Actress Beauty Secret: ಪಾರ್ಲರ್‌ಗೆ ಹೋಗಲಿಷ್ಟವಿಲ್ಲದ ಈ ನಟಿ ಸೌಂದರ್ಯಕ್ಕೆ ಸೋಲದವರಿಲ್ಲ

By Suvarna News  |  First Published Dec 4, 2021, 6:50 PM IST

ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯಕ್ಕೆ ಮಾರು ಹೋಗದವರಿಲ್ಲ. ಸ್ವಲ್ಪ ದಪ್ಪವೆನ್ನಿಸಿದ್ರೂ ವಿದ್ಯಾಬಾಲನ್ ಸೌಂದರ್ಯ ಎಲ್ಲರನ್ನು ಸೆಳೆಯುತ್ತದೆ. ಸೂಪರ್ ಸ್ಟಾರ್ ಆಗಿದ್ದರೂ ವಿದ್ಯಾ ಬಾಲನ್ ಗೆ ಬ್ಯೂಟಿ ಪಾರ್ಲರ್ ಇಷ್ಟವಿಲ್ಲವಂತೆ. ನಟಿ ವಿದ್ಯಾ ಬಾಲನ್ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?


ಅದ್ಭುತ ನಟನೆ,ಸರಳ ಅಲಂಕಾರದ ಮೂಲಕ ಲಕ್ಷಾಂತರ ಅಭಿಮಾನಿಗಳ ಮನೆ ಮಾತಾಗಿರುವ ನಟಿ ವಿದ್ಯಾ ಬಾಲನ್ (vidya balan). ಬಾಲಿವುಡ್ ನಟಿಯರು ಅಂದಾಗ ಕಣ್ಣಿಗೆ ಬರುವುದು ಅವರ ಓವರ್ ಮೇಕಪ್. ಜೊತೆಗೆ ಮಿನಿಯಿಂದ ಬಿಕನಿವರೆಗಿನ ಉಡುಪು. ಆದರೆ ಸೀರೆ ಮೂಲಕವೂ ಅಭಿಮಾನಿಗಳನ್ನು ಸೂರೆಗೊಳ್ಳಬಹುದು ಎಂದು ತೋರಿಸಿಕೊಟ್ಟ ನಟಿಯರಲ್ಲಿ ವಿದ್ಯಾ ಬಾಲನ್ ಒಬ್ಬರು. ಸದಾ ಸುಂದರ ಸೀರೆಯಲ್ಲಿ ಕಾಣಿಸಿಕೊಳ್ಳುವ ವಿದ್ಯಾಬಹುತೇಕ ಚಿತ್ರಗಳಲ್ಲಿಯೂ ಸೀರೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಗೃಹಿಣಿ ಪಾತ್ರಗಳಲ್ಲಿ ನಟಿಸುವ ವಿದ್ಯಾ ಬಾಲನ್ ಚಿತ್ರಗಳು ಅನೇಕ ಸಂದೇಶ ಸಾರುತ್ತವೆ. ಸಂದರ್ಶನವೊಂದರಲ್ಲಿ ಮಾತನಾಡಿದ ವಿದ್ಯಾ ಬಾಲನ್  ಸೌಂದರ್ಯದ ಗುಟ್ಟು ಬಿಚ್ಚಿಟ್ಟಿದ್ದಾರೆ.  ವಿದ್ಯಾ,ಸಾಮಾನ್ಯ ಕುಟುಂಬಕ್ಕೆ ಸೇರಿದವರು. ಅವರ ಬಾಲ್ಯ ಸಾಮಾನ್ಯ ಭಾರತೀಯ ಹುಡುಗಿಯಂತೆ ಕಳೆದಿದೆ. ಅನೇಕ ಸವಾಲುಗಳು ಮತ್ತು ಹೋರಾಟದ ಮೂಲಕ ಪ್ರಸಿದ್ಧಿಗೆ ಬಂದವರು ವಿದ್ಯಾಬಾಲನ್. 

ವಿದ್ಯಾ ಬಾಲನ್ ಅವರ ಗ್ಲೋ ರಹಸ್ಯ (skin care) : ವಿದ್ಯಾ ಬಾಲನ್ ಬೆಳ್ಳ ಬೆಳ್ಳನೆಯ,ಹೊಳೆಯುವ ಚರ್ಮ ಹೊಂದಿದ್ದಾರೆ. ಅವರು ಮುಖಕ್ಕೆ ಏನು ಹಚ್ಚಬಹುದು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತದೆ. ಆದರೆ ವಿದ್ಯಾ ಅಚ್ಚರಿ ವಿಷ್ಯ ಹೇಳಿದ್ದಾರೆ. ಸೌಂದರ್ಯ ವೃದ್ಧಿಗೆ ವಿದ್ಯಾ ಬಾಲನ್ ಹೆಚ್ಚೇನು ಮಾಡುವುದಿಲ್ಲವಂತೆ. ಸಂದರ್ಶನದಲ್ಲಿ ಮಾತನಾಡಿದ ಅವರು, ಜೀವನವನ್ನು  ಸಾಧ್ಯವಾದಷ್ಟು ಸರಳವಾಗಿಡಲು ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದಿದ್ದಾರೆ.  

