
ಸಮಯದ ಜೊತೆ ಅನೇಕ ಸಂಗತಿಗಳು ಬದಲಾಗ್ತಿವೆ. ಜನರ ಜೀವನ ಶೈಲಿ (Lifestyle) ಕೂಡ ಬದಲಾಗ್ತಿದೆ. ಹಿಂದಿನ ಕಾಲದಲ್ಲಿ ಹುಡುಗಿ (Girl) ಯರನ್ನು ಬೇಗ ಮದುವೆ (Marriage) ಮಾಡಲಾಗ್ತಾ ಇತ್ತು. ಆದ್ರೀಗ ಹುಡುಗಿಯರು ಬದಲಾಗಿದ್ದಾರೆ. ಹುಡುಗಿಯರು ಬೇಗ ಮದುವೆಯಾಗಲು ಒಪ್ಪಿಗೆ ನೀಡ್ತಿಲ್ಲ. ಓದು (Study), ನೌಕರಿ ಮತ್ತು ವೃತ್ತಿ ಜೀವನಕ್ಕೆ (Career) ಹುಡುಗಿಯರು ಮಹತ್ವ ನೀಡ್ತಿದ್ದಾರೆ. ಹಾಗಾಗಿ ಮದುವೆ ವಯಸ್ಸು (Age) ಹೆಚ್ಚಾಗ್ತಿದೆ. ವಯಸ್ಸು ಜಾಸ್ತಿಯಾದ್ಮೇಲೆ ಮದುವೆಯಾಗೋದು ಮಹಿಳೆಯರ ವೃತ್ತಿ ಜೀವನಕ್ಕೆ ಒಳ್ಳೆಯದು. ಆದ್ರೆ ವಯಸ್ಸಾದ್ಮೇಲೆ ಮದುವೆಯಾದ್ರೆ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂದು ನಾವು ವಯಸ್ಸಾದ್ಮೇಲೆ ಮದುವೆಯಾದ ಮಹಿಳೆಯರು ಏನೆಲ್ಲ ಸಮಸ್ಯೆ ಎದುರಿಸ್ತಾರೆ ಎಂಬುದನ್ನು ಹೇಳ್ತೇವೆ.
ಸಂಗಾತಿ ಜೊತೆ ಹೊಂದಿಕೊಳ್ಳೋದು ಕಷ್ಟ : ಕಡಿಮೆ ವಯಸ್ಸಿನಲ್ಲಿ ಮದುವೆಯಾದ್ರೆ ಮಹಿಳೆಯರಿಗೆ ತಮ್ಮ ಸಂಗಾತಿ ಜೊತೆ ಹೊಂದಿಕೊಳ್ಳೋದು ಸುಲಭವಾಗುತ್ತದೆ. ಆದ್ರೆ ಅನೇಕ ವರ್ಷಗಳ ಕಾಲ ಒಂಟಿಯಾಗಿದ್ದು, ಇಂಡಿಪೆಂಡೆಂಟ್ (Independent) ಆಗಿದ್ದರೆ ನಂತ್ರ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ವಯಸ್ಸಾದ್ಮೇಲೆ ಮದುವೆಯಾದ್ರೆ ಸಂಗಾತಿ ಇಷ್ಟ ಕಷ್ಟಕ್ಕೆ ಹೊಂದಿಕೊಳ್ಳುವುದು ಹಾಗೂ ಅವರ ಅವಶ್ಯಕತೆ ಜೊತೆ ಜೀವನ ನಡೆಸುವುದು ಸುಲಭವಲ್ಲ. ಇದು ಮಹಿಳೆಯರ ಸ್ವಾಭಿಮಾನ (Self Respect) ಕ್ಕೂ ಧಕ್ಕೆ ತರುತ್ತದೆ. ಇದ್ರಿಂದ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಗುತ್ತದೆ.
ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಲವ್ ಸ್ಟೋರಿ
ಹೊಸ ವಿಷ್ಯದ ಬಗ್ಗೆ ಕುತೂಹಲವಿರುವುದಿಲ್ಲ : ಚಿಕ್ಕ ವಯಸ್ಸಿನ ಹುಡುಗಿರಲ್ಲಿ ಅನೇಕ ವಿಷ್ಯಗಳ ಬಗ್ಗೆ ಕುತೂಹಲವಿರುತ್ತದೆ. ವಯಸ್ಸು ಹೆಚ್ಚಾಗ್ತಿದ್ದಂತೆ ಉತ್ಸಾಹ ಕಡಿಮೆಯಾಗಲು ಶುರುವಾಗುತ್ತದೆ. ವಯಸ್ಸಾಗ್ತಿದ್ದಂತೆ ಮಹಿಳೆಯರು ಸುತ್ತಾಡಲು, ಶಾಪಿಂಗ್ (Shopping) ಮಾಡಲು, ಮೋಜು – ಮಸ್ತಿ ಮಾಡಲು ಆಸಕ್ತಿ (Interest) ಹೊಂದಿರುವುದಿಲ್ಲ. ಜವಾಬ್ದಾರಿಯನ್ನು ಮೈಮೇಲೆ ಎಳೆದುಕೊಳ್ಳುವ ಕಾರಣ ಅದ್ರಲ್ಲಿಯೇ ವ್ಯಸ್ತವಾಗ್ತಾರೆ. ಇದ್ರಿಂದಾಗಿ ಮದುವೆ ನಂತ್ರವೂ ಅವರ ಜೀವನ ಮೊದಲಿನಂತೆ ಇರುತ್ತದೆ. ಸಂಗಾತಿ ಮೇಲೆ ಹೆಚ್ಚಿನ ಆಸಕ್ತಿ ಇರುವುದಿಲ್ಲ.
