ಸರ್ಜರಿ ಮಾಡಿಸಿಕೊಂಡ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ ಬ್ರೆಜಿಲ್ ಸುಂದರಿ

Published : Jun 24, 2022, 05:01 PM IST
ಸರ್ಜರಿ ಮಾಡಿಸಿಕೊಂಡ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ ಬ್ರೆಜಿಲ್ ಸುಂದರಿ

ಸಾರಾಂಶ

ಸೌಂದರ್ಯದ (Beauty) ಬಗ್ಗೆ ಕಾಳಜಿ ಬೇಕು ನಿಜ. ಆದ್ರೆ ಅದು ಅತಿಯಾದರೆ ಅನಾಹುತವೇ ಸಂಭವಿಸಬಹುದು. ಹೀಗಾಗಿ ಸಂಭವಿಸಿರುವ ಸಾವು (Death) ಒಂದೆರಡಲ್ಲ. ಟಾನ್ಸಿಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತ (Heartattack)ದಿಂದ ತಮ್ಮ 27ನೇ ವಯಸ್ಸಿನಲ್ಲಿಯೇ ನಿಧನರಾಗಿದ್ದಾರೆ. 

2018ರ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಆಗಿರುವ ಗ್ರೇಸಿ ಕೊರಿಯಾ (Gleycy Correia) ಅವರು ಶಸ್ತ್ರಚಿಕಿತ್ಸೆಯ (Operation) ತೊಡಕುಗಳ ನಂತರ ಸಾವನ್ನಪ್ಪಿದ್ದಾರೆ. ಟಾನ್ಸಿಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತ (Heart attack)ದಿಂದ ತಮ್ಮ 27ನೇ ವಯಸ್ಸಿನಲ್ಲಿಯೇ ನಿಧನರಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಆಗಿದ್ದರಿಂದ, ಅವರು ಎರಡು ತಿಂಗಳಿಂದ ಕೋಮಾದಲ್ಲಿದ್ದರು. ಏಪ್ರಿಲ್ 4ರಂದು ಹೃದಯಾಘಾತವಾದ ನಂತರ ಅವರ ಆರೋಗ್ಯ (Health) ತೀರಾ ಹದಗೆಟ್ಟಿದ್ದು, ಅವರನ್ನು ಉಳಿಸಿಕೊಳ್ಳಲು ವೈದ್ಯರು ಭಾರೀ ಪ್ರಯತ್ನ ನಡೆಸಿದರು. 

ಆದರೆ ಏಪ್ರಿಲ್ 4ರಂದು ಹೃದಯಾಘಾತ ಸಂಭವಿಸಿತು. ನಂತರದ ದಿನಗಳಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಆರ್ಗನೈಸೇಶನ್ ಹೇಳಿಕೆಯಲ್ಲಿ ಆಕೆಯ ಸಾವನ್ನು ದೃಢಪಡಿಸಿದೆ.

Swathi Sathish: ಸ್ಯಾಂಡಲ್​ವುಡ್​ ನಟಿ ಪಾಲಿಗೆ ವಿಲನ್ ಆದ ದಂತ ವೈದ್ಯೆ

ಗ್ಲೇಸಿ ಕೊರಿಯಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕುಟುಂಬದ ಪಾದ್ರಿ ಲಿಡಿಯಾನ್ ಅಲ್ವೆಸ್ ಮಾತನಾಡಿ, ಈ ನಷ್ಟದಿಂದ ನಾವು ತುಂಬಾ ದುಃಖಿತರಾಗಿದ್ದೇವೆ. ಅವರು ಅದ್ಭುತ ಮಹಿಳೆ ಮತ್ತು ಎಲ್ಲರೂ ಅವರನ್ನು ತುಂಬಾ ಇಷ್ಟಪಟ್ಟಿದ್ದರು, ಅವರ ನಗು ಮತ್ತು ಮಾತಿನಿಂದ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಅವರ ಸಾವು ಎಲ್ಲರನ್ನೂ ದುಃಖದಲ್ಲಿ ಮುಳುಗಿಸಿದೆ ಎಂದಿದ್ದಾರೆ. 

2018ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಕಿರೀಟ ಗೆದ್ದಿದ್ದ ಗ್ರೇಸಿ ಕೊರಿಯಾ
ಕೊರಿಯಾ ಅವರು ಮಾಡೆಲ್, ಬ್ಯೂಟಿಷಿಯನ್ ಕೂಡ ಆಗಿದ್ದರು. 2018ರಲ್ಲಿ ಕೊರಿಯಾ, ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಕಿರೀಟವನ್ನು ಪಡೆದಿದ್ದರು. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲೂ ಅವರು ಭಾಗಿಯಾಗಿದ್ದರು. ಕಡಿಮೆ ಸಮಯದಲ್ಲೇ ಸೌಂದರ್ಯ ಲೋಕದಲ್ಲಿ ಹೆಸರು ಮಾಡಿದ್ದರು. ಇನ್ ಸ್ಟಾಗ್ರಾಮ್ ನಲ್ಲಿ 56,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಸಾವಿಗೆ ಸಂತಾಪ ಸೂಚಿಸಿದ್ದಾರೆ.

