
ಕ್ರಿಕೆಟ್ ಪ್ರೀತಿ ಭಾರತೀಯರ ಹೃದಯಗಳಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಇದು ಆಗಾಗ ವಿಶಿಷ್ಟ ಸನ್ನಿವೇಶಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಭಾರತದ ಮಕ್ಕಳು ಬೀದಿಗಳಲ್ಲಿ ಆಡುವುದೂ ಕ್ರಿಕೆಟ್, ಮೈದಾನಗಳಲ್ಲೂ ಕ್ರಿಕೆಟ್ ಆಡಲು ಪ್ರಾಶಸ್ತ್ಯ ನೀಡುತ್ತಾರೆ. ಅಷ್ಟೇ ಏಕೆ? ಮನೆಗಳಲ್ಲಿ ಮಕ್ಕಳಿಗೆ ಮೊದಲು ಕಲಿಸುವ ಆಟವೇ ಚೆಂಡು ಹಿಡಿಯುವುದು, ಬ್ಯಾಟ್ ಹಿಡಿಸಿ ಚೆಂಡನ್ನು ಹೊಡೆಯುವುದು. ಇನ್ನು, ದೊಡ್ಡವರಂತೂ ಕ್ರಿಕೆಟ್ ಆಡುವಲ್ಲಿ ಯಾರೂ ಹಿಂದೆ ಬೀಳುವುದಿಲ್ಲ. ಇತ್ತೀಚೆಗೆ ಆಟವಾಡುವವರ ಸಂಖ್ಯೆ ಕಡಿಮೆಯಾಗಿದ್ದರೂ ಸಹ ಕೆಲವೊಂದು ಊರುಗಳಲ್ಲಿ ಇಂದಿಗೂ ಯುವಕರು ತಂಡ ಕಟ್ಟಿಕೊಂಡು ಆಟವಾಡುವುದು ಕಂಡುಬರುತ್ತದೆ. ಟೂರ್ನಮೆಂಟುಗಳನ್ನು ಆಯೋಜಿಸುವುದು, ಸ್ಪರ್ಧೆಗಾಗಿ ತಯಾರಿ ನಡೆಸುವುದೆಲ್ಲ ಜೀವನದ ಅಪೂರ್ವ ಕ್ಷಣಗಳು ಎನ್ನಬಹುದು. ಇದೀಗ, ಕ್ರಿಕೆಟ್ ಆಡುತ್ತಿರುವ ಮಹಿಳೆಯರ ಸಾಹಸವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕ್ರಿಕೆಟ್ ಆಡುವುದರಲ್ಲಿ ಸಾಹಸವೇನು ಬಂತು? ಎಂದು ಅನ್ನಿಸಬಹುದು. ನಿಜಕ್ಕೂ ಈ ಮಹಿಳೆಯರು ಅತ್ಯದ್ಭುತ ಎಂದೆನಿಸುವ ಸ್ಥಳದಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ. ಈ ವೀಡಿಯೋವೀಗ ಲಕ್ಷಾಂತರ ಜನರ ಮನಸೂರೆಗೊಂಡಿದೆ. ಉದ್ಯಮಿ ಆನಂದ್ ಮಹೀಂದ್ರ ಈ ವೀಡಿಯೋವನ್ನು ಶೇರ್ ಮಾಡಿದ್ದಾರೆ ಎನ್ನುವುದು ವಿಶೇಷ ಸಂಗತಿ.
ಕ್ರಿಕೆಟ್ ಆಡಲು ಸಣ್ಣದಾದರೂ ಒಂದು ಮೈದಾನ ಬೇಕು. ಕನಿಷ್ಠ ನೂರಿನ್ನೂರು ಮೀಟರ್ ಗಳಷ್ಟಾದರೂ ಉದ್ದ, ಅಗಲವಿರುವ ಮೈದಾನದ ಅಗತ್ಯ ಇರುತ್ತದೆ. ಆದರೆ, ಮೈದಾನದ ಮಾತಿರಲಿ, ನೆಟ್ಟಗೆ 50 ಅಡಿಯಷ್ಟೂ ಜಾಗವಿರದ ಗುಡ್ಡಗಾಡು ಪ್ರದೇಶದಲ್ಲಿ ಕ್ರಿಕೆಟ್ ಆಡುವುದು ಹೇಗೆ? ಎಲ್ಲರೂ ಸಾಧ್ಯವಿಲ್ಲ ಎಂದೇ ಅಂದುಕೊಳ್ಳಬಹುದು. ಆದರೆ, ಅಂತಹ ಪಕ್ಕಾ ಗುಡ್ಡಗಾಡು ಪ್ರದೇಶದಲ್ಲೂ ಕ್ರಿಕೆಟ್ ಆಡುವ ಸಾಹಸ ಮಾಡಿದ್ದಾರೆ ಕೆಲವು ಮಹಿಳೆಯರು.
