ನವರಾತ್ರಿ ಹೊತ್ತಲ್ಲಿ ಕಳ್ಳತನವಾಯ್ತು ದೇವಿ ಕಿರೀಟ: ಜೆಶೋರೇಶ್ವರಿ ದೇವಿಗೆ ಮೋದಿ ಕೊಟ್ಟ ಕಾಣಿಕೆ ಏನಾಯ್ತು?

Oct 12, 2024, 11:04 AM IST

ಬೆಂಗಳೂರು(ಅ.12):  ಮೂರು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ಕೊಟ್ಟಿದ್ರು.. ಹಾಗೆ ಭೇಟಿ ಕೊಟ್ಟ ಸಂದರ್ಭದಲ್ಲಿ, ಅಲ್ಲಿನ ದೇವಿಗೊಂದು ಕಾಣಿಕೆ ಕೊಟ್ಟಿದ್ರು.. ಆದ್ರೆ, ಈಗ ಅದೇ ಕಾಣಿಕೆಯೇ ಎರಡೂ ದೇಶಗಳ ಮಧ್ಯೆ ಆತಂಕ ಹೆಚ್ಚಿಸಿದೆ. ಒಂದ್ ಕಡೆ, ಬಾಂಗ್ಲಾದೇಶ ತನ್ನೊಳಗಿನ ಕಿಚ್ಚಿಗೆ ತಾನೇ ಬಲಿಯಾಗ್ತಾ ಇದೆ. ಇನ್ನೊಂದು ಕಡೆ, ಅಲ್ಲಿರೋ ಅಲ್ಪಸಂಖ್ಯಾತರನ್ನ, ಅದರಲ್ಲೂ ಮುಖ್ಯವಾಗಿ, ಹಿಂದೂಗಳನ್ನ ಕೆಣಕಿ ಇನ್ನೂ ದೊಡ್ಡ ಆಪತ್ತಿಗೆ ಆಹ್ವಾನ ಕೊಡ್ತಾ ಇದೆ.. ಅಸಲಿಗೆ, ಮೋದಿ ಕೊಟ್ಟ ಕಾಣಿಕೆ ಯಾವ್ದು? ಅದು ಏನಾಯ್ತು? ಅಲ್ಲಿನ ಹಿಂದೂಗಳ ಸ್ಥಿತಿ ಏನಾಗಿದೆ? ಅದೆಲ್ಲದರ ಪೂರ್ತಿ ಡೀಟೇಲ್ಸ್, ಇಲ್ಲಿದೆ ನೋಡಿ..

ಅಂದ ಹಾಗೆ, ಬಾಂಗ್ಲಾದೇಶದ ಸರ್ಕಾರ ಹಿಂದೂಗಳಿಗೆ ಸಾಧ್ಯವಾದಷ್ಟು ರಕ್ಷಣೆ ಕೊಡ್ತೀವಿ, ನೀವ್ಯಾರು ಹೆದರಿಬೇಡಿ ಅಂತ ಅಭಯ ಕೊಡ್ತಿದ್ದಾರಲ್ಲಾ, ಅದರ ಹಿಂದೆ ಇರೋ ಉದ್ದೇಶ ಏನು ಗೊತ್ತಾ? ಅಲ್ಪಸಂಖ್ಯಾತರಿಗೆ ಬಲ ತುಂಬ ಬೇಕು ಅನ್ನೋದಲ್ಲ.. ಹಿಂದೂಗಳನ್ನ ರಕ್ಷಿಸಬೇಕು ಅನ್ನೋದಂತೂ ಅಲ್ವೇ ಅಲ್ಲ.. ಹಾಗಾದ್ರೆ, ಮತ್ತೇನು? ಮೋದಿ ಸರ್ಕಾರ ಏನಾದ್ರೂ ಮಾಡಿಬಿಡತ್ತೆ ಅನ್ನೋ ಭಯಾನಾ?. 

ತಾಯಿ ವಯಸ್ಸಿನ ಮಹಿಳೆ ಕೊಂದು ಶವದೊಂದಿಗೆ ಸಂಭೋಗ: ರಾಕ್ಷಸನಿಗೆ ತಕ್ಕ ಶಿಕ್ಷೆ ಆಗಲಿ ಎಂದ ಜನ!

ಜಗತ್ತಲ್ಲಿರೋ ಕೋಟಿಗಟ್ಟಲೆ ಹಿಂದೂಗಳು, ದಸರಾ ಸಂಭ್ರಮದಲ್ಲಿದ್ದಾರೆ. ಆದ್ರೆ ಬಾಂಗ್ಲಾದಲ್ಲಿರೋ ಹಿಂದೂಗಳು ಮಾತ್ರ, ಪ್ರಾಣಭೀತಿಯ ನಡುವಲ್ಲೇ, ಅದ್ದೂರಿಯಾಗಿ ದುರ್ಗೆಯ ಆರಾಧನೆ ಮಾಡ್ತಿದ್ದಾರೆ. ಅಷ್ಟಕ್ಕೂ, ಬಾಂಗ್ಲಾದಲ್ಲಿ ಹಿಂದೂಗಳ ಸ್ಥಿತಿ ಏನಾಗಿದೆ? ಸರ್ಕಾರವೇನೋ ನಾವು ಹಿಂದೂಗಳ ರಕ್ಷಣೆಗೆ ಸದಾಬದ್ಧರಾಗಿದ್ದೀವಿ ಅಂದ ಮೇಲೂ, ಆಗುಂತಕರು ಆತಂಕದ ಕಾರ್ಮೋಡ ಸೃಷ್ಟಿಸಿದ್ದು ಹೇಗೆ?

ಹಾಗಂತ ಇದು ಇಷ್ಟಕ್ಕೇ ನಿಂತು ಹೋಗುತ್ತಾ? ಇನ್ಮೇಲೆ ಹಿಂದೂಗಳು ನೆಮ್ಮದಿಯಾಗಿ ಬದುಕೋದು ಸಾಧ್ಯವಾಗುತ್ತಾ? ಅಸಲಿಗೆ, ಹಿಂದೂಗಳ ರಕ್ಷಣೆಗೆ ಭಾರತ ಏನು ಮಾಡ್ತಾ ಇದೆ?. ಬಾಂಗ್ಲಾದೇಶಕ್ಕೆ ಎಲ್ಲಕ್ಕಿಂತ ಚೆನ್ನಾಗಿ ಒಂದು ವಿಚಾರ ಅರ್ಥವಾಗಿದೆ. ಭಾರತವನ್ನ ಎದುರು ಹಾಕ್ಕೊಂದು ನೆಮ್ಮದಿಯಾಗಿ ಬದುಕೋದಕ್ಕಾಗಲ್ಲ. ಅದಕ್ಕೋಸ್ಕರ ಏನೇನೆಲ್ಲಾ ಮಾಡ್ತಾ ಇದೆ ಗೊತ್ತಾ, ಆ ನೆರೆರಾಷ್ಟ್ರ..?

ಇದೆಲ್ಲದರ ನಡುವೆ, ಈಗ ಕಳ್ಳತನವಾಗಿರೋ ದೇವಿಯ ಕಿರೀಟ, ಉಭಯ ದೇಶಗಳ ನಡುವಿನ ಬಾಂಧವ್ಯದ ಭವಿಷ್ಯ ನಿರ್ಧರಿಸಲಿದೆ.ಅದು ಹೇಗೆ ಅನ್ನೋದಕ್ಕೆ ಉತ್ತರ, ಕಾಲವೇ ಕೊಡ್ಬೇಕು.