ಸಾಮಾನ್ಯವಾಗಿ ಉದ್ಯೋಗ ಶುರು ಮಾಡೋಕೆ 30ನೇ ವರ್ಷ ಬೆಸ್ಟ್ ಎಂದುಕೊಳ್ತೇವೆ. ಉದ್ಯೋಗಕ್ಕೆ ವಯಸ್ಸಿನ ಮಿತಿಯಿಲ್ಲ. ನೀವು ವೃದ್ಧಾಪ್ಯದಲ್ಲಿ ಕೆಲಸ ಶುರು ಮಾಡಬಹುದು. 50 ವರ್ಷದ ಮಹಿಳೆ ಕೂಡ ಒಳ್ಳೆ ಕೆಲಸ ಮಾಡಿ ಹೆಚ್ಚಿನ ಹಣ ಸಂಪಾದನೆ ಮಾಡಬಹುದು.
ಮಹಿಳೆಯರು ಸ್ವಾವಲಂಭಿ ಬದುಕು ಬದುಕುವ ಅನಿವಾರ್ಯತೆ ಇದೆ. ಮಹಿಳೆ ಬೇರೆಯವರನ್ನು ಆಶ್ರಯಿಸದೆ ಜೀವನ ನಡೆಸಬೇಕು ಎಂದಾಗ ಕೆಲಸ ಮಾಡಬೇಕು. ಯಾವುದಾದ್ರೂ ಒಂದು ಉದ್ಯೋಗ ಅಥವಾ ವ್ಯವಹಾರ ನಡೆಸಬೇಕು. ಚಿಕ್ಕ ವಯಸ್ಸಿನಲ್ಲಿ ಶಿಕ್ಷಣ ಮುಗಿಸಿ ಉದ್ಯೋಗ ಹಿಡಿಯುವುದು ಸುಲಭ. ಆದ್ರೆ ಕೆಲ ಮಹಿಳೆಯರಿಗೆ ಆ ಸಂದರ್ಭದಲ್ಲಿ ಕೆಲಸ ಅಥವಾ ಉದ್ಯೋಗದ ಅನಿವಾರ್ಯತೆ ಇರೋದಿಲ್ಲ. ಆದ್ರೆ ವಯಸ್ಸು 50ರ ಗಡಿ ದಾಟುತ್ತಿದ್ದಂತೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆ ಸಮಯದಲ್ಲಿ ಕೆಲ ಮಹಿಳೆಯರು ಕುಸಿದು ಹೋಗ್ತಾರೆ. ಏನು ಮಾಡ್ಬೇಕು ಎಂಬುದು ತಿಳಿಯದೆ ಗೊಂದಲದಲ್ಲಿ ಬೀಳ್ತಾರೆ.
ಸರ್ಕಾರಿ ಕೆಲಸಕ್ಕೆ ಸೇರಲು ವಯಸ್ಸಿನ ಗಡುವಿರುತ್ತದೆ. ಆದ್ರೆ ನೀವೇ ಸ್ವಂತ ಉದ್ಯೋಗ ಶುರು ಮಾಡುವದಿದ್ದರೆ ವಯಸ್ಸು ಮುಖ್ಯವಾಗುವುದಿಲ್ಲ. ನಿಮ್ಮ ಛಲ ಇಲ್ಲಿ ಮಹತ್ವ ಪಡೆಯುತ್ತದೆ. 50ರ ವಯಸ್ಸಿನಲ್ಲಿಯೂ ನೀವು ವ್ಯಾಪಾರ ಶುರು ಮಾಡ್ತೆನೆ ಅಂದ್ರೆ ಸರ್ಕಾರ ನಿಮಗೆ ಆರ್ಥಿಕ ನೆರವು ನೀಡುತ್ತದೆ. ವಯಸ್ಸು ಹೆಚ್ಚಾಗ್ತಿದೆ ಈ ಸಂದರ್ಭದಲ್ಲಿ ಕೆಲಸ ಮಾಡ್ಲೇಬೇಕು ಎನ್ನುವ ಮಹಿಳೆಯರು ಕೆಲ ಉದ್ಯೋಗ ಮಾಡಲು ಅವಕಾಶವಿದೆ. ನಾವಿಂದು 50 ವರ್ಷ ದಾಟಿದ ಮಹಿಳೆಯರು ಯಾವೆಲ್ಲ ಕೆಲಸ (Work) ಮಾಡಬಹುದು ಎಂಬುದನ್ನು ನಿಮಗೆ ಹೇಳ್ತೆವೆ.
