
ಮಹಿಳೆಯರು ತೂಕ ಇಳಿಸಿಕೊಂಡು ಫಿಟ್ ಆಗಿರಲು ಬಯಸ್ತಾರೆ ನಿಜ. ಆದ್ರೆ ಮನೆ ಕೆಲಸ, ಕಚೇರಿ ಕೆಲಸ, ಮಕ್ಕಳ ಕೆಲಸದ ಮಧ್ಯೆ ಅವರಿಗೆ ಸಮಯ ಸಿಗುವುದಿಲ್ಲ. ಇದ್ರಿಂದ ಯೋಗ, ವ್ಯಾಯಾಮ ಸೇರಿದಂತೆ ಜಿಮ್ ಗೆ ಹೋಗಲು ಮಹಿಳೆಯರಿಗೆ ಸಮಯ ಸಿಗೋದಿಲ್ಲ. ಅಂತಹ ಮಹಿಳೆಯರು ಮನೆ ಕೆಲಸ ಮಧ್ಯೆಯೇ ಕೆಲ ವ್ಯಾಯಾಮಗಳನ್ನು ಮಾಡಬಹುದು. ಮಹಿಳೆಯರು ಬಹುತೇಕ ಸಮಯವನ್ನು ಕಿಚನ್ ನಲ್ಲಿ ಕಳೆಯುತ್ತಾರೆ. ರೊಟ್ಟಿ, ಚಪಾತಿ ಮಾಡಲು ತುಂಬಾ ಸಮಯಬೇಕು. ಇದ್ರಿಂದ ವ್ಯಾಯಾಮ ಮಾಡಲು ಆಗ್ತಿಲ್ಲ ಎನ್ನಬೇಡಿ. ಇನ್ಮುಂದೆ ಚಪಾತಿ ಮಾಡ್ತಾನೆ ವ್ಯಾಯಾಮ ಮಾಡಿ, ಫಿಟ್ನೆಸ್ ಕಾಯ್ದುಕೊಳ್ಳಿ. ನಾವಿಂದು ಚಪಾತಿ ಮಾಡ್ತಾ ಮಾಡಬಹುದಾದ ವ್ಯಾಯಾಮಗಳು ಯಾವುವು ಎಂಬುದನ್ನು ನಿಮಗೆ ಹೇಳ್ತೇವೆ.
ಚಪಾತಿ (Chapati) ಮಾಡ್ತಾ ಮಾಡಿ ವ್ಯಾಯಾಮ (Exercise) :
ಲಟ್ಟಣಿಗೆ ವ್ಯಾಯಾಮ : ಚಪಾತಿ ಮಾಡಲು ಲಟ್ಟಣಿಗೆ ಬೇಕೇಬೇಕು. ಚಪಾತಿ ಮಾಡುವ ವೇಳೆ ಗ್ಯಾಸ್ (Gas) ಕಟ್ಟೆಯಿಂದ ಸ್ವಲ್ಪ ಹಿಂದೆ ಸರಿದು ನಿಂತುಕೊಳ್ಳಿ. ಒಂದು ಕೈನಲ್ಲಿ ಲಟ್ಟಣಿಗೆ ಹಿಡಿದುಕೊಳ್ಳಿ. ನಂತ್ರ ಲಟ್ಟಣಿಗೆ ಹಿಡಿದ ಕೈಯನ್ನು ಹಿಂದೆ ತೆಗೆದುಕೊಂಡು ಹೋಗಿ. ಇನ್ನೊಂದು ಕೈ ಕೂಡ ಹಿಂದೆ ತೆಗೆದುಕೊಂಡು ಹೋಗಿ ಲಟ್ಟಣಿಗೆಯನ್ನು ಎರಡೂ ಕೈನಲ್ಲಿ ಹಿಡಿಯಿರಿ. ನಂತ್ರ ಸೊಂಟವನ್ನು ಮುಂದೆ ಬಗ್ಗಿಸಿ. ಆಗ ಎರಡೂ ಕೈಗಳು ಮೇಲಕ್ಕೆ ಹೋಗುತ್ತವೆ. ಲಟ್ಟಣಿಗೆಯನ್ನು ಹಾಗೆ ಎರಡೂ ಕೈನಲ್ಲಿ ಹಿಡಿದಿರಿ. ಹೀಗೆ ಐದು ಬಾರಿ ಮಾಡಿ. ನಂತ್ರ ಚಪಾತಿ ಲಟ್ಟಣಿಸುವ ಕೆಲಸ ಮುಂದುವರೆಸಿ.
ವ್ಯಾಯಾಮ 2 : ಒಂದು ಚಪಾತಿ ಲಟ್ಟಣಿಸಿ ಮುಗಿದ್ಮೇಲೆ ನೀವು ಎರಡನೇ ವ್ಯಾಯಾಮ ಮಾಡಬಹುದು. ಎರಡೂ ಕೈಗಳಿಂದ ಲಟ್ಟಣಿಗೆ ಹಿಡಿದು, ಕೈಗಳನ್ನು ಮೇಲೆ ತೆಗೆದುಕೊಂಡು ಹೋಗಿ. ನಂತ್ರ ಬಲಕೈಯನ್ನು ಬಲ ಕಿವಿ ಕಡೆ ಎಳೆದುಕೊಳ್ಳಿ. ನಂತ್ರ ಎಡ ಕಿವಿ ಕಡೆ ಎಡಗೈ ಎಳೆದುಕೊಳ್ಳಿ. ಹೀಗೆ ಎರಡೂ ಕಡೆ ನಿಮ್ಮ ಕೈಗಳನ್ನು ಸ್ಟ್ರೆಚ್ (Stretch) ಮಾಡಿ.
