ಗಾಜಾ ಗಡಿಯಲ್ಲಿ ಯಾವ ಪರಿಸ್ಥಿತಿ ಇದೆ ? ಲೆಬನಾನ್‌ ಗಡಿಯಲ್ಲಿ ಇಸ್ರೇಲಿಗರ ಸ್ಥಿತಿ ಹೇಗಿದೆ ?

Oct 17, 2023, 2:17 PM IST

ಗಾಜಾ ಪಟ್ಟಿಯಲ್ಲಿ ಪರಿಸ್ಥಿತಿ ತುಂಬಾ ಭೀಕರವಾಗಿದ್ದು, ಯಾವ ಕ್ಷಣದಲ್ಲಿ ಇಸ್ರೇಲಿನ ಭೂ ಸೇನೆ ಅಲ್ಲಿಗೆ ಎಂಟ್ರಿ ಆಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಸಾವು ನೋವನ್ನು ಕಡಿಮೆ ಮಾಡುವ ಉದ್ದೇಶದಿಂದ ಇಸ್ರೇಲ್‌(Isreal) ಗಾಜಾ ಜನತೆಗೆ ಉತ್ತರ ಗಾಜಾಕ್ಕೆ ಹೋಗುವಂತೆ ಸೂಚಿಸಿದೆ. ದಕ್ಷಿಣ ಗಾಜಾದಲ್ಲಿ(Gaza) ಸುಮಾರು 10 ಲಕ್ಷ ಜನ ಇದ್ದು, ವಲಸೆ ಪ್ರಕ್ರಿಯೆ ನಿಧಾನವಾದ ಹಿನ್ನೆಲೆ ಗಡುವನ್ನು ವಿಸ್ತರಣೆ ಮಾಡಲಾಗಿದೆ. ವಲಸೆ ಸಂಪೂರ್ಣವಾಗಿ ಮುಗಿಯುವವರೆಗೂ ಇಸ್ರೇಲ್‌ ಸೇನೆ ಗಾಜಾಗೆ ಎಂಟ್ರಿಯಾಗುವ ಸಾಧ್ಯತೆ ಕಡಿಮೆ ಇದೆ. ಇನ್ನೂ ಈಜಿಪ್ಟ್‌ನ(Egypt) ಬಾರ್ಡರ್‌ ಸಹ ಓಪನ್‌ ಆಗಿಲ್ಲ. ಸಧ್ಯ ನಮ್ಮ ವರದಿಗಾರರಾದ ಅಜಿತ್‌ ಹನಮಕ್ಕನವರ್‌ ಜೆರುಸಲೇಮ್‌ನಲ್ಲಿ ಇದ್ದಾರೆ. ಇಲ್ಲೂ ಕೂಡ ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ.

ಇದನ್ನೂ ವೀಕ್ಷಿಸಿ:  ಗಾಜಾಪಟ್ಟಿಯಲ್ಲಿ ಮನುಕುಲದ ಮಹಾವಲಸೆ: ಲೆಬನಾನ್, ಸಿರಿಯಾದಿಂದಲೂ ಇಸ್ರೇಲ್ ವಿರುದ್ಧ ಹೋರಾಟ ?