ತೀವ್ರವಾದ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ಆಘಾತಕ್ಕೀಡಾದ ಘಟನೆ ನಡೆದಿದೆ. ಈ ಮಹಿಳೆ ಕಿಬ್ಬೊಟ್ಟೆಯ ಅಪಸ್ಥಾನೀಯ ಗರ್ಭಧಾರಣೆ (abdominal ectopic pregnancy) ಎಂಬ ಅಪರೂಪದ ವೈದ್ಯಕೀಯ ಪ್ರಕರಣಕ್ಕೆ ಒಳಗಾಗಿದ್ದಾರೆ.
ತೀವ್ರವಾದ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ಆಘಾತಕ್ಕೀಡಾದ ಘಟನೆ ನಡೆದಿದೆ. ಈ ಮಹಿಳೆ ಕಿಬ್ಬೊಟ್ಟೆಯ ಅಪಸ್ಥಾನೀಯ ಗರ್ಭಧಾರಣೆ (abdominal ectopic pregnancy) ಎಂಬ ಅಪರೂಪದ ವೈದ್ಯಕೀಯ ಪ್ರಕರಣಕ್ಕೆ ಒಳಗಾಗಿದ್ದು, ಇದರನ್ವಯ ಈ ಮಹಿಳೆ ಗರ್ಭಿಣಿಯಾಗಿದ್ದರೂ ಆಕೆಯ ಭ್ರೂಣವೂ ಗರ್ಭದಲ್ಲಿರದೇ ಕಿಬ್ಬೊಟ್ಟೆಯ ಸಮೀಪ ಕರುಳಿನ ಜಾಗದಲ್ಲಿ ಸ್ಥಾನ ಪಡೆದಿತ್ತು.
ನ್ಯೂ ಇಂಗ್ಲೆಂಡ್ ಮೆಡಿಸಿನ್‌ನಲ್ಲಿ ಈ ವಿಚಾರದ ಬಗ್ಗೆ ಕೇಸ್ ಸ್ಟಡಿಗೆ ಸಂಬಂಧಿಸಿದ ಲೇಖನವೊಂದು ಪ್ರಕಟವಾಗಿದ್ದು, ಈ ವರದಿ ವೈದ್ಯಲೋಕದ ಜೊತೆ ಮಕ್ಕಳನ್ನು ಹೊಂದುವ ನಿರೀಕ್ಷೆಯಲ್ಲಿರುವವರನ್ನು ಬೆಚ್ಚಿ ಬೀಳಿಸಿದೆ.
undefined
ಎಗ್ ಫ್ರೀಜಿಂಗ್: ಮಕ್ಕಳು ಮಾಡಿ ಕೊಳ್ಳೋ ಪ್ಲ್ಯಾನ್ ಈಗಿಲ್ಲವೆಂದರೆ, ಭವಿಷ್ಯದ ಬಗ್ಗೆ ಯೋಚಿಸ್ಬೇಡಿ!
37 ವರ್ಷದ ಫ್ರಾನ್ಸ್ ಮೂಲದ ಮಹಿಳೆ ಈ ವಿರಳಾತೀ ವಿರಳ ಗರ್ಭಧಾರಣೆಯ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದಾರೆ. 23 ವಾರಗಳ ಈ ಭ್ರೂಣವೂ ಕರುಳಿನೊಳಗೆ ಬೆಳೆಯುತ್ತಿರುವುದನ್ನು ನೋಡಿ ಅವರು ಅಚ್ಚರಿಗೊಳಗಾಗಿದ್ದರೆ. ಕಿಬ್ಬೊಟ್ಟೆಯಲ್ಲಿ ತೀವ್ರವಾದ ನೋವು ಹಾಗೂ ಊತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಕೂಡಲೇ ಅವರನ್ನು ವೈದ್ಯರು ಅಡ್ಮಿಟ್ ಮಾಡಿದ್ದು, ವೈದ್ಯಕೀಯ ಸಿಬ್ಬಂದಿ ತಪಾಸಣೆ ನಡೆಸಿ ಬಳಿಕ ಸ್ಕ್ಯಾನಿಂಗ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಹೊಟ್ಟೆ ಹಾಗೂ ಕರುಳಿನ ಮಧ್ಯೆ ಇರುವ ಕಿಬ್ಬೊಟ್ಟೆಯ ಕ್ಯಾವಿಟಿ ಬಳಿ ಈ ಭ್ರೂಣ ಬೆಳವಣಿಗೆಯಾಗುತ್ತಿದ್ದಿದ್ದು ಗಮನಕ್ಕೆ ಬಂದಿದೆ. ಈ ರೀತಿ ಮಗು ಸ್ಥಳವಲ್ಲದ ಸ್ಥಳದಲ್ಲಿ ಬೆಳೆಯುತ್ತಿದ್ದ ಕಾರಣ ಇದು ತಾಯಿಯ ಜೀವಕ್ಕೆ ಅಪಾಯವೊಡ್ಡುವ ಸಾಧ್ಯತೆ ಇತ್ತು. ಟ್ಯೂಬ್ ಛಿದ್ರಗೊಳ್ಳುವುದರ ಜೊತೆಗೆ ಅಂತರಿಕ ರಕ್ತ ಸೋರಿಕೆಯ ಜೊತೆ ಮಗುವೂ ಕೂಡ ಸರಿಯಾಗಿ ಬೆಳೆಯದೇ ಪ್ರಾಣ ಬಿಡುವ ಸಾಧ್ಯತೆ ಎದುರಾಗಿತ್ತು. ಇಂತಹ ಪ್ರಕರಣಗಳಲ್ಲಿ ಮಗು ಸಾಯುವುದು ಶೇಕಡಾ 90 ರಷ್ಟು ಖಚಿತವಾಗಿತ್ತು. ಒಂದು ವೇಳೆ ಮಗು ಜೀವಂತವಾಗಿ ಜನ್ಮ ತಾಳಿದರೂ ಅದಕ್ಕೆ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿದ್ದವು. ಆದರೂ ಫ್ರಾನ್ಸ್‌ನ ವೈದ್ಯರು 29 ವಾರಗಳಲ್ಲಿ ತಾಯಿಗೆ ಯಾವುದೇ ತೊಂದರೆಯಾಗದಂತೆ ಮಗುವಿನ ಹೆರಿಗೆ ಮಾಡಿಸಿದ್ದರು. ಅಲ್ಲದೇ ಮಗುವನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದ್ದರು ಎಂದು ನ್ಯೂಯಾರ್ಕ್ ಫೋಸ್ಟ್ ವರದಿ ಮಾಡಿದೆ.
ಬಿಗ್ಬಾಸ್ ಮನೆಯಲ್ಲೇ ಗರ್ಭಿಣಿಯಾದೆ ಎಂದಿದ್ದ ನಟಿಯ ಪರೀಕ್ಷಾ ರಿಪೋರ್ಟ್ ಕೊನೆಗೂ ಬಂತು: ಫ್ಯಾನ್ಸ್ ಫುಲ್ ಖುಷ್!
ಇದಾಗಿ ಮೂರು ತಿಂಗಳ ನಂತರ ತಾಯಿ ಹಾಗೂ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದು ಬಂದಿದೆ.