ಅಪ್ರಾಪ್ತ ಬಾಲಕಿಯರಿಗೆ ಇಂಜೆಕ್ಷನ್, ಪ್ರತಿ ದಿನ 15 -20 ಮಂದಿ ಜೊತೆ ಮಲಗ್ಬೇಕು, ಜಿಬಿ ರಸ್ತೆ ಕರಾಳ ಸತ್ಯ ಬಯಲು

Published : May 14, 2025, 05:42 PM ISTUpdated : May 15, 2025, 09:54 AM IST
ಅಪ್ರಾಪ್ತ ಬಾಲಕಿಯರಿಗೆ ಇಂಜೆಕ್ಷನ್, ಪ್ರತಿ ದಿನ  15 -20 ಮಂದಿ ಜೊತೆ ಮಲಗ್ಬೇಕು, ಜಿಬಿ ರಸ್ತೆ ಕರಾಳ ಸತ್ಯ ಬಯಲು

ಸಾರಾಂಶ

ಜಿಬಿ ರಸ್ತೆಯ ರೆಡ್‌ಲೈಟ್ ಏರಿಯಾದಲ್ಲಿ ಮಹಿಳೆಯರ ಮೇಲಿನ ಶೋಷಣೆ ತೀವ್ರವಾಗಿದೆ. ಅಪ್ರಾಪ್ತ ಹುಡುಗಿಯರನ್ನು ಅಪಹರಿಸಿ, ಆಕ್ಸಿಟೋಸಿನ್ ಇಂಜೆಕ್ಷನ್ ನೀಡಿ ದೇಹವ್ಯಾಪಾರಕ್ಕೆ ತಳ್ಳಲಾಗುತ್ತಿದೆ. ದಿನಕ್ಕೆ  15 -20  ಗ್ರಾಹಕರೊಂದಿಗೆ ಸಂಬಂಧ ಬೆಳೆಸುವಂತೆ ಬಲವಂತಪಡಿಸಲಾಗುತ್ತದೆ. ಗರ್ಭಧಾರಣೆಗಾಗಿ ಆರಂಭದಲ್ಲಿ ಕಾಂಡೋಮ್ ನಿಷೇಧಿಸಲಾಗುತ್ತದೆ.  

ಮಹಿಳಾ ಸಬಲೀಕರಣ (women empowerment )ದ ಬಗ್ಗೆ ಅದೆಷ್ಟೇ ಪ್ರಯತ್ನ ನಡೆಸಿದ್ರೂ ಮಹಿಳೆಯರ ಮೇಲಿನ ಶೋಷಣೆ ಮಾತ್ರ ನಿಲ್ತಿಲ್ಲ. ಜಿಬಿ ರಸ್ತೆಯಂತಹ ರೆಡ್ ಲೈಟ್ (Red light) ಏರಿಯಾದಲ್ಲಿ ನಡೆಯುವ ಘಟನೆಗಳು ಮೈ ಜುಮ್ಮೆನಿಸುತ್ತವೆ. ಹೆಣ್ಮಕ್ಕಳ ಪಾಲಕರು ನಿದ್ದೆಗೆಡುವಂತೆ ಮಾಡುತ್ತೆ. ಸಾಮಾಜಿಕ ಜಾಲತಾಣದಲ್ಲಿ ರೆಡ್ ಲೈಟ್ ಏರಿಯಾದಲ್ಲಿ ನಡೆಯುವ ಘಟನೆಗಳ ವಿಡಿಯೋ ಒಂದು ವೈರಲ್ ಆಗಿದೆ. , ಜಿಬಿ ರಸ್ತೆಯ ಕರಾಳ ಸತ್ಯವನ್ನು ಇದ್ರಲ್ಲಿ ಬಿಚ್ಚಿಡಲಾಗಿದೆ.  ಅಲ್ಲಿ ನಡೆಯುವ ಒಂದೊಂದು ಘಟನೆ ಕೇಳಿದ್ರೂ ರಕ್ತ ಕುದಿಯೋದು ಸುಳ್ಳಲ್ಲ.

