ಎದೆ ಹಾಲುಣಿಸುವವರು ಈ ಮಿಥ್‌ಗಳನ್ನು ನಂಬಬೇಡಿ

By Suvarna News  |  First Published Sep 4, 2021, 4:04 PM IST

ಎದೆ ಹಾಲುಣಿಸುವ ತಾಯಂದಿರನ್ನು ದಾರಿ ತಪ್ಪಿಸುವ ಹಲವು ಮಿಥ್‌ಗಳು ನಮ್ಮ ನಡುವೆ ಪ್ರಚಲಿತವಾಗಿವೆ. ಅವು ಬಾಣಂತಿಯರನ್ನು ಅಂಜುವಂತೆ ಮಾಡುತ್ತವೆ. ಅಂಥ ಅಸತ್ಯಗಳನ್ನು ಇಲ್ಲಿ ಒಡೆಯಲಾಗಿದೆ.


ನವಜಾತ ಶಿಶುವಿಗೆ, ಹಸುಳೆಗೆ ಸ್ತನ್ಯಪಾನಕ್ಕಿ೦ತ ಅಮೃತ ಇನ್ನೊ೦ದಿಲ್ಲ. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಇದು ಅತ್ಯಂತ ಮಹತ್ವಪೂರ್ಣವಾದದ್ದು. ಯಾವುದೇ ಮದ್ದು/ಸಪ್ಲಿಮೆ೦ಟ್ಸ್ ಬರಲಿ ತಾಯಿಯ ಎದೆ ಹಾಲಿಗೆ ಸಮಾನವಾದದ್ದಿಲ್ಲ. ಎದೆ ಹಾಲು ಉಣಿಸುವ ತಾಯಂದಿರನ್ನು ದಿಕ್ಕೆಡಿಸುವಂಥ ಕೆಲವು ಮಿಥ್‌ಗಳು ಪ್ರಚಲಿತದಲ್ಲಿವೆ. ಅವುಗಳಿಗೆ ಬಲಿಯಾಗಬೇಡಿ. ಅಂಥ ಕೆಲವು ಮಿಥ್‌ಗಳನ್ನು ಇಲ್ಲಿ ಪರೀಕ್ಷಿಸಲಾಗಿದೆ.

1. ಕೊರೊನಾ ಲಸಿಕೆ ತೆಗೆದುಕೊಂಡರೆ ಮೊಲೆ ಹಾಲು ಉಣಿಸಬಾರದು
ಇದು ನಿಜವಲ್ಲ. ಕೊರೊನಾ ಲಸಿಕೆ ತೆಗೆದುಕೊಂಡ ದಿನ ಸಣ್ಣದಾಗಿ ಜ್ವರ, ಮೈ ಕೈ ನೋವು ಕಾಡಬಹುದು. ಇಂಥ ಹೊತ್ತಿನಲ್ಲಿ ಸ್ತನ್ಯಪಾನ ಮಾಡಿಸಬೇಕಿಲ್ಲ. ಉಳಿದ ಸಮಯದಲ್ಲಿ ಆರಾಮಾಗಿ ಮಗುವಿಗೆ ಎದೆ ಹಾಲು ನೀಡಬಹುದು. ಎದೆ ಹಾಲಿನ ಮೂಲಕವೇನೂ ಲಸಿಕೆಯ ದುಷ್ಪರಿಣಾಮ ಮಗುವಿಗೆ ಆಗುವುದಿಲ್ಲ.

Tap to resize

Latest Videos

2. ಹಾಲು ಸೃಷ್ಟಿಯಾಗೋಕೆ ಬಾಣಂತಿ ಹಾಲು ಕುಡಿಯಬೇಕು
ಇದೂ ನಿಜವಲ್ಲ. ಹಾಲು ಕುಡಿಯುವುದರಿಂದ ದೇಹದಲ್ಲಿ ಹಾಲು ಸೃಷ್ಟಿ ಆಗೋಲ್ಲ. ಆದರೆ ಬಾಣಂತಿ ಅಪೌಷ್ಟಿಕತೆ ಅನುಭವಿಸಬಾರದು. ಆರೋಗ್ಯಕರ ಡಯಟ್ ಹೊಂದಿರಬೇಕು. ಸಾಕಷ್ಟು ಪ್ರೊಟೀನ್‌ಯುಕ್ತವಾದ ಆಹಾರವನ್ನು ಬಾಣಂತಿ ಸೇವಿಸಬೇಕು. ದ್ರವಾಹಾರವನ್ನು ಜ್ಯೂಸ್ ಇತ್ಯಾದಿಗಳನ್ನು ಸೇವಿಸಬೇಕು.

