ಏನ್ ಶೋಕಿನಮ್ಮಾ..ಶಾಪಿಂಗ್‌ ಮಾಡಲು ಒಂದೇ ದಿನ 70 ಲಕ್ಷ ರೂ. ಖರ್ಚು ಮಾಡ್ತಾಳೆ ಈ ಮಹಿಳೆ!

By Vinutha PerlaFirst Published May 27, 2023, 4:38 PM IST
Highlights

ಶಾಪಿಂಗ್‌ಗೂ ಮಹಿಳೆಯರಿಗೂ ಎಲ್ಲಿಲ್ಲದ ನಂಟು. ವೀಕೆಂಡ್ ಬಂತೂಂದ್ರೆ ಸಾಕು ಮಹಿಳೆಯರು ಯರ್ರಾಬಿರ್ರಿ ಶಾಪಿಂಗ್ ಮಾಡಿ ಗಂಡನ ಜೇಬು ಖಾಲಿ ಮಾಡ್ತಾರೆ. ಕೆಲವೊಬ್ಬರು ದಿನಕ್ಕೆ ಎರಡು ಮೂರು ಲಕ್ಷದ ಶಾಪಿಂಗ್ ಮಾಡೋದಿದೆ. ಆದರೆ ಇಲ್ಲೊಬ್ಬ ಮಹಿಳೆ ಒಂದು ದಿನದ ಶಾಪಿಂಗ್‌ಗೆ 70 ಲಕ್ಷ ರೂ. ಖರ್ಚು ಮಾಡಿದ್ದಾಳೆ. ನಂಬೋಕೆ ಕಷ್ಟವಾದರೂ ಇದು ನಿಜ.

ಸಾಮಾನ್ಯವಾಗಿ ವೀಕೆಂಡ್ ಶಾಪಿಂಗ್ ಎಂದರೆ ಗಂಡಸರಿಗೆ ಟೆನ್ಶನ್ ಶುರುವಾಗುತ್ತದೆ. ಹೆಂಡ್ತಿಯ ಶಾಪಿಂಗ್ ಭರಾಟೆಯಿಂದ ಜೇಬಿಗೆ ಸರಿಯಾಗಿ ಕತ್ತರಿ ಬೀಳುವುದು ಗ್ಯಾರಂಟಿ ಎಂದು ಭಯಪಟ್ಟುಕೊಳ್ಳುತ್ತಾರೆ. ಕೆಲವು ಮಹಿಳೆಯರು ಅಲ್ಪಸ್ಪಲ್ಪ ಶಾಪಿಂಗ್ ಮಾಡಿದರೆ, ಇನ್ನು ಕೆಲವರು ಬೇಕಾಬಿಟ್ಟಿ ಶಾಪಿಂಗ್ ಮಾಡಿ ಉದ್ದುದ್ದ ಬಿಲ್ ಮಾಡಿಬಿಡುತ್ತಾರೆ. ಹೀಗೆ ಒಂದು ದಿನದ ಶಾಪಿಂಗ್‌ಗೆ 70 ಲಕ್ಷ ರೂಪಾಯಿವರೆಗೆ ಖರ್ಚು ಮಾಡುವ ಮಹಿಳೆಯರು ಇದ್ದಾರೆ ಎಂದರೆ ನೀವು ನಂಬುತ್ತೀರಾ? ನಂಬಲು ಕಷ್ಟವಾದರೂ ಇದು ನಿಜ.  ಡೈಲಿ ಸ್ಟಾರ್‌ನ ವರದಿಯ ಪ್ರಕಾರ, ದುಬೈನಲ್ಲಿ ವಾಸಿಸುವ ಸೌದಿ ಎಂಬ ಮಹಿಳೆಯ ಹವ್ಯಾಸವು ತನ್ನ ಗಂಡನ ಹಣವನ್ನು ಖರ್ಚು ಮಾಡುವುದಾಗಿದೆ. 

ದುಬೈನಲ್ಲಿ ವಾಸಿಸುವ ಸೋದಿ ಹೆಸರಿನ ಮಹಿಳೆ (Woman)ಯೊಬ್ಬರು ಒಂದೇ ದಿನದಲ್ಲಿ 70 ಲಕ್ಷ ರೂ.ಗಳ ಶಾಪಿಂಗ್ ಮಾಡುತ್ತಾರಂತೆ. ನಾನು ಇರುವುದೇ ಪತಿಯ ದುಡ್ಡು ಖರ್ಚು ಮಾಡಿ ಮಜಾ ಉಡಾಯಿಸಲು ಎಂದು ಸೋದಿ ಹೇಳುತ್ತಾರೆ. ಮಹಿಳೆ ತನ್ನ ಐಷಾರಾಮಿ ರಜಾದಿನಗಳು (Luxurios holidays) ಮತ್ತು ದುಬಾರಿ ಸ್ಥಳಗಳಿಗೆ ಹೋಗಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ (Social media) ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ.

ಶಾಪಿಂಗ್ ಮಾಡಲು ಹಣ ಕೊಡದ್ದಕ್ಕೆ ಸಿಟ್ಟು, ಪ್ರಿಯಕರನನ್ನು ಕರೆಸಿ ಗಂಡನಿಗೆ ಹೊಡೆಸಿದ ಹೆಂಡ್ತಿ!