Women Career: ಹಳ್ಳಿಯಲ್ಲಿರೋ ಮಹಿಳೆಯರಿಗೂ ಇದೆ ಹಣ ಸಂಪಾದಿಸುವ ಅವಕಾಶ
ಬರಹಗಾರ (Writer) ರಾಗಿ : ಬರವಣಿಗೆಯನ್ನು ಇಷ್ಟಪಡ್ತಿದ್ದರೆ ನೀವು ಬರಹಗಾರರಾಗಿ ಕೆಲಸ ಮಾಡಬಹುದು. ಸ್ವತಂತ್ರ ಬರಹಗಾರರಾಗಬಹುದು. ನಿಮ್ಮ ಆಯ್ಕೆಯ ಪ್ರಕಾರ ವಿಷಯವನ್ನು ಆಯ್ಕೆ ಮಾಡಿಕೊಂಡು ನೀವು ಬರೆಯಬಹುದು. ಕಂಪ್ಯೂಟರ್ ನಲ್ಲಿ ಟೈಪಿಂಗ್ (Typing) ಕಲಿತಿದ್ದರೆ ನಿಮ್ಮ ಕೆಲಸ ಮತ್ತಷ್ಟು ಸುಲಭ. ಈಗ ಅನೇಕ ವೆಬ್ ಗಳಲ್ಲಿ ಹಾಗೂ ಅಪ್ಲಿಕೇಷನ್ ಗಳಲ್ಲಿ ನಿಮ್ಮ ಬರವಣಿಗೆ ತಕ್ಕಂತೆ ಹಣ ನೀಡಲಾಗುತ್ತದೆ.
ನೀವು ಕಂಪನಿ ಜೊತೆ ಕೈಜೋಡಿಸಬಹುದು. ಕಂಪನಿಗೆ ಸಂಬಂಧಿಸಿದ ಬರವಣಿಗೆ ಅಥವಾ ಯಾವುದೇ ವಸ್ತುವಿನ ಬಗ್ಗೆ ರಿವ್ಯೂ ಬರೆದು ಹಣ ಗಳಿಸಬಹುದು. ದೊಡ್ಡ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರ್ಕೆಟಿಂಗ್ ಮಾಡುತ್ತವೆ. ಅವರು ತಮ್ಮ ಉತ್ಪನ್ನದ ಬಗ್ಗೆ ಮತ್ತು ಕಂಪನಿಗಳ ಮಾರ್ಕೆಟಿಂಗ್‌ಗಾಗಿ ಮಾಹಿತಿಯನ್ನು ಬರೆಯಲು ಸಬ್ಜೆಕ್ಟ್ ಬರಹಗಾರರನ್ನು ನೇಮಿಸಿಕೊಳ್ಳುತ್ತವೆ. ನೀವು ಕೂಡ ಅಲ್ಲಿ ಕೆಲಸ ಮಾಡಬಹುದು. ಕೆಲವರು ತಮ್ಮ ಸಾಮಾಜಿಕ ಜಾಲತಾಣವನ್ನು ಹ್ಯಾಂಡಲ್ ಮಾಡಲು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ. ಸಾಮಾಜಿಕ ಜಾಲತಾಣದ ಬರವಣಿಗೆ ನಿಮಗೆ ತಿಳಿದಿದ್ದರೆ ನೀವು ಅಲ್ಲಿಯೂ ಕೆಲಸ ಮಾಡಬಹುದು.
ಟಿಫಿನ್ (Tiffin) ಸೇವೆಯಲ್ಲಿದೆ ಲಾಭ : ನಿಮ್ಮ ಕೈ ಅಡುಗೆ ಹೆಚ್ಚು ರುಚಿಕರವಾಗಿರುತ್ತದೆ ಎಂದಾದ್ರೆ ನೀವು ಟಿಫನ್ ಸೇವೆ ಶುರು ಮಾಡಬಹುದು. ರುಚಿಯಾದ ಅಡುಗೆ ತಯಾರಿಸಿ ನೀವು ಅದನ್ನು ಮಾರಾಟ ಮಾಡಬಹುದು. ಇದ್ರಲ್ಲಿ ಸಾಕಷ್ಟು ಆಯ್ಕೆಯಿದೆ. ನೀವು ಕಂಪನಿಗಳಿಗೆ ಮಧ್ಯಾಹ್ನ ಊಟ ನೀಡಬಹುದು. ಇಲ್ಲವೆ ರಸ್ತೆ ಬದಿಯಲ್ಲಿ ಸಣ್ಣ ಟಿಫನ್ ಸೆಂಟರ್ ಇಟ್ಟು ಮಾರಾಟ ಶುರು ಮಾಡಬಹುದು. ಇಲ್ಲವೆ ಆನ್ಲೈನ್ ಕಂಪನಿ ಜೊತೆ ಕೆಲಸ ಮಾಡಬಹುದು.
