
ತಮಿಳುನಾಡು: ಕೊಯಮತ್ತೂರಿನ 29 ವರ್ಷದ ಮಹಿಳೆ (Woman)ಯೊಬ್ಬರು ಏಳು ತಿಂಗಳ ಅವಧಿಯಲ್ಲಿ 42 ಲೀಟರ್ ಎದೆಹಾಲು (Breastmilk) ದಾನ ಮಾಡುವ ಮೂಲಕ ದಾಖಲೆ (Record) ನಿರ್ಮಿಸಿದ್ದಾರೆ. ಈ ಸಮಯದಲ್ಲಿ 1,400 ಶಿಶುಗಳಿಗೆ ಹಾಲುಣಿಸಲು ಈ ಹಾಲನ್ನು ಬಳಸಲಾಯಿತು ಎಂದು ತಿಳಿದುಬಂದಿದೆ. ಗೃಹಿಣಿಯಾಗಿರುವ ಟಿ ಸಿಂಧು ಮೋನಿಕಾ ಅವರು ಜುಲೈ 2021ರಲ್ಲಿ ರಾಜ್ಯ ಸರ್ಕಾರದ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ (ಎನ್‌ಐಸಿಯು) ಹಾಲು ನೀಡಲು ಪ್ರಾರಂಭಿಸಿದರು. ಏಪ್ರಿಲ್ 2022 ರ ವೇಳೆಗೆ ಅವರು ಸುಮಾರು 42,000 ಮಿಲಿ ಹಾಲನ್ನು ದಾನ ಮಾಡಿದ್ದರು.
ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಿಂದ ಪ್ರಮಾಣಪತ್ರ
ಆಕೆಯ ಜೀವ ಉಳಿಸುವ ಉಪಕ್ರಮಕ್ಕಾಗಿ, ಅವರು ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಿಂದ ಗುರುತಿಸಲ್ಪಟ್ಟಿದ್ದಾರೆ. ಏಷ್ಯನ್ ಬುಕ್ ಆಫ್ ರೆಕಾರ್ಡ್ಸ ಸಿಂಧು ಅವರಿಗೆ ಅಧಿಕೃತ ಪ್ರಮಾಣಪತ್ರವನ್ನು ಕಳುಹಿಸಿದೆ. ಇಂಜಿನಿಯರಿಂಗ್ ಪದವೀಧರರೂ ಆಗಿರುವ ಮೋನಿಕಾ ಅವರು ತಮ್ಮ ಮಗಳು ಹುಟ್ಟಿದ 100 ನೇ ದಿನದಂದು ತನ್ನ ಎದೆಹಾಲು ದಾನ ಮಾಡಲು ಪ್ರಾರಂಭಿಸಿದರು. 'ನನ್ನ ಮಗುವಿಗೆ ಆಹಾರವನ್ನು (Food) ನೀಡುವುದರ ಹೊರತಾಗಿ, ನಾನು ಎದೆಹಾಲನ್ನು ಸಂಗ್ರಹಿಸಲು ಪ್ರಾರಂಭಿಸಿದೆ ಮತ್ತು ಅಮಿರ್ತಂ ಎಂಬ ಎನ್‌ಜಿಒ ರೂಪಾ ಸೆಲ್ವನಾಯಕಿ ಅವರ ಸೂಚನೆಯಂತೆ ಅದನ್ನು ಸಂರಕ್ಷಿಸಿದ್ದೇನೆ' ಎಂದು ಮೋನಿಕಾ ತಿಳಿಸಿದರು.