ವರ್ಲ್ಡ್‌ ಟೂರ್ ಮಾಡಿ ಬೇಕಾಬಿಟ್ಟಿ ಹಣ ಖರ್ಚು ಮಾಡ್ತಾರೆ ದಂಪತಿ
ದುಬೈನ ಶ್ರೀಮಂತ ಗೃಹಿಣಿ ಮತ್ತು ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು. ದಂಪತಿಗಳು (Couples) ಲಕ್ಸುರಿ ಕಾರುಗಳನ್ನು ಇಷ್ಟಪಡುತ್ತಾರೆ. ಜಮಾಲ್, ಸೌದಿಗೆ ಬಿರ್ಕಿನ್ ಬ್ಯಾಗ್ ಮತ್ತು ಎರಡು ಕಾರುಗಳನ್ನು ಉಡುಗೊರೆ (Gift)ಯಾಗಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಮಹಿಳೆ, ತನಗೆ ಡಿಸೈನರ್ ಬಟ್ಟೆಗಳು (Dress) ಮತ್ತು ಬ್ಯಾಗ್‌ಗಳು ಮಾತ್ರ ಇಷ್ಟ ಎಂದು ಹೇಳಿದ್ದಾರೆ. ಪ್ರಪಂಚದ ಹಲವು ದೇಶಗಳಿಗೆ ಪ್ರವಾಸ ಮಾಡಿದ್ದೇನೆ. ಪ್ರತಿ ಪ್ರವಾಸದಲ್ಲಿ 14-15 ಲಕ್ಷ ರೂಪಾಯಿಗಳನ್ನು ಸುಲಭವಾಗಿ ಖರ್ಚು (Expense) ಮಾಡುತ್ತೇನೆ. ಆಕೆಯ ಇತ್ತೀಚಿನ ಪ್ರವಾಸಗಳಲ್ಲಿ ಮಾಲ್ಡೀವ್ಸ್‌ಗೆ 12.78 ಲಕ್ಷ ರೂ. ಮಾಡಿದ್ದೇನೆ. ನಾವಿಬ್ಬರೂ ಮಾಲ್ಡೀವ್ಸ್ ಅನ್ನು ಪ್ರೀತಿಸುತ್ತೇವೆ ಮತ್ತು ಪ್ರತಿ ಕೆಲವು ತಿಂಗಳಿಗೊಮ್ಮೆ ನಾವು ಲಂಡನ್‌ಗೆ ಹೋಗುತ್ತೇವೆ: ಮುಂದೆ ಜಪಾನ್‌ಗೆ ಹೋಗಲು ಬಯಸುತ್ತೇವೆ' ಎಂದು ಸೌದಿ ಹೇಳಿದರು.

ಕರ್ವಾ ಚೌತ್‌ಗಾಗಿ ಗರ್ಲ್‌ಫ್ರೆಂಡ್‌ ಜೊತೆ ಶಾಪಿಂಗ್‌, ನಡುರಸ್ತೆಯಲ್ಲೇ ಗಂಡನಿಗೆ ಗ್ರಹಚಾರ ಬಿಡಿಸಿದ ಹೆಂಡ್ತಿ!

ದುಬೈ ವಿವಿಯಲ್ಲಿ ಮೊದಲ ಬಾರಿಗೆ ಭೇಟಿಯಾದ ಜೋಡಿ
ಸಸ್ಸೆಕ್ಸ್‌ನಲ್ಲಿ ಜನಿಸಿದ ಸೋದಿಯ ಪತಿ (Husband) ಸೌದಿ ಅರೇಬಿಯಾದ ಮೂಲದ ಶ್ರೀಮಂತ. ಆರು ವರ್ಷದವಳಿದ್ದಾಗ ಸೋದಿ ತನ್ನ ಕುಟುಂಬದೊಂದಿಗೆ ದುಬಾಯ್‌ಗೆ ಬಂದು ನೆಲೆಸಿದ್ದಾರೆ. ದುಬೈ ವಿವಿಯಲ್ಲಿ ಮೊದಲ ಬಾರಿಗೆ ಭೇಟಿಯಾದ ಇಬ್ಬರೂ ಕಳೆದ ಎರಡು ವರ್ಷಗಳಿಂದ ಜೊತೆಯಲ್ಲಿದ್ದಾರೆ. ಇಬ್ಬರು ದುಬೈನ ವಿಶ್ವವಿದ್ಯಾನಿಲಯದಲ್ಲಿ ಭೇಟಿಯಾದರು ಮತ್ತು ಈಗ ಎರಡು ವರ್ಷಗಳ ಹಿಂದೆ ಮದುವೆ (Marriage)ಯಾಗಿದ್ದಾರೆ. ಅದೇನೆ ಇರ್ಲಿ ಮಹಿಳೆಯ ಶೋಕಿ ಎಲ್ಲರನ್ನೂ ನಿಬ್ಬೆರಗಾಗಿಸುತ್ತಿರೋದಂತೂ ನಿಜ.

'ನನಗೆ ಸರ್‌ಪ್ರೈಸ್ ಎಂದರೆ ಇಷ್ಟ. ಹಾಗಾಗಿ ಜಮಾಲ್‌ ನಮಗಾಗಿ 96,000 ರೂ. ಖರ್ಚು ಮಾಡಿ ರೆಸ್ಟೋರೆಂಟ್‌ ಬುಕ್ ಮಾಡಿದಾಗ ನನಗೆ ಖುಷಿಯಾಗುತ್ತದೆ. ಆತ ನನಗೆ ರಾತ್ರಿ ಏನು ಧರಿಸಬೇಕೆನಿಸುತ್ತದೋ ಆ ಬಟ್ಟೆಗಳನ್ನು ಕಳುಹಿಸುತ್ತಾನೆ. ಆತ ಸದಾ ರಾತ್ರಿಗಳನ್ನು ಅಚ್ಚರಿಗಳ ಕೊಡುವ ಮೂಲಕ ಕಳೆಯುತ್ತಾನೆ' ಎಂದು ಪತಿ ಬಗ್ಗೆ ಸೋದಿ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

click me!