ಮಾರ್ಗದರ್ಶಿಯಾದ YouTube, ಎಸ್‌ಡಿಎಂ ಆದ ಡ್ರೈವರ್ ಮಗಳ ಯಶೋಗಾಥೆ ಯುವಜನತೆಗೆ ಸ್ಪೂರ್ತಿ

Published : May 27, 2025, 05:54 PM IST
jyothi

ಸಾರಾಂಶ

ಬಿಪಿಎಸ್‌ಸಿ ಪರೀಕ್ಷೆಯಲ್ಲಿ 256ನೇ ರ‍್ಯಾಂಕ್ ಗಳಿಸಿದ ಡಿಂಪಲ್ ಜ್ಯೋತಿ ರಾಣಿ, ಒರ್ವ ಡ್ರೈವರ್‌ ಮಗಳು. ಯೂಟ್ಯೂಬ್ ಅನ್ನು ಮಾರ್ಗದರ್ಶಿಯನ್ನಾಗಿ ಬಳಸಿಕೊಂಡು, ಆರ್ಥಿಕ ಸಂಕಷ್ಟಗಳ ನಡುವೆಯೂ ಯಶಸ್ಸು ಗಳಿಸಿದ ಅವರ ಕಥೆ ಯುವಜನತೆಗೆ ಸ್ಫೂರ್ತಿ.   

Success Story: ಸಮಯ ಮತ್ತು ಸಂದರ್ಭಗಳು ನಿಮ್ಮನ್ನು ಎಷ್ಟೇ ದುರ್ಬಲಗೊಳಿಸಿದರೂ ಏನನ್ನಾದರೂ ಮಾಡುವ ಬಯಕೆ ನಿಮ್ಮಲ್ಲಿದ್ದರೆ, ಖಂಡಿತವಾಗಿಯೂ ನೀವು ತಲುಪಬೇಕಾದ ಗುರಿಯನ್ನು ತಲುಪುತ್ತೀರಿ. ಎಸ್‌ಡಿಎಂ ಜ್ಯೋತಿ ರಾಣಿಯವರದೂ ಇದೇ ರೀತಿಯ ಕಥೆ. ಜ್ಯೋತಿ ರಾಣಿ ಆರ್ಥಿಕ ಸಂಕಷ್ಟಗಳು ಮತ್ತು ಎಷ್ಟೇ ತೊಂದರೆ ಎದುರಾದರೂ ಅದರ ವಿರುದ್ಧ ಹೋರಾಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬನ್ನಿ, ಅವರ ಯಶೋಗಾಥೆಯನ್ನು ತಿಳಿದುಕೊಳ್ಳೋಣ.

ಬಿಹಾರದ ಜ್ಯೋತಿ ಅವರ ಕಥೆಯು ಏನನ್ನಾದರೂ ಸಾಧಿಸಲು ಬಯಸುವ ಎಲ್ಲಾ ಹುಡುಗಿಯರಿಗೆ ಸ್ಫೂರ್ತಿಯಾಗಿದೆ. ಯಾವುದೇ ಸಂದರ್ಭಗಳು ಬಂದರೂ, ಒಬ್ಬ ವ್ಯಕ್ತಿ ದೃಢನಿಶ್ಚಯದಿಂದ ಇದ್ದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂಬುದನ್ನು ಜ್ಯೋತಿ ಸಾಬೀತುಪಡಿಸಿದ್ದಾರೆ. ಅವರ ಈ ಯಶಸ್ಸು ಅವರ ಸ್ವಂತ ಗುರುತನ್ನು ಸ್ಥಾಪಿಸಲು ಮಾತ್ರವಲ್ಲದೆ, ಅವರ ಕುಟುಂಬಕ್ಕೂ ಬಹಳ ಮುಖ್ಯವಾಗಿತ್ತು.

ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್‌ಸಿ) ಪರೀಕ್ಷೆಯು ರಾಜ್ಯದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಹೀಗಿರುವಾಗ ಡಿಂಪಲ್ ಜ್ಯೋತಿ ರಾಣಿ ಯಾವುದೇ ತರಬೇತಿಯ ಸಹಾಯವಿಲ್ಲದೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಬಿಹಾರದಲ್ಲಿ ಹಿರಿಯ ಉಪ ಕಲೆಕ್ಟರ್ (SDC ಅಥವಾ SDM) ಆಗಿ ನೇಮಕಗೊಂಡ ಜ್ಯೋತಿಯವರ ಕಥೆಯು ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ. ಹಾಗಾದರೆ ಜ್ಯೋತಿ ಅವರ ಸಿದ್ಧತೆ ಹೇಗಿತ್ತು?, ಯಶಸ್ಸು ಸಾಧಿಸಿದ್ದು ಹೇಗೆ? ನೋಡೋಣ ಬನ್ನಿ...

