ಮಹಿಳೆಯರ ಕಲಾಕೃತಿಯೂ ಸುರಕ್ಷಿತ ಅಲ್ಲ: ಬಾಲಕ ಮಾಡಿದ್ದೇನು? ಮತ್ತೆ ವೈರಲ್ ಆಗಿ ಚರ್ಚೆಗೆ ಕಾರಣವಾಯ್ತು ವೀಡಿಯೋ

Published : Feb 26, 2026, 03:36 PM IST
sexual abuse on woman painting

ಸಾರಾಂಶ

'ಬೇಟಿ ಬಚಾವೋ ಬೇಟಿ ಪಡಾವೋ' ಪ್ರಚಾರದ ಕಲಾಕೃತಿಯನ್ನು ಬಾಲಕನೊಬ್ಬ ವಿರೂಪಗೊಳಿಸುತ್ತಿರುವ ಹಳೆಯ ವೀಡಿಯೋವೊಂದು ಮತ್ತೆ ವೈರಲ್ ಆಗಿದೆ. ಮಹಿಳೆಯ ಚಿತ್ರದ ಖಾಸಗಿ ಭಾಗಕ್ಕೆ ತೂತು ಕೊರೆದ ಈ ಘಟನೆ, ಹೆಣ್ಣು ಮಕ್ಕಳ ಸುರಕ್ಷತೆ, ಪೋಷಕರ ಜವಾಬ್ದಾರಿ ಮತ್ತು ಸಮಾಜದ ಮನಸ್ಥಿತಿಯ ಕುರಿತು ದೊಡ್ಡ ಚರ್ಚೆ ಹುಟ್ಟುಹಾಕಿದೆ.

ಮತ್ತೆ ವೈರಲ್ ಆಯ್ತು ಹಳೇ ವೀಡಿಯೋ

ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಎಂಬುದು ಮರೀಚಿಕೆಯಾಗಿದೆ. ಇನ್ನೂ ಮೀಸೆ ಚಿಗುರದ ಪುಟ್ಟ ಹುಡುಗರು ಬೆಳೆದು ನಿಂತ ಹೆಣ್ಣು ಮಕ್ಕಳನ್ನು ಛೇಡಿಸುವುದಕ್ಕೆ ಶುರು ಮಾಡಿ ಬಿಡುತ್ತಾರೆ. ಮಹಿಳೆಯರನ್ನು ಬಿಡಿ ಮಹಿಳೆಯರ ಫೋಟೋ ಕಲಾಕೃತಿಗಳ ಮೇಲೂ ಕೆಲವರು ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಕಡೆ ಬಾಲಕನೋರ್ವ ಮಹಿಳೆಯ ಕಲಾಕೃತಿಯ ಮೇಲೂ ಲೈಂಗಿಕ ದೌರ್ಜನ್ಯವೆಸಗುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಅಂದಹಾಗೆ ಇದು ಇತ್ತೀಚಿನ ವೀಡಿಯೋ ಅಲ್ಲ, ಹಳೆಯ ವಿಡಿಯೋ, ಈ ವೀಡಿಯೋದಲ್ಲಿರುವ ಬಾಲಕ ಬಹುಶಃ ಹದಿಹರೆಯಕ್ಕೆ ಕಾಲಿರಿಸಿರಬಹುದು. ಆದರೆ ವೀಡಿಯೋದಲ್ಲಿ ಚಿತ್ರಣವೂ ನಮ್ಮ ಸಮಾಜದಲ್ಲಿನ ಕೆಲ ಮನಸ್ಥಿತಿಗಳನ್ನು ಬಿಂಬಿಸುತ್ತಿರುವುದರಿಂದ ಮತ್ತೆ ವೈರಲ್ ಆಗಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಹಾಗಿದ್ರೆ ವೀಡಿಯೋದಲ್ಲೇನಿದೆ?

