ಸದ್ಯ ಅಂಬಾನಿ ಕುಟುಂಬ ಪ್ಯಾರಿಸ್ ನಲ್ಲಿದೆ. ಹನಿಮೂನ್ ಜೊತೆ ಒಲಂಪಿಕ್ಸ್ ಎರಡನ್ನೂ ರಾಧಿಕಾ – ಅನಂತ್ ಮುಗಿಸುವಂತಿದೆ. ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಫೋಟೋ ಒಂದು ವೈರಲ್ ಆಗಿದ್ದು, ಅದು ನೆಟ್ಟಿಗರ ಮನಸ್ಸು ಗೆದ್ದಿದೆ.
ಅದ್ಧೂರಿ ಮದುವೆ ನಂತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿದೇಶಕ್ಕೆ ಹಾರಿದ್ದಾರೆ. ಪ್ಯಾರಿಸ್ ನಲ್ಲಿರುವ ಜೋಡಿಯ ಅನೇಕ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈಗ ಪ್ಯಾರಿಸ್ ನ ಇನ್ನೊಂದು ಫೋಟೋ ವೈರಲ್ ಆಗಿದ್ದು, ಅದು ಮುಖೇಶ್ ಅಂಬಾನಿ ಮುದ್ದಿನ ಸೊಸೆಯನ್ನು ಜನರು ಮೆಚ್ಚುವಂತೆ ಮಾಡಿದೆ.
ಸದ್ಯ ಪ್ಯಾರಿಸ್ (Paris) ನಲ್ಲಿ ಒಲಂಪಿಕ್ಸ್ (Olympics) ನಡೆಯುತ್ತಿದೆ. ಮುಖೇಶ್ ಅಂಬಾನಿ (Ambani) ಕುಟುಂಬ ಪ್ಯಾರಿಸ್ ನಲ್ಲಿದೆ. ನೀತಾ ಅಂಬಾನಿ, ಮುಖೇಶ್ ಅಂಬಾನಿ, ಇಶಾ ಅಂಬಾನಿ ಜೊತೆ ನವ ಜೋಡಿ ಅನಂತ್ ಅಂಬಾನಿ ಹಾಗೂ ರಾಧಿಕಾ ಕೂಡ ಪ್ಯಾರಿಸ್ ಗೆ ತೆರಳಿದ್ದಾರೆ. ಈಗ ವೈರಲ್ ಆಗಿರುವ ಫೋಟೋದಲ್ಲಿ ಅನಂತ್ ಹಾಗೂ ರಾಧಿಕಾ, ಒಲಂಪಿಕ್ಸ್ ನ ಯಾವುದೋ ಪಂದ್ಯ ವೀಕ್ಷಣೆ ಮಾಡ್ತಿರುವಂತಿದೆ. ಇಬ್ಬರು ಅಕ್ಕಪಕ್ಕದಲ್ಲಿ ಕುಳಿತಿದ್ದಾರೆ. ಅವರ ಮುಂದೆ ಇಶಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಕುಳಿತಿದ್ದಾರೆ. ಮುಖೇಶ್ ಅಂಬಾನಿ ಮೊಬೈಲ್ ನೋಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.
undefined
ಭಾರತೀಯರ ಮೆದುಳನ್ನು ವಿದೇಶಿಯರಿಗೆ ಅಡವಿಟ್ಟ ನಾರಾಯಣ ಮೂರ್ತಿ ಅವಕಾಶವಾದಿ: ಲೇಖಕ ರಾಜೀವ್
ಇತ್ತ ನವಜೋಡಿ ತುಂಬಾ ಗಂಭೀರವಾಗಿ ಮ್ಯಾಚ್ ವೀಕ್ಷಣೆ ಮಾಡುತ್ತಿತ್ತಂತಿದೆ. ರಾಧಿಕಾ ಹಾಗೂ ಅನಂತ್ ಮುಖದಲ್ಲಿ ನಗು ಕಾಣ್ತಿಲ್ಲ. ಆದ್ರೆ ರಾಧಿಕಾ ಕತ್ತಲ್ಲಿ ಮಂಗಳಸೂತ್ರವಿದೆ. ಇದು ನೆಟ್ಟಿಗರ ಗಮನ ಸೆಳೆದಿದೆ. ಇನ್ಸ್ಟಾಗ್ರಾಮ್ ನಲ್ಲಿ ಅಂಬಾನಿ ಅಪ್ಡೇಟ್ ಖಾತೆಯಲ್ಲಿ ರಾಧಿಕಾ ಮತ್ತು ಅನಂತ್ ಜೊತೆಗಿರುವ ನಾಲ್ಕು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಅದ್ರಲ್ಲಿ ರಾಧಿಕಾ ಮಂಗಳಸೂತ್ರವನ್ನು ಧರಿಸಿದ್ದು ಎಲ್ಲರ ಗಮನ ಸೆಳೆದಿದೆ.
