ಕಿವಿಯೋಲೆ ಪ್ರೀಯರಿಗೆ ಇಲ್ಲಿವೆ ಕೆಲವು ಟಿಪ್ಸ್

Published : May 14, 2025, 11:06 AM IST
ಕಿವಿಯೋಲೆ ಪ್ರೀಯರಿಗೆ ಇಲ್ಲಿವೆ ಕೆಲವು ಟಿಪ್ಸ್

ಸಾರಾಂಶ

ಫ್ಯಾಷನ್ ಲೋಕದಲ್ಲಿ ಹಳೆಯ ಶೈಲಿಗಳು ಹೊಸ ವಿನ್ಯಾಸದೊಂದಿಗೆ ಮರಳುತ್ತಿವೆ. ಈಗ ಟ್ರೆಂಡಿ ಮರದ ಕಿವಿಯೋಲೆಗಳು ವಿವಿಧ ವಿನ್ಯಾಸಗಳಲ್ಲಿ ಲಭ್ಯ. ಹಗುರ, ಕಡಿಮೆ ಬೆಲೆ ಮತ್ತು ಸಾಂಪ್ರದಾಯಿಕ/ಆಧುನಿಕ ಉಡುಗೆಗಳಿಗೆ ಹೊಂದುತ್ತವೆ. ಖರೀದಿ ವೇಳೆ ಗುಣಮಟ್ಟ, ಬಣ್ಣ, ಮುಕ್ತಾಯ ಪರಿಶೀಲಿಸಿ. ನೀರಿನ ಸಂಪರ್ಕ ತಪ್ಪಿಸಿ.

ಇಂದಿನ ಫ್ಯಾಶನ್ ಲೋಕದಲ್ಲಿ ದಿನಕ್ಕೊಂದು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಇವತ್ತಿನ ಟ್ರೆಂಡ್‌ ನಾಳೆ ಇರುವುದಿಲ್ಲ. ಹಾಗೆ ಹಳೆಯ ಫ್ಯಾಷನ್ ಗಳು ಹೊಸ ರೂಪ ,ಹೊಸ ವಿನ್ಯಾಸ ಪಡೆದು ಮತ್ತೆ ಮತ್ತೆ ಫ್ಯಾಷನ್ ಲೋಕಕ್ಕೆ ಲಗ್ಗೆ ಇಡುತ್ತಲೇ ಇರುತ್ತವೆ. ಕಾಲ ಎಷ್ಟೇ ಬದಲಾದರು, ಬದಲಾವಣೆಗೆ ತಕ್ಕಂತೆ ಹೊಸ ಹೊಸ ಫ್ಯಾಶ್‌ನ್ನಗಳು ಮಾರುಕಟ್ಟೆಗೆ ಲಗ್ಗೆಇಡುತ್ತವೆ. ಹಳೆಯ ಛಾಪನ್ನ ಇಟ್ಟುಕೊಂದು ಹೊಸ ರೂಪದಲ್ಲಿ ಬಂದು ಜನರ ಕಣ್ಮನ ಸೆಳೆಯುತ್ತವೆ. 

ಎಲ್ಲರಿಗೂ ಗೊತ್ತಿರುವಂತೆ ಮಹಿಳೆಯರು  ಆಭರಣ ಪ್ರಿಯರು ಎಂಬುದರಲ್ಲಿ ಎರಡು ಮಾತಿಲ್ಲ.ತಾವು ಧರಿಸುವಂತಹ ಪ್ರತಿಯೋದು ಆಭರಣದಲ್ಲಿಯೂ ವಿವಿಧತೆ ಇರಬೇಕೆಂದು  ಬಯಸುವುದು ಸಹಜವೇ. ಅದರಲ್ಲೂ ಕಿವಿಓಲೆ, ಕಾಲ್ಗೆಜ್ಜೆ, ಬಿಂದಿ, ನೇಲ್ಪಾಲಿಷ್ ,ಉಡುಪು ಎಲ್ಲವನ್ನು ಮ್ಯಾಚ್ ಮಾಡಿ ನೋಡಿಯೇ ಧರಿಸುತ್ತಾರೆ.ಹೀಗಿರುವಾಗ ಇಂದಿನ ಯುವ ಪೀಳಿಗೆಯ ಯುವತಿಯರು ಟ್ರೆಂಡಿಂಗ್ ನಲ್ಲಿ ಏನೇ ಇರಲಿ ಅದನ್ನೇ ಕೊಂಡು ಧರಿಸಲು ಇಷ್ಟಪಡುತ್ತಾರೆ. ಇವರೆಲ್ಲರ ಅಭಿರುಚಿಗೆ ತಕ್ಕಂತೆ ಇದೀಗ ಮರದ ಕಿವಿಓಲೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮೊದಲಿನಿಂದಲೂ ಮಾರುಕಟ್ಟೆಯಲ್ಲಿ ಮರದ ಕಿವಿಯೋಲೆಗಳು ಇದ್ದವು, ಆದರೆ ಇತ್ತೀಚಿಗೆ ಮಾರುಕಟ್ಟೆಯಲ್ಲಿ ಬರುತ್ತಿರುವಂತಹ ಕಿವಿಯೋಲೆಗಳು ಹೊಸ ವಿನ್ಯಾಸ,ಹೊಸ ಶೈಲಿಯಲ್ಲಿ ಬರುತ್ತಿವೆ.     