ವೀಡಿಯೋದಲ್ಲಿ ಸರ್ಕಾರದ ಬೇಟಿ ಪಡಾವೋ ಬೇಟಿ ಬಚಾವೋ(ಹೆಣ್ಣು ಮಕ್ಕಳನ್ನು ಓದಿಸಿ ಹೆಣ್ಣು ಮಕ್ಕಳನ್ನು ಉಳಿಸಿ) ಯೋಜನೆಯ ಪ್ರಚಾರಕ್ಕೆ ಚಿತ್ರಿಸಿದ ಕಲಾಕೃತಿಯಲ್ಲಿ ಮಹಿಳೆಯ ಚಿತ್ರವನ್ನು ಬಿಡಿಸಲಾಗಿದ್ದು, ಕಿಡಿಗೇಡಿ ಬಾಲಕನೋರ್ವ ಆ ಪೇಂಟಿಂಗ್‌ನಲ್ಲಿರುವ ಮಹಿಳೆಯ ಖಾಸಗಿ ಅಂಗ ಇರುವಲ್ಲಿ ದೊಡ್ಡ ತೂತು ಕೊರೆದು ನಗುತ್ತಾ ಯಾವುದೇ ಅಂಜಿಕೆ ಇಲ್ಲದೇ ಮುಂದೆ ಸಾಗಿದ್ದಾನೆ. ಆತನಿಗೆ ಬಹುಶಃ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲವೋ, ಅಥವಾ ಆತ ಬೆಳೆದು ಬಂದ ರೀತಿ ಹಾಗಿದೆಯೋ ಗೊತ್ತಿಲ್ಲ, ಆ ಬಾಲಕನಿಗೆ ತನ್ನ ಕೆಲಸದ ಬಗ್ಗೆ ಯಾವುದೇ ತಪ್ಪು ಪ್ರಜ್ಞೆ ಇರಲಿಲ್ಲ, ಚಿತ್ರವನ್ನು ಅಸಹ್ಯವಾಗಿ ವಿರೂಪಗೊಳಿಸಿದ ಆ ಬಾಲಕ ಅಲ್ಲಿಂದ ಹೆಮ್ಮೆ ಎಂಬಂತೆ ನಡೆದುಕೊಂಡು ಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವಿಪರ್ಯಾಸ ಎಂದರೆ ಅದು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ರಕ್ಷಣೆಗೆ ಸಂಬಂಧಿಸಿದ ಪ್ರಚಾರ ಜಾಹೀರಾತು ಆಗಿರುವುದು.

ಈ ಹಳೆಯ ವೀಡಿಯೋ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದ್ದು, ಬಾಲಕನ ವರ್ತನೆ ನಮ್ಮ ಸಮಾಜದ ಸ್ಥಿತಿ, ಆತ ಬೆಳೆದು ಬಂದ ವಾತಾವರಣ, ಪೋಷಕರು ನೀಡುವ ಸಂಸ್ಕಾರ ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಹುಟ್ಟುಹಾಕಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಆತನನ್ನು ಬೆಳೆಸಿದ ರೀತಿಯ ಬಗ್ಗೆ ಹಲವು ಪ್ರಶ್ನೆಗಳು ಮೂಡುತ್ತಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈತನ ತಾಯಿ ಎಲ್ಲಿದ್ದಾರೆ ಈತನಿಗೆ ಎಷ್ಟು ಒಡಹುಟ್ಟಿದವರಿದ್ದಾರೆ. ಇದೊಂದು ಶೋಚನೀಯ ಘಟನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಮೊಬೈಲ್ ಮೂಲಕ ಪೋರ್ನ್ ಸುಲಭವಾಗಿ ಸಿಗುತ್ತದೆ. ಮನೆಯಲ್ಲಿ ಪೋಷಕರು ಶಿಸ್ತಿನಿಂದ ಬೆಳೆಸಿದರು ಶಾಲೆಯಲ್ಲಿ ಬೇರೆ ಹುಡುಗ ಅವನಿಗೆ ಕಲಿಸುತ್ತಾನೆ. ಒಂದು ಮಗು ಕೂಡ ಈ ಅಸಹ್ಯಕರ ಮನಸ್ಥಿತಿಯನ್ನು ಇಡೀ ಗುಂಪಿಗೆ ಹರಡಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಮೃತ ಮಹಿಳೆಯ ಗರ್ಭದಲ್ಲಿ ಅರಳಿದ ಜೀವ: ಗರ್ಭಕೋಶದ ಕಸಿ ಬಳಿಕ ಗಂಡು ಮಗುವಿಗೆ ಜನ್ಮನೀಡಿದ ಮಹಿಳೆ