ಗರ್ಭಧಾರಣೆಯಲ್ಲಿ ಸಮಸ್ಯೆ : ವಯಸ್ಸಾದಂತೆ ಮಹಿಳೆಯ ಫಲವತ್ತತೆ ಪ್ರಮಾಣ ಕಡಿಮೆಯಾಗುತ್ತದೆ. ಅನೇಕ ಸಂಶೋಧನೆಗಳಲ್ಲಿ ಇದು ಸ್ಪಷ್ಟವಾಗಿದೆ. ವಯಸ್ಸು ಹೆಚ್ಚಾಗ್ತಿದ್ದಂತೆ ಮಹಿಳೆ ಹಾಗೂ ಪುರುಷ ಇಬ್ಬರೂ ಮಕ್ಕಳನ್ನು ಪಡೆಯಲು ಸಮಸ್ಯೆ ಎದುರಿಸಬೇಕಾಗುತ್ತದೆ. ಇದಲ್ಲದೆ ಗರ್ಭಧಾರಣೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಗರ್ಭಪಾತದ ಅಪಾಯವಿರುತ್ತದೆ. ಹೆರಿಗೆ ವೇಳೆಯೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ ವಯಸ್ಸಾದ ದಂಪತಿಗೆ ಜನಿಸುವ ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಕೂಡ ಕಾಣಬಹುದಾಗಿದೆ.
ಸಂಗಾತಿ ಆಯ್ಕೆ ಮಾಡಲು ಕಡಿಮೆ ಅವಕಾಶ : ಮಹಿಳೆಯಾಗಿರಲಿ ಇಲ್ಲ ಪುರುಷರಾಗಿರಲಿ ವಯಸ್ಸಾದಂತೆ ಸಂಗಾತಿ ಹುಡುಕುವ ಆಯ್ಕೆ ಕಡಿಮೆಯಾಗುತ್ತದೆ. ವಯಸ್ಸಾದ್ರೂ ಮದುವೆಯಾಗಿಲ್ಲ ಎಂಬ ಕುಟುಂಬಸ್ಥರ ಮಾತಿಗೆ ಬೇಸತ್ತು ಅನೇಕ ಮಹಿಳೆಯರು ಸರಿಯಾಗಿ ಆಲೋಚನೆ ಮಾಡದೆ ಬಂದ ಸಂಬಂಧವನ್ನು ಒಪ್ಪಿಕೊಳ್ತಾರೆ. ಇದ್ರ ನಂತ್ರ ಪತಿ ಜೊತೆ ಅಡ್ಜೆಸ್ಟ್ ಆಗೋದು ಕಷ್ಟವಾಗುತ್ತದೆ. ಅನೇಕ ಬಾರಿ ಇಬ್ಬರ ಮಧ್ಯೆ ಹೊಂದಾಣಿಕೆ ಇರುವುದಿಲ್ಲ. ಇಬ್ಬರ ಆಲೋಚನೆಗಳು ಭಿನ್ನವಾಗಿರುತ್ತವೆ. ಆಗ ಅಲ್ಲಿ ಪ್ರೀತಿ ಕಾಣಲು ಸಾಧ್ಯವಿಲ್ಲ.
ಶಾರೀರಿಕ ಸಂಬಂಧದ ಬಗ್ಗೆ ಆಸಕ್ತಿ ಕಡಿಮೆ : ವಯಸ್ಸು ಹೆಚ್ಚಾದ್ಮೇಲೆ ಮದುವೆಯಾದ್ರೆ ಇದು ದಂಪತಿ ಸೆಕ್ಸ್ ಲೈಫ್ ಮೇಲೆಯೂ ಪರಿಣಾಮ ಬೀರುತ್ತದೆ. ಯಂಗ್ ದಂಪತಿ ಇದ್ರಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ವಯಸ್ಸು ಚಿಕ್ಕದಿರುವ ಕಾರಣ ಮಕ್ಕಳ ಒತ್ತಡ ಕೂಡ ಇರೋದಿಲ್ಲ. ಹಾಗಾಗಿ ಸೆಕ್ಸ್ ಲೈಫ್ ಎಂಜಾಯ್ ಮಾಡಬಹುದು. ಆದ್ರೆ ವಯಸ್ಸು ಹೆಚ್ಚಾದಂತೆ ಎಲ್ಲ ಒತ್ತಡ ಜಾಸ್ತಿಯಾಗುತ್ತದೆ. ಆದ್ರೆ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಮಕ್ಕಳನ್ನು ಪಡೆಯಬೇಕೆಂಬ ಕಾರಣಕ್ಕೆ ಅವರು ಲೈಂಗಿಕ ಜೀವನವನ್ನು ಎಂಜಾಯ್ ಮಾಡಲು ಸಾಧ್ಯವಾಗುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.