ಚಲಾಯಿಸುವ ವೇಳೆ ಈ ಘಟನೆ ನಡೆದಿತ್ತು. ಸೈಕಲ್ ಹಿಂದೆ ಲೈಟ್ ಇರಲಿಲ್ಲ. ಹಾಗಾಗಿ ಸೈಕಲ್ ಹೋಗ್ತಿದೆ ಎಂಬುದು ಗೊತ್ತಾಗಿರಲಿಲ್ಲ. ಇದ್ರಿಂದ ಖುಷಿ ಆಘಾತಕ್ಕೊಳಗಾಗಿದ್ದಳು. ಯಾವ ಸೈಕಲ್ ಸವಾರನಿಗೂ ಇಂತಹ ಘಟನೆ ನಡೆಯಬಾರದು ಎಂದು ನಿರ್ಧರಿಸಿದ್ದಳು. ಅಂದಿನಿಂದ ಅವಳು ರಾತ್ರಿಯಲ್ಲಿ ಸೈಕಲ್ ನಿಲ್ಲಿಸಿ, ಸೈಕಲ್ ಹಿಂದೆ ಬ್ಯಾಟರಿ ಚಾಲಿತ ದೀಪಗಳನ್ನು ಹಾಕುತ್ತಿದ್ದಾಳೆ. ರಸ್ತೆಯಲ್ಲಿ ಬೋರ್ಡ್ ಹಿಡಿದು ನಿಲ್ಲುವ ಖುಷಿ, ನಂತ್ರ ಸೈಕಲ್ ನಿಲ್ಲಿಸಿ ಲೈಟ್ ಹಾಕ್ತಾಳೆ. ಖುಷಿ ಈವರೆಗೆ ಸಾವಿರಕ್ಕೂ ಹೆಚ್ಚು ಲೈಟ್ ಗಳನ್ನು ಹಾಕಿದ್ದಾಳೆ. ಖುಷಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಎಲ್ಲರಿಗೂ ಮಾದರಿ ಖುಷಿ : ಲೈಟ್ ಗಳನ್ನು ಖುಷಿ ಉಚಿತವಾಗಿ ಹಾಕ್ತಿದ್ದಾಳೆ. ಹಾಗಂತ ಖುಷಿಗೆ ಲೈಟ್ ಗಳು ಉಚಿತವಾಗಿ ಸಿಗ್ತಿಲ್ಲ. ಸಗಟು ಖರೀದಿಸಿದಾಗ ಒಂದು ಲೈಟ್ ಬೆಲೆ ಸುಮಾರು 350 ರೂಪಾಯಿ. ಖುಷಿ ಲಕ್ನೋದ ಖಾಸಗಿ ವಿಶ್ವವಿದ್ಯಾಲಯದಲ್ಲಿ ಬಿಬಿಎ ಕಾನೂನು ಓದುತ್ತಿದ್ದಾಳೆ. ಇದಲ್ಲದೇ ಪಾರ್ಟ್ ಟೈಂ ಕೆಲಸ ಮಾಡುತ್ತಾಳೆ. ಈ ಕೆಲಸದಲ್ಲಿ ಸಿಕ್ಕ ಹಣವನ್ನು ಲೈಟ್ ಕೊಳ್ಳಲು ವಿನಿಯೋಗಿಸುತ್ತಾಳೆ. ಇದಲ್ಲದೆ ಬೆಳಕು ತನ್ನ ಮೇಲೆ ಬಿದ್ದಾಗ ಹೊಳೆಯುವ ಬ್ಯಾಕ್ ರಿಫ್ಲೆಕ್ಟರ್‌ಗಳನ್ನು ಸಹ ಖುಷಿ ಬೈಕ್, ಸೈಕಲ್, ಕಾರ್, ಆಟೋಕ್ಕೆ ಹಾಕ್ತಿದ್ದಾಳೆ. ಒಂದಿಷ್ಟು ಜನರ ಜೀವ ಉಳಿಸಲು ನನ್ನದೊಂದು ಸೇವೆ ಎನ್ನುತ್ತಾಳೆ ಖುಷಿ.
ಖಿನ್ನತೆಗೆ ಜಾರಿ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ Uorfi Javed
ಸಾಮಾಜಿಕ ಜಾಲತಾಣದಲ್ಲಿ ವೈರಲ್ : ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಖುಷಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಲಕ್ಷಾಂತರ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಲ್ಲದೆ ಖುಷಿ ಕೆಲಸಕ್ಕೆ ಬೆನ್ನು ತಟ್ಟಿದ್ದಾರೆ.