ಈ ದೇಶದಲ್ಲಿ ಮಹಿಳೆಯರು ಬಿಡಿ ಮಹಿಳೆಯರ ಕಲಾಕೃತಿ ಕೂಡ ಸುರಕ್ಷಿತವಾಗಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೋಡಲು ಎಂತಹ ನಾಚಿಕೆಗೇಡಿನ ವಿಷಯ ಮತ್ತು ಮುಖ್ಯವಾಗಿ ಇದು ಯಾವ ರೀತಿಯ ಪಾಲನೆ. ಅವನ ಹೆತ್ತವರು ಅವನ ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವನಿಗೆ ಸಾಮಾಜಿಕ ಶಿಷ್ಟಾಚಾರವನ್ನು ಕಲಿಸಿ, ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ಕಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಮನೆಯೊಳಗೆ ಧ್ವನಿ ಇಲ್ಲ, ಬಾಲ್ಯದಲ್ಲೇ ಹುಡುಗರಿಗೆ ಏನು ಮಾಡಿದರು ಸರಿ ಎಂಬ ವಾತಾವರಣದಲ್ಲಿ ಬೆಳೆಸುತ್ತಾರೆ. ಹೆಣ್ಣು ಮಕ್ಖಳ ತಿದ್ದುವ ಪೋಷಕರು ಗಂಡು ಮಕ್ಕಳಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡುವುದಿಲ್ಲ, ಮಹಿಳೆಯರನ್ನು ಗೌರವಿಸುವುದನ್ನು ಹೇಳಿಕೊಡುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಮಾರಾಟಕ್ಕಿಟ್ಟ ಹಣ್ಣುಗಳಿಗೆ ಇಲಿ ಪಾಷಾಣ ಸ್ಪ್ರೇ ಮಾಡ್ತಿದ್ದ ಇಬ್ಬರು ವ್ಯಾಪಾರಿಗಳ ಬಂಧನ

ಒಟ್ಟಿನಲ್ಲಿ ಆರೋಪಿಗಳಿಗೆ ಕಾನೂನಿನಲ್ಲಿ ದೊಡ್ಡ ಶಿಕ್ಷೆ ಇಲ್ಲದೇ ಇರುವುದು. ನ್ಯಾಯಾಂಗದ ತೀರಾ ನಿಧಾನಗತಿಯ ವಿಚಾರಣೆ, ನ್ಯಾಯಾಂಗ ವ್ಯವಸ್ಥೆಯ ಕೆಳಗೆ ಅಡಗಿರುವ ತೀವ್ರವಾದ ಭ್ರಷ್ಟಾಚಾರಗಳು, ಮಕ್ಕಳ ಕೈಗೆ ಪ್ರಬುದ್ಧತೆ ಬರುವ ಮೊದಲೇ ಸಿಗುವ ಮೊಬೈಲ್ ಫೋನ್‌ಗಳು, ತಪ್ಪು ಮಾಡಿದ ಆರೋಪಿಗಳು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಿ ರಾಜಾರೋಷವಾಗಿ ತಿರುಗಾಡುತ್ತಾ ಸಂತ್ರಸ್ತರಿಗೆ ಜೀವ ಬೆದರಿಕೆಯೊಡ್ಡುವುದು ಮುಂತಾದವುಗಳು ಯಾರಿಗೂ ತಪ್ಪು ಮಾಡಿದರೆ ಶಿಕ್ಷೆಯಾಗುತ್ತದೆ ಎಂಬ ಜೀವ ಭಯ ಇಲ್ಲದಿರುವಂತೆ ಮಾಡಿದೆ. ಹೀಗಾಗಿಯೇ ಮೀಸೆ ಚಿಗುರದ ಮಕ್ಕಳು ದೊಡ್ಡ ಕಾಮುಕರಂತೆ ವರ್ತಿಸುತ್ತಿದ್ದಾರೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೃತ ಮಹಿಳೆಯ ಗರ್ಭದಲ್ಲಿ ಅರಳಿದ ಜೀವ: ಗರ್ಭಕೋಶದ ಕಸಿ ಬಳಿಕ ಗಂಡು ಮಗುವಿಗೆ ಜನ್ಮನೀಡಿದ ಮಹಿಳೆ
ಫ್ರಿಜ್ ಇಲ್ಲದಿದ್ರೂ ವಾರಗಟ್ಟಲೇ ಫ್ರೆಶ್ ಆಗಿರುತ್ತೆ ಮೊಸರು .. ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