
ಹಳೆಯ ಮನೆಯನ್ನು ನವೀಕರಣಗೊಳಿಸುವ ಕಾರ್ಯ ಈಗ ಎಲ್ಲೆಡೆ ಸಾಮಾನ್ಯ. ಕೆಲವರು ಹಳೆಯ ಮನೆ, ಜಾಗವನ್ನು ಸ್ವಲ್ಪ ಬದಲಿಸಿ ಹೊಸ ಲುಕ್ ನೀಡುತ್ತಾರೆ. ತೀರ ಹಳೆಯ ಮನೆಯಾದರೆ ಸಂಪೂರ್ಣ ಕೆಡವಿ ಬೇರೆ ಹೊಸದೇ ಆದ ನಿವಾಸ ಕಟ್ಟಿಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಕೆಲವೊಮ್ಮೆ ಏನಾದರೂ ಹಳೆಯ ಕಾಲದ ಅಚ್ಚರಿದಾಯಕ ವಸ್ತುಗಳು ದೊರೆಯುವುದಿದೆ. ಪುರಾತನ ಮನೆಗಳ ಅಡಿಪಾಯದಲ್ಲಿ ನಿಧಿ ಅಡಗಿಸಿಡಲಾಗುತ್ತದೆ ಎನ್ನುವ ನಂಬಿಕೆಯಿಂದ ಅದಕ್ಕಾಗಿ ಕೆದಕುವ ಪರಿಪಾಠವೂ ಇದೆ. ಆದರೆ, ಅಂತಹ ಘಟನೆಗಳು ಬಹಳ ಅಪರೂಪ. ಬ್ರಿಟನ್ ನಲ್ಲಿ ಇತ್ತೀಚೆಗೆ ಹಳೆಯ ಮನೆ ಹಾಗೂ ಮನೆಗೆ ಹೊಂದಿಕೊಂಡಂತೆ ಇದ್ದ ಗಾರ್ಡನ್ ಅನ್ನು ನವೀಕರಣಗೊಳಿಸಲು ಮುಂದಾಗಿದ್ದ ದಂಪತಿಗೆ ಅಚ್ಚರಿದಾಯಕ, ನಂಬಲು ಅಸಾಧ್ಯವಾದ ವಸ್ತುಗಳು ದೊರೆತಿದ್ದು, ಈ ಸುದ್ದಿ ಈಗ ವೈರಲ್ ಆಗಿದೆ.
ಬ್ರಿಟನ್ (Britain) ದಂಪತಿ (Couple) ತಮ್ಮ ಪೂರ್ವಜರಿಂದ ದೊರೆತ ಹಳೆಯ ಮನೆ ಹಾಗೂ ಮನೆಯ ಹಿಂಭಾಗದಲ್ಲಿದ್ದ ಹಿತ್ತಲನ್ನು ನವೀಕರಣಗೊಳಿಸಲೆಂದು ಮುಂದಾಗಿದ್ದರು. ಈ ಸಮಯದಲ್ಲಿ ಗಾರ್ಡನ್ (Garden) ನಲ್ಲಿ ಕಲ್ಲಿನ ಒಂದು ಸ್ಲಾಬ್ (Slab) ಕಂಡುಬಂದಿದೆ. ಅದನ್ನು ಸರಿಸಿದಾಗ ಒಂದು ವಿಸ್ತಾರವಾದ ಆದರೆ, ಸುರಂಗದಂತಹ ರಚನೆ ಕಂಡುಬಂದಿತು. ಈ ದಂಪತಿ ಇನ್ನಷ್ಟು ಉತ್ಸುಕತೆಯಿಂದ ಅದನ್ನು ತೆರೆದು ನೋಡಿದಾಗ ನಿಜವಾಗಿಯೂ ಅದೊಂದು ಸುರಂಗವಾಗಿತ್ತು.
ಸುರಂಗದಲ್ಲೊಂದು ವಿಭಿನ್ನ ವಿಶ್ವ
ಕಲ್ಲಿನ ಸ್ಲಾಬ್ ಅಡಿಯಲ್ಲಿ ಇದ್ದ ಆ ಸುರಂಗ (Shelter) ಎಷ್ಟೋ ಕಾಲದಿಂದಲೂ ಹಾಗೆಯೇ ಸುರಕ್ಷಿತವಾಗಿತ್ತು. ಅದರಲ್ಲಿ ನೀರು ಸೇರಿರಲಿಲ್ಲ. ಅಥವಾ ಮಣ್ಣು ಕುಸಿದು ಹಾಳಾಗಿರಲೂ ಇಲ್ಲ. ಸಂಪೂರ್ಣವಾಗಿ ಸುಸ್ಥಿತಿಯಲ್ಲಿತ್ತು. ಈ ಸುರಂಗದ ಅಡಿಯಲ್ಲಿದ್ದ ವಿಶ್ವವೇ ಬೇರೆಯಾಗಿತ್ತು.