ತಾಯಿಯ ಎದೆಹಾಲನ್ನು ಹೆಚ್ಚಿಸುವ ಎಂಟು ಸೂಪರ್ ಆಹಾರಗಳು
ಮಹೇಶ್ವರನ್ ಮತ್ತು ಸಿಂಧು ಮೋನಿಕಾ ಜೋಡಿಯು ಕೊಯಮತ್ತೂರು ಜಿಲ್ಲೆಯ ಕಾನ್ಯೂರ್ ನೆರೆಹೊರೆಯವರು. ಸಿಂಧು ಮೋನಿಕಾ ಗೃಹಿಣಿಯಾಗಿದ್ದು, ಅವರ ಪತಿ ಮಹೇಶ್ವರನ್ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಜುಲೈ 2021 ರಿಂದ, ಸಿಂಧು ಮೋನಿಕಾ ವಾಡಿಕೆಯಂತೆ ಎದೆ ಹಾಲನ್ನು ದಾನ ಮಾಡುತ್ತಿದ್ದಾರೆ. ಜುಲೈ 2021 ರಿಂದ ಏಪ್ರಿಲ್ 2022 ರವರೆಗೆ ಅವರು ಕೊಯಮತ್ತೂರು ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ (NICU) 40 ಲೀಟರ್‌ಗಿಂತಲೂ ಹೆಚ್ಚು ಎದೆ ಹಾಲನ್ನು ದಾನ ಮಾಡಿದ್ದಾರೆ. ಸಿಂಧು ಹೇಳುವಂತೆ, ದಾನ ಮಾಡಬಹುದೆಂದು ತಿಳಿಯುವ ಮೊದಲು ಅವಳು ಹೆಚ್ಚುವರಿ ಎದೆಹಾಲನ್ನು ಪಂಪ್ ಮಾಡಿ ಸಸ್ಯಗಳಿಗೆ ಸುರಿಯುತ್ತಿದ್ದಳು. ಆದರೆ ಎದೆಹಾಲನ್ನು ದಾನ ಮಾಡಬಹುದು ಎಂಬುದನ್ನು ಅರಿತುಕೊಂಡ ನಂತರ, ಅವರು ಹಾಲನ್ನು ದಾನ ಮಾಡಲು ಪ್ರಾರಂಭಿಸಿದರು.
'ಎನ್‌ಜಿಒ ಪ್ರತಿ ವಾರ ಹಾಲನ್ನು ಸಂಗ್ರಹಿಸಿ ಎದೆ ಹಾಲಿನ ಬ್ಯಾಂಕ್‌ಗೆ ಹಸ್ತಾಂತರಿಸುತ್ತಿತ್ತು. ಸೆಲ್ವನಾಯಕಿ ಅವರು 2020 ರಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ನವಜಾತ ಶಿಶುಗಳಿಗೆ (Infants) ಆಹಾರ ನೀಡುವ ಉಪಕ್ರಮವನ್ನು ಪ್ರಾರಂಭಿಸಿದರು. ಈಗ, ಎನ್‌ಜಿಒಗೆ ದಾಖಲಾದ ಒಟ್ಟು 50 ಮಹಿಳೆಯರಲ್ಲಿ ಸುಮಾರು 30 ಮಂದಿ ಸಕ್ರಿಯವಾಗಿ ಎದೆಹಾಲು ದಾನ ಮಾಡುತ್ತಿದ್ದಾರೆ.
ತಾಯಿಯ ಎದೆ ಹಾಲಿನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿಸುವುದು ಹೇಗೆ?
ತಮಿಳುನಾಡಿನಲ್ಲಿವೆ 45 ಎದೆಹಾಲಿನ ಬ್ಯಾಂಕ್
ಮಕ್ಕಳ ಆರೋಗ್ಯದ ರಾಜ್ಯ ನೋಡಲ್ ಅಧಿಕಾರಿ ಡಾ.ಎಸ್.ಶ್ರೀನಿವಾಸನ್ ಮಾತನಾಡಿ, 'ತಾಯಂದಿರು ಮರಣ ಹೊಂದಿದ ಅಥವಾ ಅವರಿಗೆ ಉಣಿಸಲು ಸಾಧ್ಯವಾಗದ ನವಜಾತ ಶಿಶುಗಳಿಗೆ ಈ ದಾನ ಮಾಡಿದ ಎದೆಹಾಲನ್ನು ನೀಡಲಾಗುತ್ತದೆ. ಭಾರತದಾದ್ಯಂತ ಕೇವಲ 70 ಎದೆಹಾಲು ಬ್ಯಾಂಕ್‌ಗಳಿವೆ, ಅವುಗಳಲ್ಲಿ 45 ತಮಿಳುನಾಡಿನಲ್ಲಿವೆ. ಇವುಗಳಲ್ಲಿ 35 ಎದೆಹಾಲು ಬ್ಯಾಂಕ್‌ಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿವೆ ಮತ್ತು ಉಳಿದ 10 ತಾಲೂಕು ಆಸ್ಪತ್ರೆಗಳಲ್ಲಿವೆ' ಎಂದು ಮಾಹಿತಿ ನೀಡಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.