ಸುಳ್ಳು ಹೇಳಿ ರಜೆ ಹಾಕ್ಕೊಂಡವಳು ಟೂರಿಗೆ ಹೊರಟಿದ್ದಳು. ವಿಮಾನ ಏರುತ್ತಿದ್ದಂತೆ ಹಿಂದಿನ ಸೀಟಿನಲ್ಲಿದ್ದವರನ್ನು ನೋಡಿ ಶಾಕ್ ಆಗಿದ್ದಾಳೆ. ಅಷ್ಟಕ್ಕೂ ಅಲ್ಲಿ ಇದ್ದಿದ್ದು ಯಾರು ಗೆಸ್ ಮಾಡ್ತೀರಾ?
ಸ್ಕೂಲ್ ಗೆ ಹೋಗುವಾಗ ಕಳ್ಳಬೀಳೋದು ಹೆಚ್ಚು. ಒಂದು ದಿನ ಜ್ವರ, ಇನ್ನೊಂದು ದಿನ ನೆಗಡಿ ಅಂತಾ ಶಾಲೆಗೆ ಚಕ್ಕರ್ ಹಾಕುವ ಮಕ್ಕಳು ಆರಾಮವಾಗಿ ಆಟ ಆಡಿಕೊಂಡಿರುತ್ತಾರೆ. ರಜೆ ಹಾಕಿ ಮನೆಯಲ್ಲಿರುವ ಮಕ್ಕಳು ಬೀದಿ ಸುತ್ತುವ ಸಮಯದಲ್ಲಿ ಟೀಚರ್ ಕಣ್ಣಿಗೆ ಬಿದ್ರೆ ಕಥೆ ಮುಗಿತು. ಸುಳ್ಳು ಹೇಳಿದ್ದು ಟೀಚರ್ ಗೆ ಗೊತ್ತಾಗೋದಲ್ಲದೆ ಮರುದಿನ ಮಾತಿನ ಪೆಟ್ಟನ್ನಾದ್ರೂ ಮಕ್ಕಳು ತಿನ್ನಬೇಕು. ಬರೀ ಸ್ಕೂಲಿಗೆ ಹೋಗುವ ಮಕ್ಕಳು ಮಾತ್ರವಲ್ಲ ಕೆಲಸಕ್ಕೆ ಹೋಗುವ ದೊಡ್ಡವರು ಕೂಡ ನಾನಾ ಸುಳ್ಳು ಹೇಳಿ, ಕೆಲಸಕ್ಕೆ ಗೈರಾಗ್ತಾರೆ. ಈಗಾಗಲೇ ಸತ್ತಿರುವ ಅಜ್ಜ – ಅಜ್ಜಿ ಎಷ್ಟೋ ಬಾರಿ ಇವರ ರಜೆಗಾಗಿ ಸಾಯ್ತಾರೆ. ಮತ್ತೆ ಕೆಲವರಿಗೆ ಪದೇ ಪದೇ ಜ್ವರ ಬಂದುಬಿಡುತ್ತೆ. ಏನೇನೋ ನೆಪ ಹೇಳಿ ರಜೆ ಹಾಕಿದ್ಮೇಲೆ ಮನೆಯಲ್ಲಿ ಆರಾಮವಾಗಿ ಕುಳಿತುಕೊಳ್ಳದೆ ಸುತ್ತಾಟಕ್ಕೆ ಪ್ಲಾನ್ ಮಾಡ್ತಾರೆ. ಈ ವೇಳೆ ಬಾಸ್ ಕಣ್ಣಿಗೆ ಬಿದ್ದು ಅನೇಕರು ಕೈ ಕೈ ಹಿಸುಕಿಕೊಳ್ತಾರೆ. ಏಕಾಏಕಿ ಬಾಸ್ ಎದುರಿಗೆ ಬಂದ್ರೆ ಏನು ಪ್ರತಿಕ್ರಿಯೆ ನೀಡ್ಬೇಕು ಗೊತ್ತಾಗೋದಿಲ್ಲ. ಬಾಸ್, ಅರಾಂ ಇಲ್ಲ ಎಂದಿದ್ರಿ… ಇಲ್ಲೇನು ಮಾಡ್ತಿದ್ದೀರಾ ಅಂತಾ ಕೇಳಿದ್ರೆ ಮುಗಿದೆ ಹೋಯ್ತು. ಆ ಕ್ಷಣ ಸುಳ್ಳು ನೆನಪಾಗದೆ ಚಡಪಡಿಸಬೇಕಾಗುತ್ತೆ.
ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಇದೇ ಸಂಕಷ್ಟ ಎದುರಿಸಿದ್ದಾಳೆ. ಸುಳ್ಳು (Lie) ಹೇಳಿ ರಜೆ ಹಾಕಿ, ವಿಮಾನ (Flight) ಏರಿದ್ದವಳಿಗೆ ಬಾಸ್ ವಿಮಾನದಲ್ಲಿ ಕಾಣಿಸಿದ್ದಾರೆ. ಈಕೆ ತನ್ನ ಕಥೆಯನ್ನು ವಿಡಿಯೋ (video) ಮೂಲಕ ಹೇಳ್ತಿದ್ದಂತೆ ಇದು ವೈರಲ್ ಆಗಿದೆ. 11 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ.
