Viral Video: ಮದ್ವೆಯಾಗ್ತಿರೋ ಮನೆಕೆಲಸದಾಕೆಗೆ ಹೃದಯಸ್ಪರ್ಶಿ ಬೀಳ್ಕೊಡುಗೆ: ಎಲ್ಲರ ಮನ ಗೆದ್ದ ಗೃಹಿಣಿ

Published : May 27, 2025, 06:59 PM ISTUpdated : May 28, 2025, 10:17 AM IST
Heartfelt farewell to house help

ಸಾರಾಂಶ

ಒಂದು ದಿನ ಮನೆಕೆಲಸದಾಕೆ ಬರದಿದ್ದರೆ ಆ ದಿನ ಅಲ್ಲೋಲ ಕಲ್ಲೋಲ ಆಗುವುದು ತಿಳಿದಿದ್ದರೂ, ಕೆಲಸದಾಕೆ ಎಂದರೆ ತಾತ್ಸಾರದ ಮನೋಭಾವ ಹೊಂದಿರುವವರ ನಡುವೆಯೇ ಇಲ್ಲೊಂದು ಹೃದಯಸ್ಪರ್ಶಿ ವಿಡಿಯೋ ವೈರಲ್​ ಆಗಿದೆ.

ಇಂದು ಮಹಿಳೆಯರು ದುಡಿಯಲು ಹೋಗುವ ಕಾರಣದಿಂದ ಹಲವರು ಮನೆಕೆಲಸದಾಕೆಯನ್ನು ಇಟ್ಟುಕೊಳ್ಳುವುದು ಸಹಜ. ಕೆಲವರು ಮಾತ್ರ ಮನೆ ಮತ್ತು ಕಚೇರಿಯ ಕೆಲಸಗಳನ್ನು ನಿಭಾಯಿಸಿದರೆ, ಹಲವರು ಮನೆಕೆಲಸದಾಕೆಯನ್ನು ಇಟ್ಟುಕೊಳ್ಳುವುದು ಹೊಸ ವಿಷಯವೇನಲ್ಲ. ಅದೇ ರೀತಿ ಶ್ರೀಮಂತರು, ವಯಸ್ಸಾದವರು... ಹೀಗೆ ಕಾರಣ ಏನೇ ಇದ್ದರೂ ಮನೆ ಕೆಲಸದವರಿಗೆ ಇಂದು ಬಹಳ ಡಿಮಾಂಡ್ ಕೂಡ ಇದೆ. ಆದರೂ ಅವರನ್ನು ಕೇವಲ ಮನೆಕೆಲಸದವರ ರೀತಿಯಲ್ಲಿಯೇ ನೋಡುವ ಮನೋಭಾವ ಬಹಳಷ್ಟು ಮನೆಗಳಲ್ಲಿ ಇದೆ. ಅವರೆಂದಿಗೂ ತಮ್ಮ ಮನೆಯ ಓರ್ವ ಸದಸ್ಯೆ ಎಂದುಕೊಳ್ಳುವವರು ಬೆರಳೆಣಿಕೆ ಮಂದಿ ಇರಬಹುದೇನೋ. ಆದರೆ ಹೆಚ್ಚಿನವರು ಆಕೆಗೆ ಬೈಯುವುದು, ಮನೆಯಲ್ಲಿ ಕಳ್ಳತನವಾದರೆ ಮೊದಲು ಆಕೆಯ ಮೇಲೆಯೇ ಸಂದೇಹ ಪಡುವುದು, ಯಾವುದಾದರೂ ಕಾರಣಕ್ಕೆ ರಜೆ ಕೇಳಿದರೆ ತೀರಾ ಅನಿವಾರ್ಯವಾಗಿದ್ದರೂ ರಜೆ ಕೊಡದೇ ಸತಾಯಿಸುವುದು, ಮಿಕ್ಕ ಅನ್ನ-ಪದಾರ್ಥಗಳನ್ನು ನೀಡುವುದು, ಯಾವುದೋ ಒಂದು ಮೂಲೆಯಲ್ಲಿ ಕುಳ್ಳರಿಸಿ ಊಟ, ತಿಂಡಿ ನೀಡುವುದು... ಹೀಗೆ ಇವೆಲ್ಲವುಗಳಿಗೆ ಬಹಳಷ್ಟು ಮನೆಕೆಲಸವರು ಒಗ್ಗಿಕೊಂಡಿದ್ದಾರೆ ಕೂಡ.