ಈ ವೃತ್ತಿ ಪ್ರಾರಂಭಿಸುವ ಮೊದಲು ನಿಮಗೆ ಯಾವುದು ಬೆಸ್ಟ್ ಎಂಬುದನ್ನು ನಿರ್ಧರಿಸಿ. ನಿಮ್ಮ ಸಹಾಯಕ್ಕೆ ನೀವು ಇನ್ನೊಬ್ಬರನ್ನು ಪಾಲುದಾರರನ್ನಾಗಿ ನೇಮಿಸಿಕೊಳ್ಳಬಹುದು.
ಶಿಕ್ಷಕರಾಗಿ ಹಣ ಸಂಪಾದಿಸಿ : ಒಳ್ಳೆಯ ವಿದ್ಯಾಭ್ಯಾಸ ನಿಮಗಿದ್ದರೆ ನೀವು ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಬಹುದು. ಟ್ಯೂಷನ್ ಗೆ ಬೇಡಿಕೆ ಹೆಚ್ಚಿದೆ. ನೀವು ಪ್ರಾಥಮಿಕ ಶಾಲೆ ಮಕ್ಕಳಿಗೆ ಟ್ಯೂಷನ್ ನೀಡ್ಬೇಕು ಅಂದೇನಿಲ್ಲ. ಕೆಜಿ ಮಕ್ಕಳಿಗೆ ಕೂಡ ಪಾಠ ಹೇಳಬಹುದು. ನಿಮಗೆ ಬೇರೆ ಕಲೆಯ ಬಗ್ಗೆ ಜ್ಞಾನವಿದ್ದರೆ ನೀವು ಅದನ್ನು ಕೂಡ ಕಲಿಸಬಹುದು. ಸಂಗೀತ, ಭರತನಾಟ್ಯ, ಚಿತ್ರಕಲೆ ಇವುಗಳನ್ನು ಕಲಿಸಿ ಹಣ ಸಂಪಾದನೆ ಮಾಡಬಹುದು. ಜಾಗದ ಕೊರತೆಯಿದೆ ಎನ್ನುವವರು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಮಕ್ಕಳಿಗೆ ಕಲಿಸಬಹುದು.
Personal Finance: ವ್ಯಾಪಾರಸ್ಥ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಬೇಕು!
ಕಿಡ್ಸ್ ಕೇರ್ ಸೆಂಟರ್ : ಹೆಚ್ಚಿನ ಹೂಡಿಕೆ ಮಾಡ್ತೀರಿ ಎಂದಾದ್ರೆ ನೀವು ಕೇರ್ ಸೆಂಟರ್ ತೆಗೆಯಬಹುದು. ಈಗಿನ ದಿನಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚಿದೆ. ಕೆಲಸಕ್ಕೆ ಹೋಗುವ ಪಾಲಕರು ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರು ಮಕ್ಕಳನ್ನು ಕೇರ್ ಸೆಂಟರ್ ನಲ್ಲಿ ಬಿಡ್ತಾರೆ. ಈ ವ್ಯವಹಾರದಿಂದ ನೀವು ಉತ್ತಮ ಲಾಭವನ್ನು ಗಳಿಸಬಹುದು. 50 ವರ್ಷ ಮೇಲ್ಪಟ್ಟವರಿಗೆ ಶ್ರಮವಹಿಸಿ ಮಾಡುವ ಕೆಲಸ ಸ್ವಲ್ಪ ಕಷ್ಟವಾಗ್ಬಹುದು. ಹಾಗಾಗಿ ಕಡಿಮೆ ಶ್ರಮದ ಹಾಗೂ ಹೆಚ್ಚು ಲಾಭದ ಉದ್ಯೋಗವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.