ಅಂಬಾನಿ ಸೊಸೆ ತಮ್ಮ ಸಂಸ್ಕಾರದೊಂದಿಗೆ ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು ರಾಧಿಕಾ ಮಂಗಳ ಸೂತ್ರ ಧರಿಸಿದ್ದಾರೆ, ನೈಸ್ ಎಂದು ಬರೆದಿದ್ದಾರೆ. ಇದಕ್ಕೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ರಾಧಿಕಾಗೆ ಜನರ ಮನಸ್ಥಿತಿ ತಿಳಿದಿದೆ. ಅವರು ಮಂಗಳಸೂತ್ರ ಧರಿಸದೆ ಬಂದಿದ್ರೆ ಜನರು ಅದನ್ನು ಟ್ರೋಲ್ ಮಾಡ್ತಿದ್ದರು ಎಂದಿದ್ದಾರೆ. ರಾಧಿಕಾ, ನಿಜವಾಗ್ಲೂ ಸಭ್ಯ, ಸಿಹಿ ಮತ್ತು ಅತ್ಯಂತ ವಿನಮ್ರ ಮಹಿಳೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಅನಂತ್ ಹಾಗೂ ರಾಧಿಕಾ ಪ್ರೀತಿ ಬಗ್ಗೆಯೂ ಇಲ್ಲಿ ಕೆಲವರು ಕಮೆಂಟ್ ಮಾಡಿದ್ದಾರೆ. ಅಪ್ಪ – ಅಮ್ಮ ಹನಿಮೂನ್ ಅಂತ ಒಲಂಪಿಕ್ಸ್ ಗೆ ಕರೆತಂದಿದ್ದಾರೆ ಅಂತ ಒಬ್ಬರು ಹೇಳಿದ್ರೆ, ಅಯ್ಯೋ ಅವರನ್ನು ಹನಿಮೂನ್ ಗೆ ಕಳುಹಿಸಿ, ಪಾಪ ಮ್ಯಾಚ್ ಯಾಕೆ ತೋರಿಸ್ತಿದ್ದೀರಿ ಅಂತ ಇನ್ನೊಬ್ಬರು ಹೇಳಿದ್ದಾರೆ.
ರಾಧಿಕಾ ಹಾಗೂ ಅನಂತ್ ದಣಿದಂತೆ ಕಾಣ್ತಿದೆ. ಮದುವೆ ಆದ್ಮೇಲೆ ರಾಧಿಕಾ ಮುಖ ಬಾಡಿದೆ ಅಂತ ಕಮೆಂಟ್ ಕೂಡ ಇಲ್ಲಿದೆ. ರಾಧಿಕಾ ತುಂಬಾ ಸರಳ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರನ್ನು ನೋಡಿದ್ರೆ ಸ್ನಾನ ಮಾಡಿಲ್ಲ ಎನ್ನಿಸುತ್ತೆ ಎಂದವರು ಇಲ್ಲಿದ್ದಾರೆ.
ರಾಧಿಕಾ ಹಾಗೂ ಅನಂತ್ ಜುಲೈ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು ಆರು ತಿಂಗಳಿಂದ ಮದುವೆಗೆ ತಯಾರಿ ನಡೆದಿತ್ತು. 15 ದಿನಗಳ ಕಾಲ ಮದುವೆ ಪೂರ್ವ ಹಾಗೂ ಮದುವೆ ನಂತ್ರದ ಕಾರ್ಯಕ್ರಮಗಳು ಅಂಬಾನಿ ಮನೆಯಲ್ಲಿ ನಡೆದಿದ್ದವು. ರಾಧಿಕಾ ಹಾಗೂ ಅಂಬಾನಿ ಮದುವೆಗೆ ಹಾಲಿವುಡ್, ಬಾಲಿವುಡ್ ಸೇರಿದಂತೆ ಉದ್ಯಮ ಜಗತ್ತಿನ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.
ಆಗಸ್ಟ್ ಶುರುವಾಗ್ತಿದ್ದಂತೆ ಬದಲಾಗಲಿವೆ ಈ ಹಣಕಾಸಿನ ನಿಯಮಗಳು; ನೇರವಾಗಿ ನಿಮ್ಮ ಜೇಬಿನ ಮೇಲೆಯೇ ಎಫೆಕ್ಟ್!
ಮದುವೆ ನಂತ್ರ ತಮ್ಮ ಕೆಲಸದಲ್ಲಿ ಬ್ಯುಸಿಯಾದ ಅಂಬಾನಿ ಕುಟುಂಬ ಈಗ ಪ್ಯಾರಿಸ್ ನಲ್ಲಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಹನಿಮೂನ್ ಗೆ ಎಲ್ಲಿಗೆ ಹೋಗ್ತಾರೆ ಎನ್ನುವ ಪ್ರಶ್ನೆ ಎದ್ದಿರುವ ಬೆನ್ನಲ್ಲೆ ಅವರು ಪ್ಯಾರಿಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಲಂಪಿಕ್ಸ್ ಪಂದ್ಯಗಳನ್ನು ವೀಕ್ಷಿಸುತ್ತಿರುವ ಜೋಡಿ, ಹನಿಮೂನ್ ಗೆ ಬಂದಂತೆ ಕಾಣ್ತಿಲ್ಲ.