ದೊಡ್ಡೋರ ಜೊತೆ ಸಹನೆಯಿಂದ ವರ್ತಿಸಿ: ಇಲ್ಲಾಂದ್ರೆ ತಕ್ಕ ಶಾಸ್ತಿ ಮಾಡಿಬಿಡ್ತಾರೆ!

Published : Mar 14, 2024, 05:47 PM IST
ದೊಡ್ಡೋರ ಜೊತೆ ಸಹನೆಯಿಂದ ವರ್ತಿಸಿ: ಇಲ್ಲಾಂದ್ರೆ ತಕ್ಕ ಶಾಸ್ತಿ ಮಾಡಿಬಿಡ್ತಾರೆ!

ಸಾರಾಂಶ

ಹಿರಿಯರನ್ನು ಗೌರವಿಸಬೇಕು, ಅಗೌರವದಿಂದ ಕಾಣಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಅವರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು. ಒಂದೊಮ್ಮೆ ಹಿರಿಯರೊಂದಿಗೆ ಸಹನೆಯಿಂದ ವರ್ತಿಸಲು ಸಾಧ್ಯವಾಗದಿದ್ದರೆ ಇಂಥ ಪಾಠಗಳೂ ದೊರೆಯಬಹುದು, ಎಚ್ಚರ.   

ಹಿರಿಯರನ್ನು ಎಂದಿಗೂ ಅಗೌರವದಿಂದ ನೋಡಬಾರದು. ಅವರೊಂದಿಗೆ ಒರಟಾಗಿ ವರ್ತಿಸಬಾರದು. ಏಕೆಂದರೆ, ಅವರಿಗೆ ಅವರದ್ದೇ ಆದ ಮಾನಸಿಕ ಸ್ಥಿತಿಗತಿಗಳಿರುತ್ತವೆ, ದೈಹಿಕವಾಗಿಯೂ ಬಸವಳಿದಿರಬಹುದು. ಒಂದೊಮ್ಮೆ ಎಲ್ಲ ಚೆನ್ನಾಗಿದ್ದರೂ ಸಹ ವಯಸ್ಸಿಗೆ ಅನುಗುಣವಾಗಿ ಅವರು ಸ್ವಲ್ಪ ನಿಧಾನಗತಿಯ ಜೀವನಶೈಲಿ ರೂಢಿಸಿಕೊಂಡಿರುತ್ತಾರೆ. ಇದರಿಂದ ಕೆಲವೊಮ್ಮೆ ಇರಿಸುಮುರಿಸಾದರೂ “ನಮ್ಮದೇ ತಾಯ್ತಂದೆ ಆ ಜಾಗದಲ್ಲಿದ್ದರೆ ನಾವು ಹಾಗೆ ವರ್ತಿಸುತ್ತೇವೆಯೇ?ʼ ಎನ್ನುವ ಪ್ರಶ್ನೆ ಕೇಳಿಕೊಂಡಾದರೂ ಅವರಿಗೆ ಗೌರವ ನೀಡಬೇಕು. ಇದೆಲ್ಲ ಯಾರಿಗೂ ತಿಳಿಯದ ವಿಚಾರವೇನಲ್ಲ. ಆದರೂ ಸಾರ್ವಜನಿಕವಾಗಿ ಕೆಲವರು ಹಿರಿಯರೊಂದಿಗೆ ಕಠೋರವಾಗಿ ವರ್ತಿಸುತ್ತಾರೆ. ಅಂಥದ್ದೊಂದು ಸನ್ನಿವೇಶವನ್ನು ಹಿರಿಯರೊಬ್ಬರು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತಮ್ಮೊಂದಿಗೆ ಕೆಟ್ಟದಾಗಿ ವರ್ತನೆ ಮಾಡಿದ ಮಹಿಳೆಗೆ ತಕ್ಕದಾದ ಪಾಠವನ್ನೂ ಅವರು ಕಲಿಸಿದ್ದಾರೆ. ಮೆಕ್‌ ಡೊನಾಲ್ಡ್‌ ಕೆಫೆಯಲ್ಲಿ ಸಂಭವಿಸಿದ ಈ ಘಟನೆ ಎಲ್ಲರಿಗೂ ಒಂದು ರೀತಿಯ ಪಾಠ. ಹೀಗಾಗಿ, ಈ ವೀಡಿಯೋವನ್ನು ನಟಿ ತಾರಾ ದೇಶಪಾಂಡೆ ಅವರೂ ಸಹ ಹಂಚಿಕೊಂಡಿದ್ದಾರೆ. ಜತೆಗೆ, “ನಮ್ಮೆಲ್ಲರಿಗೂ ಇರಬೇಕಾದ ಸ್ವಲ್ಪ ಬುದ್ಧಿವಂತಿಕೆʼ ಎಂದು ಹೇಳಿದ್ದಾರೆ. 