97 ವರ್ಷದಲ್ಲೂ ಗಾಗಲ್ಸ್ ಹಾಕಿ ಗಗನಕ್ಕೆ ಹಾರಿದ ಈ ಫ್ಲೈಯಿಂಗ್ ಅಜ್ಜಿ ಯಾರು?
ಟಿಕ್ ಟಾಕ್ ನಲ್ಲಿ ಹುಡುಗಿ ವಿಡಿಯೋ ಹಂಚಿಕೊಂಡಿದ್ದಾಳೆ. ಆಕೆ ಆಸ್ಟ್ರೇಲಿಯಾದ ನಿವಾಸಿ ಲೀಲಾ ಸೋರೆಸ್. ಆಕೆ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಬಾಸ್ ಗೆ ಹೇಳಿದ್ದಾಳೆ. ರಜೆ ಸಿಕ್ಕ ಮೇಲೆ ವಿಮಾನದಲ್ಲಿ ಪ್ರಯಾಣ ಹೊರಟಿದ್ದಾಳೆ. ವಿಮಾನ ಏರ್ತಾ ಇದ್ದಂತೆ ಸೋರೆನ್ ಶಾಕ್ ಆಗಿದ್ದಾಳೆ. ಯಾಕೆಂದ್ರೆ ವಿಮಾನದಲ್ಲಿ ಆಕೆ ಬಾಸ್ ಕೂಡ ಇದ್ದರು. ಸೋರೆನ್ ಹಂಚಿಕೊಂಡಿರುವ ವಿಡಿಯೋದಲ್ಲಿ ವಿಮಾನದ ಮುಂದಿನ ಬಾಗಿಲಿನಿಂದ ಜನರು ಇಳಿಯುತ್ತಿದ್ದಾರೆ. ಅದರಲ್ಲಿ ಒಬ್ಬರನ್ನು ಫೋಕಸ್ ಮಾಡಿದ್ದಾಳೆ ಸೋರೆನ್. ಅವರೇ ಅವಳ ಬಾಸ್. ನಂತ್ರ ಕ್ಯಾಮರಾ ತಿರುಗಿಸಿ ತನ್ನ ಮುಖ ತೋರಿಸಿದ್ದಾಳೆ. ಆಕೆ ಸನ್ ಗ್ಲಾಸ್, ಮುಖಕ್ಕೆ ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡಿದ್ದು, ಅವರನ್ನು ಪತ್ತೆ ಮಾಡೋದು ಕಷ್ಟ.
ಬಾಸ್ ಮುಂದಿನ ಬಾಗಿಲಿನಿಂದ ಹತ್ತಿ ಮುಂದಿನ ಸೀಟ್ ನಲ್ಲಿ ಕುಳಿತುಕೊಂಡಿದ್ದರು. ನಾನು ಹಿಂದಿನ ಬಾಗಿಲಿನಿಂದ ಹತ್ತಿ ಹಿಂದೆ ಕುಳಿತುಕೊಂಡಿದ್ದೆ. ಅವರು ನನ್ನನ್ನು ಗಮನಿಸಿದಂತೆ ಕಾಣೋದಿಲ್ಲ. ಆದ್ರೆ ಇದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅವರನ್ನು ವಿಮಾನದಲ್ಲಿ ನೋಡಿ ನಾನು ದಂಗಾಗಿ ಹೋದೆ. ಈಗ ಸಿಕ್ಕಿಬಿದ್ದೆ ಎಂದುಕೊಂಡೆ ಎಂದು ಸೋರೆನ್ ಹೇಳಿದ್ದಾಳೆ.
'ಟಗರು' ನಟಿ ಭಾವನಾ ವಿವಾಹ ವಾರ್ಷಿಕೋತ್ಸವ; ಪತಿಗೆ ಲವ್ಯೂ ಹೇಳಿ ಮದುವೆ ಫೋಟೋ ಹಂಚಿಕೊಂಡ ಸುಂದರಿ
ಆಕೆ ಟಿಕ್ ಟಾಕ್ ನಲ್ಲಿ ತನ್ನ ಪರಿಸ್ಥಿತಿ ಹೇಳ್ತಿದ್ದಂತೆ ಇದು ವೈರಲ್ ಆಗಿದೆ. ಅನೇಕರು ಈ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕರು ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರೆ. ನಿಮ್ಮ ಬಾಸ್ ನಿಮ್ಮನ್ನು ನೋಡಿರಲು ಸಾಧ್ಯವಿಲ್ಲ ಎಂದು ಸಮಾಧಾನ ಹೇಳಿದವರೂ ಇದ್ದಾರೆ. ಸುಳ್ಳು ಹೇಳಿ ರಜೆ ತೆಗೆದುಕೊಂಡು ಶಾಪಿಂಗ್ ಗೆ ಹೋದಾಗ ಬಾಸ್ ಹಿಂದೆ ನಿಂತಿದ್ರು ಎಂದು ಒಬ್ಬ ಹೇಳಿದ್ರೆ, ಕ್ಯಾಸಿನೋಗೆ ಹೋದಾಗ ಬಾಸ್ ಕೈಗೆ ಸಿಕ್ಕಿಬಿದ್ದಿದ್ದೆ ಎಂದು ಇನ್ನೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.