ಮರದ ಕಿವಿಓಲೆಗಳನ್ನು ಧರಿಸಲು ಭಾರ ಇರುವುದಿಲ್ಲ .ಸಾಕಷ್ಟು ವೈವಿಧ್ಯತೆಗಳು ಈ ಕಿವಿಓಲೆಗಳಲ್ಲಿ ಸಿಗುತ್ತವೆ. ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಹೀಗಿರುವಾಗ ಯುವ ಜನಾಂಗ ಇದರ ಆಕರ್ಷಣೆಗೆ ಒಳಗಾಗಿರುವುದು ಆಶ್ಚರ್ಯವೇನಿಲ್ಲ. ಹಿಂದಿನಿಂದಲೂ ಮರದ ಆಭರಣಗಳಿಗೆ ಎಲ್ಲಿಲ್ಲದ ಬೇಡಿಕೆ. ಅಲೆಮಾರಿಗಳು, ಕಾಡು ಜನಾಂಗದ ಮಹಿಳೆಯರು ಮರದ ತುಂಡುಗಳಿಂದ ತಯಾರಿಸಲಾದ ಮುತ್ತುಗಳನ್ನು ಪೋಣಿಸಿ ಸರ, ಬಳೆ , ಕಿವಿಯೋಲೆ ಹೀಗೆ ನಾನಾ ತರಹದ ಆಭರಣಗಳನ್ನ ಸ್ವತಃ ತಾವೇ ತಯಾರಿಸಿ ಧರಿಸುತ್ತಿದ್ದರು. ಈ ಮರದ ಆಭರಣಗಳ ಇನ್ನೊಂದು ವೈಶಿಷ್ಟ್ಯ ಎಂದರೆ ಇವುಗಳ ಮೇಲೆ ಯಾವುದೇ ತರಹದ ಬಣ್ಣ ಕೂಡ ಗಟ್ಟಿಯಾಗಿ ನಿಲ್ಲುತ್ತದೆ ಇದನ್ನೇ ತಂತ್ರವಾಗಿ ಬಳಸಿಕೊಂಡ ಫ್ಯಾಶನ್ ನಿಸ್ಟ್ ಗಳು ಇದೀಗ ಸಾಕಷ್ಟು ವಿವಿಧ ವಿನ್ಯಾಸ ರೂಪ ಬಣ್ಣಗಳನ್ನು ಉಪಯೋಗಿಸಿ ಮರದ ಆಭರಣಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಈ ಮರದ ಕಿವಿಯೋಲೆಗಳ ಮೇಲೆ ಒಮ್ಮೆ ಬಣ್ಣ ಹಚ್ಚಿದರೆ ಸಾಕು ನಾವು ಬಳಕೆ ಮಾಡಿದಷ್ಟು ಧೀರ್ಘ ಕಾಲದ ವರೆಗೆ ಬರುತ್ತವೆ.  ಈ ಮರದ ತುಂಡಿನ ಆಭರಣಗಳು ಸಾಂಪ್ರದಾಯಿಕ ಉಡುಪಿಗೂ ಹಾಗೂ ಆಧುನಿಕ ಉಡುಪಿಗೂ ಸೈ ಎನಿಸಿಕೊಂಡಿವೆ. ಯಾವುದೇ ತರಹದ ಉಡುಪು ಧರಿಸಿದಾಗಲೂ ಮರದ ಆಭರಣ ಚೆನ್ನಾಗಿ ಒಪ್ಪುತ್ತದೆ.ಸೀರೆ,ಲೆಹೆಂಗಾ, ಚುಡೀದಾರ್, ಕುರ್ತಾ, ಹೀಗೆ ಮುಂತಾದ ಸಾಂಪ್ರದಾಯಿಕ ಹಾಗೂ ಮಾಡರ್ನ ಡ್ರೆಸ್‌ಗಳಿಗೆ ಹೇಳಿ ಮಾಡಿಸಿದ ಹಾಗೆ ಇರುತ್ತವೆ. 