3. ಹಾಗಲಕಾಯಿ ತಿನ್ನೋದರಿ೦ದ ಹಾಲು ಕಹಿಯಾಗುತ್ತೆ
ತಾಯಿಯಾದವಳು ಏನು ತಿನ್ನುತ್ತಾಳೆ ಅದು ಎದೆ ಹಾಲಿನ ರೂಪದಲ್ಲಿ ಮಗುವಿನ ಹೊಟ್ಟೆ ಸೇರುತ್ತದೆ ಎನ್ನುತ್ತಾರೆ. ಕೆಲವರು ಇನ್ನೂ ಒ೦ದು ಹೆಜ್ಜೆ ಮುಂದೆ ಹೋಗಿ ಬಾಣಂತಿ ಹಾಗಲಕಾಯಿ ತಿ೦ದರೆ ಹಾಲು ಕಹಿಯಾಗುತ್ತದೆ ಎ೦ದು ಅಭಿಪ್ರಾಯ ಪಡುತ್ತಾರೆ. ಇದು ಸರಿಯಲ್ಲ. ಹಾಗಾದರೆ ಈ ಸಮಯದಲ್ಲಿ ಚಾಕೊಲೇಟ್, ಐಸ್ಕ್ರೀಮ್ ತಿ೦ದರೆ ಹಾಲು ಹಾಗೆಯೇ ಇರಬೇಕಲ್ಲವೇ?

4. ಗು೦ಡು ಗು೦ಡಾದ ಮಗುವನ್ನು ಪಡೆಯಲು ಯಥೇಚ್ಛ ತುಪ್ಪ ಸೇವಿಸಿ
ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ತುಪ್ಪ ಹೆಚ್ಚಾಗಿ ಸೇವನೆ ಮಾಡಿದರೆ ಮಗುವಿಗೆ ಹಾಲಿನ ಮೂಲಕ ಹೆಚ್ಚು ತುಪ್ಪ ದೊರೆಯುತ್ತದೆ ಎನ್ನುವುದು ಕೆಲವರ ಅ೦ಬೋಣ. ತುಪ್ಪ ಆರೋಗ್ಯಕ್ಕೆ ಒಳ್ಳೆಯದು ಹೌದು. ಆದರೆ ಅದರಿ೦ದ ಮಗು ಗು೦ಡಾಗಿ ಬೆಳೆಯುತ್ತದೆ ಅನ್ನುವುದು ನ೦ಬಿಕೆಯಷ್ಟೇ.

5. ಎದೆಗೆ ಬೆಚ್ಚಗೆ ರಕ್ಷಣೆ
ಮೊಲೆ ಹಾಲುಣಿಸುವ ಎದೆಗೆ ಯಾವತ್ತೂ ಇರುವಷ್ಟೇ ರಕ್ಷಣೆ ಸಾಕು. ಚಳಿಗಾಲದಲ್ಲಿ ಚಳಿ ಜಾಸ್ತೀನೇ ಇರುತ್ತದೆ. ಆದ್ದರಿಂದ ಸಾಮಾನ್ಯವಾಗಿ ಎಲ್ಲರೂ ಉಲ್ಲನ್ ಬಟ್ಟೆ ತೊಡುತ್ತಾರೆ. .ಆದರೆ ಎದೆ ಹಾಲೂಡುವ ತಾಯಿ ತನ್ನ ಸ್ತನಕ್ಕೂ ಹೆಚ್ಚು ಬೆಚ್ಚಗಿಡುವ ಉಡುಪು ತೊಡಿಸಬೇಕೆನ್ನುವುದು ಮೂರ್ಖತನ. ಹೀಗೆ ಮಾಡದಿದ್ದರೆ ಹಾಲು ತು೦ಬಾ ತಣ್ಣಗಾಗಿ ಮಗುವಿಗೆ ಶೀತವಾಗುತ್ತದೆ ಎನ್ನುವ ಮಾತನ್ನು ಹೇಳುತ್ತಾರೆ. ಇದು ಅಪ್ಪಟ ಅಸತ್ಯ.

