ಪುರುಷರನ್ನು ಅವಮಾನಿಸುತ್ತಲೇ ಕೋಟಿ ಕೋಟಿ ಸಂಪಾದಿಸುವ ಮಹಿಳೆ!

By Chethan Kumar  |  First Published Jul 10, 2024, 5:29 PM IST

ಈಕೆಯ ಪುರುಷರನ್ನು ನಾಯಿಗಿಂತ ಕಡೆಯಾಗಿ ನೋಡುತ್ತಾಳೆ. ಅವಮಾನಿಸುತ್ತಾಳೆ, ಪುರುಷರ ಕೊರಳಿಗೆ ಸಂಕೋಲೆ ಹಾಕಿ ನಾಯಿಯಂತೆ ರಸ್ತೆಯಲ್ಲಿ ಅಲೆದಾಡಿಸುತ್ತಾಳೆ. ಆದರೆ ಇದರಿಂದಲೇ ಈಕೆ ಕೋಟಿ ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾಳೆ.
 


ಪುರುಷರನ್ನು ನಾಯಿಗಿಂತ ಕಡೆಯಾಗಿ ನೋಡುತ್ತಾಳೆ. ಪುರಷರ ಕೊರಳಗಿ ನಾಯಿಯ ಚೈನ್ ಹಾಕಿ ಬೀದಿ ಬೀದಿ ಅಲೆದಾಡಿಸುತ್ತಾಳೆ. ಪುರುಷರಿಗೆ ಈಕೆ ನಾಯಿಯಷ್ಟು ಬೆಲೆಯನ್ನು ಕೊಡೋದಿಲ್ಲ. ಹೀಗೆ ಪುರುಷರನ್ನು ಟೀಕಿಸಿ, ಅವಮಾನಿಸಿ ಈ ಮಹಿಳೆ ತಿಂಗಳಿಗೆ ಕೋಟಿ ಕೋಟಿ ರೂಪಾಯಿ ಆದಾಯ ಸಂಪಾದಿಸುತ್ತಿದ್ದಾಳೆ ಅಂದರೆ ನಂಬಲೇ ಬೇಕು. ಸೈಡ್ ಬ್ಯೂಸಿನೆಸ್ ರೀತಿ ಆರಂಭಿಸಿದ ಈ ಅವಮಾನಿಸುವ ಉದ್ಯೋಗ ಇದೀಗ ಪ್ರಮುಖ ವೃತ್ತಿಯಾಗಿದೆ. ಅಷ್ಟಕ್ಕೂ ಈಕೆಯ ಹೆಸರು ಮರ್ಲೆ. ಮಿಸ್‌ಸ್ಟ್ರೆಸ್ ಮರ್ಲೆ ಎಂದೇ ಜನಪ್ರಿಯರಾಗಿದ್ದಾರೆ.

ಅಮೆರಿಕದ 30 ವರ್ಷದ ಮಿಸ್ಟ್ರೆಸ್ ಮರ್ಲೆ ಈಗ ಫುಲ್ ಬ್ಯೂಸಿ. ವಿಶೇಷ ಅಂದರೆ ಈಕೆಯ ಬಳಿ ಪುರುಷರು ಆಗಮಿಸುತ್ತಾರೆ. ತಮ್ಮನ್ನು ಅವಮಾನಿಸಿ, ಕ್ರೂರವಾಗಿ ನಡೆಸಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದಾರೆ.  ನಾಯಿಗಿಂತ ಕಡೆಯಾಗಿ ನೋಡಿ ಅವಮಾನಿಸಿದ ಬಳಿಕ ಈಕೆಯ ಕೈಗೆ ಹಣ ನೀಡಿ ಮರಳುತ್ತಾರೆ. ಇದೀಗ ಈ ರೀತಿ ಆಗಮಿಸುವವರ ಪುರುಷರ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ಈಕೆ ಆನ್‌ಲೈನ್ ಬುಕಿಂಗ್ ಕುರಿತು ಆಲೋಚಿಸಿದ್ದಾಳೆ.

Latest Videos

undefined

ಗಂಡ ಡ್ಯೂಟಿಗೆ ಹೋಗ್ತಾನೆ, ಹೆಂಡತಿ ಹೌಸ್‌ವೈಫು, ಮಗೂನ ಶಾಲೆಗೆ ರೆಡಿ ಯಾರು ಮಾಡ್ಬೇಕು?