ಹಿರಿಯರನ್ನು (Elder) ಕಡೆಗಣಿಸುವುದು ಬಹಳಷ್ಟು ಜನರ ಅಭ್ಯಾಸ. ಅದರಲ್ಲೂ ಕೆಲವರು ಸಾರ್ವಜನಿಕ (Public) ಸ್ಥಳದಲ್ಲಿ (Place) ಸ್ವಲ್ಪವೂ ತಾಳ್ಮೆಯಿಲ್ಲದಂತೆ (Patience) ವರ್ತಿಸುತ್ತಾರೆ. ಇನ್ನೊಬ್ಬರ ಬಗ್ಗೆ ಭಾರೀ ಕಿರಿಕಿರಿ ತೋರುತ್ತಾರೆ. ಹಿರಿಯರೊಬ್ಬರು ಇಂಥದ್ದೇ ಮಹಿಳೆಯರೊಬ್ಬರೊಂದಿಗೆ ನಡೆದ ಘಟನೆಯನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. “ನನಗೆ ಈಗ 83 ವರ್ಷ. ಇಂದು ಬೆಳಗ್ಗೆ ಮೆಕ್‌ ಡೊನಾಲ್ಡ್ಸ್‌ ಗೆ ಡ್ರೈವ್‌ ಮಾಡಿಕೊಂಡು ಹೋಗಿದ್ದೆ. ಹಿಂದೆ ನಿಂತಿದ್ದ ಮಹಿಳೆಯರೊಬ್ಬರು ಇದ್ದಕ್ಕಿದ್ದ ಹಾಗೆ ಹಾರ್ನ್‌ ಮಾಡಲು ಆರಂಭಿಸಿದರು. ಜತೆಗೆ, ಕೆಟ್ಟ ಶಬ್ದಗಳಿಂದ ಬೈಯುತ್ತಿರುವುದು (Ugly Words) ಕೇಳಿಸಿತು. ಏಕೆಂದರೆ, ನಾನು ನನ್ನ ಆರ್ಡರ್‌ (Order) ಅಂತಿಮಗೊಳಿಸಲು ಸ್ವಲ್ಪ ಹೆಚ್ಚು ಸಮಯ (Time) ತೆಗೆದುಕೊಂಡಿದ್ದೆʼ ಎಂದವರು ತಿಳಿಸಿದ್ದಾರೆ. ಆದರೆ, ಬಹಳಷ್ಟು ಜನ ಇದೆಲ್ಲ ಸಾಮಾನ್ಯವೆಂದು ಬಿಟ್ಟುಬಿಡುತ್ತಾರೇನೋ. ಈ ಹಿರಿಯರು ಹಾಗಲ್ಲ, ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ನಿರ್ಧರಿಸಿದರು.

ಮೋದಿ ಮತ್ತೆ ಪ್ರಧಾನಿಯಾಗಲೆಂದು ಮಾದೇಶ್ವರ ಬೆಟ್ಟ ಹತ್ತಿದ 102ರ ಅಜ್ಜಿ..!