ಅಪ್ರಾಪ್ತ ಹುಡುಗಿಯರಿಗೆ ನೀಡಲಾಗುತ್ತೆ ಇಂಜೆಕ್ಷನ್ (injection) : ಟ್ರೂ ಟಾಕ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಎಕ್ಸ್ ಖಾತೆಯಲ್ಲಿ ವಿಡಿಯೋ ತುಣಕನ್ನು ಬಳಕೆದಾರರು ಹಂಚಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಅತುಲ್ ಶರ್ಮಾ, ಜಿ ಬಿ ರೋಡ್ ಕರಾಳ ಕಥೆಯನ್ನು ಚಾನೆಲ್ ನಲ್ಲಿ ಹೇಳಿದ್ದಾರೆ. ಅವ್ರ ಪ್ರಕಾರ,ದ್ವೇಷದ ಕಾರಣಕ್ಕೆ  ಚಿಕ್ಕ ವಯಸ್ಸಿನಲ್ಲಿಯೇ  ಹುಡುಗಿಯರನ್ನು ಅಪಹರಿಸಿ ದೇಹ ವ್ಯಾಪಾರಕ್ಕೆ  ತಳ್ಳಲಾಗುತ್ತೆ. ಮಾರುಕಟ್ಟೆಯಲ್ಲಿ ಅಪ್ರಾಪ್ತ ಹುಡುಗಿಯರಿಗೆ ಬೇಡಿಕೆ ಹೆಚ್ಚಾಗಿರೋದು ಇದಕ್ಕೆ ಮುಖ್ಯ ಕಾರಣ. ಅಲ್ಲಿಗೆ ಬಂದ ಹುಡುಗಿಯರು ತಮ್ಮ ದೇಹವನ್ನು ಪ್ರದರ್ಶಿಸಬೇಕು. ಹಾಗಾಗಿ ಅವ್ರನ್ನು ಕಿಟಕಿ ಬಳಿ ನಿಲ್ಲಿಸಲಾಗುತ್ತೆ. ಎದೆ ಮಾತ್ರ ಇಲ್ಲಿ ಮುಖ್ಯ. ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ಆಕ್ಸಿಟೋಸಿನ್ ಎಂಬ ಇಂಜೆಕ್ಷನ್ ನೀಡಿ, ಅವರ ದೇಹದ ಭಾಗಗಳ ಗಾತ್ರ ಹೆಚ್ಚಿಸಲಾಗುತ್ತೆ.  ಇದ್ರಿಂದ ಅಪ್ರಾಪ್ತ ಹುಡುಗಿಯರು  ಯುವತಿಯರಂತೆ ಕಾಣಿಸ್ತಾರೆ. 

ಒಂದು ದಿನಕ್ಕೆ ಎಷ್ಟು ಜನರ ಜೊತೆ ಸಂಬಂಧ? : ಅತುಲ್ ಶರ್ಮಾ ಪ್ರಕಾರ, ಒಬ್ಬರು, 15 ರಿಂದ 20 ಗ್ರಾಹಕರ ಜೊತೆ ಒಂದು ದಿನ ಸಂಬಂಧ ಬೆಳೆಸಬೇಕು. ಸುಂದರವಾದ ಹುಡುಗಿಯರನ್ನು ಅನೇಕ ಬಾರಿ, ಕೆಟ್ಟವಾಸನೆ ಬರುವ, ಯಾರೂ ನೋಡಲು ಇಚ್ಛಿಸಿದ, ಕೊಳಕು ವ್ಯಕ್ತಿ ಬಳಿ ಕಳುಹಿಸಿ ಹಿಂಸೆ ನೀಡೋದಿದೆ. 