ಚಿಕ್ಕ ಮರದ ತುಂಡಿನಲ್ಲಿ ತಯಾರಿಸಲಾದ ಕಿವಿಓಲೆಗಳಲ್ಲಿನ ಸೂಕ್ಷ್ಮ ಕೆತ್ತನೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಹಾಗೆ ಈ ಕಿವಿಓಲೆಗಳು ಕಡಿಮೆ ತೂಕ ಹೊಂದಿದ್ದು ಇದನ್ನು ಧರಿಸಿದವರಿಗೆ ಕಿವಿ ನೋವಾಗುವ ಸಮಸ್ಯೆಯೇ ಇಲ್ಲ . ಆದರೆ ಕಿವಿಯೋಲೆಗನ್ನ ಆಯ್ಕೆ ಮಾಡುವಾಗ ಹೆಚ್ಚು ಗಮನ ಹರಿಸಿ  ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಬಣ್ಣ ಹೊಗುವ ಸಾಧ್ಯತೆ ಇರುತ್ತದೆ. ಹಾಗೆ ನೂಲು, ಮಣಿ, ಹ್ಯಾಂಗಿಂಗ್ ಒಳಗೊಂಡಂತೆ ತೀರ ವಿಭಿನ್ನ ಮಾದರಿಯಲ್ಲಿ ಇವುಗಳನ್ನು ರಚಿಸಲಾಗಿದೆ .ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಲೇಹೆಂಗ, ಗಾಗ್ರ ಮುಂತಾದ ಉಡುಪುಗಳ ಜೊತೆಗೆ ಸ್ವಲ್ಪ ದೊಡ್ಡ ಗಾತ್ರದ ದೇವತೆಯ ಚಿತ್ರ ಬಿಡಿಸಿ ಬಣ್ಣ ತುಂಬಿರುವ ಹ್ಯಾಂಗಿಂಗ್ ಕಿವಿಯೋಲೆ ಧರಿಸಬಹುದು.
ಶುಭ ಸಮಾರಂಭಗಳಿಗೆ ಅನುಗುಣವಾಗಿ ಮತ್ತು ಆ ಸಮಾರಂಭಕ್ಕೆ ಧರಿಸುವ ನಮ್ಮ ಉಡುಪಿಗೆ ಅನುಗುಣವಾಗಿ ಗ್ರಾಂಡ್ ಲುಕ್ ನೀಡುವ ಕಿವಿಓಲೆಗಳನ್ನು ಧರಿಸಬಹುದು.

ಈ ಮರದ ಕಿವಿಯೋಲೆಗಳನ್ನ ಖರೀದಿಸುವ ಮುನ್ನ ಸ್ವಲ್ಪ ಗಮನ ಹರಿಸಿ ತೆಗೆದುಕೊಳ್ಳಬೇಕಾಗುತ್ತದೆ.  
ಖರೀದಿಸುವ ಮುನ್ನ ಫಿನಿಶಿಂಗ್‌ ಸರಿ ಇದೆಯೇ ನೋಡಿಕೊಳ್ಳಬೇಕು 
ಕಿವಿಯೋಲೆಗಳಲ್ಲಿ ಹಚ್ಚಿದ ಬಣ್ಣ ಸರಿಯಾಗಿದೆಯೆ ಎಂಬುದನ್ನ ಗಮನಿಸಬೇಕು 
ಇವು ಗಟ್ಟಿಯಾಗಿ  ಒರಟಾಗಿದ್ದಲ್ಲಿ, ಚರ್ಮಕ್ಕೆ ಹಾನಿಯುಂಟಾಗಬಹುದು.
ರಾತ್ರಿ ವೇಳೆ ಓಲೆಗಳನ್ನ ಧರಿಸಿ ಮಲಗಕೂಡದು. ಹಾಳಾಗಬಹುದು, ಇಲ್ಲವೇ ಗಾಯವಾಗಬಹುದು.
ನೀರಲ್ಲಿ ನೆನೆದಲ್ಲಿ ಬಣ್ಣ ಹೋಗುವ ಸಾಧ್ಯತೆ ಇರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!