
ತಂತ್ರಜ್ಞಾನದ ಜಗತ್ತು ಬಹಳ ಮುಂದುವರೆದಿದೆ. ನಿತ್ಯದ ಜೀವನದಲ್ಲಿ ನಾವು ಬಳಸುವ ಗೆಜೆಟ್ ಗಳು ಮುಕ್ಕಾಲು ಭಾಗ ವಿದ್ಯುತ್, ಸೋಲಾರ್, ನಾನಾ ವಿಧದ ಬ್ಯಾಟರಿಗಳ ಮೂಲಕ ನಡೆಯುತ್ತದೆ. ಕುಳಿತಲ್ಲಿಯೇ ರಿಮೋಟ್ ಕಂಟ್ರೋಲ್ ಮೂಲಕ ಎಲ್ಲವನ್ನೂ ಆಪರೇಟ್ ಮಾಡುವ ಕಾಲ ಇದು. ಪ್ರತಿದಿನ ನಾವು ಟಿವಿ, ರೆಡಿಯೋ, ಟಾರ್ಚ್, ಗಡಿಯಾರ ಮುಂತಾದವುಗಳಿಗೆ ಸೆಲ್ ಗಳನ್ನು ಹಾಕುತ್ತೇವೆ. ಅದರ ಮೂಲಕವೇ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತದೆ. ಒಮ್ಮೆ ಸೆಲ್ ಖಾಲಿಯಾಯಿತೆಂದರೆ ಅದನ್ನು ಎಸೆದು ಮತ್ತೊಂದು ಸೆಲ್ ಹಾಕುತ್ತೇವೆ. ಇನ್ನು ಮುಂದೆ ನೀವು ಬಳಸಿದ ಅಥವಾ ಹಾಳಾದ ಸೆಲ್ ಗಳನ್ನು ಬಿಸಾಕಲು ಹೋಗಬೇಡಿ. ಏಕೆಂದರೆ ಇಂದು ನಾವು ನಿಮಗೆ ಹಾಳಾದ ಸೆಲ್ ಗಳನ್ನು ಹೇಗೆ ಮರುಬಳಕೆ ಮಾಡ್ಬೇಕು ಅನ್ನೋದನ್ನ ಹೇಳ್ತೇವೆ
ಖಾಲಿಯಾದ ಸೆಲ್ (Cell) ಗಳ ಮರುಬಳಕೆ (Recycling) ಹೀಗೆ ಮಾಡಿ :
• ಒಂದು ಖಾಲಿ ಹಾಳೆ ತೆಗೆದುಕೊಂಡು ಅದಕ್ಕೆ ಮಕ್ಕಳಿಗೆ ಇಷ್ಟವಾದ ಬಣ್ಣ (color) ಹಚ್ಚಿ ಅದಕ್ಕೆ ಕಾರ್ಟೂನ್ ಚಿತ್ರವನ್ನು ಬಿಡಿಸಿ. ನಂತರ ಆ ಹಾಳೆಯನ್ನು ಹಾಳಾದ ಸೆಲ್ ಗೆ ಅಂಟಿಸಿ. ಹೀಗೆ ಮಾಡುವುದರಿಂದ ಮಕ್ಕಳು ಅದರ ಕಡೆಗೆ ಆಕರ್ಷಿತರಾಗುತ್ತಾರೆ. ಮಕ್ಕಳು ಇದನ್ನು ಹೇಗೆ ಬಳಸಿದರೂ ಅದು ಹಾಳಾಗುವುದಿಲ್ಲ. ಕಡಿಮೆ ಖರ್ಚಿನಲ್ಲಿ ಮಕ್ಕಳಿಗೆ ಈ ರೀತಿಯ ವಿನ್ಯಾಸವನ್ನು ಮಾಡಿದರೆ ನಿಮ್ಮ ಕೌಶಲ್ಯವೂ ಬೆಳೆಯುತ್ತದೆ. ಮಕ್ಕಳು ಕೂಡ ಇದರಿಂದ ಕ್ರಿಯೇಟಿವ್ ಐಡಿಯಾಗಳನ್ನು ಕಲಿಯುತ್ತಾರೆ.
Healthy Food : ಪ್ರೋಟೀನ್ ಹೆಚ್ಚಿರುವ ಈ ಬೆಳಗ್ಗಿನ ತಿಂಡಿಗೆ ಇಡ್ಲಿ ಮಾಡೋದು ತುಂಬಾ ಸುಲಭ
• ಖಾಲಿಯಾದ ಸೆಲ್ ಗಳಿಗೆ ಡಾರ್ಕ್ ಕಲರ್ ಗಳಿಂದ ಪೇಂಟ್ ಮಾಡಿ. ನೀವು ಹಚ್ಚುವ ಬಣ್ಣ ಹೆಚ್ಚು ಡಾರ್ಕ್ ಇರಲಿ ಇದರಿಂದ ಸೆಲ್ ಮೇಲಿರುವ ಅಕ್ಷರ ಕಾಣದೇ ಇರಲಿ. ನಂತ್ರ ಬಣ್ಣ ಬಣ್ಣದ ಸೆಲ್ ಗಳನ್ನು ನೀವು ಶೋ ಕೇಸ್ ನಲ್ಲಿಯೂ ಇಡಬಹುದು. ಬಣ್ಣ ಬಣ್ಣದ ಸೆಲ್ ಗಳಲ್ಲಿ ಮನೆಯ ಅಲಂಕಾರಿಕ ವಸ್ತುವಾಗಿಯೂ ಬಳಸಬಹುದು.