ರಿಯೊ ಡಿ ಜನೈರೊದಿಂದ ಈಶಾನ್ಯಕ್ಕೆ 120 ಮೈಲಿ ದೂರದಲ್ಲಿರುವ ಬ್ರೆಜಿಲ್‌ನ ಅಟ್ಲಾಂಟಿಕ್ ಕರಾವಳಿಯಲ್ಲಿರುವ ಮಕೇ ಎಂಬ ನಗರದಲ್ಲಿ ಜನಿಸಿದರು. ಪೋಸ್ಟ್‌ನ ಪ್ರಕಾರ, ಅವಳು ಚಿಕ್ಕ ವಯಸ್ಸಿನಿಂದಲೂ ಕೆಲಸ ಮಾಡುತ್ತಿರುವ ಕೊರಿಯಾ ನೆರೆಹೊರೆಯ ಬ್ಯೂಟಿ ಸಲೂನ್ ನಲ್ಲಿ ಉಗುರು ಹಸ್ತಾಂಲಕಾರ (Nail Designer) ಕೆಲಸ ಕೂಡ ನಿರ್ವಹಿಸುತ್ತಿದ್ದರು.

1 ಲಕ್ಷ 60 ಸಾವಿರ ರೂ. ಫ್ಯಾಟ್‌ ಬರ್ನಿಂಗ್ ಆಪರೇಷ್‌; ಚೇತನಾಗೆ ಹಾರ್ಟ್‌ ಅಟ್ಯಾಕ್ ಆಗಿದ್ಯಾ?

ಬೊಜ್ಜು ಕರಗಿಸುವ ಶಸ್ತ್ರ ಚಿಕಿತ್ಸೆ ವೇಳೆ ಕಿರುತೆರೆ ನಟಿ ಚೇತನಾ ರಾಜ್‌ (21) ಅನುಮಾನಾಸ್ಪದವಾಗಿ ಮೃತಪಟ್ಟದ್ದು ದೇಶದಾದ್ಯಂತ ಸುದ್ದಿಯಾಗಿತ್ತು. ಈ ನಡುವೆ ದಂತ ಚಿಕಿತ್ಸೆಗೆಂದು ಹೋದ ನಟಿಯ ಮುಖವನ್ನೇ ವೈದ್ಯರು ವಿರೂಪಗೊಳಿಸಿರುವ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿತ್ತು ಸ್ಯಾಂಡಲ್‌ವುಡ್ ನಟಿ ಸ್ವಾತಿ ಪಾಲಿಗೆ ದಂತ ವೈದ್ಯೆರೇ ವಿಲನ್ ಆಗಿದ್ದರು. ಹಲ್ಲಿನ ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ನಟಿ ಹೋಗಿದ್ದರು. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಊತ ಕಾಣಿಸಿಕೊಂಡು ವಿರೂಪವಾಗಿದೆ. ಮುಖ ವಿರೂಪಗೊಂಡ ಬಳಿಕ ಮನೆಯಿಂದ ಹೊರಬರಲಾರದೆ ನಟಿ ಸ್ವಾತಿ ತೊಂದರೆ ಅನುಭವಿಸುತ್ತಿದ್ದಾರೆ. ರೂಟ್ ಕ್ಯಾನಲ್‌ಗೆಂದು ಸ್ವಾತಿ ದಂತ ವೈದ್ಯರ ಬಳಿ ಹೋಗಿದ್ದರು. ಫೈ ಸ್ಟಾರ್ ರಿವ್ಯೂ ನೋಡಿ ಆಸ್ಪತ್ರೆಗೆ ಹೋಗಿದ್ದ ನಟಿಗೆ ಶಾಕ್ ಆಗಿದೆ. 

ಚಿಕಿತ್ಸೆ ಪಡೆದ ಬಳಿಕ ನಟಿಯ ಮುಖದಲ್ಲಿ ಭಾರೀ ಬದಲಾವಣೆಯಾಗಿದೆ. ಕೇವಲ 2 ದಿನದಲ್ಲಿ ಊತ ಕಮ್ಮಿಯಾಗುತ್ತೆ ಅಂತಾ ವೈದ್ಯರು ನಟಿಗೆ ಹೇಳಿದ್ದರಂತೆ. ಆದರೆ, 20 ದಿನ ಕಳೆದರೂ ನಟಿಯ ಮುಖ ಮೊದಲಿನಂತಾಗಿಲ್ಲ. ಹೀಗಾಗಿ ಒರಿಜಿನಲ್ ಫೇಸ್‍ಗಾಗಿ ನಟಿ ಹೋರಾಟ ನಡೆಸುತ್ತಿದ್ದಾರೆ. ತುಂಬಾ ನೋವಿನಲ್ಲಿರುವ ನಟಿ ಇದೀಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ವೀಟ್ ಬಾಕ್ಸ್‌ಗೆ ಇರುವೆ ಮುತ್ತಿಕೊಂಡ್ರೆ ಓಡಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