ಮದ್ವೆಯಾಗೋದಾಗಿ ಹೇಳಿ 2 ಮಕ್ಕಳ ಅಮ್ಮನಿಗೆ ಮೋಸ? ಫೋಟೋ ಲೀಕ್​: ಟ್ಯಾಟೂ ಅರ್ಟಿಸ್ಟ್ ಅರ್ಜುನ್‌ ವಿರುದ್ಧ FIR

Published : Sep 25, 2026, 01:20 PM IST
Ghost Arjun

ಸಾರಾಂಶ

ಖ್ಯಾತ ಟ್ಯಾಟೂ ಆರ್ಟಿಸ್ಟ್ ಘೋಸ್ಟ್ ಅರ್ಜುನ್ ವಿರುದ್ಧ ಮಹಿಳೆಯೊಬ್ಬರು ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ 9 ಲಕ್ಷ ರೂ. ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದಲ್ಲದೆ, ಹಣ ನೀಡದಿದ್ದಾಗ ಹಲ್ಲೆ ನಡೆಸಿದ್ದಾನೆ ಎಂದು ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ಅರ್ಜುನ್ ಕೂಡ ಮಹಿಳೆ ವಿರುದ್ಧ ಪ್ರತಿದೂರು ನೀಡಿದ್ದaನು.

ಬೆಂಗಳೂರು: ಇಬ್ಬರು ಮಕ್ಕಳ ಅಮ್ಮನ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ 9 ಲಕ್ಷ ರೂಪಾಯಿ ಹಣ ಪಡೆದಿರುವ ಆರೋಪ ಹೊತ್ತ ಖ್ಯಾತ ಟ್ಯಾಟೂ ಅರ್ಟಿಸ್ಟ್ ಘೋಸ್ಟ್​ ಅರ್ಜುನ್‌ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಮಹಿಳೆಯ ವಿಡಿಯೋ ನೋಡಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಫೋಟೋ ಕ್ಲಿಕ್​ ಮಾಡಿಕೊಂಡು ಕೊನೆಗೆ ಬ್ಲ್ಯಾಕ್​ಮೇಲ್​ ಮಾಡಿರುವ ಆರೋಪ ಇವರ ಮೇಲಿದೆ. ಈ ಹಿನ್ನೆಲೆಯಲ್ಲಿ, ಅರ್ಜುನ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ಮಹಿಳೆ 2 ವರ್ಷಗಳ ಹಿಂದೆ ಟ್ಯಾಟೂ ಹಾಕಿಸಿಕೊಳ್ಳಲು ಹೋದಾಗ ಅರ್ಜುನ್ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಮಹಿಳೆಯ ಪತಿ ತೀರಿಕೊಂಡಿರುವ ವಿಚಾರ ತಿಳಿಯುತ್ತಲೇ ಅವರನ್ನು ಮದುವೆಯಾಗುವುದಾಗಿ ನಂಬಿಸಿ ಸಂಪರ್ಕ ಬೆಳೆಸಿದ್ದ. ಕೊನೆಗೆ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ ಮಾಡಿದ್ದಾರೆ ಎನ್ನುವ ಆರೋಪವಿಎ. 2024ನೇ ನವಂಬರ್ ತಿಂಗಳಿನಿಂದ ಹಣ ಕೊಡುವಂತೆ ಮಹಿಳೆಗೆ ಅರ್ಜುನ್​ ಕಿರುಕುಳ ನೀಡುತ್ತಿದ್ದಾರೆ. ಹಣ ನೀಡದೇ ಹೋದರೆ, ಸೋಷಿಯಲ್‌ ಮೀಡಿಯಾದಲ್ಲಿ ಹರಿ ಬಿಡುವುದಾಗಿ ಫೋಟೋಗಳನ್ನು ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಒಟ್ಟೂ 9 ಲಕ್ಷ ಪೀಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಹಣ ನೀಡಲು ನಕಾರ

ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಾಗ ಸಂತ್ರಸ್ತೆ ಹಣ ಕೊಡಲು ನಿರಾಕರಿಸಿದ್ದಾರೆ. ಮಹಿಳೆ ಆತನ ಕರೆ ಸ್ವೀಕರಿಸದಿದ್ದಾಗ ಸೆ.2ರಂದು ಆಕೆಯ ಮನೆಗೆ ಬಂದಿದ್ದಾನೆ. ನನ್ನ ಫೋನ್‌ ಏಕೆ ಸ್ವೀಕರಿಸುತ್ತಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಿನಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆ ವಿರುದ್ಧವೇ ದೂರು

ಕೆಲ ದಿನಗಳ ಹಿಂದೆಯಷ್ಟೇ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಅರ್ಜುನ್​ ಅವರೇ ಕೇಸ್​ ದಾಖಲಿಸಿದ್ದರು. ಆದರೆ, ಈಗ ಅರ್ಜುನ್‌ ವಿರುದ್ಧವೇ ಮಹಿಳೆ ದೂರು ನೀಡಿದ್ದಾಳೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ವಾರದಲ್ಲಿ ₹4.5 ಲಕ್ಷ ಗಳಿಸಿದ ಮೇಕಪ್ ಆರ್ಟಿಸ್ಟ್! ಈ ಮಹಿಳೆಯ ಯಶೋಗಾಥೆ ತಿಳಿದರೆ ನಿಮಗೂ ಸ್ಫೂರ್ತಿ
ವಾರದಲ್ಲಿ ಎಷ್ಟು ಬಾರಿ ಫಿನೈಲ್‌ ಬಳಸಿ ಮನೆ ಕ್ಲೀನ್‌ ಮಾಡಿದ್ರೆ ಒಳ್ಳೆಯದು? ಬಳಕೆಗೆ ಮೊದಲು ಇದು ತಿಳಿದಿರಲಿ