ಅತ್ಯಂತ ಅಸಾಂಪ್ರದಾಯಿಕವಾಗಿರುವ ಸೆಟ್ಟಿಂಗ್ ನಲ್ಲಿ ಈ ಮಹಿಳೆಯರು (Women) ಕ್ರಿಕೆಟ್ (Cricket) ಆಡುವುದು ಕಂಡುಬರುತ್ತದೆ. ಟೆರೇಸ್ ಮಾದರಿಯ ಪ್ರದೇಶದಲ್ಲಿ ಅವರು ಕ್ರಿಕೆಟ್ ಆಡುವ (Play) ರೀತಿ ನಿಜಕ್ಕೂ ಮೈನವಿರೇಳಿಸುವಂಥದ್ದು. ಅವರ ಕ್ರಿಕೆಟ್ ಪ್ರೀತಿಗೆ (Love) ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದೆನಿಸಿಬಿಡುತ್ತದೆ. ಗುಡ್ಡದ ಮೇಲೆ ಇರುವ ಪುಟ್ಟದಾದ ರಸ್ತೆಯಲ್ಲಿ ಒಬ್ಬರು ಬೌಲಿಂಗ್, ಬ್ಯಾಟಿಂಗ್ (Bating) ಮಾಡುತ್ತಿದ್ದರೆ, ಫೀಲ್ಡಿಂಗ್ (Fielding) ಮಾಡುವವರು ಕನಿಷ್ಠ 50-60 ಅಡಿ ಕೆಳಭಾಗದಲ್ಲಿ ನಿಂತುಕೊಂಡಿದ್ದಾರೆ. ಹಾರುತ್ತ ಬೀಳುವ ಬಾಲ್ (Boll) ಅನ್ನು ಅವರು ತಮ್ಮ ವಶಕ್ಕೆ ಪಡೆಯುತ್ತಾರೆ. ಈ ವೀಡಿಯೋವನ್ನು ನೋಡಿದಾಗಲೇ ಅದರ ನೈಜತೆಯ ಅರಿವಾಗುತ್ತದೆ. ಇದು ಹಿಮಾಚಲ ಪ್ರದೇಶದ ವೀಡಿಯೋ ಆಗಿದೆ.
ಇಲ್ಲಿದೆ ಸಾನಿಯಾ- ಶೋಯಬ್ ವಿಚ್ಚೇದನ ಕಾರಣ: ಶಾಕಿಂಗ್ ವಿಚಾರ ಬಹಿರಂಗಪಡಿಸಿದ ಪಾಕ್ ಮೀಡಿಯಾ!
ವಿಶಿಷ್ಟ ಮೈದಾನ (Ground)
ಇದೊಂದು ವಿಶಿಷ್ಟ ಕ್ರಿಕೆಟ್ ಮ್ಯಾಚ್ (Match). ಬೌಲರ್ ಮತ್ತು ಬ್ಯಾಟ್ಸ್ ಮನ್ ಒಂದು ಹಂತದಲ್ಲಿದ್ದರೆ ಉಳಿದವರೆಲ್ಲರೂ ಮತ್ತೊಂದು ಹಂತದಲ್ಲಿದ್ದಾರೆ. ಬ್ಯಾಟ್ಸ್ ಮನ್ ನ ಎಡಭಾಗದಲ್ಲಿ ತಗ್ಗು (Down) ಪ್ರದೇಶವಿದ್ದರೆ, ಬಲಭಾಗದಲ್ಲಿ ಎತ್ತರದ (High) ಪ್ರದೇಶವಿದೆ. ಅಲ್ಲಿಯೇ ಆಯಕಟ್ಟಿನ ಜಾಗದಲ್ಲಿ ಫೀಲ್ಡಿಂಗ್ ಮಾಡುವ ಆಟಗಾರರನ್ನು ನಿಲ್ಲಿಸಲಾಗಿದೆ. ಈ ವೀಡಿಯೋದಲ್ಲಿ ಬ್ಯಾಟ್ ಮಾಡಿದ ಚೆಂಡು ಗುಡ್ಡದ (Hill) ಕೆಳಪ್ರದೇಶಕ್ಕೆ ಹೋದರೆ, ಅಲ್ಲಿರುವ ಫೀಲ್ಡರ್ ಅದನ್ನು ಹಿಡಿಯಲು ಓಡುವುದು ಕಂಡುಬರುತ್ತದೆ. ಇದನ್ನು ಶೇರ್ ಮಾಡಿರುವ ಉದ್ಯಮಿ ಆನಂದ್ ಮಹೀಂದ್ರ, “ಭಾರತವು ಕ್ರಿಕೆಟ್ ಆಟವನ್ನು ಮತ್ತೊಂದು ಹಂತಕ್ಕೆ ಕರೆದೊಯ್ದಿದೆ. ಅಥವಾ ನಾನು ಇದನ್ನು “ಬಹಳಷ್ಟು ಹಂತ’ವೆಂದು ಹೇಳುತ್ತೇನೆ’ ಎಂದು ಹೇಳಿದ್ದಾರೆ.
ಸಿಕ್ ಲೀವ್ ಹಾಕ್ಕೊಂಡು ಟ್ರಿಪ್ ಹೊರಟವಳಿಗ ವಿಮಾನ ಏರ್ತಿದ್ದಂತೆ ಕಾದಿತ್ತು ಶಾಕ್!
ಅಪಾಯಕಾರಿ ಸ್ಥಳ
ವಿಶಿಷ್ಟ ಕಾಮೆಂಟುಗಳೂ ಈ ವೀಡಿಯೋಕ್ಕೆ ಲಭ್ಯವಾಗಿವೆ.
ಎಲ್ಲರೂ ಇಂತದ್ದೊಂದು ಭೂಪ್ರದೇಶದ ಕ್ರಿಕೆಟ್ ಮೈದಾನ ಹಾಗೂ ಅಂತಹ ಸ್ಥಳದಲ್ಲೂ ಆಟವಾಡುತ್ತಿರುವ ಮಹಿಳೆಯರ ಸ್ಥೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಕೆಲವರು, ಅಪಾಯಕಾರಿ ಸ್ಥಳದಲ್ಲಿ ಹುಷಾರು ಎನ್ನುವ ಎಚ್ಚರಿಕೆ ನೀಡಿದ್ದರೆ, ಹಲವು ಜನ ಇಂತಹ ಏರುತಗ್ಗು (Uneven) ಪ್ರದೇಶದಲ್ಲಿ ಬಿದ್ದು ಗಾಯಗಳಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.