• ಬಳಸಿ ಬಿಸಾಡುವ ಸೆಲ್ ಗಳ ಮೇಲೆ ಕಣ್ಣು, ಮೂಗು, ಮುಖ ಅಥವಾ ಯಾವುದೇ ರೀತಿಯ ಹೊಸ ಚಿತ್ರವನ್ನು ಬಿಡಿಸಬಹುದು. ಸಣ್ಣ ಸಣ್ಣ ಹೂವುಗಳನ್ನು ಇದರ ಮೇಲೆ ಮೂಡಿಸಬಹುದು, ವರ್ಲಿ ಆರ್ಟ್ ಗಳನ್ನು ಕೂಡ ಇದರ ಮೇಲೆ ಚಿತ್ರಿಸಬಹುದು. ಹೀಗೆ ಮಾಡುವುದರಿಂದ ನೋಡುವವರಿಗೆ ಇದು ವಿನೂತನ ಕಲೆಯಂತೆ ಕಂಗೊಳಿಸುತ್ತದೆ. ನಂತರ ಇದನ್ನು ನೀವು ಟೇಬಲ್, ಟಿವಿಗಳ ಮೇಲೆ ಸಾಲಾಗಿ ಇಡಬಹುದು.
• ಪುಟ್ಟ ಮಕ್ಕಳ ಕಲಿಕೆಗೋಸ್ಕರ ಹಲವಾರು ಆಟಿಕೆಗಳನ್ನು ನಾವು ಖರೀದಿಸುತ್ತೇವೆ. ಹಾಗೆ ಖರೀದಿಸುವ ಬದಲು ಅದನ್ನು ಮನೆಯಲ್ಲಿಯೇ ಮಾಡಬಹುದು. ಹಳೆಯ ಬ್ಯಾಟರಿ ಸೆಲ್ ಗಳ ಮೇಲೆ ಕಾಗದಗಳನ್ನು ಅಂಟಿಸಿ ಅದರ ಮೇಲೆ ಅಕ್ಷರಗಳನ್ನು ಬರೆಯಿರಿ. ಮಕ್ಕಳು ಆಡುವಾಗ ಅದನ್ನು ಮಕ್ಕಳ ಕೈಗೆ ಕೊಟ್ಟರೆ ಆಟವಾಡುತ್ತಲೇ ಮಕ್ಕಳು ಅಕ್ಷರಗಳನ್ನು ಸಲೀಸಾಗಿ ಕಲಿಯುತ್ತಾರೆ.
• ನೀವು ದಪ್ಪನೆಯ ರಟ್ಟಿನ ಹಾಳೆಯನ್ನು ವೃತ್ತಾಕಾರದಲ್ಲಿ ಕತ್ತರಿಸಿ. ನಂತರ ಅದಕ್ಕೆ ಖಾಲಿಯಾದ ಸೆಲ್ ಗಳನ್ನು ನಿಲ್ಲಿಸಿ ವೃತ್ತಾಕಾರದಲ್ಲಿ ಅಂಟಿಸಿ. ಇದರ ಒಳಗೆ ನೀವು ಬಟ್ಟೆಯನ್ನು ಕೂಡ ಅಂಟಿಸಿಕೊಳ್ಳಬಹುದು. ಹೀಗೆ ಮಾಡಿದರೆ ಒಂದು ಸಣ್ಣ ಬುಟ್ಟಿ ತಯಾರಾಗುತ್ತದೆ. ಇದರ ಒಳಗೆ ನೀವು ಅಡುಗೆ ಮನೆಯ ಸಣ್ಣ ಪುಟ್ಟ ವಸ್ತು ಅಥವಾ ಮಕ್ಕಳಿಗೆ ಪೆನ್ ಸ್ಟ್ಯಾಂಡ್ ಆಗಿಯೂ ಇದನ್ನು ಬಳಸಿಕೊಳ್ಳಬಹುದು.
ಈರುಳ್ಳಿ ಮೇಲೆ ಕಪ್ಪು ಚುಕ್ಕೆ ಇದ್ಯಾ? ಇದನ್ನು ಅಪ್ಪಿತಪ್ಪಿಯೂ ಅಡುಗೆಗೆ ಬಳಸ್ಬೇಡಿ
ಹತ್ತು ಹಲವು ತಂತ್ರಜ್ಞಾನದಿಂದ ಈಗಾಗಲೇ ಇ-ತ್ಯಾಜ್ಯಗಳ ನಿರ್ವಹಣೆ ಬಹು ದೊಡ್ಡ ಸಮಸ್ಯೆಯಾಗಿದೆ. ಇಂತಹ ಸಮಯದಲ್ಲಿ ನಾವು ತ್ಯಾಜ್ಯಗಳ ಮರುಬಳಕೆಯ ಜವಾಬ್ದಾರಿಯನ್ನು ಹೊರಬೇಕು. ಒಮ್ಮೆ ಬಳಸಿ ಬಿಸಾಡುವ ವಸ್ತುಗಳನ್ನು ಮರು ಉಪಯೋಗಪಡಿಸಿಕೊಳ್ಳುವ ಕಲೆಯನ್ನು ಬೆಳೆಸಿಕೊಳ್ಳಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.