ಕಾಶ್ಮೀರದಲ್ಲಿ ಗಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡುಲ್ಕರ್; ಮಾಸ್ಟರ್ ಬ್ಲಾಸ್ಟರ್ ಸಿಂಪ್ಲಿಸಿಟಿಗೆ ನೆಟ್ಟಿಗರು ಫಿದಾ
ಈ ಸ್ಥಳದ ಓನರ್ ಮಹಿಳೆ (Woman) ಈ ಬಗ್ಗೆ ಟಿಕ್ ಟಾಕ್ ವೀಡಿಯೋದಲ್ಲಿ ಶೇರ್ ಮಾಡಿದ್ದಾರೆ. ಹಿತ್ತಲಿನ ಕೆಲಸ ಆರಂಭವಾದಾಗ ಮೊದಲು ಕಲ್ಲಿನ ಸ್ಲಾಬ್ ಅನ್ನು ಸರಿಸಿ ನೋಡಿರಲಿಲ್ಲ. ಬಳಿಕ ಈಕೆಯ ಪತಿ ಕುತೂಹಲಗೊಂಡು ಸ್ಲಾಬ್ ಸರಿಸಿದರು. ಅಡಿಯಲ್ಲಿ ಸುರಂಗದಂತಹ ರಚನೆ ಕಂಡು ಇನ್ನಷ್ಟು ವಿಸ್ಮಿತರಾಗಿ ಧೈರ್ಯ ಮಾಡಿ ಮುಂದೆ ಸಾಗಿದರು. ಅಲ್ಲಿ ಅವರಿಗೆ ಶಾಕ್ (Shock) ಆಗುವ ವಸ್ತುಗಳು ದೊರೆತಿವೆ.
ಬಂಡುಕೋರರ ತಾಣ
ಇಲಿ ಬಲೆಗಳು, ಕಂಚಿನ ಬಾಟಲಿಗಳು, ಮಣ್ಣಿನ ಮಡಕೆಗಳು ಈ ಸುರಂಗದಲ್ಲಿ ದೊರೆತಿವೆ. ಅಷ್ಟೇ ಅಲ್ಲ, ತುಕ್ಕು (Rust) ಹಿಡಿದ ಹಲವು ವಸ್ತುಗಳು ಅಲ್ಲಿದ್ದವು. ಬಳಿಕ, ದಂಪತಿ ಕುತೂಹಲಗೊಂಡು ಈ ಸ್ಥಳದ ಬಗ್ಗೆ ಇನ್ನಷ್ಟು ಅಧ್ಯಯನ (Study) ಮಾಡಿದರು. ಆಗ ತಿಳಿದುಬಂದ ಸಂಗತಿ ಇನ್ನಷ್ಟು ರೋಮಾಂಚನಕಾರಿಯಾಗಿತ್ತು. ಸ್ಥಳೀಯ ಬಂಡುಕೋರರು (Rebels) ಯುದ್ಧದ ಸಮಯದಲ್ಲಿ ತಮ್ಮ ಮಕ್ಕಳು ಹಾಗೂ ಕುಟುಂಬದೊಂದಿಗೆ ಇಲ್ಲಿ ಅಡಗುತ್ತಿದ್ದರು. ಇದೊಂದು ಅಡಗುದಾಣವಾಗಿತ್ತು. ಕೆಲವು ಸ್ಥಳೀಯ ಹಿರಿಯರ ಪ್ರಕಾರ, ಈ ಸ್ಥಳ ಯಾವಾಗಲೂ ಹೀಗೆಯೇ ಇತ್ತು. ಕಲ್ಲಿನ ಸ್ಲಾಬ್ ಅಡಿಯಲ್ಲಿ ಸಾಗಿ ಅವರು ಅಡಗುತ್ತಿದ್ದರು. ಬಳಿಕ, ಪಕ್ಕದಲ್ಲಿ ಕಟ್ಟಡ ನಿರ್ಮಾಣವಾಗಿತ್ತು. ಈ ಸುರಂಗ ಮತ್ತೊಂದು ರಸ್ತೆಗೆ ಕೊಂಡಿಯಾಗಿತ್ತು. ಆ ದ್ವಾರವನ್ನು ಬಂದ್ ಮಾಡಲಾಗಿದ್ದು, ಈ ಸುರಂಗಕ್ಕೆ ಇದೊಂದೇ ಮಾರ್ಗವಾಗಿ ಮಾರ್ಪಟ್ಟಿತ್ತು.
ಪೋಸ್ ಕೊಡಲು ಹೋದ ಯುವತಿ ಎತ್ತೆಸೆದ ಆನೆ, ನಿಂಗಿದು ಬೇಕಿತ್ತಾ ಎಂದ ನೆಟ್ಟಿಗರು?
ಮಾನವ ಗುಹೆ
ಈಗ ದಂಪತಿಗೆ ಹಲವು ರೀತಿಯ ಸಲಹೆಗಳು ಬರುತ್ತಿವೆ. ಈ ಸುರಂಗವನ್ನು “ಮಾನವ ಗುಹೆ’ ಯನ್ನಾಗಿ ಪರಿಗಣಿಸಿ, ಪ್ರವಾಸಿ (Tourist) ಸ್ಥಳವನ್ನಾಗಿ ಮಾಡಿ ಎನ್ನುವ ಸಲಹೆ ಬಂದಿದೆ. ಬಾಡಿಗೆಗೆ ನೀಡುವ ಮೂಲಕ ಎಲ್ಲರೂ ನೋಡಲು ಸಾಧ್ಯವಾಗುವಂತೆ ಮಾಡಿ ಎಂದು ತಿಳಿಸಲಾಗಿದೆ. ಆದರೆ, ದಂಪತಿ ಇಲ್ಲಿ ಹೆಚ್ಚೇನೂ ಬದಲಾವಣೆ (Change) ಮಾಡಲು ಸದ್ಯಕ್ಕೆ ಮನಸ್ಸು ಮಾಡಿಲ್ಲ. ಇತಿಹಾಸದ ಭಾಗವಾಗಿರುವ ಅದನ್ನು ಹಾಗೆಯೇ ಇಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.