ಮಗುವನ್ನು ಹೆಚ್ಚಾಗಿ ಎಡಗೈಯಲ್ಲಿ ಎತ್ತಲು ಕಾರಣ ಏನು?

6. ಕತ್ತಲೆಯಲ್ಲಿ ಹಾಲುಣಿಸಬಾರದು
ಕತ್ತಲೆಯಲ್ಲಿ ಹಾಲುಣಿಸಿದರೆ ಕ್ಷುದ್ರ ಶಕ್ತಿಗಳು ಬ೦ದು ಹಾಲು ಕುಡಿಯುತ್ತವೆ ಅನ್ನುವ ನ೦ಬಿಕೆ ಕೆಲವೆಡೆ ಇನ್ನೂ ಇದೆ. ಇದು ತುಂಬಾ ಹಾಸ್ಯಾಸ್ದದ. ಇದರಿಂದ ಹಾಲುತ್ಪತ್ತಿ ಕಡಿಮೆಯಾಗುತ್ತದೆ ಅನ್ನುವುದು ಇನ್ನೂ ಸುಳ್ಳು.

7. ತಲೆಸ್ನಾನ ಮಾಡಿ ಹಾಲುಣಿಸಿದರೆ ಶೀತ
ಕೆಲವರ ಪ್ರಕಾರ ತಲೆಸ್ನಾನ ಮಾಡಿ ಮಗುವಿಗೆ ಹಾಲೂಡಿಸಿದರೆ ಮಗುವಿಗೆ ಶೀತವಾಗುವ ಸ೦ಭವವಿದೆ. ಹೀಗೇನೂ ಆಗುವುದಿಲ್ಲ. ಶೀತ ಪ್ರಕೃತಿಯವರಿಗೆ ಕೆಲವೊಮ್ಮೆ ಶೀತವಾಗುತ್ತದೆ. ಹಾಗ೦ತ ಆ ಹಾಲಿನಿಂದ ಮಗುವಿಗೆ ಶೀತವಾಗುವುದಿಲ್ಲ.

8. ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ತನ್ಯಪಾನ ಮಾಡಿಸಬಾರದು
ಇದೂ ನಿಜವಲ್ಲ. ಮಕ್ಕಳಿಗೆ ಎರಡು ವರ್ಷದವರೆಗೂ ಹಾಲುಣಿಸಬಹುದು. ಹಾಗೆ ಮಾಡಲೇಬೇಕೆಂದಿಲ್ಲ. ಮಗು ಸಾಕಷ್ಟು ಪೌಷ್ಟಿಕ ಇತರ ಆಹಾರವನ್ನೂ ಸೇವಿಸಲು ಆರಂಭಿಸಿದರೆ ಎದೆ ಹಾಲು ಬಿಡಬಹುದು. ಇಲ್ಲವಾದರೆ ಎದೆ ಹಾಲು ನೀಡಬೇಕು.

9. ಔಷಧ ಸೇವಿಸುವವರು ಎದೆ ಹಾಲು ನೀಡಬಾರದು
ಔಷಧಗಳನ್ನು ಸೇವಿಸುತ್ತಿರುವವರು ಎದೆ ಹಾಲು ನೀಡಬಹುದು. ಔಷಧಕ್ಕೆ ಸಂಬಂಧಿಸಿದ ಯಾವುದೇ ಅಂಶಗಳೂ ಮಗುವಿಗೆ ಹೋಗುವುದಿಲ್ಲ. ಒಂದು ವೇಳೆ ಹೋದರೂ, ಅದು ಎದೆಹಾಲಿನ ಸಂಯುಕ್ತದಲ್ಲಿ ಒಂದಾಗಿ, ಮಗುವಿಗೆ ಯಾವುದೇ ಅಪಾಯ ಮಾಡದಂತೆ ಪರಿವರ್ತಿತಗೊಂಡು ಹೋಗುತ್ತದೆ.

 

click me!