Tap to resize

Latest Videos

ಪಾರ್ಲರ್‌ ದೂರ ದೂರ (Parlour) : ಕಲಾವಿದರು ಪಾರ್ಲರ್ ಗೆ ಹೋಗುವುದು ಸಾಮಾನ್ಯ ಎಂಬುದು ನಮ್ಮ ನಂಬಿಕೆ. ಆದರೆ, ನನಗೆ ಹೆಚ್ಚು ಮೇಕಪ್ ಮಾಡುವುದು ಅಥವಾ ಪಾರ್ಲರ್‌ಗೆ ಹೋಗುವುದು ಇಷ್ಟವಿಲ್ಲ ಎನ್ನುತ್ತಾರೆ ವಿದ್ಯಾ.ನಾನು ಅಗತ್ಯವಿರುವುದನ್ನು ಮಾತ್ರ ಮಾಡುತ್ತೇನೆ. ಆದರೆ, ಚಿತ್ರೀಕರಣ ಮತ್ತು ಕೆಲಸದ ವೇಳೆ ಅವರಿಗೆ ಅಗತ್ಯವಿರುವಂತೆ ಮೇಕಪ್ ಮಾಡುತ್ತೇನೆ ಎಂದಿದ್ದಾರೆ. ವೈಯಕ್ತಿಕ ಜೀವನದಲ್ಲಿ, ನಾನು ಮೇಕಪ್ ಮತ್ತು ಫ್ಯಾಷನ್ ಬಗ್ಗೆ ಹೆಚ್ಚು ಪ್ರಯೋಗಗಳನ್ನು ಮಾಡುವುದಿಲ್ಲ ಎಂದಿದ್ದಾರೆ.

ಸೀರೆ ಮೇಲೆ ಮೋಹ (Saree) : ವಿದ್ಯಾ ಬಾಲನ್ ಗೆ ಸೀರೆ ಮೇಲೆ ವಿಶೇಷ ಪ್ರೀತಿಯಿದೆ. ಸೀರೆ ಉಡುವುದು ಇಷ್ಟವಂತೆ. ಹಾಗಾಗಿಯೇ ಹೆಚ್ಚು ಸೀರೆಗೆ ಆದ್ಯತೆ ನೀಡುತ್ತೇನೆ ಎನ್ನುತ್ತಾರೆ.   

ವಿದ್ಯಾ ಬಾಲನ್ ಕೆಟ್ಟ ಅಭ್ಯಾಸವೇನು ಗೊತ್ತಾ? : ಕೂದಲು ಬಾಚುವುದು ವಿದ್ಯಾ ಬಾಲನ್ ಕೆಟ್ಟ ಅಭ್ಯಾಸವಂತೆ. ನನ್ನ ಕೂದಲು ಗಂಟಾಗುತ್ತದೆ. ಬಾಚಿದಾಗ ನೋವಾಗುತ್ತದೆ. ಅದಕ್ಕೆ ದಿನಕ್ಕೆ ಒಮ್ಮೆ ಕೂದಲು ಬಾಚುತ್ತೇನೆ. ಬಹುತೇಕ ಸಮಯ ಕೂದಲನ್ನು ಕಟ್ಟಿರುತ್ತೇನೆ ಎನ್ನುತ್ತಾರೆ ವಿದ್ಯಾ. 

ಸಂತೋಷದ ದಾರಿ (Vidya balan happiness) : ನಾನು ಖುಷಿಯಾಗಿರಲು ಇಷ್ಟಪಡುತ್ತೇನೆ ಎನ್ನುತ್ತಾರೆ ವಿದ್ಯಾ. ಸಣ್ಣ ವಿಷಯಗಳು ನನಗೆ ಸಂತೋಷವನ್ನು ನೀಡುತ್ತವೆ. ನಟಿಯಾಗಿ ನಾನು ಸೋಶಿಯಲ್ ಆಗಿರ್ತೇನೆ. ವಾಸ್ತವದಲ್ಲಿ ನಾನು ಅಂತರ್ಮುಖಿ ಮತ್ತು ಖಾಸಗಿತನಕ್ಕೆ ಹೆಚ್ಚು ಮಹತ್ವ ನೀಡುವ  ವ್ಯಕ್ತಿ ಎನ್ನುತ್ತಾರೆ. ನಾನು ನನ್ನೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ. ಪ್ರತಿದಿನ ನಾನು ನನ್ನೊಂದಿಗೆ ಸ್ವಲ್ಪ ಸಮಯವನ್ನು ಕಳೆಯುತ್ತೇನೆ ಎನ್ನುತ್ತಾರೆ.

ಆಹಾರ,ದಿನಚರಿ (Food) : ತ್ವಚೆಯ ಹೊಳಪು, ಫಿಟ್‌ನೆಸ್ ಮತ್ತು ಆಹಾರ ಕ್ರಮದ ಬಗ್ಗೆ ಮಾತನಾಡುತ್ತಾ, ವಿದ್ಯಾ 'ಐ ಲವ್ ಮೈ ಕರ್ವ್ಸ್' ಎಂದಿದ್ದಾರೆ. ನನ್ನ ಆಹಾರವನ್ನು ಸಮತೋಲಿತ ಮತ್ತು ಸರಳವಾಗಿಡಲು ನಾನು ಇಷ್ಟಪಡುತ್ತೇನೆ. ಮನೆಯಲ್ಲಿ ತಯಾರಿಸಿದ ಅಮ್ಮನ ಕೈ ಆಹಾರ ನನ್ನ ಅಚ್ಚುಮೆಚ್ಚು ಎಂದಿದ್ದಾರೆ. ನಾನು ಯಾವುದೇ ನಿರ್ದಿಷ್ಟ ಆಹಾರವನ್ನು ಅನುಸರಿಸುವುದಿಲ್ಲ, ನನ್ನ ಆಹಾರದಲ್ಲಿ ಪೌಷ್ಟಿಕಾಂಶವಿರುವಂತೆ ನೋಡಿಕೊಳ್ಳುತ್ತೇನೆ ಎಂದು ವಿದ್ಯಾ ಹೇಳುತ್ತಾರೆ. 

click me!