ಜ್ಯೋತಿ ರಾಣಿ ಯಾರು?
ಜ್ಯೋತಿ ರಾಣಿ ಮೂಲತಃ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ರಕ್ಸೌಲ್ ಬ್ಲಾಕ್‌ನ ನಿವಾಸಿ. ಬಿಹಾರ-ನೇಪಾಳ ಗಡಿಗೆ ಸಮೀಪದಲ್ಲಿರುವ ಜೋಕಿಯಾರಿ ಪಂಚಾಯತ್‌ನ ಚಿಕಾನಿ ಗ್ರಾಮ ಅವರ ಪೂರ್ವಜರ ಮನೆಯಾಗಿದೆ. ಜ್ಯೋತಿ ತುಂಬಾ ಬಡ ಕುಟುಂಬದಿಂದ ಬಂದವರು. ಅವರ ತಂದೆ ಡ್ರೈವರ್ ಮತ್ತು ತಾಯಿ ಅಂಗನವಾಡಿ ಕಾರ್ಯಕರ್ತೆ. ಕುಟುಂಬದ ಆರ್ಥಿಕ ಸ್ಥಿತಿ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ. ಇಷ್ಟೆಲ್ಲಾ ಆದರೂ ಅವರ ತಂದೆ ಶಿಕ್ಷಣದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕೊರತೆ ಮಾಡಲಿಲ್ಲ. ಆ ನಂತರ ಜ್ಯೋತಿ ಅಧ್ಯಯನಕ್ಕಾಗಿ ಪಾಟ್ನಾಗೆ ಹೋದರು. ಪಾಟ್ನಾದಲ್ಲಿ ವಾಸಿಸುತ್ತಿದ್ದಾಗ ಅವರು 12 ನೇ ತರಗತಿಯವರೆಗೆ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ಇದಾದ ನಂತರ ಬಿಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು.

ಯೂಟ್ಯೂಬ್‌ ನೋಡಿ ಅಧ್ಯಯನ 
ಡಿಂಪಲ್ ಜ್ಯೋತಿ ರಾಣಿ ಅವರ ತಯಾರಿ ಪ್ರಯಾಣದ ಸಮಯದಲ್ಲಿ ಯೂಟ್ಯೂಬ್ ಅವರ ಶಿಕ್ಷಕಿಯಾಗಿತ್ತು. ಹೌದು, ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡುತ್ತಾ ಅಧ್ಯಯನ ಮಾಡಿದವರು ಜ್ಯೋತಿ ರಾಣಿ. ಯೂಟ್ಯೂಬ್ ಅನ್ನು ತಮ್ಮ ಮಾರ್ಗದರ್ಶಿಯನ್ನಾಗಿ ಮಾಡಿಕೊಂಡ ಜ್ಯೋತಿ ರಾಣಿ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಬಿಪಿಎಸ್‌ಸಿಯಲ್ಲಿ 256 ನೇ ರ‍್ಯಾಂಕ್ ಗಳಿಸಿದರು. ಅವರ ಮೊದಲ ನಿಯೋಜನೆ ಪಶ್ಚಿಮ ಚಂಪಾರಣ್‌ನಲ್ಲಿತ್ತು.

ಲಾಕ್‌ಡೌನ್‌ನಿಂದಾಗಿ ಕೆಲಸ ಬಿಟ್ಟ ಜ್ಯೋತಿ ರಾಣಿ
ಜ್ಯೋತಿ ರಾಣಿಗೆ ಖಾಸಗಿ ಕಂಪನಿಯಲ್ಲಿ ಉತ್ತಮ ಪ್ಯಾಕೇಜ್‌ನೊಂದಿಗೆ ಕೆಲಸ ಸಿಕ್ಕಿತು. ಕೊರೊನಾ ವೈರಸ್‌ನಿಂದಾಗಿ, ಲಾಕ್‌ಡೌನ್ ಕೆಲಸ ಮಾಡುವ ಅವಕಾಶವನ್ನು ಕಸಿದುಕೊಂಡಿತು. ಇದಾದ ನಂತರ ಜ್ಯೋತಿ ಬಿಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಲು ಪ್ರಾರಂಭಿಸಿದರು. ಆದರೆ ಮೊದಲ ಪ್ರಯತ್ನ ಕೈ ಹಿಡಿಯಲಿಲ್ಲ. ಕೊನೆಗೆ 256 ನೇ ರಾಂಕ್ ಪಡೆದು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರು. ಜ್ಯೋತಿ ಫಲಿತಾಂಶ ಬಂದಾಗ ತಾನು ರೈಲಿನಲ್ಲಿದ್ದೆ ಎಂದು ಹೇಳುತ್ತಾರೆ. ಫಲಿತಾಂಶ ತಿಳಿದ ನಂತರ ಅಳುತ್ತಾ ತನ್ನ ತಂದೆಗೆ ಕರೆ ಮಾಡಿ "ಅಪ್ಪಾ, ನಾನು ಎಸ್‌ಡಿಎಂ ಆಗಿದ್ದೇನೆ" ಎಂದರು. ಈ ಸುದ್ದಿ ಕೇಳಿ ಅವರ ತಂದೆಯೂ ಅಳಲು ಪ್ರಾರಂಭಿಸಿದರು. ಈ ಯಶಸ್ಸು ಜ್ಯೋತಿ ಮತ್ತು ಅವರ ಕುಟುಂಬಕ್ಕೆ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ಇದು ತೋರಿಸುತ್ತದೆ.

ಜ್ಯೋತಿ ರಾಣಿಯವರ ಯಶೋಗಾಥೆಯು, ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಉತ್ಸಾಹವಿದ್ದರೆ ನೀವು ಯಾವುದೇ ಕಷ್ಟವನ್ನು ನಿವಾರಿಸಬಹುದು ಎಂಬುದನ್ನು ತೋರಿಸುತ್ತದೆ. ಯಾವುದೇ ಸಂದರ್ಭಗಳು ಬಂದರೂ, ಒಬ್ಬ ವ್ಯಕ್ತಿಯು ದೃಢನಿಶ್ಚಯದಿಂದ ಇದ್ದರೆ ಯಶಸ್ಸು ಅವರೇ ಹತ್ತಿರಕ್ಕೆ ಬರುತ್ತದೆ ಎಂಬುದಕ್ಕೆ ಇವರು ಉದಾಹರಣೆಯಾಗಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!