ಮಹಿಳೆಯ ಆಹಾರಕ್ಕೂ ಹಣ ಪಾವತಿಸಿದ ವೃದ್ಧರು
ಆ ಮಹಿಳೆಯರ ಅಗೌರವದ ವರ್ತನೆಯಿಂದ ನೋವಾದರೂ, ಅವಳಿತೆ ತಕ್ಕ ಪಾಠ ಕಲಿಸಬೇಕೆಂದು ನಿರ್ಧರಿಸಿ, ಈ ಹಿರಿಯ ವ್ಯಕ್ತಿ ಆಕೆಯ ಆರ್ಡರ್‌ ಗೂ ತಾವೇ ಹಣ (Money) ನೀಡಿದರು! ಸ್ವಲ್ಪ ನಿಲ್ಲಿ, ಇಷ್ಟೇ ಅಲ್ಲ. ಕೇವಲ ಇಷ್ಟೇ ಆದರೆ, ಆ ಮಹಿಳೆ ಕೇವಲ ನಾಚಿಕೆ (Shame) ಪಡುತ್ತಿದ್ದರೇನೋ, ಆದರೆ, ಇನ್ನೂ ಹೆಚ್ಚು ಪಶ್ಚಾತ್ತಾಪ ಪಡುವಂತೆಯೂ ಈ ಹಿರಿಯರು ಮಾಡಿದ್ದಾರೆ. 
ಮೊದಲ ವಿಂಡೋದಲ್ಲಿ ಆ ಹಿರಿಯರು ಮಹಿಳೆ ಬುಕ್‌ (Book) ಮಾಡಿದ ತಿನಿಸುಗಳಿಗೂ ಹಣ ನೀಡಿದರು. ಅಲ್ಲಿನ ಕ್ಯಾಶಿಯರ್‌ ಬಹುಶಃ ಈ ವಿಚಾರವನ್ನು ಆಕೆಗೆ ಹೇಳಿದರೆಂದು ಕಾಣಿಸುತ್ತದೆ. ಏಕೆಂದರೆ, ಆಕೆ ತನ್ನ ಕಾರಿನ ವಿಂಡೋ ಕೆಳಕ್ಕೆ ಇಳಿಸಿ, “ಥ್ಯಾಂಕ್ಯೂ ಥ್ಯಾಂಕ್ಯೂʼ ಎಂದು ಉಲಿದಳು.

 

“ಬಹುಶಃ ಆಕೆಯ ಒರಟುತನಕ್ಕೆ ನಾನು ಹಣವನ್ನು ಕರುಣೆಯಿಂದ ಪಾವತಿ ಮಾಡಿದೆ ಎಂದು ಆಕೆ ಅಂದುಕೊಂಡಿರಬೇಕುʼ ಎಂದು ಹಿರಿಯರು ಹೇಳಿಕೊಂಡಿದ್ದಾರೆ. 

ಈ ಹುಡುಗಿ ಬಂಗಾರ ಕೇಳ್ಲಿ, ದುಬಾರಿ ಬ್ಯಾಗ್ ಕೇಳ್ಲಿ ಗಪ್ ಚುಪ್ಪಾಗಿ ಎಲ್ಲ ಕೊಡಿಸ್ತಾರೆ ಹುಡುಗ್ರು!

ಮತ್ತೆ ಕ್ಯೂನಲ್ಲಿ ನಿಲ್ಲಬೇಕು!
“ನಾನು ಎರಡನೇ ವಿಂಡೋ (Window) ತಲುಪಿದಾಗ ನಾನು ಸರ್ವರ್‌ ಗೆ ಎರಡೂ ರಸೀತಿ ತೋರಿಸಿ ಆಕೆಯ ಆಹಾರವನ್ನೂ (Food) ತೆಗೆದುಕೊಂಡೆ. ಈಗ ಆಕೆ ಮತ್ತೆ ಸರತಿ ಸಾಲಿನ ತುದಿಗೆ ಹೋಗಿ ನಿಲ್ಲಬೇಕಿತ್ತು. ಎಲ್ಲವನ್ನೂ ಮತ್ತೆ ಹೊಸದಾಗಿ ಆರಂಭಿಸಬೇಕಿತ್ತುʼ ಎಂದು ಬರೆದಿದ್ದಾರೆ. ಇದಲ್ಲವೇ ನಿಜವಾದ ಬುದ್ಧಿವಂತಿಕೆ? ನಾಲ್ಕು ಜನ ಸೇರಿದ ಸ್ಥಳದಲ್ಲಿ ತಾಳ್ಮೆಯಿಂದ ವರ್ತಿಸುವುದು ಅಗತ್ಯ. ಅದಿಲ್ಲದೇ ಹೋದರೆ ಇಂಥ ಪಾಠಗಳೂ ದೊರೆಯುತ್ತವೆ ಎನ್ನುವುದಕ್ಕೆ ಈ ಹಿರಿಯರೇ ಸಾಕ್ಷಿ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!