ಯ್ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈಕೆ ತನ್ನ ಆದಾಯ, ವೃತ್ತಿ ಕುರಿತು ಮಾತನಾಡಿದ್ದಾಳೆ. 6 ವರ್ಷಗಳ ಹಿಂದೆ ವ್ಯಾಸಾಂಗ ಮುಗಿಸಿ ಹೊರಬಂದ ನಾನು, ಕಾರ್ಪೋರೇಟ್ ಕೆಲಸಕ್ಕೆ ಸೇರಿಕೊಂಡೆ. ಆದರೆ ಈ ವೇತನ ಸಾಕಾಗುತ್ತಿರಲಿಲ್ಲ. ಹೀಗಾಗಿ ಇದರ ಜೊತೆಗೆ ಸೈಡ್ ಬ್ಯೂಸಿನೆಸ್ ಆರಂಭಿಸಬೇಕು ಅನ್ನೋದು ನನ್ನ ಕನಸಾಗಿತ್ತು. ಇದಕ್ಕಾಗಿ ಹಲವು ಚರ್ಚೆ ನಡೆಸಿದ್ದೆ. ಮಾಹಿತಿಗಳನ್ನು ಸಂಗ್ರಹಿಸಿದ್ದೆ ಎಂದಿದ್ದಾರೆ.

ಈ ವೇಳೆ ಕೆಲ ಸಮುದಾಯದ ಮಹಿಳೆಯರು ಪುರುಷರನ್ನು ಹಿಡಿತಕ್ಕೆ ತೆಗೆದುಕೊಂಡು, ಪುರುಷರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಿ ಹಣಗಳಿಸುತ್ತಿರುವ ಮಾಹಿತಿ ಲಭ್ಯವಾಯತು. ಆದರೆ ಇದೇ ರೀತಿಯಲ್ಲಿ ಬ್ಯೂಸಿನೆಸ್ ಆರಂಭಿಸಲು ನಿರ್ಧರಿಸಿ ತಯಾರಿ ಮಾಡಿಕೊಂಡೆ. ಮೊದಲ ಪುರುಷ ಗ್ರಾಹಕ ನನಗೆ 50 ಅಮೆರಿಕನ್ ಡಾಲರ್ ನೀಡಿ ನನ್ನ ಊಟದ ಬಿಲ್ ಪಾವತಿಸಿದ್ದ.  ಬಳಿಕ ಈ ವೃತ್ತಿ ಬೆಳೆಯಿತು. 

ಪುರುಷರು ನನ್ನ ಬಳಿ ಬಂದು ದುಡ್ಡು ನೀಡಿ, ಉಡುಗೊರೆ ನೀಡಿ ಅವಮಾನಿಸಿಕೊಳ್ಳುತ್ತಾರೆ. ನಾನು ಏನೇ ಅವಾಮಾನ ಮಾಡಿದರೂ ಸಹಿಸಿಕೊಂಡು ಬಳಿಕ ಕೈತುಂಬ ಹಣ ನೀಡಿ ತೆರಳುತ್ತಾರೆ ಎಂದಿದ್ದಾಳೆ. ಈಕೆ ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕ್ಯಾಮೆರಾ ಹಿಂದೆ ಬೇರೆ ಕೆಲಸ ಮಾಡಿ, ಕ್ಯಾಮೆರಾ ಮುಂದೆ ಅವಮಾನಿಸುವ ನಾಟಕ ಆಟಬೇಡಿ. ದುಡ್ಡು ಕೊಟ್ಟು ಅವಮಾನಿಸುವ ಅವಶ್ಯಕತೆ ಯಾರಿಗೂ ಬೀಳುವುದಿಲ್ಲ. ಇದನ್ನು ವತ್ತಿಯಾಗಿ ಮುಂದುವರಿಸುವುದು ಅಸಾಧ್ಯ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಮುಖ ನೋಡಿಯೇ ನಿಮ್ಮ ಆರೋಗ್ಯ ಹೇಗಿದೆ ಅಂತ ಹೇಳಬಹುದು!ಅದು ಹೇಗೆ ರಿಫ್ಲೆಕ್ಟ್ ಆಗುತ್ತೆ?

click me!