ಕಾಂಡೋಮ್ ಬಳಕೆ ನಿಷಿದ್ಧ : ಜೆ.ಬಿ ರಸ್ತೆಯಲ್ಲಿ ಇನ್ನೊಂದು ನಿಯಮ ಇದೆ. ಅಪ್ರಾಪ್ತ ಹುಡುಗಿಯನ್ನು ಈ ದಂಧೆಗೆ ತಳ್ಳುವವರು, ಸೆಕ್ಸ್ ವರ್ಕರ್ಸ್ ಮಕ್ಕಳಿಂದ್ಲೂ ಹಣ ಮಾಡಲು ಬಯಸ್ತಾರೆ. ಹಾಗಾಗಿ, ಆರಂಭದಲ್ಲಿ ಹುಡುಗಿಗೆ ಕಾಂಡೋಮ್ ನೀಡೋದಿಲ್ಲ. ಆಕೆ ಗರ್ಭ ಧರಿಸಿ ಒಂದು ಮಗು ಹೆತ್ತ ಮೇಲೆ ಕಾಂಡೋಮ್ ನೀಡಲಾಗುತ್ತೆ. ಹೆತ್ತ ಅಮ್ಮನಿಗೆ ಮಕ್ಕಳನ್ನು ನೋಡುವ ಭಾಗ್ಯ ಇರೋದಿಲ್ಲ. ಮಗು ನೋಡ್ಬೇಕು ಅಂದ್ರೆ ಪ್ರತಿ ಬಾರಿ 200 ರೂಪಾಯಿಯನ್ನು ಮಾಲಿಕರಿಗೆ ನೀಡ್ಬೇಕು ಎನ್ನುತ್ತಾರೆ ಅತುಲ್ ಶರ್ಮಾ.

ಲೈಂಗಿಕ ಕಾರ್ಯಕರ್ತೆಯರಿಗೆ ನೀಡುವ ಆಹಾರ ಹೇಗಿರುತ್ತೆ? : ಜಿಬಿ ರಸ್ತೆಯ ರೆಡ್ ಲೈಟ್ ಏರಿಯಾದಲ್ಲಿರುವ ಲೈಂಗಿಕ ಕಾರ್ಯಕರ್ತೆಯರು ಕೆಟ್ಟ ಪರಿಸ್ಥಿತಿಯಲ್ಲಿ ಆಹಾರ ಸೇವನೆ ಮಾಡ್ತಾರೆ. ಕೆಲವರು ಅಲ್ಲೇ ಉಗುಳಿದ್ರೆ ಮತ್ತೆಕೆಲವರು ಕಾಂಡೋಮ್ ಎಸೆದು ಹೋಗಿರ್ತಾರೆ. ಇವ್ರು ಊಟ ಮಾಡ್ತಿರುವಾಗ್ಲೇ ಗ್ರಾಹಕನೊಬ್ಬ ಅಲ್ಲೇ ಮೂತ್ರ ವಿಸರ್ಜನೆ ಮಾಡ್ತಿರ್ತಾನೆ ಎನ್ನುತ್ತಾರೆ ಅತುಲ್ ಶರ್ಮಾ. 

ಸಮಾಜ ಸೇವಕಿ ಅತುಲ್ ಶರ್ಮಾ ಪ್ರಕಾರ, ಈಗಿನ ದಿನಗಳಲ್ಲಿ ಅನೇಕ ಹುಡುಗಿಯರು ತಮ್ಮ ಇಚ್ಛೆಯಿಂದ ಈ ವೃತ್ತಿ ಆಯ್ಕೆ ಮಾಡಿಕೊಳ್ತಿದ್ದಾರಂತೆ. ದುಬಾರಿ ಫೋನ್, ಐಷಾರಾಮಿ ಜೀವನ ನಡೆಸಲು ಕೆಲವರು ಈ ವೃತ್ತಿ ಆಯ್ಕೆ ಮಾಡಿಕೊಳ್ತಿರೋದು ತುಂಬಾ ನೋವಿನ ಸಂಗತಿ ಎಂದು ಅತುಲ್ ಶರ್ಮಾ ಹೇಳಿದ್ದಾರೆ. ಜಿಬಿ ರೋಡ್ ಪಕ್ಕದಲ್ಲಿಯೇ ಬೆಳೆದು ದೊಡ್ಡವರಾದ ಅತುಲ್ ಶರ್ಮಾ, ಅನೇಕರ ಜೀವನವನ್ನು ಕಣ್ಣಾರೆ ಕಂಡಿದ್ದಾರೆ. ಎಷ್ಟೋ ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!