ಮನೆಯ ಬಹುತೇಕ ಕೆಲಸಗಳನ್ನು ಮಾಡುವ ಕೆಲಸದಾಕೆ ಒಂದು ದಿನ ಬಂದಿಲ್ಲ ಎಂದರೆ ಆ ಮನೆಯಲ್ಲಿ ಆಗುವ ಆವಾಂತರಗಳು ಅಷ್ಟಿಷ್ಟಲ್ಲ. ಆಕೆ ರಜೆಗೆ ಹೋದರೆ ಇಲ್ಲವೇ ಕೆಲಸ ಬಿಟ್ಟುಹೋದರೆ ಮನೆಯ ಜನರ ಅದರಲ್ಲಿಯೂ ಮನೆ ನೋಡಿಕೊಳ್ಳುವ ಮಹಿಳೆಯರ ಸ್ಥಿತಿ ಅಯೋಮಯವಾಗುತ್ತದೆ. ಇನ್ನು ಅದೆಷ್ಟೋ ಶ್ರೀಮಂತರ ಮನೆಗಳಲ್ಲಿ ಮಕ್ಕಳಿಗೆ ಆಕೆಯೇ ಅಮ್ಮ, ಆಕೆಯೇ ಅಜ್ಜಿ, ಆಕೆಯೇ ಎಲ್ಲವೂ ಆಗುವುದೂ ಇದೆ. ಸ್ವಂತ ಅಮ್ಮನ ಮುಖ ನೋಡದ ಮಕ್ಕಳು ಮನೆ ಕೆಲಸದಾಕೆಯ ಅಕ್ಕರೆಯಲ್ಲಿಯೇ ದೊಡ್ಡವರಾಗುವುದೂ ಇದೆ. ಇಷ್ಟು ಗೊತ್ತಿದ್ದರೂ ಆಕೆ ಕೆಲಸದವಳು ಅಷ್ಟೇ ಎನ್ನುವ ಮನಸ್ಥಿತಿಯಂತೂ ಬಹುತೇಕ ಮಂದಿಯಲ್ಲಿ ಇದ್ದೇ ಇರುತ್ತದೆ.

ಸೀರಿಯಲ್​ಗಳಲ್ಲಿ ಒಳ್ಳೆಯ ಸೊಸೆ ಎನ್ನಿಸಿಕೊಂಡಾಕೆ ಮನೆ ಕೆಲಸದವರನ್ನು ನಡೆಸಿಕೊಳ್ಳುವ, ಅವರಿಗೆ ಪ್ರೀತಿ ತೋರುವುದನ್ನು ನೋಡಿ ಆಹಾ ಎಷ್ಟು ಒಳ್ಳೆಯವಳು ಎಂದುಕೊಳ್ಳುವ ಮಹಿಳೆಯರೂ ತಮ್ಮ ವೈಯಕ್ತಿಯ ಜೀವನಕ್ಕೆ ಬಂದಾಗ ಅದನ್ನು ಅನುಸರಿಸದೇ ಹೋಗುವುದೂ ಇದೆ ಅನ್ನಿ. ಆದರೆ ಎಲ್ಲರ ಮನಸ್ಥಿತಿಯೂ ಅದೇ ರೀತಿ ಇರಬೇಕೆಂದು ಇಲ್ಲವಲ್ಲ. ಮನೆ ಕೆಲಸದಾಕೆಗೂ ಮನೆಯ ಸದಸ್ಯರ ರೀತಿಯಲ್ಲಿಯೇ ಘನತೆ, ಗೌರವ ಕೊಡವವರೂ ಇಲ್ಲವೆಂದೇನಲ್ಲ. ಆಕೆ ಕೂಡ ತಮ್ಮ ಮನೆಯ ಸದಸ್ಯಳಂತೆ, ಆಕೆಯ ನೋವಿಗೆ ಸ್ಪಂದಿಸುವ, ಆಕೆಯ ಸಂತೋಷದಲ್ಲಿ ಸಂಭ್ರಮಿಸುವವರೂ ಇದ್ದಾರೆ.

ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಪ್ರತಿಯೊಬ್ಬರಿಗೂ ಕಣ್ಣು ತೆರೆಸುವ ವಿಡಿಯೋ ಕೂಡ ಇದಾಗಿದೆ. ಇದರಲ್ಲಿ ಮನೆ ಕೆಲಸ ಮಾಡುತ್ತಿರುವ ಯುವತಿಯ ಮದುವೆ ಫಿಕ್ಸ್​ ಆಗಿರುವ ಕಾರಣ, ಆಕೆ ಇನ್ನುಮುಂದೆ ಕೆಲಸಕ್ಕೆ ಬರುವುದಿಲ್ಲ ಎಂದ ಸಂದರ್ಭದಲ್ಲಿ ಮನೆಯೊಡತಿ ಆಕೆಗೆ ನೀಡಿರುವ ಹೃದಯಸ್ಪರ್ಶಿ ಬೀಳ್ಕೊಡುಗೆ ಇದಾಗಿದೆ. ಮನೆಯ ಮಗಳಂತೆಯೇ ಆಕೆಯನ್ನು ನೋಡಿಕೊಂಡ ಪರಿ ಎಂಥವರನ್ನೂ ಭಾವುಕರನ್ನಾಗಿಸುತ್ತದೆ. ಇನ್ನು ಮುಂದೆ ಆಕೆ ಮನೆಯ ಕೆಲಸಕ್ಕೆ ಬರುವುದಿಲ್ಲ ಎಂದು ತಿಳಿದಾಗ ಆ ಮನೆಯ ಕಂದ ಪಡುವ ಸಂಕಟವನ್ನೂ ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಒಟ್ಟಿನಲ್ಲಿ ಇಂಥದ್ದೊಂದು ಹೃದಯಸ್ಪರ್ಶಿ ವಿಡಿಯೋ ವೈರಲ್​ ಆದ ಬಳಿಕ ಇಂಥ ಮಾಲೀಕರೂ ಇರುತ್ತಾರೆ ಎನ್ನುವುದು ಬಹುತೇಕ ಮಂದಿಗೆ ತಿಳಿದಂತೆ ಆಗಿದೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!