ವರ ಬೇಕಾಗಿದ್ದಾನೆ ಎಂದು ಜಾಹೀರಾತು ಕೊಟ್ಟ 73 ವರ್ಷದ ನಿವೃತ್ತ ಶಿಕ್ಷಕಿ

Published : Mar 29, 2021, 05:09 PM ISTUpdated : Mar 29, 2021, 07:46 PM IST
ವರ ಬೇಕಾಗಿದ್ದಾನೆ ಎಂದು ಜಾಹೀರಾತು ಕೊಟ್ಟ 73 ವರ್ಷದ ನಿವೃತ್ತ ಶಿಕ್ಷಕಿ

ಸಾರಾಂಶ

ವರ ಬೇಕಾಗಿದ್ದಾನೆ ಎಂದು ಜಾಹೀರಾತು ಕೊಟ್ಟ 73 ವರ್ಷದ ನಿವೃತ್ತ ಶಿಕ್ಷಕಿ | ಜಾಹೀರಾತು ತುಣುಕು ಎಲ್ಲೆಡೆ ವೈರಲ್

ಮೈಸೂರು(ಮಾ.29): ಯುವತಿ ವಿಧವೆಯಾದರೆ ಮರು ವಿವಾಹದ ಬಗ್ಗೆ ಚರ್ಚೆಯಾಗುವ ಸಾಮಾಜದಲ್ಲಿ ಇದೀಗ 73 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರು ವರ ಬೇಕಾಗಿದ್ದಾನೆ ಎಂದು ಜಾಹೀರಾತು ಕೊಟ್ಟು ಸುದ್ದಿಯಾಗಿದ್ದಾರೆ. ಈ ಮೂಲಕ ವಿವಾಹ, ಸಂಗಾತಿ, ವಯಸ್ಸಿನ ಬೇಲಿ ದಾಟಿ ಬಂದಿದ್ದಾರೆ ಈಕೆ.

ಇಳಿ ವಯಸ್ಸಿನಲ್ಲಿ ಜೊತೆಗೊಂದು ಜೀವ, ಸ್ನೇಹ, ಪ್ರಿತಿ, ಮಾತು ಮುನಿಸಿಗಾದರೂ ಒಬ್ಬ ಜೊತೆಗಾರ, ಜೊತೆಗಾತಿ ಬೇಕೆಂಬ ಹಂಬಲ ಇದ್ದರೂ ನಮ್ಮ ಸಮಾಜ ಇದನ್ನು ಮುಕ್ತವಾಗಿ ಒಪ್ಪಿಕೊಳ್ಳುವುದಿಲ್ಲ.

ಪ್ರೀತಿ ಹೇಳು ಮಾತೇ ಬೇಕಿಲ್ಲ... ಒಂದು ಕಿರು ನೋಟ, ನಗು, ಸ್ಪರ್ಶವೂ ಸಾಕು

ಇದೇನು ಹುಚ್ಚು ಈ ವಯಸ್ಸಿಗೆ ಎಂದು ಆಡಿಕೊಳ್ಳುವವರೇ ಹೆಚ್ಚಿ. ಇದೆಲ್ಲವನ್ನೂ ತಿಳಿದಿರುವ ನಿವೃತ್ತ ಶಿಕ್ಷಕಿ ಜಾಹೀರಾತು ಮೂಲಕ ವರ ಹುಡುಕುವ ಪ್ರಯತ್ನ ಮಾಡಿದ್ದು ಸಣ್ಣ ವಿಚಾರವೇನಲ್ಲ ಬಿಡಿ. ಬೇಷ್ ಎನ್ನಲೇ ಬೇಕು.

ಗಂಡನನ್ನು ಹುಡುಕುತ್ತಾ 73 ವರ್ಷದ ನಿವೃತ್ತ ಶಿಕ್ಷಕಿ ವಿವಾಹ ಜಾಹೀರಾತು ಕೊಟ್ಟಿದ್ದಾರೆ. ಈ ಜಾಹೀರಾತು ನಗರ ಮತ್ತು ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದ್ದು ಅನೇಕರು ಇವರ ಧೈರ್ಯ ಮತ್ತು ಸಕಾರಾತ್ಮಕ ಮನೋಭಾವವನ್ನು ಹುರಿದುಂಬಿಸಿದ್ದಾರೆ.

ಅಡಲ್ಟ್ ಚಿತ್ರಗಳಲ್ಲಿ ನಟಿಸಲು ಉದ್ಯೋಗ ತೊರೆದ ಪೊಲೀಸ್ ಅಧಿಕಾರಿ

ವರ ಬೇಕಾಗಿದೆ. ಸರ್ಕಾರಿ ನಿವೃತ್ತಿಯಾದ ಲಕ್ಷಣವಾದ ಬ್ರಾಹ್ಮಣ ಸ್ತ್ರೀಗೆ ಮದುವೆಯಾಗಲು 73 ವರ್ಷಕ್ಕೆ ಮೇಲ್ಪಟ್ಟ ಆರೋಗ್ಯವಂತ ಬ್ರಾಹ್ಮಣ ವರ ಬೇಕಾಗಿದ್ದಾರೆ. ಸಂಪರ್ಕಿಸಿ ಎಂದು ಜಾಹೀರಾತು ನೀಡಲಾಗಿದೆ.

ನಾನು ನನ್ನ ಸ್ವಂತ ಕುಟುಂಬವನ್ನು ಹೊಂದಿಲ್ಲ. ನನ್ನ ಪೋಷಕರು ಬದುಕಿಲ್ಲ. ನನ್ನ ಮೊದಲ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡಿತು. ನಾನು ಒಬ್ಬಂಟಿಯಾಗಿರಲು ಭಯಪಡುತ್ತೇನೆ. ನಾನು ಮನೆಯಲ್ಲಿ ಬೀಳಬಹುದು, ನನ್ನ ನೆರವಿಗೆ ಯಾರೂ ಇರಲಾರರು ಎಂಬ ಭಯ ನನ್ನನ್ನು ಜೀವನ ಸಂಗಾತಿಯನ್ನು ಹುಡುಕುವಂತೆ ಮಾಡಿತು ಎಂದಿದ್ದಾರೆ.

ತನ್ನ ಮದುವೆ ಮತ್ತು ವಿಚ್ಛೇದನೆ ನೋವಿನಿಂದ ಕೂಡಿದೆ. ಇಷ್ಟು ವರ್ಷಗಳಲ್ಲಿ ಮದುವೆ ಬಗ್ಗೆ ಆಲೋಚಿಸುವುದರಿಂದಲೇ ನೋವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಮದುವೆ ಮತ್ತು ಸಂಗಾತಿಗಿಂತ ಹೆಚ್ಚಾಗಿ ಆಕೆಗೆ ಈಗ ಬೇಕಾಗಿರುವುದು ನನ್ನ ಜೀವನದ ಒಡನಾಡಿ ಎಂದು ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?