ವ್ಯಾಯಾಮ 3 : ಈ ವ್ಯಾಯಾಮ ಮಾಡಲು ಅಡುಗೆ (Cooking) ಮನೆಯಲ್ಲಿ ನೇರವಾಗಿ ನಿಂತುಕೊಳ್ಳಿ. ಲಟ್ಟಣಿಗೆಯನ್ನು ಬಲಗೈನಲ್ಲಿ ಹಿಡಿದು ಕೈ ಹಿಂದೆ ತೆಗೆದುಕೊಂಡು ಹೋಗಿ. ಎಡಗೈಯನ್ನು ಮೇಲಿನಿಂದ ಹಿಂದೆ ತೆಗೆದುಕೊಂಡು ಹೋಗಿ, ಲಟ್ಟಣಿಗೆಯ ಇನ್ನೊಂದು ತುದಿಯನ್ನು ಹಿಡಿಯಿರಿ. ಎಡಗೈ ಮೇಲಿದ್ದರೆ ಬಲಕೈ ಕೆಳಗಿನಿಂದ ಲಟ್ಟಣಿಗೆ ತುದಿಯನ್ನು ಹಿಡಿದಿರಲಿ. ನಂತ್ರ ಎಡಗೈಯನ್ನು ಒಮ್ಮೆ ಮತ್ತು ಬಲಗೈಯನ್ನು ಮತ್ತೊಮ್ಮೆ ಮೇಲೆ ಕೆಳಗೆ ಚಾಚಿ.
ವ್ಯಾಯಾಮ 4 : ಮೊದಲು ನೇರವಾಗಿ ನಿಂತುಕೊಳ್ಳಿ. ಎರಡೂ ಪಾದಗಳನ್ನು ಸೇರಿಸಿ. ನಂತ್ರ ಎರಡೂ ಕೈಗಳನ್ನು ತಲೆಯ ಮೇಲಕ್ಕೆ ತೆಗೆದುಕೊಂಡು ಹೋಗಿ. ಎರಡೂ ಕೈನಲ್ಲಿ ಲಟ್ಟಣಿಗೆ ಹಿಡಿಯಿರಿ. ಆ ನಂತ್ರ ನಿಮ್ಮ ಸೊಂಟವನ್ನು ಬಲಕ್ಕೆ, ಎಡಕ್ಕೆ ತಿರುಗಿಸಿ. ಕೈ ಮೇಲೆಯೇ ಇರಲಿ. ಇದನ್ನು ಕೂಡ ನೀವು 10 ಬಾರಿ ಮಾಡಬಹುದು.
ಗರ್ಭಿಣಿಯ ಕಾಡುವ dry mouth problem ಸಮಸ್ಯೆ ನಿವಾರಿಸಲು ಇಲ್ಲಿವೆ ಟಿಪ್ಸ್
ವ್ಯಾಯಾಮ 5 : ಈ ವ್ಯಾಯಾಮ ಮಾಡಲು ಕೂಡ ನೀವು ಮೊದಲು ನೇರವಾಗಿ ನಿಂತುಕೊಳ್ಳಬೇಕು. ನಂತ್ರ ಎರಡೂ ಕೈನಿಂದ ಲಟ್ಟಣಿಗೆಯ ಒಂದೊಂದು ತುದಿಯನ್ನು ಹಿಡಿಯಬೇಕು. ಆ ನಂತ್ರ ಕೈಗಳನ್ನು ತಲೆ ಮೇಲೆ ತೆಗೆದುಕೊಂಡು ಹೋಗಬೇಕು. ಕೈಗಳನ್ನು ಹಿಗ್ಗಿಸ್ತಾ ಕತ್ತಿನ ಹಿಂಭಾಗಕ್ಕೆ ಕೈಗಳನ್ನು ತರಬೇಕು. ಮತ್ತೆ ಕೈಗಳನ್ನು ಮೇಲೆ ತೆಗೆದುಕೊಂಡು ಹೋಗ್ಬೇಕು.
Beauty Tips in Kannada: ಹೊಳೆಯುವ ಕೂದಲು ಹಾಗೂ ತ್ವಚೆಯ ರಹಸ್ಯ ಹೇಳಿದ ಜಾಕ್ವಲಿನ್!
ಈ ಮೇಲಿನ ಎಲ್ಲ ವ್ಯಾಯಾಮಗಳು ತೋಳು (Arm), ಭಜ, ಎದೆ (Chest) ಮತ್ತು ಕೈಗಳಿಗೆ ವ್ಯಾಯಾಮ ನೀಡುತ್ತವೆ. ಈ ಭಾಗಗಳ ಕೊಬ್ಬನ್ನು ನೀವು ಚಪಾತಿ ಮಾಡುತ್ತ ಆರಾಮವಾಗಿ ಕರಗಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.