Republic Day 2026: 140 ಪುರುಷ ಸೈನಿಕರಿಗೆ ಮಹಿಳಾ ಅಧಿಕಾರಿ ಕಮಾಂಡ್, ಈ ಬಾರಿ ಗಮನ ಸೆಳೆಯಲಿದೆ ಗಣರಾಜ್ಯೋತ್ಸವ ಪರೇಡ್

Published : Jan 23, 2026, 12:16 PM IST
Simran Bala

ಸಾರಾಂಶ

Republic Day : ಈ ಬಾರಿ ದೆಹಲಿ ಗಣರಾಜ್ಯೋತ್ಸವ ಪರೇಡ್ ಎಲ್ಲರ ಗಮನ ಸೆಳೆಯಲಿದೆ. ಇದೊಂದು ಐತಿಹಾಸಿಕ ಕ್ಷಣವಾಗಲಿದೆ. ಮಹಿಳಾ ಸಬಲೀಕರಣದ ಸಂಕೇತವಾಗಲಿದೆ. ಲಕ್ಷಾಂತರ ಯುವಕರಿಗೆ ಸ್ಪೂರ್ತಿಯಾಗಲಿದೆ.

ಜನವರಿ 26, 2026 ರ ಗಣರಾಜ್ಯೋತ್ಸವ (Republic Day)ದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ. ಭಾರತ ಈ ಬಾರಿ ತನ್ನ 76 ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತಯಾರಿ ನಡೆಸಿದೆ. ದೇಶದಾದ್ಯಂತ ತಯಾರಿ ಜೋರಾಗಿ ನಡೆದಿದೆ. ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆ ಎಲ್ಲರ ಗಮನ ಸೆಳೆಯಲಿದೆ. ಮಹಿಳಾ ಅಧಿಕಾರಿಯೊಬ್ಬರು, ಪುರುಷ ಪಡೆಯ ಸಂಪೂರ್ಣ ತುಕಡಿಯನ್ನು ಮುನ್ನಡೆಸಲಿದ್ದಾರೆ. ಇದು ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣವಾಗಿರಲಿದೆ. ವಿಶೇಷವಾಗಿ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಸಿಆರ್ಪಿಎಫ್ ಸಂಪೂರ್ಣ ಪುರುಷ ತುಕಡಿಯನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ಈ ತುಕಡಿಯು 140 ಕ್ಕೂ ಹೆಚ್ಚು ಪುರುಷ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಮಹಿಳಾ ಅಧಿಕಾರಿ ಸಿಮ್ರಾನ್ ಬಾಲಾ ಈ ಮೂಲಕ ಇತಿಹಾಸ ಬರೆಯಲಿದ್ದಾರೆ. ಸಿಮ್ರಾನ್ ಬಾಲಾ ಅವರ ಈ ಹೆಜ್ಜೆ ಕೇವಲ ಇತಿಹಾಸ ಸೃಷ್ಟಿಸೋದಿಲ್ಲ ಬದಲಾಗಿ ಯುಪಿಎಸ್ಸಿ (UPSC) ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಯುವಕರಿಗೆ ಸ್ಪೂರ್ತಿಯಾಗಲಿದೆ.

ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡ ಸಿಮ್ರಾನ್ ಬಾಲಾ (Simran Bala)

ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ UPSC CAPF ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಸಿಮ್ರಾನ್ ಬಾಲಾ ಉತ್ತೀರ್ಣರಾಗಿದ್ದರು. 2023 ರಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದ ಸಿಮ್ರಾನ್ ಬಾಲಾ, 82 ನೇ ಅಖಿಲ ಭಾರತ ರ್ಯಾಂಕ್ ಪಡೆದಿದ್ದರು. ಆ ವರ್ಷ ಜಮ್ಮು ಮತ್ತು ಕಾಶ್ಮೀರದಿಂದ ಆಯ್ಕೆಯಾದ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದರು. ಈ ಸಾಧನೆ ಸಿಮ್ರಾನ್ ಅವರದ್ದಲ್ಲ, ಆದರೆ ಸಮವಸ್ತ್ರ ಧರಿಸುವ ಕನಸು ಕಾಣುವ ಲಕ್ಷಾಂತರ ಹುಡುಗಿಯರದ್ದೂ ಆಗಿದೆ.

Rachita Ram: ಇಂದು ಈ ನಟಿಯ ಫ್ಯಾನ್ಸ್‌ ಹಿಡಿಯೋದು ಕಷ್ಟ.. ಈ ಎರಡರಲ್ಲೂ ರಚಿತಾ ರಾಮ್ 'ಕೈವಾಡ' ಇದೆ!

ಸಿಮ್ರಾನ್ ಬಾಲಾ ಯಾರು? 

26 ವರ್ಷದ ಸಿಆರ್ಪಿಎಫ್ ಸಹಾಯಕ ಕಮಾಂಡೆಂಟ್ ಸಿಮ್ರಾನ್ ಬಾಲಾ ಮೂಲತಃ ಜಮ್ಮು ಮತ್ತು ಕಾಶ್ಮೀರದವರು. ರಾಜೌರಿ ಜಿಲ್ಲೆಯ ನೌಶೇರಾ ಪ್ರದೇಶದವರು. ಇದು ನಿಯಂತ್ರಣ ರೇಖೆಗೆ (ಎಲ್ಒಸಿ) ಬಹಳ ಹತ್ತಿರದಲ್ಲಿದೆ. ಗಡಿ ಪ್ರದೇಶದಲ್ಲಿ ಬೆಳೆದ ಮಕ್ಕಳಿಗೆ ಶಿಸ್ತು ಮತ್ತು ದೇಶಭಕ್ತಿ ಸಾಮಾನ್ಯವಾಗಿದೆ. ಆದ್ರೆ ಕರ್ತವ್ಯದ ಸಾಲಿನಲ್ಲಿ ಮೆರವಣಿಗೆಯನ್ನು ಮುನ್ನಡೆಸುವುದು ಅವರ ಕಲ್ಪನೆಗೆ ಮೀರಿದ್ದಾಗಿತ್ತು. ಸಿಮ್ರಾನ್ ತಮ್ಮ ಜಿಲ್ಲೆಯಿಂದ ಸಿಆರ್ಪಿಎಫ್ನಲ್ಲಿ ಅಧಿಕಾರಿಯಾದ ಮೊದಲ ಮಹಿಳೆ. ಈಗ ದೊಡ್ಡ ಮೆರವಣಿಗೆ ಮುನ್ನಡೆಸಲಿದ್ದು, ಇದು ಅವರ ಜಿಲ್ಲೆಗೆ ಮಾತ್ರವಲ್ಲ ಇಡೀ ದೇಶಕ್ಕೆ ಹೆಮ್ಮೆ ತರುವಂತಹದ್ದು.

ಸಿಮ್ರಾನ್ಗೆ ಸಿಆರ್ಪಿಎಫ್ನ ಸಂಪೂರ್ಣ ಪುರುಷರ ತುಕಡಿಯನ್ನು ಮುನ್ನಡೆಸುವುದು ಸುಲಭವಾಗಿ ಧಕ್ಕಲಿಲ್ಲ. ಗಣರಾಜ್ಯೋತ್ಸವದ ಮೆರವಣಿಗೆಗಾಗಿ ಕಠಿಣ ಪೂರ್ವಾಭ್ಯಾಸದ ಸಮಯದಲ್ಲಿ ಅವರ ಆತ್ಮವಿಶ್ವಾಸ, ಡ್ರಿಲ್ ಪರಿಪೂರ್ಣತೆ ಮತ್ತು ಕಮಾಂಡಿಂಗ್, ಹಿರಿಯ ಅಧಿಕಾರಿಗಳನ್ನು ಮೆಚ್ಚಿಸಿತು. ನಂತ್ರ ಜನವರಿ 26 ರಂದು ಸಿಆರ್ಪಿಎಫ್ ತುಕಡಿಯನ್ನು ಮುನ್ನಡೆಸಲು ಅವರನ್ನು ಆಯ್ಕೆ ಮಾಡಲಾಯ್ತು. ಸಂಪ್ರದಾಯಗಳು ಬದಲಾಗುತ್ತಿವೆ, ನಾಯಕತ್ವವನ್ನು ಸಾಮರ್ಥ್ಯದಿಂದ ಮಾತ್ರ ನಿರ್ಧರಿಸಲಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಈ ಸಾಧನೆಯನ್ನು ಮಹಿಳಾ ಸಬಲೀಕರಣದ ಸಂಕೇತವೆಂದು ಪರಿಗಣಿಸಲಾಗುತ್ತಿದೆ.

ಸೀರೆಯುಟ್ಟು ಮೋಡಿ ಮಾಡಿದ ಜರ್ಮನ್ ಬೆಡಗಿ: ಈಕೆ ಈಗ ಹೊಸ ನ್ಯಾಷನಲ್ ಕ್ರಶ್..!

ಸಿಮ್ರಾನ್ ನಾಯಕತ್ವ ಭಾರತದ ಅತಿದೊಡ್ಡ ಅರೆಸೈನಿಕ ಪಡೆಗೆ ಒಂದು ಮಹತ್ವದ ಸಾಧನೆಯಾಗಿದೆ. ಈ ಕ್ಷಣವು ಹೆಮ್ಮೆಯಾಗಿದ್ದರೂ, ದೇಶದ ಭದ್ರತಾ ಸೇವೆಗಳಲ್ಲಿ ಮಹಿಳೆಯರಿಗೆ ಹೆಚ್ಚುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತದೆ. ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಿಮ್ರಾನ್ ಅವರ ಪಾತ್ರವನ್ನು ಅಭೂತಪೂರ್ವವೆಂದು ಪರಿಗಣಿಸಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Rachita Ram: ಇಂದು ಈ ನಟಿಯ ಫ್ಯಾನ್ಸ್‌ ಹಿಡಿಯೋದು ಕಷ್ಟ.. ಈ ಎರಡರಲ್ಲೂ ರಚಿತಾ ರಾಮ್ 'ಕೈವಾಡ' ಇದೆ!
ಹೊಟ್ಟೆಪಾಡಿಗಾಗಿ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಗುಲಾಬಿ ಹೂ ಮಾರುತ್ತಿದ್ದ 11 ವರ್ಷದ ಬಾಲಕಿಯ ಅಪಹರಿಸಿ ಅತ್ಯಾ*ಚಾರ